ಸಂವಿಧಾನದ ತಿದ್ದುಪಡಿ 

 

* ಸಂದರ್ಭಕ್ಕೆ ಅನುಗುಣವಾಗಿ ಒಂದು ರಾಷ್ಟ್ರದ ಸಂವಿಧಾನದ ಕೆಲವು ವಿಧಿಗಳಿಗೆ ತಿದ್ದುಪಡಿ ತರುವ ವ್ಯವಸ್ಥೆಗೆ ಸಂವಿಧಾನ ತಿದ್ದುಪಡಿ ಎಂದು ಕರೆಯಲಾಗುತ್ತದೆ.
* ಸಂವಿಧಾನದ 20ನೇ ಭಾಗದಲ್ಲಿರುವ 368ನೇ ವಿಧಿಯು ಸಂವಿಧಾನಿಕ ತಿದ್ದುಪಡಿಗೆ ಸಂಬಂಧಿಸಿದಂತೆ ಅವಕಾಶ ನೀಡಿದೆ.
* ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡಲಾಗಿದೆ.
* 1973 ರಲ್ಲಿ ಸುಪ್ರೀಂಕೋರ್ಟ ಸಂವಿಧಾನದ ಮೂಲ ರಚನೆಯನ್ನು ಹೊರತುಪಡಿಸಿ ಉಳಿದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಬಹುದೆಂದು ಕೇಶವಾನಂದ ಭಾರತಿ ಪ್ರಕರಣದಲ್ಲಿ ಶಿಫಾರಸ್ಸು ಮಾಡಿದೆ.
* ಯಾವುದೇ ತಿದ್ದುಪಡಿಯನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. (1976, ಸಂವಿಧಾನದ 42ನೇ ತಿದ್ದುಪಡಿಯನ್ವಯ)

ತಿದ್ದುಪಡಿ ವಿಧಾನಗಳು


1. ಸಂಸತ್ತಿನ ಸರಳ ಅಥವಾ ಸಾಮಾನ್ಯ ಬಹುಮತದ ಮೂಲಕ ತಿದ್ದುಪಡಿ
ಸಂಸತ್ತಿನ ಉಭಯ ಸದನಗಳು ಸಾಮನ್ಯ ಬಹುಮತದಿಂದ ಅಂಗೀಕರಿಸಿದ ತಿದ್ದುಪಡಿಗೆ ಸರಳ ಅಥವಾ ಸಾಮಾನ್ಯ ತಿದ್ದುಪಡಿ ಎನ್ನಲಾಗುತ್ತದೆ.
* ರಾಜ್ಯ ವಿಧಾನ ಪರಿಷತ್ತುಗಳ ರಚನೆ ಅಥವಾ ರದ್ದತಿ
* ಪೌರತ್ವಕ್ಕೆ ಸಂಬಂಧಿಸಿದ ವಿಷಯಗಳು
* ರಾಜ್ಯಗಳ ರಚನೆ, ಗಡಿ, ಹೆಸರು ಬದಲಾವಣೆ
* ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದಂತೆ ಮತ್ತು ಅಧಿಕೃತ ಭಾಷೆಯ ಬಳಕೆ.
* ಕ್ಷೇತ್ರ ಪುನರ್ ವಿಂಗಡಣೆ ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ತಿದ್ದುಪಡಿ ಮೊದಲಾದವುಗಳು

2. ವಿಶೇಷ ಬಹುಮತದ ಅಥವಾ ಸಂಸತ್ತಿಗೆ ಅನುಗುಣವಾಗಿ ತಿದ್ದುಪಡಿ
* ಉಭಯ ಸದನಗಳ 2/3 ರಷ್ಟು ಬಹುಮತದ ಒಪ್ಪಿಗೆಯಿಂದ ಮಾಡುವ ತಿದ್ದುಪಡಿ
* ಮೂಲಭೂತ ಹಕ್ಕುಗಳು
* ರಾಜ್ಯ ನಿರ್ದೇಶಕ ತತ್ವಗಳು

3. ವಿಶೇಷ ಬಹುಮತದ ಜೊತೆಗೆ ಅರ್ಧದಷ್ಟು ರಾಜ್ಯಗಳ ಸಮ್ಮತಿ ಮೇರೆಗೆ ತಿದ್ದುಪಡಿ
* ಉಭಯ ಸದನಗಳ 2/3 ರಷ್ಟು ಸದಸ್ಯರ ಅಂಗೀಕಾರ
* ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ
* ಕೇಂದ್ರ ಹಾಗೂ ರಾಜ್ಯಗಳ ನಡುವಿನ ಅಧಿಕಾರ ವಿಭಜನೆಗೆ ಸಂಬಂಧಿಸಿದಂತೆ
* ಸಂಸತ್ತಿನಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯ
* ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ
* ಸಂವಿಧಾನದ 368ನೇ ವಿಧಿಗೆ ಸಂಬಂಧಿಸಿದಂತೆ, ಮೊದಲಾದವುಗಳನ್ನು ವಿಶೇಷ ಬಹುಮತ ಹಾಗೂ ಅರ್ಧದಷ್ಟು ರಾಜ್ಯಗಳ ಸಮ್ಮತಿಯ ಮೇರೆಗೆ ತಿದ್ದುಪಡಿ ಮಾಡಲಾಗುತ್ತದೆ.