Loading [Contrib]/a11y/accessibility-menu.js

ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗದ ಪಾತ್ರ

 

ಮಾನವ ಸಂಘ ಜೀವಿ, ಪರಸ್ಪರ ಆಲೋಚನೆಗಳು & ಭಾವನೆಗಳ ವಿನಿಮಯಕ್ಕೆ ಸಂವಹನ ಅತಿ ಅವಶ್ಯ.ಸಂಪರ್ಕ ಇಲ್ಲದೆ ವ್ಯಕ್ತಿ ಉಳಿಯಲಾರ ಹಸಿವು, ನೀರಡಿಕೆಗಳು ಹೇಗೆ ಮೂಲಭೂತ ಅಂಶಗಳೋ ಸಂವಹನವೂಹಾಗೆಯೇ ಮಾನವ ಜೀವನದ ಮೂಲಭೂತ ಅಗತ್ಯ.
ಇಪ್ಪತ್ತನೇ ಶತಮಾನದ ಆದಿಭಾದಗಲ್ಲಿ ಅಸ್ತಿತ್ವಕ್ಕೆ ಬಂದ ಸಮೂಹ ಮಾಧ್ಯಮಗಳಲ್ಲಿ ಪತ್ರಿಕೋದ್ಯಮಕ್ಕೆ ಪ್ರಥಮಪ್ರಾಶಸ್ತ್ಯ. ಪತ್ರಿಕೋದ್ಯಮ ಮಾನವನ ಭಾವನೆ, ಆಕಾಂಕ್ಷೆ & ಪರಂಪತೆಗಳನ್ನು ಇತರರೊಡನೆ ಪರಸ್ಪರಹಂಚಿಕೊಳ್ಳುವುದಕ್ಕೆ ಪ್ರೇರಕವಾಗಿದೆ. ಶ್ರೀ ಸಾಮಾನ್ಯನ ಕ್ರಿಯಾಶೀಲತೆಯನ್ನು ಬೆಳೆಯಿಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿವೆ. ಆದುದರಿಂದಲೇ ಪತ್ರಿಕಾ ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಅಂಗವೆಂದು ಪರಿಗಣಿಸಲಾಗಿದೆ.
ಪ್ರಜಾಪ್ರಭುತ್ವ ಒಂದು ರಾಜಕೀಯ ಪ್ರಕ್ರಿಯೆ. ಕಾರ್ಯಾಂಗ ಶಾಸಕಾಂಗ & ನ್ಯಾಯಾಂಗಗಳು ಪರಸ್ಪರಒಂದನ್ನೊಂದು ಅವಲಂಬಿಸಿದ್ದು, ಪ್ರತಿಯೊಂದರ ಕಾರ್ಯಕ್ಷಮತೆ ಉಳಿದೆರಡರ ಮೇಲೆ ಅವಲಂಬಿತವಾಗಿರುವುದರಿಂದಇವುಗಳನ್ನು ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳೆಂದೇ ಪರಿಗಣಿಸಲಾಗಿದೆ. ಅದೂ ಸಾಲದೆಂಬಂತೆ ಆಧುನಿಕ ಯುಗದಲ್ಲಿಪತ್ರಿಕಾರಂಗವನ್ನು ನಾಲ್ಕನೇ ಆಧಾರ ಸ್ಥಂಬವೆಂದು ಪ್ರತಿಬಿಂಬಿಸಲಾಗಿದೆ.
ಪತ್ರಿಕೋದ್ಯಮದ ಇತಿಹಾಸ ಜಗತ್ತಿನಲ್ಲಿ ಮುದ್ರಣ ಯಂತ್ರವನ್ನು ರೂಪಿಸಿದ ಕೀರ್ತಿ ಚೀನಿಯರದಾರೆ, ಅದನ್ನುರಚನೆ ಮತ್ತು ಬಳಕೆಯ ರೂಪದಲ್ಲಿ ತಂದವರು ಯುರೋಪಿಯನ್ನರು. 15ನೇ ಶತಮಾನದ ಮಧ್ಯಭಾಗದಲ್ಲಿ ಮುದ್ರಣಯಂತ್ರವನ್ನು ಜೋಹಾನ್ ಗುಟೆನ್ ಬರ್ಗ್ ಕಂಡು ಹಿಡಿದನು, ಭಾರತದಲ್ಲಿ ಪತ್ರಿಕೋದ್ಯಮ ಅಸ್ತಿತ್ವಕ್ಕೆ ಬಂದಿದ್ದುಬ್ರಿಟಿಷರಿಂದಲೇ 1780ರಲ್ಲಿ ಇಂಡಿಯಾ ಕಂಪನಿಯ ನೌಕರನಾದ ಜೇಮ್ಸ್ ಅಗಸ್ಟ್ಸ ಹಿಕ್ಕಿಮ “ಬೆಂಗಾಲ್ ಗೆಜೆಟ್”ಆರಂಭಿಸಿದನು.
1843ರಲ್ಲಿ ಕನ್ನಡದ ಮೊದಲ ಪತ್ರಿಕೆ “ಮಂಗಳೂರು ಸಮಾಚಾರ”ವನ್ನು ಆರಂಭಿಸಿದರು ಬಾಸೆಲ್ ಮಿಷನ್ನಿನಹರ್ಮನ್ ಮೊಗ್ಲಿಂಗ್ ಭಾರತೀಯ ಸ್ವಾತಂತ್ರ್ಯ ಚಳುವಳಿಗಾರರಾದ ತಿಲಕ್, ಮಹಾತ್ಮಾಗಾಂಧಿ, ಅರವಿಂದ್ ಘೋಷ,ಸಿ.ಆರ್.ದಾಸ್, ದಾದಾಬಾಯಿ ನವರೋಜ, ಫಿರೋಜ್-ಷಾ ಮೆಹ್ತಾ ಮುಂತಾದವರು ತಮ್ಮ ಹೋರಾಟವನ್ನುಜನಪರಗೊಳಿಸುವ ಸಲುವಾಗಿ ಪತ್ರಿಕಾ ಮಾಧ್ಯಮವನ್ನು ಪ್ರಭಾವಶಾಲಿ ಮಧ್ಯವನ್ನಾಗಿ ಬಳಸಿದರು.
ಭಾರತದೇಶ ಸಂವಿಧಾನದ ಪೀಠಿಕೆಯಂತೆ “ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ,ಗಣತಂತ್ರ” ದೇಶವಾದ ನಾವು ನಮ್ಮ ದೇಶದ ಸಮಸ್ತ ಪ್ರಜೆಗಳಿಗೆ “ಸಾಮಾಜಿಕ, ಆರ್ಥಿಕ & ರಾಜಕೀಯನ್ಯಾಯ”ವನ್ನು ನೀಡುತ್ತೇವೆಂದು ಸಂವಿಧಾನ ರಚನಾ ಸಭೆಯ ವೇದಿಕೆಯಲ್ಲಿ ಆಶ್ವಾಸನೆ ನೀಡಿದ್ದೇವೆ. ಆ ನಿಟ್ಟಿನಲ್ಲಿಯೋಚಿಸಿದಾಗ ನಮ್ಮ ಪ್ರಜಾಪ್ರಭುತ್ವದ ಯಶಸ್ಸು ಕಾರ್ಯಾಂಗ, ಶಾಸಕಾಂಗ & ನ್ಯಾಯಾಂಗಗಲ ಪರಸ್ಪರ ಅನ್ಯೋನ್ಯತೆ &ಅವುಗಳ ನಡುವೆ ಸಾಮರಸ್ಯ ಏರ್ಪಡುವಂತೆ ನೋಡಿಕೊಳ್ಳುವ ಪತ್ರಿಕಾ ಮಾಧ್ಯಮದ ಪಾತ್ರವೂಗಣನೀಯವಾದುದೆಂದು ಹೇಳಬಹುದು.
ಪ್ರಜಾತಂತ್ರ ವ್ಯವಸ್ಥೆ ಸಮರ್ಥವಾಗಿ ಮುನ್ನಡೆಯ ಬೇಕಾದರೆ ಪತ್ರಿಕೆಗಳು ಸಕ್ರಿಯ ಪಾತ್ರ ವಹಿಸಬೇಕು. “ಪ್ರಜಾಪ್ರಭುತ್ವ ಇಲ್ಲದೆ ಪತ್ರಿಕೆಗಳು ಉಳಿಯ ಬಲ್ಲದು, ಆದರೆ ಪತ್ರಿಕೆಗಳಿಲ್ಲದೆ ಜನತಂತ್ರ ಅರೆಕ್ಷಣವೂ ಬದುಕಲಾರದು” ಇದನ್ನೆ ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದ ಥಾಮಸ್ ಜೆಪರ್ಸನ್ ಹೇಳಿದ್ದು, “ಪತ್ರಿಕೆಗಳಿಲ್ಲದ ಸರ್ಕಾರ & ಸರ್ಕಾರವಿಲ್ಲದ ಪತ್ರಿಕೆ”ಗಳ ನಡುವೆ ನನ್ನ ಆಯ್ಕೆ ಎರಡನೆಯದೆಂದು.
“ಪತ್ರಿಕೆ ಎಂಬುದು ನಿರಂತರವಾಗಿ ಅಧಿವೇಶನದಲ್ಲಿರುವ ಪ್ರಜೆಗಳ ಪಾರ್ಲಿಮೆಂಟ್” ಎನ್ನುವ ಮಾತಿದೆ.ಹಾಗೆಯೇ ಪತ್ರಿಕೆಯನ್ನು ಸಮರ ಕಾರ್ಯಾಚರಣೆಯಲ್ಲಿ ತೊಡಗಿರುವ ಯುದ್ಧ ನೌಕೆ ಎಂದು ಹೇಳುವರು ಹಾಗಾಗಿಪತ್ರಿಕೋದ್ಯವಮು ಪ್ರಜಾಪ್ರಭುತ್ವದ “ಕಾವಲು ನಾಯಿ” ಎಂದರೂ ತಪ್ಪಾಗಲಾರದು.

ಪತ್ರಿಕೆಗಳಿಂದ ಜನರಿಗೇನು ಲಾಭ?


ದೇಶ ವಿದೇಶಗಳ ದೈನಂದಿನ ರಾಜಕೀಯ, ಆರ್ಥಿಕ & ಸಾಂಸ್ಕೃತಿಕ ಚಟುವಟಿಕೆಗಳ ವಿಷಯವಾಗಿ ಜನರಿಗೆಸಕಾಲದಲ್ಲಿ ಮಾಹಿತಿ ಒದಗಿಸುವುದು & ಜನರಿಗೆ ರಾಜಕೀಯ ಅರಿವು ಮೂಡಿಸುವುದು ರಾಜಕೀಯ ಪ್ರಕ್ರಿಯೆಗಳಲ್ಲಿಜನರ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಭಾಗಿತ್ವಕ್ಕೆ ಅನುವು ಮಾಡಿಕೊಡುವುದು. ಜನಾಭಿಪ್ರಾಯವನ್ನು ಪತ್ರಿಕಾಮಾಧ್ಯಮಗಳಲ್ಲಿ ಪ್ರತಿಬಿಂಬಿಸುವುದು ಇತ್ಯಾದಿ.
ಪತ್ರಿಕಾ ಮಾಧ್ಯಮ ಸರ್ಕಾರ & ಪ್ರಜೆಗಳ ನಡುವೆ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕು ವೃತ್ತಪತ್ರಿಕೆಗಳ ಮಹತ್ವವನ್ನರಿತ ಅನುಭವದಂತೆ – ಮಾನವನ ಪಂಚೇಂದ್ರಿಯಗಳಿಗೆ ವೃತ್ತ ಪತ್ರಿಕೆಗಳನ್ನು ಹೋಲಿಸಲಾಗಿದೆ.ಪತ್ರಿಕಾ ಲೇಖಕರು ಮುಖ್ಯವಾಗಿ ಬೋಧಿಸಬೇಕಾದದ್ದು ಸಿದ್ಧಾಂತವನ್ನಲ್ಲ ಸಿದ್ಧಾಂತ ಸೃಷ್ಠಿಸುವ ಕ್ರಮವನ್ನು ಪತ್ರಿಕೆಗಳನ್ನುಪ್ರಕಟಿಸುವುದು ಕೇವಲ ಜೀವನೋಪಾಯದ ಲಾಭಗಳಿಕೆಗಾಗಿ ಅಲ್ಲ. ಬದಲಿಗೆ ಜನರ ಜೀವನ ಮಟ್ಟವನ್ನು ಸುಧಾರಿಸುವಸಲುವಾಗಿ & ಅವರ ಸಾಂಸ್ಕೃತಿಕ ವಿಕಾಸದತ್ತ ಗಮನವಿರಬೇಕು. ನಾಗರಿಕ ಸಮಾಜದ ಮೌಲ್ಯಗಳನ್ನು ಹಾಗೂ ಜನರನೈತಿಕ ಮಟ್ಟವನ್ನು ವೃದ್ಧಿಗೊಳಿಸುವುದರಲ್ಲಿ ಪತ್ರಿಕೆಗಳು ಸಕ್ರಿಯ ಪಾತ್ರ ವಹಿಸಬೇಕು.
ಪತ್ರಿಕೆಯ ಶಕ್ತಿ ಅಣುಬಾಂಬಿಗಿಂತಲೂ ಮಿಗಿಲು. ಹರಿತವಾದ ಲೇಖನಿ ಸರ್ಕಾರಗಳನ್ನು ಚಕ್ರಾಧಿಪತ್ಯಗಳನ್ನುಉರುಳಿಸಬಲ್ಲದು. ರಾಷ್ಟ್ರ ಕಟ್ಟುವ ಕಾರ್ಯ ಪತ್ರಿಕೋದ್ಯಮದ ಹೆಗಲ ಮೇಲಿದೆ - ಸ್ವಾತಂತ್ರ್ಯ ಹೋರಾಟದಲ್ಲಿಭಾರತೀಯ ಪತ್ರಿಕೆಗಳ ನಿರ್ವಹಿಸಿದ ಪಾತ್ರ ಅತ್ಯಮೋಘ. ಫ್ರಾನ್ಸ್ನ ಚಕ್ರಾಧಿಪತ್ಯದ ಅಧಿಪತಿಯಾಗಿದ್ದ ನೆಪೋಲಿಯನ್ನಬೋನಾಪಾರ್ಟೆಯ ಮಾತುಗಳನ್ನು ಉಲ್ಲೇಖಿಸುವುದಾದರೆ, “ನಾನು ನೂರು ಬಂದೂಕುಗಳಿಗೆ ಹೆದರಲಾರೆ, ಆದರೆಮೂರು ಪತ್ರಿಕೆಗಳಿಗೆ ಹೆದರುತ್ತೇನೆ” ಎಂದು ಹೇಳಿದ್ದಾನೆ. ಜನತಂತ್ರ ಇರುವ ರಾಷ್ಟ್ರಗಳಲ್ಲಿ, ಅಧಿಕಾರ ದುರುಪಯೋಗ &ಭ್ರಷ್ಟಾಚಾರದ ವಿರುದ್ಧ ಹೋರಾಡಲು ಪತ್ರಿಕಾ ಮಾಧ್ಯಮಗಳ ಮೂಲಕ ಸಾದ್ಯ ಎನ್ನುವುದನ್ನು ಇತಿಹಾಸದುದ್ದಕ್ಕೂಸಾಬೀತು ಮಾಡಿದ್ದನ್ನು ನಾವು ಕಾಣಬಹುದು.
ಉದಾಹರಣೆಗೆ: ಅಮೆರಿಕಾದ ಅಧ್ಯಕ್ಷರಾಗಿದ್ದ ರಿಚರ್ಡ್ ವಾಟರ್ಗೇಟ್ ಪ್ರಕರಣದಲ್ಲಿ ಸೇರಿದ್ದರೆಂದುಬಯಲಿಗಳೆದವರು ವಾಷಿಂಗ್ಟನ್ ಪೋಸ್ಟ್ ಪತ್ರಿಕಾ ವರದಿಗಾರರು. ನಂತರ ಅವರು ಜನತೆಯ ಅಭಿಪ್ರಾಯಕ್ಕೆತಲೆಬಾಗಿ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದು ಇತಿಹಾಸವಾಗಿದೆ.
ಭಾರತದಲ್ಲಿ ಇಂತಹ ಅನೇಕ ಪ್ರಕರಣಗಳು ಬಯಲಿಗೆ ಬಂದಿರುವುದು & ಈಗಲೂ ಬಯಲಾಗುತ್ತಿರುವುದುಪತ್ರಿಕಾ ವರದಿ & ಟೆಲಿವಿಷನ್ ವರದಿಗಳ ಮೂಲಕವೇ. ಉದಾ: ಭೋಫೋರ್ಸ್ ಗನ್ ಖರೀದಿ ಪ್ರಕರಣ, ಜೈನ್ಹವಾಲ ಪ್ರಕರಣ, ಜುದೇವ್ ಲಂಚ ಪ್ರಕರಣ, ರಕ್ಷಣಾ ಇಲಾಖೆಯಲ್ಲಿ ಶವ ಪೆಟ್ಟಿಗೆ ಖರೀದಿ ಪ್ರಕರಣ ಇತ್ಯಾದಿ. ತಿಳಿಯುವುದೆಂದರೆ,ಪಂಚತಂತ್ರ & ಪತ್ರಿಕಾ ಸ್ವಾತಂತ್ರ್ಯ ಒಂದು ನಾಣ್ಯದ ಎರಡು ಮುಖಗಳಿದ್ದ ಹಾಗೆ, ಪತ್ರಿಕಾ ಮಾಧ್ಯಮ ಸ್ವತಂತ್ರವಾಗಿಕಾರ್ಯ ನಿರ್ವಹಿಸಿದಷ್ಟು ಪ್ರಜಾಪ್ರಭುತ್ವದ ತಳಪಾಯ ಮತ್ತಷ್ಟು ಗಟ್ಟಿಯಾಗಬಲ್ಲದು, ಪತ್ರಿಕಾ ಸ್ವಾತಂತ್ರ್ಯ ಕುರಿತಂತೆಪತ್ರಿಕಾ ಆಯೋಗದ ವರದಿಯ ಸಾರಾಂಶ ಹೀಗೆ ಹೇಳುತ್ತದೆ.
“ಪತ್ರಿಕೋಧ್ಯಮದ ಜನತಾಂತ್ರಿಕ ಸಮಾಜದ ಒಂದು ಜವಾಬ್ಧಾರಿಯುತ ಅಂಗ, ಅದು ಸಾರ್ವಜನಿಕರಿಗೆ ದಿನದಘಟನೆಗಳ ಅರ್ಥ ನೀಡುವ ಹಾಗೆ ಅವುಗಳ ಸತ್ವಪೂರ್ಣ ವಿವರಣೆಯನ್ನು ನೀಡಬೇಕು” ಎಂದು ತಿಳಿಸಿದೆ.
ನಮ್ಮ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರ್ಯ ಎಂಬ ಪದದ ನೇರ ಉಲ್ಲೇಖವಿಲ್ಲ. ಸಂವಿಧಾನದ 19 (1) (ಎ)ವಿಧಿ ಅನ್ವಯ ಈಗಾಗಲೇ ತಿಳಿಸಿದಂತೆ ಒಂದು ಸಂಸ್ಥೆಯಾಗಿ ಪತ್ರಿಕೋಧ್ಯಮಕ್ಕೆ ಸಂವಿಧಾನಾತ್ಮಕ ಇಲ್ಲವೆ ಕಾನೂನಾತ್ಮಕಸವಲತ್ತುಗಳಿಲ್ಲ. ಆದರೆ ಪ್ರತಿಯೊಬ್ಬ ನಾಗರಿಕರಿಗೂ ನೀಡಲಾದ ಅಭಿವ್ಯಕ್ತಿ ಸ್ವಾತಂತ್ರ್ಯವೇ ಪತ್ರಿಕೋಧ್ಯಮಕ್ಕೂಅನ್ವಯಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವೇ ಪತ್ರಿಕೋಧ್ಯಮಕ್ಕೂ ಅನ್ವಯಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಯಾವುದೇಮೂಲದಿಂದ ಸರ್ಕಾರದ ಪ್ರವೇಶವಿಲ್ಲದ ಸುದ್ದಿಯನ್ನು ಪಡೆಯಲು ನಾಗರಿಕನಿಗೆ ಇರುವ ಹಕ್ಕು ಪತ್ರಿಕೆಯನ್ನುದುರುದ್ದೇಶಕ್ಕಾಗಿ ಬಳಸಿದಲ್ಲಿ ಅದನ್ನು ಶಿಕ್ಷಿಸಬಹುದು. ಭಾರತ ಸಂವಿಧಾನದ ವಿಧಿ ನಿಯಮ 19 (1) (ಎ) ದಂತೆಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದರೆ 19 (2) ನೇ ವಿಧಿಯಂತೆ ಅಭಿವ್ಯಕ್ತಿ.
ಸ್ವಾತಂತ್ರ್ಯದ ಮೇಲಿನ ನಿಯಂತ್ರಣವನ್ನು ವಿವರಿಸಲಾಗಿದೆ. ಇದರಂತೆ ದೇಶದ ಸಾರ್ವಭೌಮತೆ & ಏಕತೆ,ರಾಷ್ಟ್ರದ ಭದ್ರತೆ ಪರ ರಾಷ್ಟ್ರಗಳೊಡನೆ ಇರುವ ಸ್ನೇಹಯುತ ಬಾಂಧವ್ಯ, ಸಾರ್ವಜನಿಕ ವ್ಯವಸ್ಥೆ ನೈತಿಕತೆ ಇವುಗಳಿಗೆ ಧಕ್ಕೆ ಒದಗುವ ಸನ್ನಿವೇಶಗಳಲ್ಲಿ ಅಥವಾ ನ್ಯಾಯಾಲಯ ನಿಂದನೆ, ಮಾನಹಾನಿ ಅಥವಾ ಅಪರಾಧಕ್ಕೆ ಪ್ರಚೋದನೆ ನೀಡುವ ಸಂದರ್ಭಗಳಲ್ಲಿ ಸರ್ಕಾರ ಅವುಗಳನ್ನು ತಡೆಗಟ್ಟಲು ಪತ್ರಿಕಾ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಸೂಕ್ತಕಾನೂನುಗಳನ್ನು ರಚಿಸಬಹುದು. ಈ ಎಲ್ಲ ಬಗೆಯ ನಿರ್ಬಂಧಗಳಿಗೆ ಕಾನೂನುಗಳ ಸಂವಿಧಾನ ಬದ್ಧತೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಸಾಮಾನ್ಯ ನಾಗರಿಕನ ಮೇಲೆ ಹೇಗೆ ವಿಶೇಷ ನಿರ್ಬಂಧಗಳನ್ನೂ ವಿಧಿಸಲುಸಾಧ್ಯವಿಲ್ಲವೋ ಹಾಗೆಯೇ ಪತ್ರಿಕೆಗಳ ಮೇಲೂ ಅದನ್ನು ವಿಧಿಸಲಾಗದು.
ಇತ್ತೀಚೆಗೆ ತಮಿಳುನಾಡು ಸರ್ಕಾರ “ದಿ ಹಿಂದೂ” ಪತ್ರಿಕೆಯ ಪ್ರಧಾನ ಸಂಪಾದಕ ಎನ್.ರಾಮ್ ಹಾಗೂಇತರರ ಬಂಧನಕ್ಕೆ ಆದೇಶಿಸಿದಾಗ ಸುಪ್ರಿಂಕೋರ್ಟ್ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು ಎನ್.ರಾಮ್ ಅವರಬಂಧನ ಆದೇಶವನ್ನು ಜಾರಿಯಾಗದಂತೆ ತಡೆದಿದ್ದು ಮಾಧ್ಯಮ ರಂಗಕ್ಕೆ ಸಂದ ಜಯವೆನ್ನಬಹುದು.
ಪತ್ರಿಕಾ ಸ್ವಾತಂತ್ರ್ಯ & ಸಂವಿಧಾನದ ಭಾಗ – 3 ರಲ್ಲಿ ನೀಡಲಾಗಿರುವ ಯಾವುದೇ ಮೂಲಭೂತ ಹಕ್ಕಿಗೆಧಕ್ಕೆಯುಂಟಾದರೆ, ವಿಧಿ ನಿಯಮ 32 & 226ರಂತೆ ಸರ್ವೋಚ್ಛ & ರಾಜ್ಯ ಉಚ್ಚ ನ್ಯಾಯಾಲಯದ ಮೊರೆಹೋಗಬಹುದು. ಹಾಗಾಗಿಯೇ ವಿಧಿ ನಿಯಮ 32ನ್ನು “ಸಂವಿಧಾನದ ಆತ್ಮ & ಹೃದಯ” ಎಂದು ಕರೆದಿರುವುದು.
ಪತ್ರಿಕಾ ಸ್ವಾತಂತ್ರ್ಯ ಅಮೂಲ್ಯ ಅದನ್ನು ಮುಕ್ತವಾಗಿ ಬಳಸಬೇಕಾದ್ದು ಪತ್ರಕಾ ಧರ್ಮ ಸಂಪಾದಕನಾದವನುಪತ್ರಿಕೆಯ ಮಾನವನ್ನು ಸಮಾಜದ ಹಿತವನ್ನು ಕಾಪಾಡಬೇಕಾಗಿರುವುದು ಅತೀ ಅವಶ್ಯ, ಹಣಕ್ಕಾಗಿ ಸ್ವಾರ್ಥಕ್ಕಾಗಿ ಪತ್ರಿಕಾಮಾಧ್ಯಮವನ್ನು ಬಳಸಿದರೆ ಅದು ನಮ್ಮ ಸ್ವಾತಂತ್ರ್ಯ ದುರುಪಯೋಗವೇ ಸರಿ ಎನ್ನಬಹುದು. ಸ್ವಾತಂತ್ರ್ಯ ಎಂದರೆ ಸ್ವೇಚ್ಛಾವೃತ್ತಿ ಅಲ್ಲ. ಬದಲಿಗೆ ಸರ್ವರ ಶ್ರೇಯೋಭಿವೃದ್ಧಿಯ ಸಾಧನವಾಗಬೇಕು. ಜಗತ್ತಿನ ಬಹುತೇಕ ನವಜಾತ ರಾಷ್ಟ್ರಗಳಲ್ಲಿ ಪತ್ರಿಕಾ ಸ್ವಾತಂತ್ರ್ಯ ಮೂಲೆ ಗುಂಪಾಗುತ್ತಿರುವಾಗ ಭಾರತದಲ್ಲಿ ಅದರ ಬೆಳಕಿರುವುದು ಸಮಾಧಾನದ ಸಂಗತಿ.

ನ್ಯಾಯ ವಿತರಣಾ ವ್ಯವಸ್ಥೆಯ ಪರಿಸ್ಥಿತಿಯನ್ನು ಪರಿಗಣಿಸುವುದು ಸಹ ಅಗತ್ಯವೇ. ತಪ್ಪು ಮಾಡಿದವರನ್ನುನಾವು ಎಷ್ಟು ಪರಿಣಾಮಕಾರಿಯಾಗಿ ಶಿಕ್ಷೆಗೆ ಗುರಿಪಡಿಸುತ್ತಿದ್ದೇವೆ? ದೇಶದಲ್ಲೆಡೆಯ ವಿವಿಧ ನ್ಯಾಯಾಲಯಗಳಲ್ಲಿ ಒಂದುಕೋಟೆಗೂ ಹೆಚ್ಚು ಪ್ರಕರಣಗಳು ಬಾಕಿಯಾಗಿವೆ ಎಂದು ವರದಿಯಾಗಿದೆ. ಬಾಕಿ ಉಳದಿರುವ ಅವಧಿ 15 ತಿಂಗಳವರೆಗೆಅದಕ್ಕೂ ಹೆಚ್ಚಾಗಿರಬಹುದು. ಅಷ್ಟೊಂದು ಧೀರ್ಘಾವಧಿಯ ನಂತರ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಿದರೂ ಸಹ ನಮ್ಮಪ್ರಜಾತಾಂತ್ರಿಕ ಮೌಲ್ಯಗಳಲ್ಲಿ ತಪ್ಪಿಗೆ ಬಲಿಯಾದವರಿಗೆ ಇರುವ ವಿಶ್ವಾಸವನ್ನು ಮರು ಸ್ಥಾಪಿಸಲು ಸಾದ್ಯವೇ? ‘ಬಲಶಾಲಿ’ ಎಂದು ಕರೆಯಲಾಗುವ ದೇಶಗಳ ಅಭಿವೃದ್ಧಿಗೆ ಕಾರಣವಾದ ಅಂಶಗಳಲ್ಲಿ ಒಂದೆಂದರೆ ಸಮಾಜದಲ್ಲಿಆಗಾಧ ಸುರಕ್ಷೆ & ನ್ಯಾಯ ಪ್ರಜ್ಞೆ ಇದೆ ಎಂಬುದನ್ನು ಖಚಿತಪಡಿಸುವ ಕ್ಷಿಪ್ರ ನ್ಯಾಯ ವಿತರಣಾ ವ್ಯವಸ್ಥೆ ಅಪರಾಧಿಗೆಶಿಕ್ಷೆಯಾಗುವುದರಲ್ಲಿ ವಿಳಂಬ ಅಥವಾ ಶಿಕ್ಷೆಯೇ ಆಗದಿರುವುದು, ಅವನಿಗೆ & ಅವನನ್ನು ಗಮನಿಸುತ್ತಿರುವವರಿಗೆ ಇನ್ನೂಹೆಚ್ಚು ಹೆಚ್ಚು ಅಪರಾಧಗಳನ್ನೆಸಗಳು ಕೆಟ್ಟ ಧೈರ್ಯ ತುಂಬುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲುಜವಾಬ್ಧಾರರಾದವರು ತಾವು ಅಂತಹ ಅಪಾಯದಿಂದ ರಕ್ಷಿತರಾದವರೆಂದು ತಿಳಿದುಕೊಂಡಿರುವುದರಿಂದ, ನ್ಯಾಯವಿತರಣೆಯಲ್ಲಾಗಲಿ, ಅಪರಾಧಿಗಳನ್ನು ಶಿಕ್ಷಿಸುವುದರಲ್ಲಾಗಲಿ ತುರ್ತಿನ ಪ್ರಜ್ಞೆಯೇ ಕಂಡು ಬರುವುದಿಲ್ಲ.

ದಾಖಲೆಗಳನಿಟ್ಟುಕೊಳ್ಳುವುದಕ್ಕೂ & ಗಮನ ಅಥವಾ ಎಚ್ಚರ ವಹಿಸುವುದಕ್ಕೂ ಬಹಳ ವ್ಯತ್ಯಾಸವಿದೆ.ಪ್ರಕರಣಗಳು ಬಾಕಿ ಉಳಿಯುವುದನ್ನು ಕಡಿಮೆ ಮಾಡಲು ಗಮನವಿರಿಸುವವರು ಸಾಕಷ್ಟು ಪ್ರಯತ್ನ ಪಡುತ್ತಾರೆಯೇ?ಅಥವಾ ನ್ಯಾಯ ವಿತರಣೆ ಶೀಘ್ರವಾಗಿ ಆಗುವಂತೆ ಖಚಿತಪಡಿಸಿಕೊಳ್ಳಲು ಅಥವಾ ವ್ಯವಸ್ಥೆಯಲ್ಲಿ ದೋಷಗಳನ್ನುಗುರುತಿಸಿ ಅವುಗಳನ್ನು ಸರಿಪಡಿಸಲು ಕ್ರಮಗಳನ್ನು ಸಲಹೆ ಮಾಡಲು ಅವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ?ಬಾಕಿಯಾದ ಪ್ರಕರಣಗಳ ಬಗ್ಗೆ ನಿಗದಿತವಾಗಿ ವರದಿಗಳು ಪ್ರಕಾಶನಗೊಳ್ಳುತ್ತವೆಯೇ? ಇಲ್ಲ. ನ್ಯಾಯ ವಿತರಣೆ ಆಡಳಿತಯಂತ್ರದ ವರಿಷ್ಟರಾದ ಸರ್ವೋನ್ನತ ನ್ಯಾಯಾಧೀಶರು & ಹೈಕೋರ್ಟಗಳ ಮುಖ್ಯ ನ್ಯಾಯಧೀಶರುಗಳ ಮಟ್ಟದಲ್ಲಿ ಈವರದಿಗಳು ಸಲ್ಲಿಕೆಯಾಗಿ ಅವುಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆಯೇ? ಪ್ರಾಯಶಃ ಹೌದು. ಆದರೆ ಈ ಬಗ್ಗೆಸಾರ್ವಜನಿಕ ತಿಳುವಳಿಕೆ ಇರುವುದಿಲ್ಲ. ಚರ್ಚೆಗಾಗಿ ಅಂತಹ ವರದಿಗಳು ಬೇರೆ ಬೇರೆ ಕಾನೂನು ಶಾಲೆಗಳಿಗೆ ಅಥವಾ ಪಂಡಿತರ ಗುಂಪುಗಳಿಗೆ ಲಭ್ಯವಿರುವವೇ ಇಲ್ಲ. ಅಂತಹ ವರದಿಗಳನ್ನು ರಾಜ್ಯ ಸರ್ಕಾರಗಳ ಕಾನೂನು & ನ್ಯಾಯಇಲಾಖೆಗಳಿಗೆ ಕಳಿಸಲಾಗುವುದು, “ಹೌದು, ಸುಮ್ಮನೆ ಬದಿಗಿಡಲು”, ಈ ವಿಷಯಗಳ ಚರ್ಚೆಯಲ್ಲಿ ಸಾರ್ವಜನಿಕರಿಗೆ ಏನಾದರೂ ಅವಕಾಶವಿದೆಯೇ? “ಇಲ್ಲ” ಈ ಗಮನವಿರುಸುವ ಪ್ರಕ್ರಿಯೆಯಲ್ಲಿ ಯಾವುದೇ ಪಾತ್ರವಹಿಸಲು ಅಥವಾ ಯಾವುದೇ ಸಲಹೆ ನೀಡಲು, ಮಹಿಳೆಯರಿಗೆ (ನ್ಯಾಯ ವಿತರಣೆ ಸರಿಯಾಗಿ ಆಗದೆಕಷ್ಟಕ್ಕೊಳಾಗುವವರು ಅವರೇ) ಅವಕಾಶವಿದೆಯೇ? “ಖಂಡಿತವಾಗಿಯೂ ಇಲ್ಲವೇ ಇಲ್ಲ.
ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ 1997 ಸಾಲಿಗಾಗಿ ಬಾಕಿ ಪ್ರಕರಣಗಳ ಬಗ್ಗೆ ನೀಡಿದ ವರದಿಯಲ್ಲಿ ಹೀಗೆ ನಮೂದಿಸಲಾಗಿದೆ.

ನ್ಯಾಯಾಲಯಗಳಲ್ಲಿ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿಯುವ ಬಗ್ಗೆ ಏನು ಕ್ರಮ ಕೈಗೊಳ್ಳಲಾಗುತ್ತಿದೆಎಂದು ನೋಡೋಣ. ಅದನ್ನು ಯಾರು, ಹೇಗೆ ಗಮನಿಸುತ್ತಾರೆ? ಸರ್ವೋನ್ನತ ನ್ಯಾಯಾಲಯ, ಶ್ರೇಷ್ಠ ನ್ಯಾಯಾಲಯಗಳು& ಜಿಲ್ಲಾ ನ್ಯಾಯಾಲಯಗಳಲ್ಲಿರುವ ರಿಜಿಸ್ಟ್ರಾರ್ಗಳು, ಬಾಕಿಯಾದ ಪ್ರಕರಣಗಳು & ಅವು ವಿಚಾರಣೆಗೆ ನಿಗದಿಯಾಗುವದಿನದ ಬಗ್ಗೆ ದಾಖಲೆ ಇಟ್ಟುಕೊಳ್ಳುತ್ತಾರೆ. ಕಂಪ್ಯೂಟರ್ ವಿಶ್ಲೇಷಣಾ ತಾಂತ್ರಿಕತೆಯ ನೆರವಿನಿಂದ ಅವರು ಬಾಕಿಪ್ರಕರಣಗಳ ನಕ್ಷೆಯನ್ನು ಸಹ ಸಿದ್ಧಪಡಿಸುತ್ತಾರೆ. ಎಲ್ಲ ಪೋಲೀಸ್ ಪ್ರಕರಣಗಳ ಬಗ್ಗೆ ಎನ್ಸಿಆರ್ಬಿ ದಾಖಲೆ ಇಡುವರೀತಿಯಲ್ಲಿ ಇದು ಸಹ ಸಿದ್ಧಗೊಳ್ಳುತ್ತದೆ ಮುಂದೇನು?
ಅತ್ಯಾಚಾರ & ಬೇರೆ ಎಲ್ಲ ಅಪರಾಧಗಳಿಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಲ್ಲಿ ಅಪರಾಧಿಗಳನ್ನುಶಿಕ್ಷೆಗೊಳಪಡಿಸಿದ ದರವನ್ನು ಪಟ್ಟಿ 1ರಲ್ಲಿ ತೋರಿಸಲಾಗಿದೆ. ಮಧ್ಯಪ್ರದೇಶ, ಪಂಜಾಬ್, ಗುಜರಾತ್, ಜಮ್ಮು-ಕಾಶ್ಮೀರ,ಆಂಧ್ರಪ್ರದೇಶ, ಕೇರಳ, ತಮಿಳುನಾಡು, ರಾಜಸ್ತಾನ, ಕರ್ನಾಟಕ, ನಾಗಾಲ್ಯಾಂಡ್ & ಮಿಜೋರಾಂ ರಾಜ್ಯಗಳಲ್ಲಿ ಒಟ್ಟಾರೆಅಪರಾಧಗಳಲ್ಲಿ ಶಿಕ್ಷೆಗೊಳಪಡಿಸಿದ ದರಗಳಲ್ಲಿ ಬಹಳಷ್ಟು ಅಂತರವಿದೆ. ಗೋವಾ & ಸಿಕ್ಕಿಂ ರಾಜ್ಯಗಳಲ್ಲಿ ಮಾತ್ರಮಹಿಳೆಯರಿಗೆ ನ್ಯಾಯ ಸರಿಯಾಗಿ ದೊರಕಿದೆ ಎಂಬುದು ವೇದ್ಯವಾಗುತ್ತದೆ.ಹೆಚ್ಚು ಹೆಚ್ಚಾಗಿ ಪ್ರಕರಣಗಳು ಬಾಕಿಯಾಗುತ್ತಿರುವುದು ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಅಪರಾಧಗಳಲ್ಲಿ ಶಿಕ್ಷೆಗೊಳಪಡಿಸುವ ಪ್ರಮಾಣ ಕಡಿಮೆ ಇರುವುದು, ನಮ್ಮ ನ್ಯಾಯ ವಿತರಣೆ ವ್ಯವಸ್ಥೆಗೆ ಹೊಸ ರೂಪ ಕೊಡಬೇಕಾದ ಅಗತ್ಯವನ್ನು ಸೂಚಿಸುತ್ತದೆ. ನ್ಯಾಯಾಲಯಗಳು & ನ್ಯಾಯಾಧೀಶರುಗಳ ಸಂಖ್ಯೆ ಹೆಚ್ಚಿಸಬೇಕೆಂಬ ಸರಳ ಸಾಮಾನ್ಯಪರಿಹಾರವನ್ನು ಆಗಾಗ್ಗೆ ಸೂಚಿಸಲಾಗುತ್ತದೆ. ಆದರೆ ಅನವಶ್ಯಕ ಕ್ರಿಯೆ & ಮೋಸ ನಿವಾರಣೆಯಲ್ಲಿ ಕಾನೂನು ಕ್ರಮಜರುಗಿಸುವ & ಪ್ರತಿವಾದಿ ವಕೀಲರು ಹಾಗೂ ನ್ಯಾಯಾಧಿಶರುಗಳು ವಹಿಸಬೇಕಾದ ಪಾತ್ರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ.

ಅಪರಾಧ ಪ್ರಕರಣಗಳ ವಿವರ


ಸಾಮಾನ್ಯ ಅಪರಾಧಗಳು


• 1997ರಲ್ಲಿ ಪತ್ತೆಯಾಗದೆ ಬಾಕಿಯಾದ ಪ್ರಕರಣಗಳ ಸಂಖ್ಯೆ 21.96 ಲಕ್ಷ
• 1997ರಲ್ಲಿ ಕೆಲಸ ಪೂರ್ಣಗೊಳಿಸಿದ ಪ್ರಕರಣಗಳ ಸಂಖ್ಯೆ 16.73 ಲಕ್ಷ
• 1997ರಲ್ಲಿ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದ ಪ್ರಕರಣಗಳ ಸಂಖ್ಯೆ 54.61 ಲಕ್ಷ
• 1997ರಲ್ಲಿ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ಸಂಖ್ಯೆ 10.64 ಲಕ್ಷ
• 1.1.98ರಲ್ಲಿ ಪತ್ತೆಯಾಗದೆ ಉಳಿದುಕೊಂಡ ಪ್ರಕರಣಗಳ ಸಂಖ್ಯೆ 5.23 ಲಕ್ಷ
• 1.1.98ರಲ್ಲಿ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದ ಪ್ರಕರಣಗಳ ಸಂಖ್ಯೆ 43.96 ಲಕ್ಷ