ಭಾರತದ ಅಕ್ಷಾಂಶ ಮತ್ತು ರೇಖಾಂಶಗಳು(Longitude and Latitude)

 

ಅಕ್ಷಾಂಶಗಳು


• 8.4 ಉತ್ತರ ಅಕ್ಷಾಂಶದಿಂದ 37.6 ಉತ್ತರ ಅಕ್ಷಾಂಶದವರೆಗೆ ಹರಡಿದೆ. ಈ ಎರಡರ ಮಧ್ಯದಲ್ಲಿ 23½ ಕರ್ಕಾಟಕ ಸಂಕ್ರಾಂತಿ ವೃತ್ತವಿದೆ.

• 23½ ಕರ್ಕಾಟಕ ಸಂಕ್ರಾಂತಿ ವೃತ್ತವು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಛತ್ತಿಸಗಡ, ಜಾರ್ಖಂಡ್, ಪಶ್ಚಿಮ ಬಂಗಾಳ, ತ್ರಿಪುರಾ, ಮಿಜೋರಾಂ ರಾಜ್ಯಗಳ ಮೇಲೆ ಹಾದು ಹೋಗಿದೆ.

ರೇಖಾಂಶಗಳು


• 68.7 ಪೂರ್ವ ರೇಖಾಂಶದಿಂದ 97.25 ಪೂರ್ವ ರೇಖಾಂಶದವರೆಗೆ ಹರಡಿದೆ. ಈ ಎರಡರ ಮಧ್ಯದಲ್ಲಿ 82½ ಪೂರ್ವ ರೇಖಾಂಶವಿದೆ. ಇದು ಭಾರತದ ಸಮಯದ ರೇಖೆಯಾಗಿದೆ.

• 82½ ಪೂರ್ವ ರೇಖಾಂಶವು ಅಲಹಾಬಾದ್ ಪಟ್ಟಣದ ಸಮೀಪದ ಹಾಯ್ದು ಹೋದ ಕಾರಣ ಇದಕ್ಕೆ 'ಅಲಹಾಬಾದ್ ರೇಖೆ' ಎಂತಲೂ ಕರೆಯುತ್ತಾರೆ.

• 82½ ಪೂರ್ವ ರೇಖಾಂಶವು ಉತ್ತರಪ್ರದೇಶ, ಛತ್ತಿಸಗಡ, ಓರಿಸ್ಸಾ, ಆಂಧ್ರಪ್ರದೇಶ ರಾಜ್ಯಗಳ ಮೇಲೆ ಹಾದು ಹೋಗಿದೆ.

• ಭಾರತದ ಸಮಯವು ಗ್ರೀನ್ ವಿಚ್ ಸಮಯಗಿಂತ 5½ ಗಂಟೆ ಮುಂದಿದೆ.

23½ ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ 80⁰ ಪೂರ್ವ ರೇಖಾಂಶಗಳು ಮಧ್ಯಪ್ರದೇಶದ ಜಬ್ಬಲ್ ಪುರ್ ದಲ್ಲಿ ಸಂಧಿಸುತ್ತವೆ. ಇದು ಸರಿಸುಮಾರು ಭಾರತದ ಕೇಂದ್ರ ಭಾಗವಾಗಿದ್ದು ಇದನ್ನು 'ಭಾರತದ ಭೌಗೋಳಿಕ ಕೇಂದ್ರ'(Geographical Centre of India) ಎಂದು ಕರೆಯಲಾಗಿದೆ.

Contributed by:Spardha Loka