ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.
 
ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು ಇವುಗಳಿಂದ ಜೀವನದ ಮೌಲ್ಯ ಹೆಚ್ಚುತ್ತದೆ.ಆದ್ದರಿಂದಲೇ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ‘ಗಾದೆಗಳನ್ನು ವೇದಗಳಿಗೆ ಸಮಾನ’ ಎಂದು ಹೇಳುವರು. ಅಂತಹ ಹಲವು ಪ್ರಸಿದ್ಧ ಗಾದೆಗಳಲ್ಲಿ ಇದು ಒಂದಾಗಿದೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಈ ಮಾತನ್ನು ಸಾರ್ಥಕಗೊಳಿಸಿದ ಮಹಾವ್ಯಕ್ತಿಗಳು ಹಲವರು. ಶಿವಜಿಯದು ಎತ್ತರದ ನಿಲುವಲ್ಲ . ಆದರೆ ಅಯಸ್ಕಾದಂತೆ ತನ್ನ ಜನರನ್ನೆಲ್ಲ ಬರಸೆಳೆದು , ಒಗ್ಗೂಡಿಸಿ ಮಹಾ ಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ ಶಿವಾಜಿಯದು. ನೆಪೋಲಿಯನ್ ಕುಳ್ಳ. ಅದರೆ ಜಗವನ್ನೇ ನಡುಗಿಸಿದ. ಶಾಸ್ತ್ರೀಜಿ ಇವರಿಗಿಂತ ಎತ್ತರದಲ್ಲಿ ಹೆಚ್ಚಲ್ಲ; ಸಾಹಸದಲ್ಲಿ ಕಡಿಮೆಯಲ್ಲ. ದೃಢತೆ ಸಾಹಸ ,ಸಹನೆ ಚಾತುರ್ಯ ಮುಂತಾದವು ಒಂದು ದಿನದಲ್ಲಿ ಅಥವಾ ಒಂದು ವರ್ಷದಲ್ಲಿ ಸಂಪಾದಿಸಿದ ಗುಣಗಳಲ್ಲ. ಅವರ ಬಾಳು ಬೆಳೆದ ಬಂದ ಬಗೆಯನ್ನು ಕಂಡಾಗ ಅವರ ವ್ಯಕ್ತಿತ್ವದ ನಿಜವಾದ ದರ್ಶನವಾಗುತ್ತದೆ. ಇವರೆಲ್ಲರ ವ್ಯಕ್ತಿತ್ವವನ್ನು ನೋಡಿದಾಗ ಮೂರ್ತಿ ಚಿಕ್ಕದೆ ಇರಬಹುದು ಆದರೆ ಸಾಧನೆ ಅಪ್ರತಿಮವಾದುದು .ಆದ್ದರಿಂದ ಅಳತೆಗಿಂತ ವ್ಯಕ್ತಿತ್ವ ಮುಖ್ಯ ಎಂಬುದನ್ನು ಈ ಗಾದೆ ಮಾತು ಸಾಂಕೇತಿಕವಾಗಿ ಸೂಚಿಸುತ್ತದೆ.