ಸುಕನ್ಯಾ ಸಮೃದ್ಧಿ ಯೋಜನೆ

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಉಳಿತಾಯ ಖಾತೆ ಯೋಜನೆಯಾಗಿದ್ದು, ಹೆಣ್ಣು ಮಕ್ಕಳ ಪೋಷಕರು ತಮ್ಮ ಮಗುವಿನ ಭವಿಷ್ಯದ ಉನ್ನತ ವಿದ್ಯಾಭ್ಯಾಸಕ್ಕಾಗಿ ಮತ್ತು ವಿವಾಹ ವೆಚ್ಚಕ್ಕಾಗಿ ಬ್ಯಾಂಕು ಮತ್ತು ಪೋಸ್ಟ್ ಆಫೀಸ್‍ಗಳಲ್ಲಿ ದೀರ್ಘಾವಧಿಗೆ ಠೇವಣಿ ಇಡುವ ಯೋಜನೆಯೇ ಸುಕನ್ಯ ಸಮೃದ್ಧಿ ಯೋಜನೆ . ನವಜಾತ ಶಿಶುವಿನಿಂದ 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದಾಗಿದ್ದು, ಖಾತೆದಾರರು 21 ವರ್ಷಗಳು ತುಂಬುವವರೆಗೆ ಚಾಲ್ತಿಯಲ್ಲಿರುತ್ತದೆ ಪ್ರತಿ ಕುಟುಂಬದ ಮೊದಲ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಈ ಸೌಲಭ್ಯ ಅನ್ವಯಿಸುತ್ತದೆ. ಸರಕಾರಿ ಮತ್ತು ಖಾಸಗಿ ವಾಣಿಜ್ಯೋದ್ಯಮ ಸಂಸ್ಥೆಗಳ ನೌಕರರು, ವ್ಯಾಪಾರ ಮತ್ತು ಸ್ವಂತ ಉದ್ದಿಮೆದಾರರು, ಯಾವುದೇ ವೃತ್ತಿಯಲ್ಲಿ ತೊಡಗಿಸಿ ಕೊಂಡವರು ತಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಖಾತೆ ತೆರೆಯಬಹುದಾಗಿದೆ. ಖಾತೆ ತೆರೆಯಲು ಮಗುವಿನ ಜನನ ಪ್ರಮಾಣ ಪತ್ರ, ಪೋಷಕರ ಗುರುತಿನ ಚೀಟಿ, ವಿಳಾಸ ದೃಢೀಕರಿಸುವ ದಾಖಲೆ ಅತ್ಯಗತ್ಯವಾಗಿ ಬೇಕು ಆರಂಭಿಕ ಠೇವಣಿ 1000 ರೂಪಾಯಿಯಾಗಿದ್ದು ಪ್ರತಿವರ್ಷ ಕನಿಷ್ಠ 1000ರೂಪಾಯಿಯಿಂದ ಗರಿಷ್ಠ 1.5 ಲಕ್ಷ ರೂಪಾಯಿಯವರೆಗೆ ಖಾತೆದಾರ ಮಗುವಿಗೆ 14 ವರ್ಷ ತುಂಬುವ ವರೆಗೆ ಜಮಾ ಮಾಡಬಹುದು. ಯೋಜನೆಯ ಆರಂಭದಲ್ಲಿ 9.10%ರಷ್ಟಿದ್ದ ಬಡ್ಡಿ ದರ ಪ್ರಸ್ತುತ ವಾರ್ಷಿಕ ಬಡ್ಡಿದರ 8.3% ರಷ್ಠಿದೆ. ಯಾರ ಹೆಸರಿನಲ್ಲಿ ಖಾತೆ ತೆರೆಯಲಾಗಿದೆಯೋ ಆಕೆ 18 ವರ್ಷ ಪೂರೈಸಿದ ಮೇಲೆ ಒಟ್ಟು ಠೇವಣೆಯಾಗಿರುವ ಮೊತ್ತದ ಅರ್ಧಭಾಗವನ್ನು ಉನ್ನತ ಶಿಕ್ಷಣದ ವೆಚ್ಚಕ್ಕೆ ಹಿಂತೆಗೆಯಲು ಅವಕಾಶವಿದೆ.
ಪ್ರಾರಂಭ:
ಜನವರಿ-22-2015