ವಿವಿದೋದ್ದೇಶ ನದಿ ಕಣಿವೆ ಯೋಜನೆ (Vivid River Valley Projects)

 

ನದಿ ನೀರಿನ ಅಂಪೂರ್ಣ ಬಳಕೆ,ಸಂರಕ್ಷಣೆ ಹಾಗೂ ನದಿ ಕಣಿವೆಯ ಸಮಗ್ರ ಅಭಿವೃದ್ಧಿಯ ಮೂಲ ಉದ್ದೇಶವನ್ನು ಹೊಂದಿರುವುದರಿಂದಲೇ ಇವುಗಳನ್ನು ವಿವಿದ್ದೋದ್ದೆಶ ನದಿ ಕಣಿವೆ ಯೋಜನೆಗಳೆಂದು ಕರೆಯಲಾಗಿದೆ.

ಉದ್ದೇಶಗಳು


(1) ನೀರಾವರಿ ಸೌಲಭ್ಯವನ್ನು ಒದಗಿಸುವುದು
(2) ಜಲವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದು
(3) ನದಿಗಳ ಪ್ರವಾಹವನ್ನು ನಿಯಂತ್ರಿಸುವುದು
(4) ನೌಕಾಯಾನದ ಸೌಲಭ್ಯವನ್ನು ಒದಗಿಸುವುದು
(5) ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ ನೀರನ್ನು ಒದಗಿಸುವುದು.
(6) ಮಣ್ಣಿನ ಸವಕಳಿಯನ್ನು ನಿಯಂತ್ರಿಸುವುದು
(7) ಮೀನುಗಾರಿಕೆಯ ಅಭಿವೃದ್ಧಿ ಮಾಡುವುದು
(8) ಅರಣ್ಯ ಸಂಪತ್ತನ್ನು ವೃದ್ಧಿಸುವುದು.
(9) ಕೈಗಾರಿಕಾಭಿವೃದ್ದಿಗೆ ಪ್ರೋತ್ಸಾಹ ನೀಡುವುದು.

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು


(1) ದಾಮೋದರ ನದಿ ಕಣಿವೆ ಯೋಜನೆ


• ದಾಮೋದರ ಯೋಜನೆಯು ಸ್ವತಂತ್ರ ಭಾರತದ ಮೊದಲನೆಯ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ.
• ದಾಮೋದರ ನದಿಕಣಿವೆ ಯೋಜನೆಯನ್ನು ದಾಮೋದರ ಮತ್ತು ಅದ್ರ ಉಪನದಿಗಳಿಗೆ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ನಿರ್ಮಿಸಲಾಗಿದೆ.
• ಈ ನದಿಯು ಪಶ್ಚಿಮ ಬಂಗಾಳದಲ್ಲಿ ಪ್ರವಾಹಗಳಿಂದ ಅಪಾರ ಹಾನಿಯನ್ನುಂಟು ಮಾಡುತ್ತಿದ್ದು, ಇದನ್ನು ಪಶ್ಚಿಮ ಬಂಗಾಳದ ‘ಕಣ್ಣೀರಿನ ನದಿ‘ ಎಂದು ಕರೆಯಲಾಗುತ್ತಿತ್ತು. ಈ ನದಿಯಿಂದ ಆಗುವ ಹಾನಿಯನ್ನು ತಡೆಗಟ್ಟಲು ಈ ಯೋಜನೆಯನ್ನು ಕೈಗೊಳ್ಳಲಾಯಿತು.
• ಈ ಯೋಜನೆಯು ಸುಮಾರು 2495 ಕಿ.ಮೀ ಉದ್ದವಾದ ಕಾಲುವೆಗಳ ಜಾಲವನ್ನು ಹೊಂದಿದ್ದು ಸುಮಾರು 4.5 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದೆ.
• ತಿಲೈಯಾ, ಮೈಥಾನ್ ಕೊನಾರ್ ಮತ್ತು ಪಂಚೆಟ್ ಹಿಲ್ಗಳಲ್ಲಿ ದಾಮೋದರ ಹಾಗೂ ಅದರ ಉಪ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಬೊಕಾರೋ, ಚಂದ್ರಾಪುರ ಹಾಗೂ ದುರ್ಗಾಪುರಗಳಲ್ಲಿ ಶಾಖೋತ್ಪನ್ನ ವಿದ್ಯುದಾಗಾರಗಳನ್ನು ನಿರ್ಮಿಸಲಾಗಿದೆ.

(2) ಭಾಕ್ರಾ ನಂಗಲ್ ಯೋಜನೆ


• ಇದು ಭಾರತದಲ್ಲಿಯೇ ಅತ್ಯಂತ ಎತ್ತರವಾದ ಮತ್ತು ಪ್ರಮುಖವಾದ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ.
• ಇದು ಪಂಜಾಬ್, ಹರಿಯಾಣ ಮತ್ತು ರಾಜಸ್ತಾನ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ, ಹಿಮಾಚಲ ಪ್ರದೇಶದ ಭಾಕ್ರಾ ಮತ್ತು ನಂಗಲ್ ಎಂಬಲ್ಲಿ ಸಟ್ಲೆಜ ನದಿಗೆ ಅಣೆಕಟ್ಟುಗಳನ್ನು ಕಟ್ಟಲಾಗಿದೆ.
• ಭಾಕ್ರಾ ಅಣೆಕಟ್ಟು ಏಷ್ಯಾದಲ್ಲಿಯೇ ಅತ್ಯಂತ ಎತ್ತರವಾದ(226 ಮೀ) ಅಣೆಕಟ್ಟೆಯಾಗಿದೆ.
• ಇದು 3402 ಕಿ.ಮೀ. ಉದ್ದವಾದ ಕಾಲುವೆಗಳ ಜಾಲವನ್ನು ಹೊಂದಿದ್ದು, 14.6 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಈ ಯೋಜನೆಯಿಂದ ದೆಹಲಿ, ಹಿಮಾಚಲ ಪ್ರದೇಶಗಳು ಸಹ ನೀರಾವರಿ ಮತ್ತು ಜಲ ವಿದ್ಯುಚ್ಛಕ್ತಿ ಸೌಲಭ್ಯವನ್ನು ಪಡೆದಿವೆ.
• ಇದರ ಜಲಾಶಯವನ್ನು ಗೋವಿಂದ ಸಾಗರವೆಂದು ಹೆಸರಿಡಲಾಗಿದೆ.

(3) ಕೋಸಿ ಯೋಜನೆ


• ಗಂಗಾ ನದಿಯ ಮುಖ್ಯ ಉಪ ನದಿಗಳಲ್ಲಿ ಕೋಸಿ ನದಿಯು ಒಂದಾಗಿದೆ.
• ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಬಿಹಾರದಲ್ಲಿ ಪ್ರವಾಹ ನಿಯಂತ್ರಣ.
• ಕೋಸಿ ನದಿಯನ್ನು ಬಿಹಾರಿನ ‘ಕಣ್ಣೀರಿನ ನದಿ‘ ಎಂದು ಕರೆಯುತ್ತಾರೆ.
• ಭಾರತ ಮತ್ತು ನೇಪಾಳ ಗಡಿಯಲ್ಲಿ ಬರುವ ‘ಹನುಮಾನ ನಗರ’ ಎಂಬಲ್ಲಿ ಕೋಸಿ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ.
• ಈ ಯೋಜನೆಯು ಸುಮಾರು 8.75 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಪಡೆದಿವೆ.
• ಇದರಿಂದ ಉತ್ಪಾದಿಸಲಾಗುವ ವಿದ್ಯುಚ್ಛಕ್ತಿಯಲ್ಲಿ ಶೇ 50 ರಂತೆ ನೇಪಾಳ ಮತ್ತು ಭಾರತ ಹಂಚಿಕೆ ಮಾಡಿಕೊಳ್ಳುತ್ತಿವೆ.

(4) ಹಿರಾಕುಡ್ ಯೋಜನೆ


• ಈ ಯೋಜನೆಯು ಒಡಿಶಾದಲ್ಲಿ ಮಹಾನದಿಗೆ ನಿರ್ಮಿಸಿರುವ ಮೂರು ಅಣೆಕಟ್ಟೆಗಳನ್ನೊಳಗೊಂಡಿದೆ.ಇವುಗಳೆಂದರೆ ಹಿರಾಕುಡ್,ಟಿಕಾರಪಾರ ಹಾಗೂ ನಾರಾಜ್ ಬಳಿಯ ಅಣೆಕಟ್ಟೆಗಳು.
• ಈ ನದಿಯನ್ನು ‘ಒರಿಸ್ಸಾದ ಕಣ್ಣೀರಿನ ನದಿ’ ಎಂದು ಕರೆಯುತ್ತಾರೆ.
• ಹಿರಾಕುಡ್ 4801 ಮೀ. ಉದ್ದವಾಗಿದ್ದು, ಭಾರತದಲ್ಲಿಯೇ ಅತ್ಯಂತ ಉದ್ದವಾದ ಅಣೆಕಟ್ಟೆಯಾಗಿದೆ.
• ಇದು ಒಟ್ಟು 3.69 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿದೆ.
• ಈ ಯೋಜನೆಯಿಂದ ಒಡಿಶಾದ ಕೈಗಾರಿಕೆ,ಕೃಷಿ,ಮೀನುಗಾರಿಕೆ,ನೌಕಾಯಾನ, ಮಣ್ಣಿನ ಸಂರಕ್ಷಣೆ ಮುಂತಾದ ಉದ್ದೇಶಗಳಿಗೆ ನೆರವು ಒದಗಿಸಲಾಗುತ್ತದೆ.

(5) ನಾಗಾರ್ಜುನ ಸಾಗರ ಯೋಜನೆ


• ಇದನ್ನು ಕೃಷ್ಣ ನದಿಗೆ ತೆಲಂಗಾಣದ ನಾಲ್ಗೊಂಡ ಜಿಲ್ಲೆ ಹಾಗೂ ಅಂದ್ರ ಪ್ರದೇಶದ ಗುಂಟೂರು ಜಿಲ್ಲೆಯ ಗಡಿಗಳಲ್ಲಿ ನಿರ್ಮಿಸಲಾಗಿದೆ.
• ಇದು ದೇಶದ ಎರಡನೆಯ ಅತಿ ದೊಡ್ಡ ಜಲಾಶಯವಾಗಿದೆ.
• ಈ ಅಣೆಕಟ್ಟೆಯ ಎರಡೂ ದಂಡೆಗಳಿಂದಲೂ ಕಾಲುವೆಗಳನ್ನು ತೋಡಲಾಗಿದೆ.ಬಲದಂಡೆ ನಾಲೆಯು 349 ಕಿ.ಮೀ ಉದ್ದವಾಗಿದ್ದು ಇದನ್ನು ಜವಾಹರ ಲಾಲ್ ಎಂದು ಕರೆಯಲಾಗಿದೆ.ಇದು 4 ಲಕ್ಷ ಹೆಕ್ಟರ್ ಗಳಿಗೆ ನೀರಾವರಿ ಸೌಲಭ್ಯ ಒದಗಿಸಿದೆ.
• ಎಡದಂಡೇ ನಾಲೆಯು 347 ಕಿ.ಮೀ ಉದ್ದವಾಗಿದ್ದು, ಇದನ್ನು ಲಾಲ್ ಬಹುದ್ದೂರ್ ಕಾಲುವೆಯೆಂದು ಕರೆಯಲಾಗಿದೆ.ಇದು 3 ಲಕ್ಷ ಹೆಕ್ಟರ್ ಗಳಿಗೆ ನೀರಾವರಿ ಸೌಲಭ್ಯ ಒದಗಿಸಿದೆ.
• ಇದು ತೆಲಂಗಾಣ ಮತ್ತು ಅಂದ್ರ ಪ್ರದೇಶಗಳಿಗೆ ಕೃಷಿ ಅಭಿವೃದ್ಧಿ ಮತ್ತು ಜಲ ವಿದ್ಯುಚ್ಛಕ್ತಿ ಉತ್ಪಾದನೆಗೆ ಉಪಯುಕ್ತವಾಗಿದೆ.

(6) ತುಂಗಭದ್ರಾ ಯೋಜನೆ


• ನೀರಾವರಿ ಜಲವಿದ್ಯುಚ್ಛಕ್ತಿ ಉತ್ಪಾದನೆ ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ.
• ಈ ಅಣೆಕಟ್ಟನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿ ಮಲ್ಲಾಪುರ ಎಂಬಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಲಾಗಿದೆ. ಇದರ ಜಲಾಶಯವನ್ನು ‘ಪಂಪ ಸಾಗರ ‘ಎಂದು ಕರೆಯುವರು.
• ಇದು ಆಂಧ್ರ ಪ್ರದೇಶ ಮತ್ತು ಕರ್ನಾಟಕದ 5.5 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದೆ.

(7) ಕೃಷ್ಣ ಮೇಲ್ದಂಡೆ ಯೋಜನೆ


• ಈ ಯೋಜನೆಯು ಕರ್ನಾಟಕದ ದೊಡ್ಡ ಯೋಜನೆಯಾಗಿದೆ.
• ವಿಜಾಪುರ, ಬಾಗಲಕೋಟ, ರಾಯಚೂರ, ಗುಲ್ಬರ್ಗಾ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಹಾಗೂ ಕುಡಿಯುವ ನೀರಿನ ಯೋಜನೆಯಾಗಿದೆ.
• ಇದನ್ನು ಬಿಜಾಪುರ ಜಿಲ್ಲೆಯ ಆಲಮಟ್ಟಿ ಬಳಿ ಕೃಷ್ಣ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗಿದೆ. ಇದರಿಂದ ಲಾಲ ಬಹದ್ದೂರ್ ಶಾಸ್ತ್ರಿ ಜಲಾಶಯ ನಿರ್ಮಿತವಾಗಿದೆ ಹಾಗೂ ನಾರಾಯಣಪುರ ಬಳಿ ಮತ್ತೊಂದು ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಜಲಾಶಯದ ಹೆಸರು ಬಸವ ಸಾಗರ.
• ಇವುಗಳಿಂದ ಒಟ್ಟು 6.47 ಲಕ್ಷ ಹೆಕ್ಟೇರ್ ಭೂಮಿ ನೀರಾವರಿ ಸೌಲಭ್ಯವನ್ನು ಒದಗಿಸಿದೆ

(8) ನರ್ಮದಾ ಕಣಿವೆ ಯೋಜನೆ


• ಈ ಯೋಜನೆಯ ಪ್ರಾರಂಭದಿಂದಲೂ ವಿವಾದಗಳು ಉಂಟಾಗಿದ್ದರಿಂದ 1969 ರಲ್ಲಿ ನರ್ಮದಾ ನದಿ ನೀರಿನ ವಿವಾದದ ಪ್ರಾಧಿಕಾರ ನೇಮಿಸಲಾಯಿತು
• ಇದರಂತೆ ಮಹಾರಾಷ್ಟ್ರ,ಮಧ್ಯ ಪ್ರದೇಶ,ಗುಜರಾತ್ ಗಳಿಗೆ ನರ್ಮದಾ ನೀರನ್ನು ಹಂಚಿಕೆ ಮಾಡಲಾಯಿತು.
• ಈ ಯೋಜನೆಯು ಒಟ್ಟು 30 ದೊಡ್ಡ ಅಣೆಕಟ್ಟುಗಳು, 135 ಸಾಧಾರಣ ಅಣೆಕಟ್ಟುಗಳು ಹಾಗೂ 3000 ಅತಿ ಚಿಕ್ಕ ಅಣೆಕಟ್ಟುಗಳನ್ನು ಹೊಂದಿದೆ.
• ಇವುಗಳಲ್ಲಿ ಸರ್ದಾರ್ ಸರೋವರ ಯೋಜನೆ ಮತ್ತು ಇಂದಿರಾ ಸಾಗರ ಅತಿ ದೊಡ್ಡ ಅಣೆಕಟ್ಟುಗಳಾಗಿವೆ. ಇದಲ್ಲದೆ ಓಂಕಾರೇಶ್ವರ ಯೋಜನೆ,ಮಹೇಶ್ವರ ಯೋಜನೆ,ಮಾನ್ ಯೋಜನೆ,ಜೋ ಬಾಟ್ ಯೋಜನೆ,ಬರ್ಗಿ ವಿಚಲನಾ ಯೋಜನೆ,ರಾಣಿ ಆವಾಂತಿಬಾಯಿ ಸಾಗರ್ ಯೋಜನೆ,ನರ್ಮದಾ ಮೇಲ್ಕಣಿವೆ ಯೋಜನೆ,ಹಾಲೊನ್ ಯೋಜನೆ,ಅಪ್ಪರ್ ಬೇಡಾ ಯೋಜನೆ,ಗೊಯ್ ಕೆಳ ಯೋಜನೆ ಹಾಗೂ ಸುಮಾರು ಏಳು ಜಲ ವಿದ್ಯುತ್ ಯೋಜನೆಗಳನ್ನು ಸಹ ಹೊಂದಿದೆ.
• ಈ ಅಣೆಕಟ್ಟುಗಳಿಂದ ಉತ್ತರ ಗುಜರಾತ, ರಾಜಸ್ತಾನ ಮತ್ತು ಮಹಾರಾಷ್ಟ್ರದ ಕೆಲಭಾಗಗಳಿಗೆ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸೌಲಭ್ಯವನ್ನು ಪಡೆದಿವೆ.

(9) ಚಂಬಲ್ ಯೋಜನೆ


• ಚಂಬಲ್ ನದಿಯು ಯಮುನಾ ನದಿಯ ಮುಖ್ಯ ಉಪನದಿ.
• ಚಂಬಲ್ ಯೋಜನೆಯನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ.ಈ ಮೂರು ಅಣೆಕಟ್ಟುಗಳನ್ನು ರಾಜಸ್ತಾನದಲ್ಲಿ ನಿರ್ಮಿಸಲಾಗಿದೆ.ಅವುಗಳೆಂದರೆ
(1) ಗಾಂಧಿ ಸಾಗರ ಯೋಜನೆ : ಈ ಯೋಜನೆಯು ಮೊದಲ ಹಂತವಾಗಿದ್ದು,ಯಮುನಾ ನದಿಗೆ ಅಡ್ಡಲಾಗಿ ಮಧ್ಯ ಪ್ರದೇಶ ಮತ್ತು ರಾಜಸ್ತಾನದ ಗಡಿಯಲ್ಲಿ ಚೌರಸಘರ್ ಕೋಟೆಯ ಬಳಿಯಲ್ಲಿ 514 ಮೀ ಉದ್ದ ,64 ಮೀ ಎತ್ತರವಾದ ಅಣೆಕಟ್ಟನ್ನು ನಿರ್ಮಿಸಲಾಗಿದೆ.ಇದರಿಂದ ನಿರ್ಮಿತಗೊಂಡ ಜಲಾಶಯವನ್ನು 'ಗಾಂಧಿ ಸಾಗರ'ವೆಂದು ಕರೆಯುತ್ತಾರೆ.
(2) ರಾಣಾ ಪ್ರತಾಪ ಆಣೆಕಟ್ಟು : ಇದು ಚಂಬಲ್ ಯೋಜನೆಯ ಎರಡನೆಯ ಮುಖ್ಯ ಅಣೆಕಟ್ಟಾಗಿದ್ದು,ಇದು ರಾವತ್ ಬಾಟಾದ ಬಳಿಯಲ್ಲಿ ನಿರ್ಮಿತಗೊಂಡಿದೆ.
(3)ಜವಾಹರ್ ಸಾಗರ್ ಆಣೆಕಟ್ಟು:ಈ ಅಣೆಕಟ್ಟನ್ನು ಯಮುನಾ ನದಿಗೆ ಕಟ್ಟಲಾಗಿದೆ.ಇದು ರಾಜಸ್ತಾನ ಮತ್ತು ಮಧ್ಯ ಪ್ರದೇಶದಲ್ಲಿ 4.4 ಲಕ್ಷ ಹೆಕ್ಟರ್ ಪ್ರದೇಶಕ್ಕೆ ನೀರಾವರಿಯನ್ನು ಒದಗಿಸಿದೆ.