ಭಾರತ ನದಿ ವ್ಯವಸ್ಥೆ (Indian River System)
 
ಭಾರತವೂ ಪ್ರಪಂಚದಲ್ಲಿ ಅತಿ ಹೆಚ್ಚು ಜಲ ಸಂಪತ್ತನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.ಇದು ಪ್ರಪಂಚದ ಒಟ್ಟು ಜಲ ಸಂಪನ್ಮೂಲದ ಶೇ.4 ರಷ್ಟನ್ನು ಹೊಂದಿದೆ.
ಹಿಮಾಯಲಯದ ಅಥವಾ ಉತ್ತರ ಭಾರತದ ನದಿಗಳು.
ಹಿಮಾಲಯದ ನದಿಗಳು ಮಹಾಹಿಮಾಲಯದಾಚೆ ಉಗಮ ಹೊಂದಿ, ಹಿಮಾಲಯ ಪರ್ವತಗಳನ್ನು ಕೊರೆದು, ಆಳವಾದ ದುರ್ಗಮ ಕಂದರಗಳ ಮೂಲಕ ಭಾರತವನ್ನು ಪ್ರವೇಶಿಸುವ ಗತಕಾಲಿಕ ನದಿ ವ್ಯವಸ್ಥೆಗೆ ನಿದರ್ಶನವಾಗಿರುವ ನಿರಂತರ ನದಿಗಳಾಗಿವೆ.
1.ಸಿಂಧೂ ನದಿ ವ್ಯವಸ್ಥೆ
• ಸಿಂಧೂ ನದಿ ಉತ್ತರ ಭಾರತದಲ್ಲಿ ಹರಿಯುವ ಒಂದು ಪ್ರಮುಖ ನದಿ.
• ಸಿಂಧೂ ನದಿಯನ್ನು ಟಿಬೆಟ್ಟಿನಲ್ಲಿ ಮತ್ತು ಸಂಸ್ಕೃತದಲ್ಲಿ ಸಿಂಧು ಸಿಂಧಿ ಸಿಂಧು ಅಥವಾ ಮೆಹರಾನ್ ಎಂದು ಕರೆಲಾಗುತ್ತದೆ.
• ಇದು ದಕ್ಷಿಣ ಏಷ್ಯಾದಲ್ಲಿ ದೊಡ್ಡ ಟ್ರಾನ್ಸ್-ಹಿಮಾಲಯನ್ ನದಿ. ಈ ನದಿ 1,800 ಮೈಲಿ (2,900 ಕಿ.ಮೀ.) ಉದ್ದವಿದ್ದು, ಅತೀ ಉದ್ದದ ನದಿಗಳಲ್ಲಿ ಒಂದಾಗಿದೆ. ಇದರ ಒಟ್ಟು ಜಲಾನಯನ ಪ್ರದೇಶ 5,96,800 ಚದರ ಕಿ.ಮಿ ಇದೆ. ಇದರಲ್ಲಿ 1,17,864 ಚ.ಕಿ.ಮೀ ಪ್ರದೇಶವೂ ಮಾತ್ರ ಭಾರತದಲ್ಲಿದೆ.
• ಭಾರತದಲ್ಲಿ ಸಿಂಧೂ ನದಿಯ ಮುಖ್ಯ ಉಪನದಿಗಳು ಝೀಲಂ, ಚೆನಾಬ್ ರವಿ, ಬಿಯಾಸ್, ಸಟ್ಲಜ್.
• ಸಿಂಧೂ ನದಿ ವ್ಯವಸ್ಥೆಯ ಪ್ರಮುಖ ನದಿಗಳು ಹಿಮದಿಂದ ಪೂರ್ಣವಾಗುತ್ತವೆ.ಹರಿವು ವರ್ಷದ ವಿವಿಧ ಸಮಯಗಳಲ್ಲಿ ಬದಲಾಗುತ್ತದೆ: ನದೀ ಹರಿವು ಚಳಿಗಾಲದ ತಿಂಗಳುಗಳಲ್ಲಿ (ಫೆಬ್ರವರಿ-ಡಿಸೆಂಬರ್) ಅವಧಿಯಲ್ಲಿ ಕನಿಷ್ಠ ಆಗಿರುತ್ತದೆ, ವಸಂತಕಾಲದಲ್ಲಿ ಮತ್ತು ಬೇಸಿಗೆಯ ಆರಂಭದಲ್ಲಿ (ಜೂನ್ ಮಾರ್ಚ್) ನೀರಿನ ಹರಿವಿನಲ್ಲಿ ಏರಿಕೆ ಇರುತ್ತದೆ;
2. ಗಂಗಾ ನದಿ ವ್ಯವಸ್ಥೆ
• ಗಂಗಾ ನದಿಯು ಭಾರತದ ವಾದಿ ವ್ಯಹಗಳಲ್ಲಿ ಅತಿ ದೊಡ್ಡದು,ಅತಿ ಹೆಚ್ಚ್ಚು ಉದ್ದವಾದುದು,ಪವಿತ್ರವಾದುದು, ಹಾಗೂ ದೇಶದ ಅತಿ ಮುಖ್ಯ ನದಿಯಾಗಿದೆ.
• ಇದರ ಜಲನಯನ ಕ್ಷೇತ್ರವು ದೇಶದ ಒಟ್ಟು ಕ್ಷೇತ್ರದ ಸುಮಾರೂ ೧/೪ ಭೂ ಪ್ರದೇಶವನ್ನು ಆವರಿಸಿದೆ.
• ಭಾರತದಲ್ಲಿ ಇದು ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ, ಉತ್ತರಾಖಂಡ್, ಜಾರ್ಖಂಡ್, ಹರಿಯಾಣ, ಛತ್ತೀಸ್ಗಡ, ಹಿಮಾಚಲ ಪ್ರದೇಶ ಮತ್ತು ದೆಹಲಿ ಕೇಂದ್ರಾಡಳಿತ ಪ್ರದೇಶದಿಂದ ರಾಜ್ಯಗಳ 8,61,452 ಚ.ಕಿ.ಮೀ. ಜಲಾನಯನ ಪ್ರದೇಶವನ್ನು ಆವರಿಸಿದೆ.
• ಗಂಗಾನದಿ 7,010 ಮೀ ಎತ್ತರದಲ್ಲಿ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಹಿಮಾಲಯದ ಗಂಗೋತ್ರಿ ಹಿಮನದಿಯಲ್ಲಿ ಹುಟ್ಟುತ್ತದೆ. .
• ಗಂಗಾ ನದಿಯನ್ನು ಸೇರುವ ಪ್ರಧಾನ ಉಪನದಿಗಳು:
• ಬಲದಂಡೆಯಿಂದ ಯಮುನಾ ಚಂಬಲ್,ಕೆನ್,ಟೋನ್,ಸೊನ್ ಮತ್ತು ದಾಮೋದರ
• ಎಡದಂಡೆದಿಂದ ರಾಮಗಂಗಾ ಘಾಗ್ರಾ, ಗಂಢಕ್,ಭಾಘಮತಿ, ಕೋಸಿ
• ಅಂತಿಮವಾಗಿ ಗಂಗಾ ನದಿಯು ಭಾಂಗ್ಲಾ ದೇಶದ ನೌಖಾಲಿ ಎಂಬಲ್ಲಿ ಬಂಗಾಳ ಕೊಲ್ಲಿಯ ಗಂಗಾ ಸಾಗರವನ್ನು ಸೇರುವುದು.
3.ಬ್ರಹ್ಮಪುತ್ರ ನದಿ ವ್ಯವಸ್ಥೆ
• ಬ್ರಹ್ಮಪುತ್ರ ಜಲಾನಯನ ಪ್ರದೇಶವು ಟಿಬೆಟ್ (ಚೀನಾ), ಭೂತಾನ್, ಭಾರತ ಮತ್ತು ಬಾಂಗ್ಲಾದೇಶ ರಾಷ್ಟ್ರಗಳಲ್ಲಿ ಒಟ್ಟು 5,80,000 ಚ.ಕಿ.ಮೀ.. ಪ್ರದೇಶಗಳಲ್ಲಿ ಹರಡಿಕೊಂಡಿದೆ.
• ಭಾರತದಲ್ಲಿ ಇದು 885 ಕಿ.ಮೀ ದೂರ ಹರಿದು, 2,85,300 ಚ.ಕಿ.ಮೀ ಜಲನಯನ ಪ್ರದೇಶವನ್ನು ಹೊಂದಿದೆ.
• ಭಾರತದಲ್ಲಿ ಇದು ಅರುಣಾಚಲ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಹರಡಿಕೊಂಡಿದೆ.
ಕೈಲಾಶ್ ಪರ್ವತ ಶ್ರೇಣಿಯಲ್ಲಿರುವ ಹಿಮಾಲಯದ 5.150 ಮೀ ಎತ್ತರದ ಕೊಂಗಯುತ್ಸು ಎಂಬ ಸರೋವರದ ದಕ್ಷಿಣದಲ್ಲಿರುವ ಚೆಮಯಾಂಗ್ ಡಂಗ್ ನಲ್ಲಿ ಹುಟ್ಟುತ್ತದೆ.
• ಬಲದಿಂದ ಸೇರುವ ಪ್ರಧಾನ ಉಪನದಿಗಳು ಲೋಹಿತ್, ದಿಬಂಗ್, ಸಬನ್ಸರಿ, ಜಯಬರಾಲಿ, ಧನಶ್ರೀ,ಮಾನಸ್, ತೋರ್ಸಾ ಮತ್ತು ತೀಸ್ತಾ .
• ಎಡದಿಂದ ಬುರಿದಿಹಿಂಗ್, ದೇಸಾಂಗ್, ದಿಖೋವ್, ಧನಶ್ರೀ ಮತ್ತು ಕೋಪಿಲಿ ಬ್ರಹ್ಮಪುತ್ರ ನದಿಯನ್ನ ಸೇರುತ್ತವೆ.
ಬ್ರಹ್ಮಪುತ್ರ ನದಿಯು ಪ್ರಪಂಚದ ಅತಿ ದೊಡ್ಡ ನದಿ ದ್ವೀಪ ಮಜೂಲಿಯನ್ನು ಅಸ್ಸಾಂ ನಲ್ಲಿ ಸೃಷ್ಟಿಸಿದೆ.
ಪೂರ್ವಕ್ಕೆ ಹರಿಯುವ ನದಿಗಳು
• ಇವು ಕೇಂದ್ರ ಉನ್ನತ ಪ್ರದೇಶ ಅಥವಾ ಪಶ್ಚಿಮ ಘಟ್ಟಗಳಲ್ಲಿ ಉಗಮ ಹೊಂದಿ ಪೂರ್ವಾಭಿಮುಖವಾಗಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತವೆ.
• ಪೂರ್ವಕ್ಕೆ ಹರಿಯುವ ನದಿಗಳಲ್ಲಿ ನಾಲ್ಕು ಪ್ರಧಾನ ವ್ಯವಸ್ಥೆಗಳಿವೆ.ಅವುಗಳೆಂದರೆ ಮಹಾನದಿ,ಗೋದಾವರಿ,ಕೃಷ್ಣಾ ಮತ್ತು ಕಾವೇರಿ.
1.ಮಹಾನದಿ:
• ಮಹಾನದಿಯು ಛತ್ತೀಸಘರ್ ನ ಜಗದಲ್ ಪುರ್ ಜಿಲ್ಲೆಯ ಸಿಹಾವಾ ಎಂಬಲ್ಲಿ ಸಮುದ್ರ ಮಟ್ಟದಿಂದ 442ಮೀ ಎತ್ತರದಲ್ಲಿ ಉಗಮ ಹೊಂದುತ್ತದೆ
• ಒಟ್ಟು 890 ಕಿ.ಮೀ ಹರಿದು ಕಟಕ್ ಬಳಿ ಬಂಗಾಳ ಕೊಲ್ಲಿಯನ್ನು ಸೇರುವುದು.
• ಜಲಾನಯನ ಕ್ಷೇತ್ರ ಚ.ಮೀ.-1,92,300
• ಉಪನದಿಗಳು ಇಬ್, ಮಂಡ್,ಹಾಸ್ದೋ ಶಿಯೋನಾಥ್,ಇಂದ್ರ ಮತ್ತು ಟೆಲ್.
2. ಗೋದಾವರಿ
• ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಿಯಂಬಕ್ ಗ್ರಾಮದ ಬಳಿ ಉಗಮ.
• ಒಟ್ಟು 1465 ಕಿ.ಮೀ ಹರಿದು ಕಾಕಿನಾಡದ ಬಳಿ ಬಂಗಾಳ ಕೊಲ್ಲಿಯನ್ನು ಸೇರುವುದು.
• ಜಲಾನಯನ ಕ್ಷೇತ್ರ ಚ.ಮೀ.-3,23,000
• ಇದು ಪ್ರಸ್ತಭೂಮಿಯ ಅತಿ ಉದ್ದವಾದ ಮತ್ತು ದೊಡ್ಡದಾದ ನದಿಯಾಗಿದೆ.
• ಉಪನದಿಗಳು:ಮಾಂಜ್ರಾ,ಪೆನು ಗಂಗಾ,ಪ್ರಾಣ ಹಿತ,ಇಂದ್ರಾವತಿ ಮತ್ತು ಸಬರಿ.
3. ಕೃಷ್ಣಾ
• ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉಗಮ
• ಒಟ್ಟು 1400 ಕಿ.ಮೀ ಹರಿದು ನಿಜಾಂ ಪಟ್ಟಣ ಬಳಿ ಬಂಗಾಳ ಕೊಲ್ಲಿಯನ್ನು ಸೇರುವುದು.
• ಜಲಾನಯನ ಕ್ಷೇತ್ರ ಚ.ಮೀ.-3,71,000
• ಉಪನದಿಗಳು:ಕೊಯ್ನಾ,ಯೇರ್ಲಾ,ವರ್ಣ ಪಂಚಗಂಗಾ,ಧೂದ್ ಗಂಗಾ,ಘಟಪ್ರಭಾ,ಮಲಪ್ರಭಾ,ತುಂಗಭದ್ರಾ
4. ಕಾವೇರಿ
• ಕರ್ನಾಟಕದ ತಲ ಕಾವೇರಿಯಲ್ಲಿ ಉಗಮ.
• ಒಟ್ಟು 1400 ಕಿ.ಮೀ ಹರಿದು ಕಾವೇರಿ ಪಟ್ಟಣದ ಬಳಿ ಬಂಗಾಳ ಕೊಲ್ಲಿಯನ್ನು ಸೇರುವುದು.
• ಜಲಾನಯನ ಕ್ಷೇತ್ರ ಚ.ಮೀ.-94,400
• ಇದು 3 ದ್ವೀಪಗಳನ್ನು ಸೃಷ್ಟಿಸಿದೆ, ಶಿವನ ಸಮುದ್ರ, ಶ್ರೀ ರಂಗಂ, ಶ್ರೀ ರಂಗ ಪಟ್ಟಣ
ಪಶ್ಚಿಮಕ್ಕೆ ಹರಿಯುವ ನದಿಗಳು
ಭಾರತದ ಪರ್ಯಾಯ ಪ್ರಸ್ಥಭೂಮಿಯಲ್ಲಿ ಹುಟ್ಟಿ ಪಶ್ಚಿಮದ ಕಡೆಗೆ ಹರಿದು ಅರಬ್ಬೀ ಸಮುದ್ರ ಸೇರುತ್ತವೆ.
ಇವುಗಳಲ್ಲಿ ಎರಡು ನದಿ ವ್ಯವಸ್ಥೆಗಳಿವೆ.
1. ನರ್ಮದಾ ನದಿ ವ್ಯವಸ್ಥೆ
• ಇದು ಅಮರಕಂಟಕ ಪ್ರಸ್ತಭೂಮಿಯ ಮೈಕಲಾ ಸರಣಿಯಲ್ಲಿ ಸಮುದ್ರಮಟ್ಟದಿಂದ 1057 ಮೀ ಎತ್ತರ ಉಗಮ ಹೊಂದುವುದು.
• ಇದು ಕಪಿಲ ಧಾರಾ ಮತ್ತು ದುವಂಧರ್ ಜಲಪಾತವನ್ನು ನಿರ್ಮಿಸಿದೆ.
• ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮೂಲಕ ಹರಿಯುವ ಇದರ ಒಟ್ಟು ಉದ್ದ 1312 ಕಿಲೋಮೀಟರ್ (815 ಮೈಲಿ) ಆಗುವುದು.
• ಉಪನದಿಗಳು:ಬೈಯರ್,ಶೇರ್ ಧೂದಿ,ಶಕ್ಕರ ತಾವ,ಬಾರ್ನಾ,ಕೋಲಾರ್
• ಇದು ಕೊನೆಗೆ ಗುಜರಾತ್`ನ ಭರೂಚ್ ಜಿಲ್ಲೆಯಲ್ಲಿ ಅರೇಬಿಯನ್ ಸಮುದ್ರಕ್ಕೆ ಪ್ರವೇಶಿಸುತ್ತದೆ.
2. ತಪತಿ ನದಿ ವ್ಯವಸ್ಥೆ
• ಇದರ ಮೂಲ ಹೆಸರು ತಾಪಿ ನದಿ .
• ಭಾರತ ಜಂಬೂದ್ವೀಪದ ಮುಖ್ಯ ನದಿಗಳಲ್ಲಿ ಒಂದಾದ ತಾಪ್ತಿ ನದಿಯ ಉದ್ದ ಸುಮಾರು 724 ಕಿ.ಮೀ.ಗಳು.
• ತಾಪ್ತಿ ನದಿಯು ಮಧ್ಯ ಪ್ರದೇಶ ರಾಜ್ಯದ ದಕ್ಷಿಣ ಭಾಗದ ಸಾತ್ಪುರ ಪರ್ವತಗಳಲ್ಲಿ ಉಗಮಿಸುವುದು.
• ತಾಪ್ತಿ ನದಿಯ ಜಲಾನಯನ ಪ್ರದೇಶಗಳು ಮಧ್ಯ ಪ್ರದೇಶದ ನಿಮಾರ್ ಪ್ರದೇಶ, ಮಹಾರಾಷ್ಟ್ರದ ವಿದರ್ಭ ಮತ್ತು ಕಾಂದೇಶ್ ಹಾಗೂ ದಕ್ಷಿಣ ಗುಜರಾತ್. ತಾಪ್ತಿ ನದಿಯು ಸೂರತ್ ಬಳಿ ಖಂಭಾಟ್ ಕೊಲ್ಲಿಯನ್ನು ಸೇರುತ್ತದೆ.
• ಪೂರ್ಣಾ, ಗಿರ್ನಾ ಮತ್ತು ಪನ್ಜಾರಾ ನದಿಗಳು ತಾಪ್ತಿ ನದಿಯ ಮುಖ್ಯ ಉಪನದಿಗಳು.
• ಒಟ್ಟು 724 ಕಿ ಮೀ ದೂರ ಹರಿದು ಸೂರತ್ ಬಳಿ ಸುವಲ್ಲಿ ಎಂಬಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ.