ಮುಖ್ಯ ಮಂತ್ರಿ ಹರೀಶ್ ಸಾಂತ್ವನ ಯೋಜನೆ:
ಅಪಘಾತಕ್ಕೊಳಗಾದವರಿಗೆ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರಕಿಸಿ ಕೊಡಲು ರಾಜ್ಯ ಸರ್ಕಾರ ಹರೀಶ್ ಸಂತ್ವಾನ ಯೋಜನೆ ಜಾರಿಗೆ ತಂದಿದೆ. 8 ಮಾರ್ಚ್-2016 ರಂದು ಆರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ ಅಪಘಾತಕ್ಕೊಳಗಾದವರಿಗೆ ಮೊದಲ 48 ಗಂಟೆಗಳಲ್ಲಿ ಹತ್ತಿರದ ಸರ್ಕಾರಿ & ಖಾಸಗಿ ಆಸ್ಪತ್ರೆ ಗಳಲ್ಲಿ 48 ಗಂಟೆಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸುವ ಯೋಜನೆ. ಅಪಘಾತಕ್ಕೊಳ್ಳಗಾದ ಮೊದಲ 48 ಗಂಟೆಗಳ ಅವಧಿಯನ್ನು ಸುವರ್ಣ ಗಂಟೆಗಳೆಂದು ಕರೆಯಲಾಗುತ್ತದೆ. ಅಪಘಾತಕ್ಕೊಳಗಾದವರಿಗೆ ಚಿಕಿತ್ಸಾ ವೆಚ್ಚಕ್ಕಾಗಿ 25000 ವರೆಗಿನ ಆರ್ಥಿಕ ಸಹಾಯ ದೊರೆಯುತ್ತದೆ.