ನೀರು (Water)

 

• ನೀರು ಎಲ್ಲ ಜೀವಿಗಳಿಗೆ ಅಗತ್ಯವಾದ ರುಚಿ-ರಹಿತ ಮತ್ತು ವಾಸನಾ-ರಹಿತ ವಸ್ತು.
• ಇದು ಭೂಮಿಯ ಮೇಲ್ಮೈಯ ಶೇ. 70 ಭಾಗಗಳಲ್ಲಿ ಕಂಡುಬರುತ್ತದೆ.
• ಅದರೆ ಶುದ್ಧ ಕುಡಿಯಲು ಬಳಸಬಹುದಾದ ನೀರು ಕೇವಲ ಶೇ.3 ರಷ್ಟು ಮಾತ್ರವೇ ಲಭ್ಯವಿರುತ್ತದೆ.
• ಇದರಲ್ಲಿ ಬಹಳಷ್ಟು ಭಾಗ ಸಮುದ್ರಗಳಲ್ಲಿ, ಧ್ರುವ ಪ್ರದೇಶಗಳಲ್ಲಿ ಘನ ರೂಪದಲ್ಲಿ, ಹಾಗೂ ಮೋಡ, ನೀರಾವಿ ಮೊದಲಾದ ರೂಪಗಳಲ್ಲಿದೆ.
• ನೀರಿನ ರಾಸಾಯನಿಕ ಸೂತ್ರ H2O - ಎಂದರೆ ಒಂದು ಅಣು ನೀರಿನಲ್ಲಿ ಎರಡು ಜಲಜನಕ ಅಣುಗಳು ಹಾಗೂ ಒಂದು ಆಮ್ಲಜನಕದ ಅಣು ಇರುತ್ತವೆ. ಹೆಚ್ಚಿನ ಪ್ರಮಾಣದ ನೀರು ಒಟ್ಟಿಗೆ ಇರುವಾಗ ತಿಳಿನೀಲಿ ಬಣ್ಣ ಪಡೆಯುತ್ತದೆ. ಇದಕ್ಕೆ ಕಾರಣ ನೀರು ಕೆಂಪು ಬಣ್ಣದ ಬೆಳಕನ್ನು ಅಲ್ಪ ಪ್ರಮಾಣದಲ್ಲಿ ಹೀರಿಕೊಂಡು ನೀಲಿ ಬೆಳಕನ್ನು ಹೆಚ್ಚಾಗಿ ಚದುರಿಸುವುದೇ ಆಗಿದೆ(ಬೆಳಕಿನ ಚದುರಿಕರಣ).
• ನೈಸರ್ಗಿಕವಾಗಿ, ನೀರು ಅನೇಕ ರೂಪಗಳಲ್ಲಿ ಕಂಡುಬರುತ್ತದೆ. ಸಾಗರದಲ್ಲಿ ನೀರು ಮತ್ತು ಮಂಜು ಗೆಡ್ಡೆಗಳ ರೂಪದಲ್ಲಿ, ಆಕಾಶದಲ್ಲಿ ನೀರಾವಿ ಮತ್ತು ಮೋಡಗಳ ರೂಪದಲ್ಲಿ, ಭೂಮಿಯ ಮೇಲೆ ನದಿಗಳು ಮತ್ತು ಮಂಜು-ಹಿಮಗಳ ರೂಪದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
• ಕರಗುವಿಕೆ, ಆವಿಯಾಗುವಿಕೆ, ಮಳೆ ಮತ್ತು ಹರಿಯುವಿಕೆಗಳ ಕಡೆಯಿಂದ ನೀರು ಒಂದು ರೂಪದಿಂದ ಇನ್ನೊಂದಕ್ಕೆ ರೂಪಾಂತರ ಪಡೆಯುತ್ತಾ ಇರುತ್ತದೆ.

ಭೂಮಿಯಲ್ಲಿ ನೀರಿನ ಸರಿ ಸುಮಾರು % ಹಂಚಿಕೆ.


ಸಾಗರಗಳು - 97.2%
ಹಿಮ ನದಿ - 2.15%
ಅಂತರ್ಜಲ - 0.62%
ಕೆರೆಗಳು - 0.017%
ವಾತಾವರಣ - 0.0001%
ನದಿಗಳು - 0.0001%
ಜೀವ ರಾಶಿ - 0.0001%

ಶುದ್ಧ ನೀರಿನ ಲಕ್ಷಣಗಳು


• ಶುದ್ಧ ನೀರಿಗೆ ವಾಸನೆ ಇಲ್ಲ,ರುಚಿ ಇಲ್ಲ.
• ಸಾಮಾನ್ಯ ವಾತಾವರಣ ಒತ್ತಡದಲ್ಲಿ 100 ಡಿಗ್ರಿ ಸೆಲ್ಷಿಯಸ್ ತಾಪದಲ್ಲಿ ಕುದಿಯುತ್ತದೆ.
• ನೀರಿನ ಘನೀಭವನ ಬಿಂದು 0 ಡಿಗ್ರಿ ಸೆಲ್ಷಿಯಸ್
• ಶುದ್ಧ ನೀರು ಉಷ್ಣ ಅವಾಹಕ ಮತ್ತು ವಿದ್ಯುತ ಅವಾಹಕ.
• ನೀರಿನ ಗರಿಷ್ಟ ಸಾಂದ್ರತೆ 4 ಡಿಗ್ರಿ ಸೆಲ್ಷಿಯಸ್ ನಲ್ಲಿ ಕಂಡು ಬರುತ್ತದೆ.

ಗಡುಸು ನೀರು ಮತ್ತು ಮೆದು ನೀರು


1) ಗಡುಸು ನೀರು :
• ಕ್ಯಾಲ್ಸಿಯಮ್ ಮತ್ತು ಮೆಗ್ನೀಸಿಯಮ್ಗಳ ಕ್ಲೋರೈಡ್ಗಳು, ಸಲ್ಫೇಟ್ಗಳು ಹಾಗೂ ಬೈಕಾರ್ಬೋನೇಟ್ ಲವಣಗಳು ನೀರಿನಲ್ಲಿ ಇದ್ದರೆ, ಆ ನೀರನ್ನು ಗಡುಸು ನೀರು ಎನ್ನುವರು.
• ಉದಾಹರಣೆ : ಸಮುದ್ರದ ನೀರು
2) ಮೆದು ನೀರು:
• ಕ್ಯಾಲ್ಸಿಯಮ್ ಮತ್ತು ಮೆಗ್ನೀಸಿಯಮ್ ಲವಣಗಳು ಇರದ ನೀರನ್ನು ಮೆದು ನೀರು ಎನ್ನುವರು.
• ಉದಾಹರಣೆ : ಮಳೆ ನೀರು

ಗಡಸು ನೀರಿನ ವಿಧಗಳು


1. ತಾತ್ಕಾಲಿಕ ಗಡುಸು ನೀರು :
• ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಬೈಕಾರ್ಬೊನೇಟ್ಗಳಿಂದ ನೀರಿನ ತಾತ್ಕಾಲಿಕ ಗಡುಸುತನ ಉಂಟಾಗುತ್ತದೆ. ನೀರಿನ ತಾತ್ಕಾಲಿಕ ಗಡುಸುತನವನ್ನು ಕುದಿಸುವುದರಿಂದ ತೆಗೆಯಬಹುದು
2. ಶಾಶ್ವತ ಗಡುಸು ನೀರು:
ಶಾಶ್ವತ ಗಡುಸು ನೀರನ್ನು ಮೆದುಗೊಳಿಸುವ ವಿಧಾನಗಳು
• ಕುದಿಸುವುದು
• ಸೋಡಿಯಮ್ ಕಾರ್ಬೊನೇಟ್ ಸೇರಿಸುವುದು.
• ಗಡುಸು ನೀರನ್ನು ಜಿಯೋಲೈಟ್(ಅಲ್ಯೂಮಿನಿಯಮ್ ಮತ್ತು ಸಿಲಿಕೇಟ್ಗಳ ಮಿಶ್ರಣ) ಎಂಬ ಮಿಶ್ರಣದ ಮೂಲಕ ಹಾಯಿಸಿ ಮೆದು ನೀರನ್ನು ಪಡೆಯಬಹುದು.

ಭಾರಜಲ


• ಡ್ಯುಟೇರಿಯಮ್ ಆಕ್ಸಿಜನ್ನೊಂದಿಗೆ ವರ್ತಿಸಿ ಡ್ಯುಟೇರಿಯಮ್ ಆಕ್ಸೈಡ್(D2O) ಎಂಬ ಸಂಯುಕ್ತವನ್ನು ಉಂಟುಮಾಡುತ್ತದೆ. ಹಾಗಾಗಿ ಭಾರಜಲವನ್ನು ಡ್ಯೂಟೀರಿಯಂ ಆಕ್ಸೈಡ್ ಎನ್ನುವರು.
• ಅಮೆರಿಕದ ರಸಾಯನ ವಿಜ್ಞಾನಿಯಾದ ಹೆರಾಲ್ಡ್ ಸಿ. ಯೂರಿ ಡ್ಯುಟೇರಿಯಮ್ಅನ್ನು ಕಂಡುಹಿಡಿದರು.

ಭಾರಜಲದ ಲಕ್ಷಣಗಳು:


1. ಸಾಮಾನ್ಯ ನೀರಿಗಿಂತ ಭಾರಜಲವು ಶೇ.10 ರಷ್ಟು ಭಾರವಾಗಿದೆ.
2. ನೀರಿನಲ್ಲಿ ಮಂಜುಗಡ್ಡೆಯು ತೇಲುತ್ತದೆ. ಭಾರಜಲದಲ್ಲಿ ಮಂಜುಗಡ್ಡೆಯು ಮುಳುಗುತ್ತದೆ.
3. ಭಾರಜಲವು ಸ್ವಲ್ಪ ಮಟ್ಟಿಗೆ ವಿಷಕಾರಕವಾಗಿದೆ, ಆದ್ದರಿಂದ ಕೃಷಿಗೆ ಹಾಗೂ ಜೀವಿಗಳಿಗೆ ಹಾನಿಕಾರಕ.

ಉಪಯೋಗಗಳು:


• ಡ್ಯುಟೇರಿಯಮ್ ಅನ್ನು ತಯಾರಿಸಲು
• ಬೈಜಿಕ ಕ್ರಿಯಾಕಾರಿ(Nuclear Moderator)ಗಳಲ್ಲಿ ಭಾರಜಲವನ್ನು ಬಳಸುತ್ತಾರೆ.