ಬಾಹ್ಯಾಕಾಶ (Space)
 
ಅಂತರಿಕ್ಷ
ಭೂಮಿಯಿಂದ ಸುಮಾರು 160 ಕಿ.ಮೀ ಎತ್ತರದಲ್ಲಿ ಆಂತರಿಕ್ಷ ಆರಂಭವಾಗುವುದು. ಇದು ವಾಯು ಇಲ್ಲದ ಪ್ರದೇಶವಾಗಿರುತ್ತದೆ. ಆದ್ದರಿಂದ ಅಂತರಿಕ್ಷದಲ್ಲಿ ಪ್ರಯಾಣ ಮಾಡಲು ರಾಕೆಟ್ ಅತ್ಯವಶ್ಯಕ. ಅಂತರಿಕ್ಷದಲ್ಲಿ ಉಪಗ್ರಹ ಉಡಾವಣೆ ಮಾಡಲು ಗಂಟೆಗೆ ಸುಮಾರು 28000 ಕಿ.ಮೀ ವೇಗದಲ್ಲಿ ರಾಕೇಟ್ ಉಡಾವಣೆ ಮಾಡಬೇಕಾಗುತ್ತದೆ. ಇದನ್ನು ಕಕ್ಷಾವೇಗವೆಂದು ಕರೆಯಲಾಗುತ್ತದೆ.
ಕಕ್ಷೆಯ ವಿಧಗಳು
1) ಭೂ ಹತ್ತಿರ ಕಕ್ಷೆ (Near Earth Orbit) : ಈ ಕಕ್ಷೆ ಭೂಮಿಯ ಮೇಲೆ ಸುಮಾರು 400 ಕಿ.ಮೀ ಅಂತರದಲ್ಲಿದ್ದು ಪ್ರಾಯೋಗಾತ್ಮಕ ಉಪಗ್ರಹಗಳು ಉಡಾವಣೆ ಮಾಡಲಾಗುತ್ತದೆ.
ಉದಾ : ಆರ್ಯಭಟ್ ಭಾಸ್ಕರ್ ಸ್ಪುಟ್ನಿಕ್.
2) ಭೂ ನೀಚ ಕಕ್ಷೆ (Lower Earth Orbit) ಈ ಕಕ್ಷೆ ಭೂಮಿಯ ಮೇಲೆ ಸುಮಾರು 900 ಕಿ. ಮೀ ಅಂತರದಲ್ಲಿದ್ದು ದೂರ ಸಂವೇದಿ ಉಪಗ್ರಹಗಳನ್ನು (ಐ ಆರ್ ಎಸ್) ಈ ಕಕ್ಷೆಯಲ್ಲಿ ಉಡಾಯಿಸಲಾಗುತ್ತದೆ.
ಉದಾ : ಐ ಆರ್ ಎಸ್ ಸರಣಿ ಉಪಗ್ರಹಳು, ಕಾರ್ಟೊಸ್ಯಾಟ್ ಇತ್ಯಾದಿ
3) ಭೂ ಸ್ಥಿರ ಕಕ್ಷೆ (Geo stationary Orbit) : ಭೂಮಿಯ ಮೇಲೆ ಸುಮಾರು 36000 ಕಿ.ಮೀ ಅಂತರದಲ್ಲಿರುವ ಕಕ್ಷೆ ಸರ್ ಆರ್ಥರ್ ಕ್ಕಾಕ್ ಈ ಕಕ್ಷೆಯ ಉಪಯೋಗ ತಿಳಿಸಿದ್ದಾರೆ. ಈ ಕಕ್ಷೆಯಲ್ಲಿರುವ ಉಪಗ್ರಹಗಳು ಭೂಮಿಯ ವೇಗದಲ್ಲಿ ಪೂರ್ವದಿಂದ ಪಶ್ವಿಮಕ್ಕೆ ಸುತ್ತುತ್ತವೆ ಆದ್ದರಿಂದ ಇವುಗಳನ್ನು ಭೂ ಸ್ಥಿರ ಅನ್ನುವರು.
ಉದಾ : ಇನ್ಸಾಟ್ ಸರಣಿ ಉಪಗ್ರಹಗಳು
4) ವರ್ಗಾವಣೆ ಕಕ್ಷೆ (Transfer orbit) ಇದು ಮಧ್ಯಂತರ ಕಕ್ಷೆಯಾಗಿರುತ್ತದೆ.
ಬಾಹ್ಯಾಕಾಶ ಸಂಶೋಧನೆ
1957 : ರಲ್ಲಿ ಪ್ರಪ್ರಥಮ ಕೃತಕ ಉಪಗ್ರಹ ಸ್ಪುಟ್ನಿಕ್ ಉಡಾವಣೆ ಮಾಡಲಾಯಿತು. ಸೋವಿಯತ್ ಒಕ್ಕೂಟದಲ್ಲಿ ಈ ಉಡಾವಣೆ ಮಾಡಲಾಯಿತು.
1961 : ಬಾಹ್ಯಾಕಾಶದಲ್ಲಿ ಯುರಿ ಗಗಾರಿನ ಪ್ರಥಮ ವ್ಯಕ್ತಿ ಪ್ರಯಾಣಿಸಿದರು
1966 : ಲೂನಾ-10 ಚಂದ್ರನ ಮೇಲೆ ಇಳಿದ ಮೊದಲ ನೌಕೆ..
1969 : ನೀಲ್ ಆರ್ಮಸ್ಟ್ರಾಂಗ್ ಚಂದ್ರನ ಮೇಲೆ ನಡೆದಾಡಿದ ವ್ಯಕ್ತಿ.
1971 : ಸಾಲ್ಯೂಟ್-1 ಬಾಹ್ಯಾಕಾಶದ ಪ್ರಥಮ ಬಾಹ್ಯಾಕಾರ ನಿಲ್ದಾಣವಾಗಿ ಉಡಾಯಿಸಲಾಯಿತು.
1976 : ಮಂಗಳ ಗ್ರಹದ ಮೇಲೆ ವಿಕಿಂಗ್-1 ಪ್ರಯಾಣ.
ರಾಕೆಟ್
• ಚೀನಾ ದೇಶದಲ್ಲಿ ರಾಕೆಟ್ಗಳನ್ನು ಮಿಲಿಟರಿ ಮತ್ತು ಮನರಂಜನೆಯ ಉದ್ದೇಶಕ್ಕಾಗಿ ೧೩ನೇ ಶತಮಾನದಲ್ಲಿಯೇ ಬಳಸುತ್ತಿದ್ದರು.
• ರಾಕೆಟ್ (ಉಡ್ಡಯನ ವಾಹನ) ಒಂದು ಕ್ಷಿಪಣಿ, ವ್ಯೋಮನೌಕೆ, ವಾಯುನೌಕೆ ಅಥವಾ ಎಂಜಿನಿಂದ ಮೇಲ್ಮುಖ ಒತ್ತಡಕ್ಕೊಳಪಟ್ಟು ಕಾಯನಿರ್ವಹಿಸುವ ವಾಹನವಾಗಿದೆ.
• ರಾಕೆಟ್ಗಳ ಬಗ್ಗೆ ಯೋಚಿಸಿದ ಕಲ್ಪನಾ ಬರಹಗಾರ ಜೂಲ್ಸ್ ವೆರ್ನ್.
• ರಾಕೆಟ್ಗಳ ಆವಿಷ್ಕಾರಕ್ಕೆ ಕಾರಣವಾದ ಮೂವರು ವಿಜ್ಹ್ನಾನಿಗಳೆಂದರೆ ರಷ್ಯಾದ ಕಾನ್ಸ್ಟಾಂಟಿನ್ ಟಿಶಿಯೊಲ್ ಕುವ್ ಸ್ಕಿ, ಅಮೆರಿಕಾದ ರಾಬರ್ಟ್ ಗೊಡ್ಡಾರ್ಡ್ ಮತ್ತು ಜರ್ಮನಿಯ ಹೆರ್ಮನ್ ಒರ್ಬೆರ್ಥ್.
• ರಾಬರ್ಟ್ ಗೊಡ್ಡಾರ್ಡ್ ರವರನ್ನು ರಾಕೆಟ್ ನ ಪಿತಾಮಹ ಎನ್ನುವರು.
• ರಾಕೆಟ್ ಎಂಜಿನಿನ ಹೊರಸೂಸುವಿಕೆಯು ರಾಕೆಟ್ನಲ್ಲಿ ಈಗಾಗಲೆ ಇರುವ ನೋದನಕಾರಿಯಿಂದ ಬಳಸಲ್ಪಡುತ್ತದೆ. ರಾಕೆಟ್ ಎಂಜಿನ ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ರಾಕೆಟ್ ಎಂಜಿನಗಳು ಕ್ಷಿಪ್ರಗತಿಯ ಜವದ ಮೂಲಕ ವಿರುದ್ಧ ದಿಕ್ಕಿನಲ್ಲಿ ಹೊರಸೂಸುವಿಕೆಯಿಂದ ರಾಕೆಟ್ ಅನ್ನು ಮುನ್ನುಗ್ಗಿಸುತ್ತವೆ.
ರಾಕೆಟ್ಟುಗಳ ತತ್ವ
• ರಾಕೆಟ್ಟುಗಳು ಸಂವೇಗ ಸಂರಕ್ಷಣಾ ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತವೆ.ಈ ತತ್ವದ ಪ್ರಕಾರ ಯಾವುದೇ ವ್ಯವಸ್ಥೆಯ ಮೇಲೆ ಬಾಹ್ಯ ಬಲ ಸೊನ್ನೆ ಆಗಿದ್ದಾಗ ಆ ವ್ಯವಸ್ಥೆಯ ಒಟ್ಟು ಸಂವೇಗ ಸಂರಕ್ಷಿತವಾಗುತ್ತದೆ (ಸ್ಥಿರವಾಗಿ ಉಳಿಯುತ್ತದೆ).
• MV+mv=0
ರಾಕೆಟ್ಟಿನ ಕಾರ್ಯವಿಧಾನ
• ರಾಕೆಟ್ಗಳು ನ್ಯೂಟನ್ ನ ಚಲನೆಯ ಮೂರನೇ ನಿಯಮದ ಅನ್ವಯ ಕಾರ್ಯವನ್ನು ನಿರ್ವಹಿಸುತ್ತದೆ.
• ರಾಕೆಟ್ಟು ಅಥವಾ ಜೆಟ್ ವಿಮಾನಗಳಲ್ಲಿ ಇಂಧನ ಉರಿಸಿದಾಗ ಬಿಡುಗಡೆಯಾಗುವ ಬಿಸಿ ಅನಿಲಗಳು ಹಿಂದಕ್ಕೆ ಚಿಮ್ಮುತ್ತವೆ. ಹಿಂದಕ್ಕೆ ಚಿಮ್ಮಿ ಬರುವ ಬಿಸಿ ಅನಿಲಗಳ ಪ್ರತಿಕಿಯೆಯು ರಾಕೆಟ್ ಅಥವಾ ಜೆಟ್ ವಿಮಾನಕ್ಕೆ ಮುಮ್ಮುಖ ನೂಕುಬಲವನ್ನು ಒದಗಿಸುತ್ತದೆ.
• ರಾಕೆಟ್ಟುಗಳು ನಿರ್ವಾತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಬಲ್ಲವು. ಇದು ಸಾಧ್ಯವಾಗುವುದಕ್ಕೆ ರಾಕೆಟ್ಟುಗಳು ತಮ್ಮದೇ ಆದ ಆಕ್ಸಿಡಕವನ್ನೂ ಒಯ್ಯುವುದು ಕಾರಣ. ಇಂಧನ ದಹನಕ್ಕೆ ಆಕ್ಸಿಜನ್ ಒದಗಿಸುವ ಪದಧರ್ಥಕ್ಕೆ ಆಕ್ಸಿಡಕ ಎಂದು ಹೆಸರು. ಇಂಧನ ಮತ್ತು ಆಕ್ಸಿಡಕಗಳನ್ನು ಒಟಾಗಿ ನೋದನಕಾರಿಗಳು ಎನ್ನುತ್ತಾರೆ.
• ಪ್ರತಿಕ್ಷೇಪಿತವೇಗದೊಂದಿಗೆ ರಾಕೆಟ್ ಲಂಬವಾಗಿ ಮೇಲಕ್ಕೆ ಚಲಿಸಬೇಕಾದಲ್ಲಿ ಭೂಮಿಯೆಡೆಗೆ ವರ್ತಿಸುತ್ತಿರುವ ಒಂದು ಕ್ರಿಯಾಬಲ ಇರಲೇ ಬೇಕು. ರಾಕೆಟ್ಟಿನಲ್ಲಿ ಇಂಧನವನ್ನು ದಹಿಸಿದಾಗ ಈ ಕ್ರಿಯಾಬಲ ಉಂಟಾಗುತ್ತದೆ. ಇಂಧನ ದಹಿಸಿದಾಗ ನಿಷ್ಕಾಸಅನಿಲಗಳು ಸೂಸುಬಾಯಿಯ ಮೂಲಕ ಭೂಮಿಯೆಡೆಗೆ ಚಿಮ್ಮುತ್ತದೆ.
• ರಾಕೆಟ್ಟಿನ ಒಟ್ಟು ರಾಶಿಯು (M) ನೋದನಕಾರಿಗಳ ರಾಶಿಯನ್ನೂ ಅದರಲ್ಲಿರುವ ವೈಜ್ಞಾನಿಕ ಸಾಧನ ಅಥವಾ ಉಪಗ್ರಹಕ್ಕೆ ಉಪಯುಕ್ತ ಹೊರೆ ಅಥವಾ ಪೇಲೋಡ್ ಎನ್ನುತ್ತಾರೆ. ರಾಕೆಟ್ಟನಲ್ಲಿ ಇಂಧನ ದಹನಗೊಂಡು ನಿಷ್ಕಾಸವನ್ನ ಬಿಡುಗಡೆ ಮಾಡಿದಾಗ ರಾಕೆಟ್ಟಿನ ವೇಗ ಏರುತ್ತದೆ. ರಾಕೆಟ್ಟಿನ ವೇಗೋತ್ಕರ್ಷವು ಇಂಧನ ದಹನದ ಪ್ರಮಾಣವನ್ನೂ ನಿಷ್ಕಾಸ ವೇಗ (Vex) ವನ್ನೂ ಅವಲಂಬಿಸಿರುತ್ತದೆ. ಜೊತೆಗೆ ರಾಕೆಟ್ಟಿನ ರಾಶಿಯ (M) ಪಾತ್ರವೂ ಇದೆ. ರಾಕೆಟ್ಟಿನ ರಾಶಿ ಹೆಚ್ಚಾದಷ್ಟೂ ವೇಗೋತ್ಕರ್ಷ ಕಡಿಮೆಯಾಗುತ್ತದೆ. ಇವುಗಳ ಸಂಬಂಧವನ್ನು ಹೀಗೆ ತೋರಿಸಬಹುದು.
• (ಇಂಧನ ಉಪಯೋಗವಾಗುವ ದರ * ನಿಷ್ಕಾಸ ವೇಗ) = (ರಾಕೆಟ್ಟಿನ ರಾಶಿ *ವೇಗೋತ್ಕರ್ಷ)
• ರಾಕೆಟ್ಟಿನ ರಾಶಿ ಮತ್ತು ವೇಗೋತ್ಕರ್ಷಗಳ ಗುಣಲಬ್ದವನ್ನು ರಾಕೆಟ್ ಮೇಲಿನ ನೂಕುಬಲ ಎನ್ನುತ್ತಾರೆ.
• ನೂಕುಬಲ = RVex = ma
• ಇಲ್ಲಿ'R' ಎಂಬುದು ಇಂಧನ ಉಪಯೋಗವಾಗುವ ದರವನ್ನು ಸೂಚಿಸುತ್ತದೆ.