ಮುಖ್ಯಮಂತ್ರಿ

 

* ಭಾರತ ಸಂವಿಧಾನದಲ್ಲಿ ಸಂಯುಕ್ತ ಸರ್ಕಾರ ವ್ಯವಸ್ಥೆಗೆ ಅವಕಾಶ ಮಾಡಿಕಟ್ಟ ಪರಿಣಾಮ ರಾಜ್ಯಸರ್ಕಾರಗಳು ಸಂವಿಧಾನಕ್ಕನುಗುಣವಾಗಿ ಕಾರ್ಯನಿರ್ವಹಿಸಬೇಕು.
* ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರಗಳು ಜನರಿಂದ ನೇರವಾಗಿ ಆಯ್ಕೆ.
* ಕೇಂದ್ರದಲ್ಲಿ ಪ್ರಧಾನಿ ಸರ್ಕಾರದ ಮುಖ್ಯಸ್ಥನಾಗಿರುವಂತೆ, ರಾಜ್ಯದಲ್ಲಿ ಮುಖ್ಯಮಂತ್ರಿ ಸರ್ಕಾರದ ಮುಖ್ಯಸ್ಥನಾಗಿರುತ್ತಾನೆ.
* ಸಂವಿಧಾನದ 163ನೇ ವಿಧಿಯು ಮುಖ್ಯಮಂತ್ರಿಯ ಬಗ್ಗೆ ಪ್ರಸ್ತಾಪಿಸುತ್ತದೆ.
* ಬಹುಮತ ಪಡೆದ ರಾಜಕೀಯ ಪಕ್ಷದ ನಾಯಕನನ್ನು ರಾಜ್ಯಪಾಲರು ಮುಖ್ಯಮಂತ್ರಿಯನ್ನಾಗಿ ನೇಮಿಸುತ್ತಾರೆ. (164 ನೇ ವಿಧಿ)
* ಮುಖ್ಯಮಂತ್ರಿ ಅಧಿಕಾರಾವಧಿ 5 ವರ್ಷಗಳು
* ಮುಖ್ಯಮಂತ್ರಿ ವಿಧಾನಸಭೆಯ ವಿಶ್ವಾಸವನ್ನು ಎಲ್ಲಿಯವರೆಗೆ ಹೋಂದಿರುತ್ತಾರೊ ಅಲ್ಲಿಯವರೆಗೆ ಅಧಿಕಾರದಲ್ಲಿ ಮುಂದುವರಿಯುತ್ತಾರೆ.
* ರಾಜ್ಯಪಾಲರು ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸುತ್ತಾರೆ.

ಅಧಿಕಾರ ಮತ್ತು ಕಾರ್ಯಗಳು


1. ಸರ್ಕಾರದ ರಚನೆ : ಮುಖ್ಯಮಂತ್ರಿ ಎಲ್ಲಾ ಧರ್ಮ, ಜಾತಿಗಳಿಗೆ ಅನುಗುಣವಾಗಿ ಪ್ರಾತಿನಿಧ್ಯತೆ ನೀಡುವ ಮೂಲಕ ಅಭ್ಯರ್ಥಿಗಳ ಚಾರಿತ್ರ್ಯ, ಆಡಳಿತ ಅನುಭವ, ಹಿನ್ನೆಲೆಗಳನ್ನು ಆಧಾರವಾಗಿಟ್ಟುಕೊಂಡು ಮಂತ್ರಿಮಂಡಲ ರಚಿಸಬೇಕಾಗುತ್ತದೆ.
2. ಖಾತೆಗಳ ಹಂಚಿಕೆ : ಮುಖ್ಯಮಂತ್ರಿ ತನ್ನ ಮಂತ್ರಿಮಂಡಲದ ಸದಸ್ಯರಿಗೆ ಗೃಹ, ಸಾರಿಗೆ, ಹಣಕಾಸು, ಕಂದಾಯ, ಕೈಗಾರಿಎಕ, ಶಿಕ್ಷಣ ಮೊದಲಾದ ಪ್ರಮುಖ ಖಾತೆಗಳನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಸದಸ್ಯರ ಪೂರ್ವಪರತೆಯ ಆಧಾರದ ಮೇಲೆ ಖಾತೆಗಳನ್ನು ನೀಡಲಾಗುತ್ತದೆ.
3. ಸಚಿವ ಸಂಪುಟದ ನಾಯಕ : ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳು, ಕಾರ್ಯಕ್ರಮಗಳು, ಅಧಿವೇಶನಗಳ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸಚಿವ ಸಂಪುಟದ ನಾಯಕರಾಗಿರುತ್ತಾರೆ.
4. ಮಂತ್ರಿಮಂಡಲದ ಪುನರ್ ರಚನೆ : ಆಡಳಿತದಲ್ಲಿ ದಕ್ಷತೆ ಅಥವಾ ಪಾರದರ್ಶಕತೆ ತರುವ ಉದ್ದೇಶದಿಂದ ಮುಖ್ಯಮಂತ್ರಿಗಳು ಮಂತ್ರಿಮಂಡಲವನ್ನು ಪುನರ್ ರಚಿಸಬಹುದು.
5. ವಿಧಾನಸಭೆಯ ನಾಯಕ : ಮುಖ್ಯಮಂತ್ರಿಯು ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಟೀಕೆಯ ವಿರುದ್ಧ ತನ್ನ ಸರ್ಕಾರದ ನೀತಿ, ನಿರ್ಧಾರಗಳು, ಕಾರ್ಯಕ್ರಮಗಳನ್ನು ಸಮರ್ಥಿಸಿಕೊಳ್ಳುವುದರಿಂದ ಇವನನ್ನು ವಿಧಾನಸಭೆಯ ನಾಯಕ ಎನ್ನಲಾಗುವುದು.
6. ಸರ್ಕಾರದ ನಾಯಕ : ಇಡೀ ರಾಜ್ಯದ ಆಡಳಿತವು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವುದರಿಂದ ಅಂದರೆ ಸರ್ಕಾರ ನಡೆಸುವವರು ಈತನೇ ಆಗಿರುವುದರಿಂದ ಇವನನ್ನು ಸರ್ಕಾರದ ನಾಯಕ ಎನ್ನಲಾಗುತ್ತದೆ.
7. ಪ್ರಧಾನ ಸಲಹೆಗಾರ : ರಾಜ್ಯದ ಉನ್ನತ ಸ್ಥಾನಗಳ ನೇಮಕಾತಿಗೆ ಸಂಬಂಧಿಸಿದಂತೆ ಜೊತೆಗೆ ಮಂತ್ರಿಮಂಡಲದ ನಿರ್ಧಾರ ಹಾಗೂ ಕಾರ್ಯಕ್ರಮಗಳ ಬಗ್ಗೆ ರಾಜ್ಯಪಾಲರಿಗೆ ಸಲಹೆ ನೀಡುತ್ತಾರೆ.
8. ವಿಧಾನಸಭೆಯನ್ನು ವಿಸರ್ಜಿಸುವಂತೆ ಸಲಹೆ ನೀಡುವ ಅಧಿಕಾರ : ಸರ್ಕಾರವನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಿಲ್ಲದಿದ್ದಾಗ ಅಥವಾ ವಿಧಾನಸಭೆಯಲ್ಲಿ ವಿಶ್ವಾಸ ಕಳೆದುಕೊಂಡಾಗ, ಮೊದಲಾದ ಸಂದರ್ಭಗಳಲ್ಲಿ ಮುಖ್ಯಮಂತ್ರಿ ವಿಧಾನಸಭೆಯನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಸಲಹೆಯನ್ನು ನೀಡುತ್ತಾರೆ.
9. ರಾಜ್ಯದ ನಾಯಕ : ರಾಜಕೀಯ, ಸಾಂಸ್ಕೃತಿಕ, ತಾಂತ್ರಿಕ, ಆರ್ಥಿಕ ಮೊದಲಾದ ಕ್ಷೇತ್ರಗಳಲ್ಲಿ ರಾಜ್ಯವನ್ನು ಮುನ್ನೆಡುಸುತ್ತಾರೆ.