ಉಚ್ಚ ನ್ಯಾಯಾಲಯ

 

* ಭಾರತದಲ್ಲಿ ಪ್ರಥಮವಾಗಿ ಹೈಕೋರ್ಟಗಳು ಸ್ಥಾಪನೆಯಾಗಿದ್ದು ಬ್ರಿಟಿಷರ ಆಡಳಿತ ಕಾಲದಲ್ಲಿ (1861ರ ಭಾರತೀಯ ನ್ಯಾಯಾಂಗ ಕಾಯ್ದೆಗೆ ಅನುಗುಣವಾಗಿ)
* ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೈಕೋರ್ಟ ಅತ್ಯುನ್ನತ ಸ್ಥಾನ ಪಡೆದಿದೆ.
* ಸಂವಿಧಾನದ 214 ನೇ ವಿಧಿ ಪ್ರತಿ ರಾಜ್ಯದಲ್ಲೂ ಒಂದು ಉಚ್ಚ ನ್ಯಾಯಾಲಯವಿರಬೇಕೆಂದು ಪ್ರಾಸ್ತಾಪಿಸಿದೆ.
* ಸಂಸತ್ ಎರಡು ಅಥವಾ ಎರಡಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಂದೇ ಉಚ್ಚನ್ಯಾಯಾಲಯವನ್ನು ಸ್ಥಾಪಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. (213 ನೇ ವಿಧಿ)
* ಅಸ್ಸಾಂ, ಮಣಿಪುರ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್ ಮಿಜೋರಾಂ, ಅರುಣಾಚಲ ಪ್ರದೇಶ ರಾಜ್ಯಗಳು ಒಂದೇ ಉಚ್ಚ ನ್ಯಾಯಾಲಯವನ್ನು ಹೊಂದಿದೆ. ಉಚ್ಚ ನ್ಯಾಯಾಲಯದ ಪೀಠ ಅಸ್ಸಾಂನ ಗುವಹಟಿಯಲ್ಲಿದೆ.
* ತಮಿಳುನಾಡು, ಪಾಂಡಿಚೇರಿಗೆ ಒಂದೇ ಉಚ್ಚ ನ್ಯಾಯಾಲಯವಿದೆ.
* ಪಂಜಾಬ್, ಹರಿಯಾಣ, ಚಂಡೀಗಡ, (ಕೇಂದ್ರಾಡಳಿತ ಪ್ರದೇಶ) ಒಂದೇ ಉಚ್ಚನ್ಯಾಯಾಲಯವನ್ನು ಹೊಂದಿದೆ.(ಉಚ್ಚ ನ್ಯಾಯಾಲಯ ಪೀಠ ಚಂಡೀಗಢ)
* ಕೇಂದ್ರಾಡಳಿತ ಪ್ರದೇಶಗಳ್ಲಿ ದೆಹಲಿಗೆ ಮಾತ್ರ ಪ್ರತ್ಯೇಕ ಹೈಕೋರ್ಟ ಇದೆ.
* ಭಾರತದಲ್ಲಿ ಒಟ್ಟು ಉಚ್ಚ ನ್ಯಾಯಾಲಯಗಳ ಸಂಖ್ಯೆ 24
* ಸಂವಿಧಾನದ 217 ನೇ ವಿಧಿ ಪ್ರಕಾರ ರಾಷ್ಟ್ರಪತಿಗಳು ಹೈಕೋರ್ಟಿನ ಮುಖ್ಯ ಹಾಗೂ ಇತರೆ ನ್ಯಾಯಾಧೀಶರನ್ನು ನೇಮಿಸುತ್ತಾರೆ.

ನ್ಯಾಯಾಧೀಶರಾಗಲು ಇರಬೇಕಾದ ಅರ್ಹತೆಗಳು


* ಭಾರತದ ಪ್ರಜೆಯಾಗಿರಬೇಕು
* ಭಾರತದ ಯಾವುದಾದರೂ ಅಧೀನ ನ್ಯಾಯಾಲದಯಲ್ಲಿ ಕನಿಷ್ಠ 10 ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರಬೇಕು.
* ಉಚ್ಚ ನ್ಯಾಯಾಲಯದಲ್ಲಿ 10 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರಬೇಕು
* ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಮಹಾಭಿಯೋಗ ಅಥವಾ ದೋಷಾರೋಪಣೆ ಮೂಲಕ ಸಂಸತ್ತಿನ ಉಭಯ ಸದನಗಳ 2/3ರಷ್ಟು ಬಹುಮತದಿಂದ ಪದಚ್ಯುತಿ ಗೊಳಿಸಬಹುದು.
* ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಂಸತ್ತು ಕಾಲಕಾಲಕ್ಕೆ ನಿಗದಿಪಡಿಸಿದ ವೇತನ ಇತರೆ ಭತ್ಯೆ, ಸೌಲಭ್ಯಗಳನ್ನು ಪಡೆಯುತ್ತಾರೆ.
* ರಾಜ್ಯಪಾಲರು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸುತ್ತಾರೆ.
* ರಾಷ್ಟ್ರಪತಿಗೆ ಹೈಕೋರ್ಟನ ನ್ಯಾಯಾಧೀಶರನ್ನು ವರ್ಗಾವಣೆ ಮಾಡುವ ಮತ್ತು ಹೈಕೋರ್ಟನ ನಿವೃತ್ತ ನ್ಯಾಯಾಧೀಶರು ತಾತ್ಕಾಲಿಕವಾಗಿ ನ್ಯಾಯಾಧೀಶರಾಗಿ ಕೆಲಸ ಮಾಡಲು ಅನುಮತಿ ನೀಡುವ ಅಧಿಕಾರವಿದೆ.

ಅಧಿಕಾರ ವ್ಯಾಪ್ತಿ


1. ಮೂಲ ಅಧಿಕಾರ (225 ನೇ ವಿಧಿ)
* ಸಂಸತ್, ರಾಜ್ಯ ಶಾಸಕಾಂಗ ಸದಸ್ಯರುಗಳ ಚುನಾವಣೆಗೆ ಸಂಬಂಧಿಸಿದ ವಿಷಯಗಳು, ರೆವಿನ್ಯೂ, ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ, ವೈವಾಹಿಕ ವಿಚ್ಛೇದನ, ನ್ಯಾಯಾಂಗ ಉಲ್ಲಂಘನೆ, ಮರಣ ಪತ್ರ ಮೊದಲಾದವುಗಳು ಮೂಲ ಅಧಿಕಾರ ವ್ಯಾಪ್ತಿಗೆ ಬರುತ್ತವೆ.
2. ಮನವಿ ಅಧಿಕಾರ :
* ಉಚ್ಚ ನ್ಯಾಯಾಲಯ ರಾಜ್ಯದಲ್ಲಿ ಮನವಿಯ ಅಂತಿಮ ನ್ಯಾಯಾಲಯವಾಗಿ ಕಾರ್ಯ ನಿರ್ವಹಿಸುತ್ತದೆ. ಅಧೀನ ಸಿವಿಲ್. ಕ್ರಿಮೀನಲ್ ನ್ಯಾಯಾಲಯಗಳು ನಿಡುವ ತೀರ್ಪನ್ನು ಪ್ರಶ್ನಿಸಿ, ಅವುಗಳನ್ನು ಪರಿಶೀಲಿಸುವಂತೆ ಮನವಿ ಸಲ್ಲಿಸಬಹುದು. ಅಂತಹ ಮನವಿ ಸ್ವೀಕರಿಸುವ, ವಿಚಾರಣೆ ಮಾಡುವ ಅಧಿಕಾರ.
3. ಮೂಲಭೂತ ಹಕ್ಕುಗಳ ರಕ್ಷಣೆ (ರಿಟ್‍ಗಳ ಮೂಲಕ 226 ನೇ ವಿಧಿ)
4. ಸಂವಿಧಾನದ ರಕ್ಷಣೆ
5. ದಾಖಲೆಗಳ ನ್ಯಾಯಾಲಯ
6. ಮೇಲ್ವಿಚಾರಣೆ ಅಧಿಕಾರ, ಅಧೀನ ನ್ಯಾಯಾಲಯಗಳ ಕಾರ್ಯನಿರ್ವಹಣೆ, ಸಿಬ್ಬಂದಿಯ ನೇಮಕಾಧಿಕಾರ.
7. ನಿಯಂತ್ರಣಾಧಿಕಾರ : ಉಚ್ಚ ನ್ಯಾಯಾಲಯ ತನ್ನ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಅಧೀನ ನ್ಯಾಯಾಲಯಗಳು ಮತ್ತು ಟ್ರಿಬ್ಯೂನಲ್ ಗಳ ಮೇಲೆ ನಿಯಂತ್ರಣ. ಉದಾ: ನ್ಯಾಯಾಧೀಶರ ನೇಮಕ, ಬಡ್ತಿ, ವರ್ಗಾವಣೆ ಮೊದಲಾದವುಗಳು.