ಅಂಗಾಂಶಗಳು-Continue…
 
ನೆನಪಿಡಬೇಕಾದ ಅಂಶಗಳು
• ಸಸ್ಯದ ಉದ್ದ ಮತ್ತು ಗಾತ್ರವನ್ನು ಹೆಚ್ಚಿಸುವ ಅಂಗಾಂಶ – ವರ್ಧನಾ ಅಂಗಾಂಶ
• ವರ್ಧನ ಅಂಗಾಂಶಗಳ ಪ್ರೌಡತೆಯಿಂದ ಉಂಟಾಗುವ ಅಂಗಾಂಶ - ಶಾಶ್ವತ ಅಂಗಾಂಶ
• ಸಸ್ಯದ ಮೃದುಭಾಗಗಳಲ್ಲಿ ಕಂಡುಬರುವ ಅಂಗಾಂಶ - ಪ್ಯಾರಂಕೈಮಾ.
• ಪ್ಯಾರಂ ಕೈಮಾಗೆ ಆಧಾರ ಕೊಡುವ ಅಂಗಾಂಶ – ಕೋಲಂಕೈಮಾ.
• ಸ್ಕ್ಲೀರಾಯಿಡ್ ಗಳು ಎಂದು ಕರೆಯಲ್ಪಡುವ ಅಂಗಾಂಶ - ಸ್ಕ್ಲೀರಂ ಕೈಮಾ.
• ಕೋಶರಸ ಮತ್ತು ನ್ಯೂಕ್ಲಿಯಸ್‍ನ್ನು ಕಳೆದಿಕೊಂಡಿರುವ ಅಂಗಾಂಶ - ಕೋಲಂ ಕೈಮಾ.
• ಪೆಕ್ಟಿನ್‍ನ ಕೋಶ ಭಿತ್ತಿಯನ್ನು ಹೊಂದಿರುವ ಅಂಗಾಂಶ - ಸ್ಕ್ಲೀರಂ ಕೈಮಾ.
• ಸಸ್ಯಕ್ಕೆ ಬೇಕಾದ ದೃಢತೆಯನ್ನು ಕೊಡುವ ಅಂಗಾಂಶ - ಸ್ಕ್ಲೀರಂ ಕೈಮಾ.
• ಒಂದಕ್ಕಿಂತ ಹೆಚ್ಚಿನ ಬಗೆಯ ಜೀವಂತ ಮತ್ತು ನಿರ್ಜೀವ ಕೋಶಗಳಿಂದಾದ ಅಂಗಾಂಶ - ಸಂಕೀರ್ಣ ಶಾಶ್ವತ ಅಂಗಾಂಶ.
• ಎಲೆಯ ಹಸಿರು ಭಾಗದಲಲಿರುವ ಪ್ಯಾರಂಕೈಮಾದ ಕಾರ್ಯ ಮತು ದ್ಯುತಿಸಂಶ್ಲೇಷಣೆ, ಬೀಜಗಳ ಗಟ್ಟಿಭಾಗ, ಕಾಯಿಗಳ ಗಟ್ಟಿ ಕವಚದಲ್ಲಿರುವ ಅಂಗಾಂಶ - ಸ್ಕ್ಲೀರಂ ಕೈಮಾ.
• ಕ್ಸೈಲಂ ಅಂಗಾಂಶವು ಬೇರಿನಿಂದ ನೀರನ್ನು ಹೀರುತ್ತದೆ.
• ನಾರುಗಳಲ್ಲಿರುವ ಅಂಗಾಂಶ - ಸ್ಕ್ಲೀರಂ ಕೈಮಾ.
• ಸಸ್ಯದ ವಾಹಕ ಅಂಗಾಂಶಗಲು – ಕ್ಸೈಲಂ ಮತ್ತು ಫ್ಲೋಯಂ.
• ಆಹಾರವನ್ನು ಸಂಗ್ರಹಿಸುವ ಕೋಶಗಳು - ಪ್ಯಾರಂ ಕೈಮಾ.
• ಜರಡಿ ನಳಿಕೆಯೊಂದಿಗೆ ನಿಕಟವಾಗಿ ಹೊಂದಿಕೊಂಡಿರುವ ಜೀವಕೋಶಗಳು - ಸಂಗಾತಿ ಜೀವಕೋಶ.
• ಕದಳ ಸಸ್ಯಗಳಲ್ಲಿ ನಾಲ ಕೂರ್ಚಗಳು ವರ್ತುಲ ಆಕಾರವಾಗಿದೆ.
• ಆಹಾರವು ಫ್ಲೋಯಂನ ಜರಡಿನಳಿಕೆಗಳ ಮೂಲಕ ಹಾದುಹೋಗುತ್ತದೆ.
• ಆಹಾರ ಸಾಗಾಣಿಕೆಯನ್ನು ನಿಯಂತ್ರಿಸುವ ಜೀವಕೋಶಗಳು - ಸಂಗಾತಿ ಜೀವಕೋಶ.
• ಸಸ್ಯದ ಎಲ್ಲಾ ಭಾಗಗಳನ್ನು ಆವರಿಸಿರುವ ಹೊರ ಅಂಗಾಂಶ - ಹೊರಧರ್ಮ.
• ಆಹಾರ ವಾಹಕ ಅಂಗಾಂಶ - ಫ್ಲೋಯಂ.
• ಹೊರಧರ್ಮದ ಹೊರ ಮೇಲ್ಮೈನಲ್ಲಿರುವ ತೆಳುವಾದ ಪದರ – ಕ್ಯೂಟಿಕಲ್.
• ಜಲ ಸಸ್ಯಗಳಲ್ಲಿ ಕ್ಯೂಟಿಕಲ್ ಕರ್ಯ - ಸಸ್ಯ ಕೊಳೆಯದಂತೆ ತಡೆಯುತ್ತದೆ.
• ಪತ್ರ ರಂಧ್ರಗಳನ್ನು ರಕ್ಷಿಸಲ್ಪಟ್ಟಿರುವ ಜೀವಕೋಶ – ಕಾವಲು ಜೀವಕೋಶ.
• ನಾರುಗಳು ಸಸ್ಯದ ಅಂಗಗಳಿಗೆ ದೃಢತೆ ಕೊಡುತ್ತದೆ.
• ಮಣ್ಣಿನಿಂದ ನೀರನ್ನು ಹೀರುವ ಬೇರಿನ ಭಾಗ - ರೋಮಬೇರು.
• ಪತ್ರ ರಂಧ್ರಗಳನ್ನು ಮುಚ್ಚಲು ತೆರೆಯಲು ಸಹಾಯ ಮಾಡುವ ರಚನೆ - ಕಾವಲು ಜೀವಕೋಶ.