ಮೂಲಭೂತ ಹಕ್ಕುಗಳು(Fundamental Rights)

 

* ಹಕ್ಕುಗಳು ವ್ಯಕ್ತಿಯ ವ್ಯಕ್ತಿತ್ವ ವಿಕಾಸಕ್ಕೆ, ವ್ಯಕ್ತಿಯ ಅಭಿವೃದ್ದಿಗೆ ಅಗತ್ಯವಾಗಿವೆ. ಸಂವಿಧಾನದಲ್ಲಿ ನಮೂದಿಸಿ ರಕ್ಷಿಸಲ್ಪಡುವ ಹಕ್ಕುಗಳೇ ಮೂಲಭೂತ ಹಕ್ಕುಗಳು.
* ಮ್ಯಾಗ್ನಕಾರ್ಟ್ ಎಂಬುದು 1215 ರಲ್ಲಿ ಇಂಗ್ಲೇಂಡಿನ ಜಾನ್ ದೊರೆ ಹೊರಡಿಸಿದ ಮೂಲಭೂತ ಹಕ್ಕುಗಳ ಪ್ರಣಾಳಿಕೆಯಾಗಿದೆ. ಆದ್ದರಿಂದ ಸಂವಿಧಾನದ 3ನೇ ಭಾಗವನ್ನು ಭಾರತದ ಮ್ಯಾಗ್ನಕಾರ್ಟ ಎಂದು ಕರೆಯಲಾಗುತ್ತದೆ.
* ಫ್ರಾನ್ಸ್- 1789 ರಲ್ಲಿ ಮಾನವ ನಾಗರೀಕ ಹಕ್ಕುಗಳ ಘೋಷಣೆ.
* ಅಮೇರಿಕ -1791 ರಲ್ಲಿ ‘ಬಿಲ್ ಆಫ್ ರೈಟ್ಸ್’ ನ ಜಾರಿ.
* ವಿಶ್ವಸಂಸ್ಥೆ-1948 ಡಿ.10ರಲ್ಲಿ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆ ಫಲವೇ ಮೂಲಭೂತ ಹಕ್ಕುಗಳು.
ಭಾರತದಲ್ಲಿ ಮೂಲಭೂತ ಹಕ್ಕುಗಳ ಇತಿಹಾಸ :-
* 1995 ರ ಭಾರತ ಸಂವಿಧಾನ ಬಿಲ್ ನಲ್ಲಿ ಪ್ರಸ್ತಾಪಿಸಲಾಗಿದೆ.
* 1917 ರಿಂದ 1919 ರ ಭಾರತ ರಾಷ್ಟ್ರೀಯ ಕಾಂಗ್ರೇಸ್‍ನ ನಿರ್ಣಯ.
* ಬಾಲಗಂಗಾಧರ ತಿಲಕ್ – 1985 ರಲ್ಲಿ ಸ್ವರಾಜ್ಯ ಬಿಲ್ ಹಕ್ಕುಗಳಿಗಾಗಿ ಒತ್ತಾಯ.
* ಅನಿಬೆಸೆಂಟ್ – 1925 ರಲ್ಲಿ ಕಾಮನ್ ವೆಲ್ತ್ ಆಫ್ ಇಂಡಿಯಾ ಬಿಲ್ ನಲ್ಲಿ ವ್ಯಕ್ತಿ ಸ್ವತಂತ್ರ, ಆತ್ಮಸಾಕ್ಷಿ, ಸ್ವತಂತ್ರ್ಯ, ವಾಕ್ ಸ್ವತಂತ್ರ್ಯ¸ ಕಾನೂನು ಮುಂದೆ ಸಮಾನತೆಯ ಹಕ್ಕುಗಳ ಬಗ್ಗೆ ಪ್ರಸ್ತಾಪ.
* 1928 ರಲ್ಲಿ ನೆಹರೂ ಸಮಿತಿಯ ಶಿಫಾರಸ್ಸು. ಅಲ್ಪಸಂಖ್ಯಾತರ ಹಕ್ಕುಗಳಿಗೆ ಹೆಚ್ಚಿನ ಒತ್ತು ನೀಡಿತು.
* ಕ್ಯಾಬಿನೆಟ್ ಮಿಷನ್ 1946 ರಲ್ಲಿ ಮೂಲಭೂತ ಹಕ್ಕುಗಳ ಸಮಿತಿ ರಚಿಸುವಂತೆ ಸಲಹೆ.
* ನಂತರ ಮೂಲಭೂತ ಹಕ್ಕುಗಳ ರಚನಾಸಮಿತಿ ರಚನೆ ಸರ್ದಾರ್ ಪಟೇಲ್ ನೇತೃತ್ವದಲ್ಲಿ ಅಂತಿಮವಾಗಿ ಸಂವಿಧಾನಕ್ಕೆ ಸೇರಿಸಲಾಯಿತು.

ಮೂಲಭೂತ ಹಕ್ಕುಗಳ ವಿಧಗಳು


* ಭಾರತ ಸಂವಿಧಾನದ 3ನೇ ಭಾಗದಲ್ಲಿ 12 ರಿಂದ 35 ನೇ ವಿಧಿಗಳಲ್ಲಿ 6 ಮೂಲಭೂತ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.
* ಸಂವಿಧಾನದ ಮೂಲದಲ್ಲಿ 7 ಮೂಲಭೂತ ಹಕ್ಕುಗಳಿದ್ದವು. ನಂತರ ಬಂದ ಜನತಾ ಸರ್ಕಾರವು 1978 ರಲ್ಲಿ ಸಂವಿಧಾನಕ್ಕೆ 44 ನೇ ತಿದ್ದುಪಡಿಯನ್ನು ತಂದು ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದುಹಾಕಿತು.
* ಮೂಲಭೂತ ಹಕ್ಕುಗಳನ್ನು ತಿದ್ದುಪಡಿ(368ನೇ ವಿಧಿ) ಮಾಡುವ ಅಥವಾ ರದ್ದುಪಡಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಲಾಗಿದೆ.
* ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಸವೋಚ್ಛ ಹಾಗೂ ಉಚ್ಚನ್ಯಾಯಾಲಯಗಳಿಗೆ ನೀಡಲಾಗಿದೆ. ಪ್ರಸ್ತುತ 6 ಮೂಲಭೂತ ಹಕ್ಕುಗಳಿಗೆ ಅವುಗಳೆಂದರೆ
1. ಸಮಾನತೆಯ ಹಕ್ಕು
2. ಸ್ವಾತಂತ್ರ್ಯದ ಹಕ್ಕು
3. ಶೋಷಣೆಯ ವಿರುದ್ಧದ ಹಕ್ಕು
4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು
6. ಸಂವಿಧಾನಬದ್ಧ ಪರಿಹಾರದ ಹಕ್ಕು

1. ಸಮಾನತೆಯ ಹಕ್ಕು (ವಿಧಿ 14-18) :-


* 14ನೇ ವಿಧಿ ಅನ್ವಯ:- “ಕಾನೂನಿನ ಎದುರಿನಲ್ಲಿ ಸಮಾನತೆ ಮತ್ತು ರಕ್ಷಣೆ” - ಯಾವುದೇ ವ್ಯಕ್ತಿಗೆ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳಗಳ ಆಧಾರದ ಮೇಲೆ ಕಾನೂನಿನ ವಿಷಯದಲ್ಲಿ ತಾರತಮ್ಯ ಮಾಡುವಂತಿಲ್ಲ.
* 15ನೇ ವಿಧಿ ಅನ್ವಯ:- “ಸಾರ್ವಜನಿಕ ಸ್ಥಳಗಳಲ್ಲಿ ತಾರತಮ್ಯ ನಿಷೇಧ” - ಯಾವುದೇ ವ್ಯಕ್ತಿಗೆ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಉದಾ: ಮನರಂಜನಾ ಸ್ಥಳಗಳು, ಪೂಜಾ ಮಂದಿರ, ಹೊಟೇಲ್‍ಗಳು ಮೊದಲಾದವು.
* 16ನೇ ವಿಧಿ ಅನ್ವಯ:- ಯಾವುದೇ ವ್ಯಕ್ತಿಗೆ “ಸಾರ್ವಜನಿಕ ಹುದ್ದೆಯಲ್ಲಿ ತಾರತಮ್ಯ ನಿಷೇಧ“ - ಯಾವುದೇ ವ್ಯಕ್ತಿಗೆ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳಗಳ ಆಧಾರದ ಮೇಲೆ ಸಾರ್ವಜನಿಕ ಹುದ್ದೆಯಲ್ಲಿ ತಾರತಮ್ಯ ಮಾಡುವಂತಿಲ್ಲ.
* 17ನೇ ವಿಧಿ ಅನ್ವಯ:- “ಅಸ್ಪಶ್ಯತೆಯ ಆಚರಣೆಯ ನಿಷೇಧ” -1955 ರಲ್ಲಿ ಅಸ್ಪಶ್ಯತಾ ನಿವಾರಣ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆಯನ್ನು “ನಾಗರೀಕ ಹಕ್ಕುಗಳ ರಕ್ಷಣಾ ಕಾಯ್ದೆ” ಎಂದು ಕರೆಯಲಾಗುತ್ತದೆ.
* 18ನೇ ವಿಧಿ ಅನ್ವಯ:- “ಬಿರುದುಗಳ ರದ್ದತಿ” ರಾಜ್ಯವು ಸೈನಿಕ ಅಥವಾ ಶೈಕ್ಷಣಿಕ, ಸಮಾಜ ಸೇವೆಯ ಬಿರುದುಗಳನ್ನು ಹೊರತುಪಡಿಸಿ ಬೇರೆ ಬಿರುದುಗಳನ್ನು ಯಾವ ಒಬ್ಬ ವ್ಯಕ್ತಿಗೆ ನೀಡುವಂತಿಲ್ಲ.

2. ಸ್ವಾತಂತ್ರ್ಯದ ಹಕ್ಕು (ವಿಧಿ 19-22) :-


19ನೇ ವಿಧಿ ಅನ್ವಯ:-
1. ವಾಕ್‍ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ.
2. ಶಾಂತಿಯುತವಾಗಿ ಸಭೆ ಸೇರುವ ಸ್ವಾತಂತ್ರ್ಯ.
3. ಸಂಘಸಂಸ್ಥೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ.
4. ದೇಶದ ಎಲ್ಲೆಡೆ ನಿರ್ಬಂಧವಿಲ್ಲದೆ ಸಂಚರಿಸುವ ಸ್ವಾತಂತ್ರ್ಯ.
5. ಭಾರತದ ಯಾವುದೇ ಭಾಗದಲ್ಲಾದರೂ ವಾಸಿಸುವ ಸ್ವಾತಂತ್ರ್ಯ.
6. ಯಾವುದೇ ಉದ್ಯೋಗ, ವೃತ್ತಿ, ವ್ಯಾಪಾರ, ವ್ಯವಹಾರ ಮಾಡುವ ಸ್ವಾತಂತ್ರ್ಯ.
20 ನೇ ವಿಧಿ ಅನ್ವಯ :-
* ಅಪರಾಧಿಗೆ ಅಪರಾಧ ಮಾಡಿದ ಸಂದರ್ಭದಲ್ಲಿ ಜಾರಿಯಲ್ಲಿದ್ದ ಕಾನೂನಿನ ಅನ್ವಯ ಶಿಕ್ಷೆ ನೀಡಬೇಕು.
* ಒಂದೇ ಅಪರಾಧಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಶಿಕ್ಷೆ ವಿಧಿಸುವಂತಿಲ್ಲ.
* ಒಬ್ಬ ವ್ಯಕ್ತಿಯನ್ನು ತನ್ನ ವಿರುದ್ಧವೇ ತಾನೇ ಸಾಕ್ಷಿ ಹೇಳುವಂತೆ ಒತ್ತಾಯಿಸುವಂತಿಲ್ಲ.
21 ನೇ ವಿಧಿ ಅನ್ವಯ :-
* ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ
* 21ನೇ ‘ಎ’ ವಿಧಿಯಲ್ಲಿ 6 ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ.
22ನೇ ವಿಧಿ ಅನ್ವಯ :-
* “ಅಕ್ರಮ ಬಂಧನ ಮತ್ತು ಸೆರೆವಾಸದ ವಿರುದ್ಧ ರಕ್ಷಣೆ”

3. ಶೋಷಣೆಯ ವಿರುದ್ಧ ಹಕ್ಕು (ವಿಧಿ 23-24)


* 23ನೇ ವಿಧಿ ಅನ್ವಯ – ಮಹಿಳೆಯರು, ಮಕ್ಕಳನ್ನು, ಕೊಳ್ಳುವುದಾಗಲಿ, ಮಾರುವುದಾಗಲಿ, ಮಹಿಳೆಯರನ್ನು ಅನೈತಿಕ ಸಂಬಂಧಗಳಲ್ಲಿ ಬಳಸಿಕೊಳ್ಳುವುದಾಗಲಿ, ಗುಲಾಮಗಿರಿ, ಜೀತಪದ್ಧತಿ, ಬಲವಂತದ ದುಡಿಮೆ, ಬಾಲ ಕಾರ್ಮಿಕರ ಪದ್ಧತಿಯ ನಿಷೇಧ.
* 1956 ರಲ್ಲಿ ಅನೈತಿಕ ಮಾರಾಟ ತಡೆ ಕಾಯ್ದೆ ಜಾರಿಗೆ ತರಲಾಗಿದೆ.
* 1976 ರಲ್ಲಿ ಜೀತಪದ್ದತಿ ನಿರ್ಮೂಲನಾ ಕಾಯ್ದೆ ಜಾರಿ.
* 24ನೇ ವಿಧಿ ಅನ್ವಯ – 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆ ಅಥವಾ ಗಣಿಗಾರಿಕೆ ಮೊದಲಾದ ಯಾವುದೇ ಅಪಾಯಕಾರಿ ಕೆಲಸದಲ್ಲಿ ನೇಮಿಸಿಕೊಳ್ಳುವುದು ನಿಷೇಧ.
* ಬಾಲಕಾರ್ಮಿಕ ಪದ್ದತಿ ನಿಷೇಧ ಕಾಯ್ದೆ – 1986

4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (ವಿಧಿ 25-28)


* 25ನೇ ವಿಧಿ ಅನ್ವಯ - ಪ್ರತಿಯೊಬ್ಬ ವ್ಯಕ್ತಿಯು ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಯಾವುದೇ ಧರ್ಮವನ್ನು ಸ್ವೀಕರಿಸುವ, ಆಚರಿಸುವ, ಆರಾಧಿಸುವ ಪ್ರಚಾರ ಮಾಡುವ ಸ್ವಾತಂತ್ರ್ಯ.
* 26ನೇ ವಿಧಿ ಅನ್ವಯ:- ಪ್ರತಿಯೊಂದು ಧರ್ಮವು ಧಾರ್ಮಿಕ ದಾನದತ್ತಿ ಉದ್ದೇಶಗಳಿಗಾಗಿ ತಮ್ಮದೇ ಆದ ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ, ಚರ ಮತ್ತು ಸ್ಥಿರಾಸ್ತಿ ಹೊಂದುವ ಸ್ವಾತಂತ್ರ್ಯ.
* 27ನೇ ವಿಧಿ ಅನ್ವಯ:- ಯಾವುದೇ ಧರ್ಮದ ರಕ್ಷಣೆಗೆ ಪೋಷಣೆಗೆ ಅಥವಾ ಪ್ರಚಾರದ ಸಲುವಾಗಿ ತೆರಿಗೆ ಅಥವಾ ವಂತಿಗೆ ನೀಡುವಂತೆ ಒಬ್ಬ ವ್ಯಕ್ತಿಯನ್ನು ಬಲವಂತಪಡಿಸುವಂತಿಲ್ಲ.
* 28ನೇ ವಿಧಿ ಅನ್ವಯ:- ಕೇಂದ್ರ ಅಥವಾ ರಾಜ್ಯ ಸರ್ಕಾರದ ಅನುದಾನಕ್ಕೊಳಪಟ್ಟ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ಮಾಡುವಂತಿಲ್ಲ. ಧಾರ್ಮಿಕ ದತ್ತಿ ವಿದ್ಯಾಸಂಸ್ಥೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು (ವಿಧಿ 29-30)


* 29ನೇ ವಿಧಿ ಅನ್ವಯ – ರಾಷ್ಟ್ರದ ಯಾವುದೇ ಭಾಗದಲ್ಲಿ ನೆಲೆಸಿರುವ ಪ್ರಜೆಗಳು, ತಮ್ಮದೇ ಆದ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿದ್ದರೆ. ಅವುಗಳನ್ನು ಸಂರಕ್ಷಿಸುವ ಮತ್ತು ಅಭಿವೃದ್ದಿಪಡಿಸಿಕೊಳ್ಳುವ ಹಕ್ಕು.
* ರಾಜ್ಯದಿಂದ ಧನಸಹಾಯ ಪಡೆಯುತ್ತಿರುವ ಯಾವುದೇ ಶೈಕ್ಷಣಿಕ ಸಂಸ್ಥೆಯು ಜಾತಿ, ಧರ್ಮ, ಕುಲ, ಭಾಷೆಗಳ ಆಧಾರದ ಮೇಲೆ ಯಾವ ಪೌರನಿಗೂ ಪ್ರವೇಶವನ್ನು ನಿರಾಕರಿಸುವಂತಿಲ್ಲ.
* 30ನೇ ವಿಧಿ ಅನ್ವಯ – ಧಾರ್ಮಿಕ ಅಥವಾ ಭಾಷಾ ಅಲ್ಪ ಸಂಖ್ಯಾತರು ತಮ್ಮದೇ ಆದ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳನ್ನು ನಿರ್ವಹಿಸುವ ಹಕ್ಕು. ಹಾಗೆಯೇ ಅಲ್ಪಸಂಖ್ಯಾತರ ವಿದ್ಯಾ ಸಂಸ್ಥೆಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುವಂತಿಲ್ಲ.
* 31ನೇ ವಿಧಿ ರದ್ದತಿ – ಆಸ್ತಿಯ ಹಕ್ಕು 1978. ಸಂವಿಧಾನಕ್ಕೆ 44ನೇ ತಿದ್ದುಪಡಿ ತಂದು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆಯಲಾಗಿದೆ. ಈಗ ಕೇವಲ ಕಾಯ್ದೆ ಬದ್ಧ ಹಕ್ಕಾಗಿದೆ.

6. ಸಂವಿಧಾನಾತ್ಮಕ ಪರಿಹಾರದ ಹಕ್ಕು (ವಿಧಿ 32)


* 32ನೇ ವಿಧಿ ಅನ್ವಯ – ವ್ಯಕ್ತಿ ತನ್ನ ಮೂಲಭೂತ ಹಕ್ಕುಗಳಿಗೆ ಧಕ್ಕೆಯುಂಟಾದಾಗ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿ ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಅವಕಾಶ ನೀಡಲಾಗಿದೆ.
* ಡಾ. ಬಿ.ಆರ್. ಅಂಬೇಡ್ಕರ ರವರು ಸಂವಿಧಾನದ 32ನೇ ವಿಧಿಯನ್ನು “ಸಂವಿಧಾನದ ಆತ್ಮ ಮತ್ತು ಹೃದಯವಿದ್ದಂತೆ” ಎಂದಿದ್ದಾರೆ.
* ಸರ್ವೋಚ್ಚ ನ್ಯಾಯಾಲಯವು ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಈ ಕೆಳಗಿನ ವಿಶೇಷ ಆಜ್ಞೆ (ರಿಟ್) ಗಳನ್ನು ಹೊರಡಿಸಬಹುದು. ಅವುಗಳೆಂದರೆ
1. ಬಂಧಿ ಪ್ರತ್ಯಕ್ಷೀಕರಣ (Habeas Corpus) :- ಬಂಧಿಸಿದ ವ್ಯಕ್ತಿಯನ್ನು 24 ಗಂಟೆಯೊಳಗೆ ಹತ್ತಿರದ ನ್ಯಾಯಾಲಯದಲ್ಲಿ ಅಥವಾ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವಂತೆ ನ್ಯಾಯಾಲಯದ ಹೊರಡಿಸುವ ಆಜ್ಞೆಗೆ ಬಂಧಿ ಪ್ರತ್ಯಕ್ಷೀಕರಣ (ಕ್ರಿಮಿನಲ್ ಅಪರಾಧಕ್ಕೆ ಈ ರಿಟ್ ಅನ್ವಯಿಸುವುದಿಲ್ಲ.)
2. ಪರಮಾದೇಶ (Mandamus) :- ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲನಾದ ಸಾರ್ವಜನಿಕ ಅಧಿಕಾರಿಗೆ ಅದನ್ನು ನಿರ್ವಹಿಸುವಂತೆ ನ್ಯಾಯಾಲಯ ನೀಡುವ ಆಜ್ಞೆಗೆ ‘ಪರಮಾದೇಶ’ ಎನ್ನುವರು.
3. ಪ್ರತಿಬಂಧಕಾಜ್ಞೆ (Probibition) :- ಅಧೀನ ನ್ಯಾಯಾಲಯಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸದಂತೆ ನ್ಯಾಯಾ ಲಯವು ನೀಡುವ ಆದೇಶಕ್ಕೆ ಪ್ರತಿಬಂಧಕಾಜ್ಞೆ (ಸುಪ್ರಿಂಕೋರ್ಟ / ಹೈಕೋರ್ಟ್)
4. ಷರ್ಷಿಯೊರರಿ (certiorari) :- ಸರ್ವೋಚ್ಚ ನ್ಯಾಯಾಲಯವು ಒಂದು ಮೊಕದ್ದಮೆಯನ್ನು ಸಾಕ್ಷಿ ಸಮೇತ ತನಗೆ ವರ್ಗಾಯಿಸುವಂತೆ ಕೆಳಗಿನ ನ್ಯಾಯಾಲಯಗಳಿಗೆ ನೀಡುವ ಆದೇಶಕ್ಕೆ (ಉತ್ಪ್ರೇಕ್ಷಣಾ) ಷರ್ಷಿಯೊರರಿ ಎಂದು ಕರೆಯಲಗುತ್ತದೆ.
5. ಕೋ-ವಾರೆಂಟ (Quo Warranto) :- ಒಬ್ಬ ವ್ಯಕ್ತಿ ಅಕ್ರಮವಾಗಿ ಸಾರ್ವಜನಿಕ ಹುದ್ದೆಯನ್ನು ಪಡೆದುಕೊಂಡಾಗ ಅದನ್ನು ತೆರವು ಗೊಳಿಸುವಂತೆ ನ್ಯಾಯಾಲಯವು ಆ ವ್ಯಕ್ತಿಗೆ ನೀಡುವ ಆದೇಶಕ್ಕೆ ಕೋ-ವಾರೆಂಟ ಎಂದು ಕರೆಯುತ್ತಾರೆ.