Loading [MathJax]/extensions/MathML/mml3.js

“ಕೋಮುಹಿಂಸೆ ಮತ್ತು ಸಮಾಜ”

 

ಭಾರತೀಯ ಸಮಾಜವು ಅತೀ ಸಂಕೀರ್ಣತೆಯಿಂದ ಕೂಡಿದ್ದು, ವಿವಿಧ ಲಕ್ಷಣಗಳ ಅನೇಕ ಭಾಷಾವರ್ಗಗಳಿಗೆ ಸೇರಿದ ಅನೇಕಾನೇಕರು ವಲಸೆ ಬಂದು ಭಾರತದ ಜನಸಮೂಹದಲ್ಲಿ ಸೇರಿ ವೈವಿಧ್ಯತೆಯಲ್ಲಿ ಸಮೃದ್ಧಿಯನ್ನು ಮತ್ತು ಸತ್ವಗಳಿಗೆ ಮಹೋನ್ನತ ಕೊಡುಗೆಯನ್ನು ಸಲ್ಲಿಸಿದ್ದಾರೆ. ಸಮಕಾಲೀನ ಭಾರತದಲ್ಲಿ ವಿಶ್ವದ ಪ್ರಮುಖ ಧರ್ಮಗಳಲ್ಲದೇ, ನಂಬಿಕೆಯಲ್ಲೂ, ಆಚಾರ- ವಿಚಾರಗಳಲ್ಲೂ ವಿಸ್ಮಯಗೊಳಿಸುವಷ್ಟು ವೈವಿಧ್ಯವುಳ್ಳ ಸಾವಿರಾರು ಪಂಥಗಳು ಹಾಗೂ ಪಂಗಡಗಳಿಂದಾಗಿ ನಮ್ಮ ಸಮಾಜವು ಒಂದು ಸಮ್ಮಿಶ್ರ ಸಂಸ್ಕೃತಿಯನ್ನು ಪಡೆದುಕೊಂಡಿದೆ. ಈ ವೈವಿಧ್ಯತೆಯಲ್ಲಿನ ಏಕತೆಯ ರಕ್ಷಣೆಗಾಗಿ ನಾವು ಭಾರತೀಯರು ಜಾತ್ಯಾತೀತ ಹಾಗೂ ಸಮಾನತೆಯ ಎಲ್ಲ ಲಕ್ಷಣಗಳುಳ್ಳ ಸಂವಿಧಾನವನ್ನು ಹೊಂದಿದ್ದೇವೆ. ಆದರೆ, ಇತ್ತೀಚೆಗೆ ಕೆಲವೊಂದು ಕೋಮುವಾದೀಯ ಶಕ್ತಿಗಳು ನಮ್ಮ ಧರ್ಮನಿರಪೆಕ್ಷ ಜಾತ್ಯಾತೀತ ಸಂವಿಧಾನದ ಭದ್ರಬುನಾದಿಗೆ ಸವಾಲನ್ನೆಸಗುತ್ತಿವೆ. ಈ ಶಕ್ತಿಗಳು ಹುಟ್ಟು ಹಾಕುತ್ತಿರುವ ಕೋಮುಗಲಭೆಗಳಿಂದಾಗಿ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ.
ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯೂ ಭಾರತಕ್ಕಷ್ಟೇ ಸೀಮಿತವಾಗದೇ ಜಗತ್ತಿನಾದ್ಯಂತ ಎಲ್ಲಾ ಸಮಯಗಳಲ್ಲೂ ಕಂಡು ಬಂದಿದೆ. ಇಂತಹ ಹೆಚ್ಚಿನ ಹಿಂಸೆಗಳಿಗೆ ನಿಜವಾದ ಕಾರಣ ರಾಜಕೀಯ, ವೈಯಕ್ತಿಕ ದ್ವೇಷ ಹಾಗೂ ಮತಾಂಧತೆ ಅದೇ ರೀತಿ ಮತಧರ್ಮಕ್ಕೂ ರಾಜಕೀಯಕ್ಕೂ ಬಹು ಹಿಂದಿನಿಂದಲೂ ಸಂಬಂಧವಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ದೈವಭಕ್ತಿಯೂ ಮತ್ತು ಮತಧರ್ಮವು ಅನೇಕ ಬಾರಿ ಆಳುವವರ ಹಾಗು ಧಾರ್ಮಿಕ ಮುಖಂಡರ ಕೆಟ್ಟ ಕೆಲಸಗಳಿಗೆ ಸಾಧನಗಳಾಗುತ್ತ ಬಂದಿದೆ. ಧರ್ಮದ ಪವಿತ್ರತೆಯ ರಕ್ಷಣೆಯನ್ನು ತಾವು ಮಾಡುವುದಾಗಿ ಘೋಷಿಸಿ, ತಾವು ಮಾಡುವ ಕೆಲಸಗಳು ಪುಣ್ಯದ ಕಾರ್ಯಗಳೆಂಬ ಭಾವನೆ ಜನರಲ್ಲಿ ಮೂಡುವಂತೆ ಮಾಡಿ ಒಂದು ಧರ್ಮದವರನ್ನು ಮತ್ತೊಂದು ಧರ್ಮದವರ ಮೇಲೆ ಎತ್ತಿ ಕಟ್ಟುತ್ತಾರೆ.
ತನ್ನೆಲ್ಲಾ ನಾಗರೀಕರಿಗೆ ಕಾನೂನಿನ ರಕ್ಷಣೆಯನ್ನು ಹಾಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅವಕಾಶಗಳನ್ನು ಕಲ್ಪಿಸಿಕೊಡುವುದು ಯಾವುದೇ ಜಾತ್ಯಾತೀತ ರಾಷ್ಟ್ರದ ಕರ್ತವ್ಯವಾಗಿದೆ. ಆದರೆ ಬಹುತ್ವತೆಯಿಂದ ಕೂಡಿದ ಭಾರತದಂತಹ ಆಧುನಿಕ ಸಮಾಜದಲ್ಲಿ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರ ಮನವೊಲಿಸಲು ಪ್ರಯತ್ನಿಸುತ್ತಿರುತ್ತವೆ.
ಹೀಗೆ ಬಹುಸಂಖ್ಯಾತರ ಪರವಾಗಿ ಕೆಲವು ಪಕ್ಷಗಳು ಹಾಗೂ ಅಲ್ಪಸಂಖ್ಯಾತರ ಪರವಾಗಿ ಕೆಲವು ಪಕ್ಷಗಳು ನೀಡುವ ಉತ್ತೇಜನ ಹಾಗೂ ಬೆಂಬಲದಿಂದಾಗಿ ರಾಷ್ಟ್ರವು ವಿಘಟಿಸುವತ್ತ ಸಾಗುವ ಸಂಭವವಿರುತ್ತದೆ. ಆದ್ದರಿಂದ ಮಾನವೀಯತೆಯ ಶ್ರೇಷ್ಠ ಧ್ಯೇಯಗಳನ್ನು ಮರೆತು ಕೆಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಮುಖಂಡರುಗಳು ತೋರುತ್ತಿರುವ ಉತ್ತೇಜನಾತ್ಮಕ, ಸ್ವರಕ್ಷಣಾತ್ಮಕ ಹಾಗೂ ಸೃಜನ ಪಕ್ಷಪಾತದಿಂದ ಕೂಡಿದ ಧೋರಣೆಯನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನು ಖಂಡಿಸಬೇಕು.
ಇನ್ನು ಕೋಮು ಹಿಂಸೆಯ ವಿಚಾರವಾಗಿ ಹೇಳುವುದಾದರೆ ಕೋಮು ಹಿಂಸೆಯೂ ತನ್ನದೆಯಾದ (ಸಮಾಜ ಶಾಸ್ತ್ರೀಯ) ಹಿನ್ನಲೆಯನ್ನು ಹೊಂದಿದ್ದು, ಹಿಂಸೆಯ ಇನ್ನಿತರ ರೂಪಗಳಿಗಿಂತ ಭಿನ್ನವಾಗಿದೆ. ಹಿಂಸೆಯ ವಿವಿಧ ರೂಪಗಳ ಅಧ್ಯಯನದಿಂದ ಕಂಡು ಬಂದಿದ್ದೆನೆಂದರೆ, ಕೋಮು ಹಿಂಸಾಚಾರವನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಕಾರದ ಹಿಂಸೆಗಳಿಗೆ ಸಮಾಜಿಕ. ಆರ್ಥಿಕ ಹಾಗೂ ಮನೋವೈಜ್ಞಾನಿಕ ಕಾರಣಗಳಿರುತ್ತವೆ. ಉದಾಹರಣೆಗೆ ಸಾಮಾನ್ಯ ಹೊಡೆದಾಟ, ಒಯ್ದಾಟ, ಹತ್ಯೆ, ಸಾಮಾನ್ಯ ಚಳುವಳಿಗಳಲ್ಲಿ ನಡೆಯುವ ಹಿಂಸಾಚಾರ ಮತ್ತು ಅದನ್ನು ಹತ್ತಿಕ್ಕಲು ಉಪಯೋಗಿಸುವ ಬಲಪ್ರಯೋಗ ಇವೆಲ್ಲಾ ಹಿಂಸೆಗಳೆ ಆಗಿದ್ದರೂ ಇವು ಯಾವುದೇ ಧರ್ಮ ಅಥವಾ ಕೋಮಿಗೆ ಸಂಬಂಧಿಸಿರುವುದಿಲ್ಲ. ಸಾಮಾನ್ಯವಾಗಿ ಈ ಹಿಂಸಾಪರಾಧಗಳು ವ್ಯಕ್ತಿಗಳ ಮೇಲಿನ ಸಾಮಾಜಿಕ, ಆರ್ಥಿಕ ಹಾಗೂ ಮನೋವೈಜ್ಞಾನಿಕ ಒತ್ತಡಗಳಿಂದುಂಟಾಗುತ್ತವೆ. ಹೆಚ್ಚು ಬಡತನವಿದ್ದಲಿ ಕಳ್ಳತನ ಹಾಗೂ ಡಕಾಯಿತಿಗಳು ಹೆಚ್ಚು ಸಂಭವಿಸುತ್ತವೆ. ನಿರುದ್ಯೋಗ ಸಮಸ್ಯೆ ಹೆಚ್ಚು ಇದ್ದಲ್ಲಿ ಯುವಕರಿಂದ ಅಶಾಂತಿ ಹರಡುತ್ತದೆ. ಆರ್ಥಿಕ ಅಸಮಾನತೆ ಮತ್ತು ಶೋಷಣೆ ಇದ್ದಲ್ಲಿ ಅಂತರ್ಜಾತೀಯ ಸಂಘರ್ಷಗಳು ಹೆಚ್ಚಾಗುತ್ತವೆ. ಇವೆಲ್ಲವೂ ಹಿಂಸೆಯ ರೂಪಗಳೇ ಆಗಿದ್ದು, ಸಾಮಾಜಿಕ-ಆರ್ಥಿಕ ಸಂರಚನೆಯೇ ಇವುಗಳಿಗೆಲ್ಲ ತಾಯಿ ಬೇರಾಗಿವೆ. ಆದ್ದರಿಂದ ಕೋಮು ಹಿಂಸಾಚಾರವನ್ನು ಹೊರತುಪಡಿಸಿ ಇನ್ನಿತರ ಎಲ್ಲಾ ರೂಪದ ಹಿಂಸೆಗಳೂ ಹೆಚ್ಚು ಕಡಿಮೆ ಒಂದಲ್ಲ ಒಂದು ರೀತಿಯಿಂದ ಬಡತನ ಮತ್ತು ಅಸಮಾನತೆಗಳಿಗೆ ಸಂಬಂಧಿಸಿವೆ.
ಆದರೆ, ಕೋಮು ಹಿಂಸಾಚಾರದ ಬಗ್ಗೆ ಹೇಳುವುದಾದರೆ, ಇದಕ್ಕೂ ಆರ್ಥಿಕ ಅಭಿವೃದ್ದಗೂ ಯಾವುದೇ ಸಂಬಂಧವಿಲ್ಲವೆನಿಸುತ್ತದೆ. ಏಕೆಂದರೆ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳು ಆರ್ಥಿಕಾಭಿವೃದ್ಧಿಯ ದೃಷ್ಟಿಯಲ್ಲಿ ಭಾರತದ ಇತರ ರಾಜ್ಯಗಳಿಗಿಂತ ಸಮೃದ್ಧವಾಗಿವೆಯಾದರೂ ಕೋಮುದ್ವೇಷದ ಉದ್ವಿಗ್ನತೆಯು ಭಾರತದ ಇನ್ನಿತರ ರಾಜ್ಯಗಳಿಗಿಂತ ಇವೆರಡೂ ರಾಜ್ಯಗಳಲ್ಲೇ ಹೆಚ್ಚಾಗಿದೆ. ಮೇಲಾಗಿ, ಕೋಮು ಹಿಂಸಾಚಾರವು ನಗರಗಳಲ್ಲೇ ಹೆಚ್ಚು ಸಂಭವಿಸುತ್ತಿದ್ದು, ಹಳ್ಳಿಗಳಲ್ಲಿ ಇಲ್ಲವೆನ್ನುವಷ್ಟು ಕಡಿಮೆ ಇದೆ. ಈ ಬಾರಿ ಗುಜರಾತಿನಲ್ಲಿ ನಡೆದ ಹಿಂಸಾಚಾರವು ನಗರಗಳ ಅಕ್ಕ- ಪಕ್ಕದಲ್ಲಿರುವ ಹಳ್ಳಿಗಳಿಗೂ ತಲುಪಿದೆ.
ಯಾವುದೇ ನಗರದಲ್ಲಿ ಹಿಂದೆ ಯಾವಾಗಲಾದರೂ ಕೋಮುಹಿಂಸಾಚಾರ ನಡೆದಿದ್ದರೆ ಪುನಃ ಭವಿಷ್ಯದಲ್ಲಿ ಕೋಮುಹಿಂಸೆ ನಡೆಯುವ ಸಂಭವ ಹೆಚ್ಚಾಗುತ್ತದೆ. ಯಾವುದೆ ನಗರದಲ್ಲಿ ಮೇಲಿಂದ ಮೇಲೆ ಕೋಮು ಹಿಂಸಾಚಾರ ನಡೆಯುತ್ತಿದ್ದರೆ ಆ ನಗರದಲ್ಲಿ ಯಾವುದಾದರೂ ನಿರ್ದಿಷ್ಟ ಸಮುದಾಯದ ಅಥವಾ ಕೋಮಿನ ಕಾಲನಿಗಳ ಸಂಖ್ಯೆ ಹೆಚ್ಚಾಗುತ್ತದೆ. ಅಂದರೆ ಯಾವುದೇ ನಿರ್ದಿಷ್ಟ ಸಮುದಾಯದ ಅಥವಾ ಧರ್ಮದ ಜನರು ಒಂದೇ ಸ್ಥಳದಲ್ಲಿ ‘ಸೊಸೈಟಿ’ ಅಥವಾ ‘ಕಾಲನಿ’ ಇತ್ಯಾದಿಗಳನ್ನು ಸೃಷ್ಟಿಸಿಕೊಂಡು ವಾಸಿಸಲು ಶುರು ಮಾಡುತ್ತಾರೆ. ಇಂತಹ ಕಾಲನಿಗಳು ಅಸ್ತಿತ್ವಕ್ಕೆ ಬರುವುದರಿಂದಾಗಿ ಸಮಾಜದ ಒಂದು ಸಮುದಾಯದಿಂದ ಇನ್ನೊಂದು ಸಮುದಾಯದ ಮಧ್ಯೆ ಪರಸ್ಪರ ಸಂಪರ್ಕ ಕ್ರಮೇಣ ಕಡಿಮೆಯಾಗುತ್ತಾ ಹೋಗಿ ಸಾಮಾಜಿಕ ಸಂರಚನೆಯ ಬಹುತ್ವವಾದವು ದುರ್ಬಲವಾಗುತ್ತದೆ. ಇದರಿಂದ ಜನರಲ್ಲಿ ಸಂಕುಚಿತ ಮನೋಭಾವವು ತೀವ್ರವಾಗಿ ಬೆಳೆಯುತ್ತಾ ಮುಂದೆ ಸಂಭವಿಸಬಹುದಾದ ಕೋಮು ಹಿಂಸೆಗೆ ದಾರಿಮಾಡಿಕೊಡಬಹುದು.
ಕೋಮು ಉದ್ವಿಗ್ನತೆಯ ಮೂಲಕಾರಣ ಧಾರ್ಮಿಕವಿರಬಹುದು. ಆದರೆ ಕೋಮು ಹಿಂಸಾಚಾರದ ಮೂಲಕಾರಣ ಅನೇಕ ಬಾರಿ ಧಾರ್ಮಿಕವಾಗಿರದೇ ರಾಜಕೀಯ ಪೂರಿತವಾಗಿರುತ್ತದೆ. ಕಾರಣ ಏನೇ ಇರಲಿ, ಆದರೆ ಹಿಂಸೆ ಅದರ ಪರಿಹಾರವಲ್ಲ. ಅತ್ಯಂತ ಸುದೀರ್ಘವಾಗಿ ಹೋರಾಡಿ ಸುಮಾರು 600 ಸಂಸ್ಥೆಗಳನ್ನು ಒಟ್ಟುಗೂಡಿಸಿ ಪರಿಸ್ಥಿತಿಯಿಂದ ಪಾರಾಗಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರಾದ ಸಚಿವ ಅರ್ಜುನ್ ಸೇರಿ ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿ, ಇದೇ ರೀತಿ ನೀರು ಬಿಡುತ್ತಾ ಹೋದರೆ 45 ದಿನಗಳಲ್ಲಿ ಜಲಾಶಯಗಳು ಖಾಲಿಯಾಗುತ್ತವೆ ಎಂದು ಮನವರಿಕೆ ಮಾಡಿದೆ.
ಜೊತೆಗೆ ಇತ್ತ ರಾಜ್ಯದ ಜನತೆಯನ್ನು ಸಮಾಧಾನ ಪಡಿಸಲು ಸಂಪುಟ ಸಭೆ ಸೇರಿ ಕೆ.ಆರ್.ಎಸ್. ಮತ್ತು ಕಬಿನಿ ಜಲಾಶಯಗಳೆರಡೂ ಖಾಲಿಯಾದಲ್ಲಿ ಅವುಗಳ ತಳ ಮಟ್ಟದಲ್ಲಿರುವ 10 ಟಿ.ಎಂ.ಸಿ ನೀರನ್ನು 11,000 ಹೆಚ್.ಪಿ. ಪಂಪ್ ಸೆಟ್ಟನ್ನು ಬಳಸಿ ಮಂಡ್ಯ – ಮೈಸೂರು ಪ್ರದೇಶದ ರೈತರ ಒಂದು ಲಕ್ಷ ಎಕ್ಟೆರ್ ಬೆಳೆಗೆ ನೀರುಣಿಸಲು ಪ್ರಯತ್ನ ಎಂಬ ಆಶ್ವಾಸನೆ ನೀಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯು ರಾಜ್ಯ ಸರ್ಕಾರವನ್ನು ಮತ್ತು ರಾಜ್ಯದ ಜನತೆಯನ್ನು ಕಂಗಲುಗೊಳಿಸಿದ್ದು, ಇದು ಅನೇಕ ರೀತಿಯ ಪರಿಣಾಮಗಳಿಗೆ ಎಡೆ ಮಾಡಿ ಕೊಟ್ಟಿದೆ.

ಕಾವೇರಿ ವಿವಾದದ ಪರಿಣಾಮಗಳು


ಇದು ರಾಜ್ಯ ರಾಜ್ಯಗಳ ನಡುವೆ ದ್ವೇಷ, ಮತ್ಸರ ಬೆಳೆಸಲು ಕಾರಣವಾಗಿದೆ. ಇದರಿಂದ ರಾಜ್ಯದ ರೈತರು ಮುಷ್ಕರ, ಪ್ರತಿಭಟನೆ ಮತ್ತು ವಿದ್ವಂಸಕ ಕೃತ್ಯಗಳಲ್ಲಿ ತೊಡಗಲು ಕಾರಣವಾಗಿದೆ. ಇದರ ಪರಿಣಾಮವಾಗಿ ಕಬಿನಿ ಜಲಾಶಯದಿಂದ ನೀರು ಹರಿಯುವುದನ್ನು ತಡೆಯಲು ಹೋಗಿ ರೈತ ಜಲಾಶಯಕ್ಕೆ ಧುಮುಕಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ಇದು ರಾಷ್ಟ್ರೀಯ ಐಕ್ಯತೆ ಕದಡುವುದರ ಜೊತೆಗೆ ಒಕ್ಕೂಟ ವ್ಯವಸ್ಥೆ ಮಾರಕವಾಗಿದೆ. ನೀರು ಬಿಡುತ್ತಾ ಹೋದರೆ ಜಲಾಶಯ ಖಾಲಿಯಾಗಿ ಅಂತರ ಜಲ ಕುಸಿತ ಉಂಟಾಗುತ್ತದೆ. ಇಂತಹ ವಿವಾದಗಳು ಸಂವಿಧಾನ ಬಿಕ್ಕಟ್ಟಿಗೆ ಎಡೆ ಮಾಡಿಕೊಡುತ್ತದೆ.

ಪರಿಹಾರೋಪಾಯಗಳು


ಈ ವಿವಾದವನ್ನು ಬಗೆಹರಿಸಲು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯು (WRDO) ಕಾಲಕಾಲಕ್ಕೆ ಸರಿಯಾದ ಮಾಹಿತಿ ಒದಗಿಸಿ ರಾಜ್ಯದ ನೀರಿನ ಅವಶ್ಯಕತೆ, ನೀರಿನ ಸಂಗ್ರಹಣೆ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದರಿಂದ ಗೊಂದಲ ನಿವಾರಿಸಿ ಸರಿಯಾದ ತೀರ್ಮಾನ ನೀಡಲು ಸಹಕರಿಸಬೇಕು. ಈ ವಿವಾದವನ್ನು ಎರಡು ರಾಜ್ಯಗಳು ಸೌಹಾರ್ದಯುತವಾದ ಮಾತುಕತೆಯಿಂದ ಬಗೆಹರಿಸಬೇಕು. ಈ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎರಡು ರಾಜ್ಯಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಮತ್ತು ಶಾಶ್ವತವಾದ ಸೂತ್ರವನ್ನು ರಚಿಸಬೇಕು.
ಜನತೆಯಲ್ಲಿ ಒಕ್ಕೂಟದ ಮಹತ್ವದ ಅರಿವು ಮೂಡಿಸುವುದರ ಜೊತೆಗೆ ನದಿ ನೀರಿನ ಹಂಚಿಕೆ ಸಂಪನ್ಮೂಲಗಳ ಹಂಚಿಕೆ ಬಗ್ಗೆ ಅರಿವು ಮೂಡಿಸಬೇಕು. ರಾಜ್ಯದ ಜಲಾಶಯದ ನೀರಿನ ಮಟ್ಟ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರಿಗಳು ತೀರ್ಮಾನ ನೀಡಬೇಕೇ ಹೊರತು ಏಕ ಪಕ್ಷೀಯವಾಗಿ ತೀರ್ಮಾನ ನೀಡಬಾರದು. ಅನಾವೃಷ್ಟಿಯ ಸಂದರ್ಭದಲ್ಲಿ ಪರಿಸ್ಥಿತಿಗನುಸಾರ ನಿರ್ಧಾರ ತೆಗೆದುಕೊಳ್ಳಬೇಕು. ಗಂಗಾ-ಕಾವೇರಿ ಯೋಜನೆಯನ್ನು ಕೈಗೆತ್ತಿಕೊಂಡು ಅದನ್ನು ಅನುಷ್ಟಾನಕ್ಕೆ ತರುವುದರಿಂದ ಬಗೆಹರಿಸಬಹುದು.