ಚುನಾವಣಾ ಆಯೋಗ

 


* ‘ಚುನಾವಣೆ’ ಎಂಬ ಕನ್ನಡಪದ ‘ಚುನಾವ್’ ಎಂಬ ಹಿಂದಿ ಪದದಿಂದ ಬಂದಿದೆ.
* ಚುನಾವ್ ಎಂದರೆ ಹಿಂದಿಯಲ್ಲಿ ‘ಆಯ್ಕೆ’ ಮಾಡುವುದು ಎಂದರ್ಥ.
* ಸಂವಿಧಾನದ 15ನೇ ಭಾಗದ 324 ನೇ ವಿಧಿಯಿಂದ 329 ನೇ ವಿಧಿಗಳಲ್ಲಿ ಚುನಾವಣಾ ಆಯೋಗದ ಬಗ್ಗೆ ಪ್ರಸ್ತಾಪಿಸಲಾಗಿದೆ.
* ಭಾರತದಲ್ಲಿ ಏಕೈಕ ಚುನಾವಣಾ ಆಯೋಗಕ್ಕೆ ಅವಕಾಶ ಮಾಡಿಕೊಡಲಾಗಿದೆ.
* ರಾಷ್ಟ್ರಪತಿಯವರು ಮುಖ್ಯ ಚುನಾವಣಾ ಆಯುಕ್ತರು, ಸದಸ್ಯರು ಮತ್ತು ರಾಜ್ಯಗಳ ಆಯುಕ್ತರನ್ನು ನೇಮಿಸುತ್ತಾರೆ.
* 1950 ರಿಂದ 1989 ರ ವರೆಗೆ ಚುನಾವಣಾ ಆಯೋಗ ಏಕಸದಸ್ಯ ಆಯೋಗವಾಗಿ ಕಾರ್ಯನಿರ್ವಹಿಸುತ್ತಿತ್ತು.
* 1993 ಅಕ್ಟೋಬರ್ 1 ಪಿ.ವಿ. ನರಸಿಂಹರಾವ ರವರ ಪ್ರಧಾನಿ ಅವಧಿಯಲ್ಲಿ ತ್ರಿಸದಸ್ಯ ಚುನವಣಾ ಆಯೋಗವನ್ನು ರಚಿಸಲಾಯಿತು.
* ಪ್ರಸ್ತುತ ಚುನಾವಣಾ ಆಯೋಗ ಒಬ್ಬ ಮುಖ್ಯ ಚುನಾವಣಾ ಆಯುಕ್ತ ಹಾಗೂ ಉಳಿದ ಇಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿದೆ.
* ಚುನಾವಣಾ ಆಯೋಗದ ಸದಸ್ಯರ ಅಧಿಕಾರಾವಧಿ 6 ವರ್ಷಗಳು ಆದರೆ ಈ ಅವಧಿ ಮುಗಿಯುವುದಕ್ಕೆ ಮೊದಲೇ 65 ವರ್ಷ ತುಂಬಿದರೆ ಅವರು ನಿವೃತ್ತಿ ಹೊಂದುತ್ತಾರೆ.
* ಚುನಾವಣಾ ಆಯೋಗದ ಸದಸ್ಯರಿಗೆ ವೇತನ ಪಿಂಚಣಿ, ಇತರೆ ಭತ್ಯೆಗಳನ್ನು ಸವೋಚ್ಛ ನ್ಯಾಯಾಲಯದ ನ್ಯಾಯಾಧೀಶರಿಗೆ ನೀಡುವಂತೆ ನೀಡಲಾಗುತ್ತದೆ.
* ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಪದಚ್ಯುತಿಗೊಳಿಸಲು ಅನುಸರಿಸುವ ನಿಯಮಗಳನ್ನೇ ಚುನಾವಣಾ ಆಯೋಗದ ಆಯುಕ್ತರನ್ನು ಪದಚ್ಯುತಿಗೊಳಿಸಲು ಅನುಸರಿಸಲಾಗುತ್ತದೆ.

ಚುನಾವಣಾ ಪ್ರಕ್ರಿಯೆ


* ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.
* ಚುನಾವಣಾ ಆಯೋಗವು ನಾಮಪತ್ರಗಳನ್ನು ಪರಿಶೀಲಿಸಿ ಅಪೂರ್ಣವಾದವುಗಳನ್ನು ತಿರಸ್ಕರಿಸುತ್ತದೆ.
* ನಾಮಪತ್ರ ಪರಿಶೀಲನೆಯಾಗಿ ಚುನಾವಣಾ ಆಯೋಗದಿಂದ ಅಭ್ಯರ್ಥಿಗಳ ಹೆಸರು ಪ್ರಕಟವಾದ ಮೇಲೆ ಚುನಾವಣಾ ಪ್ರಚಾರವನ್ನು ಆರಂಭಿಸಬೇಕಾಗಿದೆ.
* ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸುವ ಮತ್ತು ವಾಪಸ್ಸು ಪಡೆಯುವ ದಿನಾಂಕವನ್ನು ಗೊತ್ತುಪಡಿಸಲಾಗುತ್ತದೆ.
* ನಾಮಪತ್ರಗಳನ್ನು ವಾಪಸ್ಸು ಪಡೆದ 20 ದಿನಗಳ ನಂತರ ಚುನಾವಣೆ ನಡೆಬೇಕು. 1997 ರಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ಅವಧಿಯನ್ನು ಚುನಾವಣಾ ಆಯೋಗ 14 ದಿದನಗಳಿಗೆ ಇಳಿಸಿತು.
* ಮತದಾನ ಆರಂಭವಾಗುವ 36 ಗಂಟೆಗಳ ಮುಂಚೆ ಚುನಾವಣಾ ಪ್ರಚಾರವನ್ನು ನಿಲ್ಲಿಸಬೇಕು.
* ಚುನಾವಣೆಯಲ್ಲಿ ಅಭ್ಯರ್ಥಿಯು 1/6 ರಷ್ಟಕ್ಕಿಂತ ಕಡಿಮೆ ಮತಗಳನ್ನು ಪಡೆದರೆ ಠೇವಣಿಯನ್ನು ವಾಪಸ ನೀಡಲಾಗುವುದಿಲ್ಲ.
* ವಿಧಾನಸಭಾ ಚುನಾವಣೆಯಲಿ ಆಯಾ ರಾಜ್ಯದ ಯಾವುದೇ ಕ್ಷೇತ್ರದಿಂದಲಾದರೂ ಸ್ಪರ್ಧಿಸಬಹುದು. ಲೋಕಸಭೆಗೆ ದೇಶದ ಯಾವುದೇ ಕ್ಷೇತ್ರದಿಂದಲಾದರೂ ಸ್ಪರ್ಧಿಸಬಹುದು.
* ಚುನಾವಣೆ ನಡೆದ 30 ದಿನಗಳೊಳಗಾಗಿ ಚುನಾವಣಾ ವೆಚ್ಚದ ಲೆಕ್ಕವನ್ನು ಜಿಲ್ಲಾ ಚುನಾವಣಾಧಿಕಾರಿಗೆ ಒಪ್ಪಿಸಬೇಕು.
* ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ತಮಗಿಷ್ಟಬಂದಂತೆ ಹಣವನ್ನು ಖರ್ಚು ಮಾಡುವಂತಿಲ್ಲ.ಚುನಾವಣಾ ಆಯೋಗವು ನಿಗದಿಪಡಿಸಿದ ಮೊತ್ತವನ್ನು ಮಾತ್ರ ಖರ್ಚು ಮಾಡಬೇಕು.

ಚುನಾವಣೆಯ ಮುಖ್ಯ ಲಕ್ಷಣಗಳು


* ಸ್ವತಂತ್ರ ಮತ್ತು ಮುಕ್ತ ಚುನಾವಣೆಗಳು
* ನಿಯತಕಾಲಿಕ ಚುನಾವಣೆಗಳು
* ರಹಸ್ಯ ಮತದಾನ
* ವಯಸ್ಕ ಮತದಾನ ಪದ್ಧತಿ
* ಏಕಸದಸ್ಯನ ಆಯ್ಕೆ
* ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಮೊದಲಾದವುಗಳು

ಚುನಾವಣಾ ಆಯೋಗದ ಕಾರ್ಯಗಳು


* ಸಂಸತ್ತಿಗೆ ರಾಜ್ಯ ಶಾಸಕಾಂಗಗಳಿಗೆ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಸ್ಥಾನಗಳಿಗೆ ಚುನಾವಣೆಗಳನ್ನು ಮತ್ತು ಉಪ ಚುನಾವಣೆಗಳನ್ನು ನಡೆಸುವ ಹೊಣೆಗಾರಿಕೆ.
* ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿಯ ಬಗ್ಗೆ ನಿರ್ದೇಶನ ನೀಡುವುದು.
* ಮತದಾರರ ಪಟ್ಟಿಗಳ ಸಿದ್ಧತೆ ಹಾಗೂ ಪರಿಶೀಲನೆ ಮಾಡುವುದು.
* ರಾಜಕೀಯ ಪಕ್ಷಗಳಿಗೆ ಮಾನ್ಯತೆ ಹಾಗೂ ಚಿನ್ಹೆಗಳನ್ನು ನೀಡುವುದು.
* ಚುನಾವಣಾ ನೀತಿ ಸಂಹಿತೆಗಳನ್ನು ರೂಪಿಸಿ ಜಾರಿಗೊಳಿಸಿ ರಾಜಕೀಯ ಪಕ್ಷಗಳು ಪಾಲಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವುದು.
* ಚುನಾವಣೆ ನಡೆಸಲು ಅಗತ್ಯವಾದ ಸಿಬ್ಬಂದಿಯನ್ನು ಒದಗಿಸುವಂತೆ ರಾಷ್ಟ್ರಪತಿ ಅಥವಾ ರಾಜ್ಯಪಾಲರನ್ನು ಕೇಳಿಕೊಳ್ಳುವುದು.
* ರಾಜಕೀಯ ಪಕ್ಷಗಳಿಗೆ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷಗಳ ಸ್ಥಾನಮಾನಗಳನ್ನು ನೀಡುವುದು.
* ರಾಜ್ಯ ಶಾಸನ ಸಭೆಗಳಿಗೆ ಚುನಾವಣೆ ನಡೆಸಲು ಅಧಿಸೂಚನೆಯನ್ನು ಹೊರಡಿಸುವುದು ರಾಜ್ಯಪಾಲರಿಗೆ ಮತ್ತು ಸಂಸತ ಚುನಾವಣೆ ನಡೆಸಲು ರಾಷ್ಟ್ರಪತಿಗೆ ತಿಳಿಸುವುದು.

ಚುನಾವಣಾ ನೀತಿ ಸಂಹಿತೆ


* ಚುನಾವಣಾ ವಿವಾದಗಳನ್ನು ಹೈಕೋರ್ಟ ಮತ್ತು ಸುಪ್ರೀಂಕೋರ್ಟನಲ್ಲಿ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
* ಚುನಾವಣಾ ಆಯೋಗದ ಮುಖ್ಯ ಉದ್ದೇಶ ನಿಷ್ಪಕ್ಷಪಾತ ಚುನಾವಣೆ ನಡೆಸುವುದು, ಈ ಉದ್ದೇಶದಿಂದ ಚುನಾವಣೆ ನಡೆಯುವ ಸಂದರ್ಭದಲ್ಲಿ ಉಂಟಾಗಬಹುದಾದ ಸಂವಿದಾನಬಾಹೀರ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಚುನಾವಣಾ ಆಯೋಗವು ಚುನಾವಣಾ ನಿತಿ ಸಂಹಿತೆಯನ್ನು ಜಾರಿಗೊಳಿಸುತ್ತದೆ. ಇದನ್ನು ಪ್ರತಿಯೊಂದು ರಾಜಕೀಯ ಪಕ್ಷಗಳು ಹಾಗೂ ಆಡಳಿತಾರೂಢ ಪಕ್ಷವು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಅಂತಹ ಪ್ರಮುಖ ನಿತಿ ಸಂಹಿತೆಗಳೆಂದರೆ :
* ಕೇಂದ್ರ ಅಥವಾ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳ ಸಚಿವರು ತಮ್ಮ ಅಧಿಕಾರ ಬಳಸಿಕೊಂಡು ಅಭ್ಯರ್ಥಿಯ ಪರವಾಗಿ (ಸರ್ಕಾರಿ ಕಾರನ್ನು) ಅಂದರೆ ಇಲಾಖೆಗೆ ಸಂಬಂಧಿಸಿದ ವಾಹನಗಳನ್ನು ಚುನಾವಣೆಗೆ ಬಳಸಿಕೊಳ್ಳುವಂತಿಲ್ಲ.
* ಶಾಸಕರಾಗಲಿ, ಸಂಸತ್ತಿನ ಸದಸ್ಯರಾಗಲಿ ಉನ್ನತ ಸ್ಥಾನದ ವ್ಯಕ್ತಿಗಳಿಗೂ ಅನ್ವಯ.
* ಕಛೇರಿ ಸಿಬ್ಬಂದಿ ವರ್ಗದವರನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುವಂತಿಲ್ಲ.
* ನೀತಿ ಸಂಹಿತೆಯನ್ನು ಕೇಂದ್ರದಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ಪ್ರಕಟಿಸಿದರೆ ರಾಜ್ಯದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಕಟಿಸುವ ಅಧಿಕಾರ ನೀಡಲಾಗಿದೆ.
* ಸಾರ್ವಜನಿಕ ಸ್ಥಳಗಳನ್ನು ಎಲ್ಲ ಪಕ್ಷಗಳು ಬಳಸಿಕೊಳ್ಳುವುದು
* ಸರ್ಕಾರಿ ಅತಿಥಿ ಗೃಹಗಳಲ್ಲಿ ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ.