ದಕ್ಷಿಣ ಅಮೇರಿಕಾ ಖಂಡ(South America Continent)
 
• ದಕ್ಷಿಣ ಅಮೆರಿಕವು ಪ್ರಪಂಚದ ನಾಲ್ಕನೇಯ ಅತಿ ದೊಡ್ಡ ಭೂಖಂಡವಾಗಿದೆ. ದಕ್ಷಿಣ ಅಮೆರಿಕವು ಆ್ಯಂಡೀಸ್ ಪರ್ವತ ಮತ್ತು ಅಮೆಜಾನ್ ನದಿ ವ್ಯವಸ್ಥೆವುಳ್ಳ ವಿಶೇಷವಾದ ಭೂಭಾಗವಾಗಿದೆ. ಇದನ್ನು `ಹುಲ್ಲುಗಾವಲುಗಳ ನಾಡು' ಎಂದು ಕರೆಯುತ್ತಾರೆ.
• ದಕ್ಷಿಣ ಅಮೆರಿಕ ಖಂಡವು ಉತ್ತರ ಭಾಗವನ್ನು ಹೊರತುಪಡಿಸಿ ಉಳಿದೆಲ್ಲಾ ದಿಕ್ಕುಗಳು ಜಲಭಾಗಗಳಿಂದ ಸುತ್ತುವರೆದಿದೆ. ಉತ್ತರದಲ್ಲಿ ಪನಾಮ ಕಾಲುವೆಯು ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕಗಳನ್ನು ಪ್ರತ್ಯೇಕಿಸಿದೆ.
• ದಕ್ಷಿಣ ಅಮೆರಿಕದ ಒಟ್ಟು ಭೂಭಾಗವು ಸುಮಾರು 177.1 ಲಕ್ಷ ಚ.ಕಿ.ಮೀ.ಗಳಷ್ಟಿದ್ದು ಅದು ಭಾರತಕ್ಕಿಂತಲೂ ಮೂರುವರೆ ಪಟ್ಟು ದೊಡ್ಡದಾಗಿದೆ.
• ಈ ಖಂಡದಲ್ಲಿ ಒಟ್ಟು ಹದಿಮೂರು ರಾಷ್ಟ್ರಗಳಿವೆ. ಬ್ರೆಜಿಲ್ ಅತಿ ದೊಡ್ಡ ಮತ್ತು ಫ್ರೆಂಚ್ ಗಯಾನವು ಅತಿ ಚಿಕ್ಕ ರಾಷ್ಟ್ರವಾಗಿದೆ,
• ಬೊಲಿವಿಯಾ ಮತ್ತು ಪರಾಗ್ವೆ ಹೊರತುಪಡಿಸಿ ದಕ್ಷಿಣ ಅಮೆರಿಕದ ಉಳಿದೆಲ್ಲಾ ದೇಶಗಳು ಸಮುದ್ರ ತೀರವನ್ನು ಹೊಂದಿವೆ.
ಪ್ರಾಕೃತಿಕ ಲಕ್ಷಣಗಳು
• ಆ್ಯಂಡೀಸ್ ಪರ್ವತಗಳು: ಆ್ಯಂಡೀಸ್ ಪರ್ವತಗಳು ಪೆಸಿಫಿಕ್ ಸಾಗರದ ಕರಾವಳಿ ತೀರದುದ್ದಕ್ಕೂ ಸುಮಾರು 6,440 ಕಿ.ಮೀ.ಗಳಷ್ಟು ದೂರ ಹಬ್ಬಿರುವ ಪ್ರಪಂಚದ ಅತ್ಯಂತ ಉದ್ದವಾದ ಪರ್ವತ ಸರಣಿಯಾಗಿದೆ. ಮೌಂಟ್ ಅಕನ್ಕಾಗುವ (6,960 ಮಿ.) ಅರ್ಜೆಂಟೈನಾ-ಚಿಲಿ ಗಡಿಭಾಗದಲ್ಲಿದ್ದು ಅದು ಈ ಸರಣಿಯ ಅತಿ ಎತ್ತರದ ಶಿಖರವಾಗಿದೆ. ಇಕ್ವೆಡಾರ್ನಲ್ಲಿನ ಕೊಟೂಪಾಕ್ಷಿ (5896 ಮೀ.) ಮತ್ತು ಚಿಂಬೋರಾಸೊ (6272 ಮೀ.) ಇತರ ಪರ್ವತಗಳಾಗಿವೆ. ಆ್ಯಂಡೀಸ್ ಪರ್ವತ ಪ್ರದೇಶದಲ್ಲಿ ತಾಮ್ರ ಮತ್ತು ತವರಗಳಂತಹ ಖನಿಜಗಳು ಸಮೃದ್ಧವಾಗಿದೆ.
• ಪೂರ್ವದ ಎತ್ತರದ ಪ್ರದೇಶಗಳು:ಇವುಗಳು ಭಾರತದ ದಕ್ಷಿಣ ಪ್ರಸ್ಥಭೂಮಿಯಂತೆ ಹಳೆಯ ಶಿಲೆಗಳಿಂದ ರಚಿಸಲ್ಪಟ್ಟಿವೆ. ಓರಿನೊಕೊ ನದಿಯ ಉಪನದಿಯಾದ ಚೂರನ್ ನದಿಯು ವಿಶ್ವದ ಅತ್ಯಂತ ಎತ್ತರವಾದ ಏಂಜಲ್ ಜಲಪಾತವನ್ನು
(974 ಮೀ.) ಗಯಾನ ಪ್ರದೇಶದಲ್ಲಿ ನಿರ್ಮಿಸಿದೆ.
• ಕರಾವಳಿ ಮೈದಾನಗಳು: ಇವುಗಳು ಕಿರಿದಾದ ಮೈದಾನಗಳಾಗಿದ್ದು ಪೆಸಿಫಿಕ್ ಮಹಾಸಾಗರ ಮತ್ತು ಆ್ಯಂಡೀಸ್ ಪರ್ವತ
ಶ್ರೇಣಿಗಳ ಮಧ್ಯೆ ಕಂಡುಬರುತ್ತವೆ. ಕೇಂದ್ರೀಯ ಚಿಲಿ ಮತ್ತು ಕೊಲಂಬಿಯಗಳ ಪಶ್ಚಿಮ ಕರಾವಳಿ ತೀರದುದ್ದಕ್ಕೂ ಕಿರಿದಾದ ಕರಾವಳಿ ಮೈದಾನಗಳನ್ನು ಕಾಣಬಹುದು.
ನದಿಗಳು ಮತ್ತು ಸರೋವರಗಳು
• ಅಮೆಜಾನ್, ಪರಾನ, ಪರಗ್ವೆ, ಉರುಗ್ವೆ ಮತ್ತು ಓರಿನೊಕೊಗಳು ದಕ್ಷಿಣ ಅಮೆರಿಕದ ಪ್ರಮುಖ ನದಿವ್ಯೂಹಗಳಾಗಿವೆ.
• ಪ್ರಪಂಚದ ಅತಿ ದೊಡ್ಡ ನದಿಯಾದ ಅಮೆಜಾನ್ ನದಿಯು ಆಂಡಿಸ್ ಪರ್ವತದಲ್ಲಿ ಹುಟ್ಟುತ್ತದೆ.ಈ ನದಿಯ ಪಾತ್ರದುದ್ದಕ್ಕೂ ಬಹುದೂರ ನೌಕಾಯಾನಕ್ಕೆ ಅನುಕೂಲವಾಗಿದೆ.
• ಟಿಟಿಕಾಕ ಸರೋವರವು (ಬೊಲಿವಿಯ) ಪ್ರಪಂಚದಲ್ಲಿಯೇ ಎತ್ತರದಲ್ಲಿರುವ ಸರೋವರವಾಗಿದೆ
• ಜುನಿನ್ ಸರೋವರ, ಪೆರುವಿನ ಪರೋಕೋಚ್ ಸರೋವರ, ಬೋಲಿವಿಯಾದ ಪೂಪಾ ಸರೋವರಗಳು ದಕ್ಷಿಣ ಅಮೆರಿಕಾದ ಇತರ ಪ್ರಮುಖ ಸರೋವರಗಳಾಗಿವೆ.
ವಾಯುಗುಣ
• ದಕ್ಷಿಣ ಅಮೆರಿಕವು ವೈವಿಧ್ಯಮಯ ವಾಯುಗುಣವನ್ನು ಹೊಂದಿದೆ. ಈ ಖಂಡದ ಉತ್ತರ ಭಾಗದಲ್ಲಿ ಭೂಮಧ್ಯೆರೇಖೆಯು ಹಾದುಹೋದರೆ, ಇದರ ದಕ್ಷಿಣ ಭಾಗದಲ್ಲಿ ಮಕರ ಸಂಕ್ರಾಂತಿ ವೃತ್ತವು ಹಾದು ಹೋಗಿದೆ. ಈ ಎರಡು ಅಕ್ಷಾಂಶಗಳ ಮಧ್ಯೆ ಕಂಡುಬರುವ ಭೂಭಾಗವು ಉಷ್ಣವಲಯದಲ್ಲಿದೆ.
• ಅಮೆಜಾನ್ ಮುಖಜಭೂಮಿಯು ದಟ್ಟ ಅರಣ್ಯವನ್ನು ಹೊಂದಿದ್ದು, ಸಸ್ಯವರ್ಗ ಮತ್ತು ಪ್ರಾಣಿವರ್ಗಗಳಿಗೆ ನೆಲೆಯನ್ನು ಕಲ್ಪಿಸಿಕೊಟ್ಟಿದೆ. ಸರೀಸೃಪಗಳು, ಪಕ್ಷಿಗಳು ಮತ್ತು ಮಂಗಗಳು ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.
• ಅಟಕಾಮ ಮರುಭೂಮಿಯು(ಚಿಲಿ) ಭೂಮಿಯ ಮೇಲಿನ ಅತಿ ಶುಷ್ಕ ಪ್ರದೇಶವಾಗಿದೆ. ಕಳೆದ 200 ವರ್ಷಗಳಿಂದಲೂ ಇಲ್ಲಿ ಮಳೆ ಬಿದ್ದಿಲ್ಲ.
• ಗ್ರಾನ್ ಚಾಕೋ ಪ್ರದೇಶದ ದಕ್ಷಿಣ ಭಾಗವು ಸಮಶೀತೋಷ್ಣವಲಯದ ಹುಲ್ಲುಗಾವಲು (ಅರ್ಜೆಂಟೈನಾ ಮತ್ತು ಉರುಗ್ವೆ) ಅತಿ ವಿಸ್ತಾರವಾದ ಸಮಶೀತೋಷ್ಣವಲಯದ ಹುಲ್ಲುಗಾವಲುಗಳಿಂದ ಕೂಡಿದ್ದು, ಅದನ್ನು ಪಂಪಾಸ್ ಎನ್ನುವರು.
• ಆ್ಯಂಡೀಸ್ ಪರ್ವತದ ಪೂರ್ವದ ಕಡೆಗೆ ಪಟಗೋನಿಯ ಸಮಶೀತೋಷ್ಣವಲಯ ಮರುಭೂಮಿ ಯನ್ನು ಹೊಂದಿದೆ. ಕೇಂದ್ರೀಯ ಪ್ರದೇಶವು ಮಿಶ್ರ ವಿಧದ ಅರಣ್ಯಗಳಿಂದ ಕೂಡಿದೆ.ಮೆಡಿಟರೇನಿಯನ್ ಮಾದರಿಯ ವಾಯುಗುಣವನ್ನು ಹೊಂದಿದೆ.
ಜನಸಂಖ್ಯೆ
ದಕ್ಷಿಣ ಅಮೆರಿಕವು ಪ್ರಪಂಚದ ಸರಾಸರಿ (47%) ನಗರೀಯ ಜನಸಂಖ್ಯೆಯ ಪ್ರಮಾಣಕ್ಕಿಂತ ಅತ್ಯಧಿಕ ಪ್ರಮಾಣವನ್ನು (80%) ಹೊಂದಿದೆ. ಅತ್ಯಧಿಕ ನಗರ ಜನಸಂಖ್ಯೆಯು ಉರುಗ್ವೆಯಲ್ಲಿದ್ದು (93%), ಕನಿಷ್ಟ ನಗರ ಜನಸಂಖ್ಯೆಯು ಗಯಾನದಲ್ಲಿದೆ (36%).