ವಿದ್ಯಾಸಿರಿ ಯೋಜನೆ:
ಸರ್ಕಾರಿ, ಸರ್ಕಾರಿ ಅನುದಾನಿತ ಹಾಸ್ಟಲ್ ಮತ್ತು ವಸತಿ ಶಾಲೆಯಲ್ಲಿ ಪ್ರವೇಶ ದೊರೆಯದ ಮೆಟ್ರಿಕ್ ನಂತರದ ಕೋರ್ಸಗಳಲ್ಲಿ ಅಭ್ಯಾಸ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಊಟ ಹಾಗೂ ವಸತಿ ವೆಚ್ಚಕ್ಕಾಗಿ ತಿಂಗಳಿಗೆ 1500 ರೂಪಾಯಿಯಂತೆ ವರ್ಷದಲ್ಲಿ 10 ತಿಂಗಳಿಗೆ 15000 ಸಾವಿರ ರೂಪಾಯಿಯನ್ನು ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡುವ ಯೋಜನೆಯೆ ವಿದ್ಯಾಸಿರಿ ಯೋಜನೆ. 2013-14 ನೇ ಸಾಲಿನಲ್ಲಿ ಆರಂಭವಾದಾಗ 32 ಸಾವಿರ ವಿದ್ಯಾರ್ಥಿಗಳಿಗೆ ನೀಡುತಿದ್ದ ವಿದ್ಯಾರ್ಥಿ ಯೋಜನೆಯನ್ನು ಪ್ರಸ್ತುತ 50 ಸಾವಿರ ವಿದ್ಯಾರ್ಥಿಗಳಿಗೆ ಏರಿಸಲಾಗಿದೆ. ಈ ಯೋಜನೆಯ ಫಲಾನುಭವಿಗಳಾಗಲು ಬೇಕಾಗಿರುವ ಅರ್ಹತೆಗಳು ಗ್ರಾಮೀಣ ಭಾಗದವರಾಗಿರಬೇಕು ಮೇಟ್ರಿಕ್ ನಂತರದ ಕೋರ್ಸಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು ಮತ್ತು ಸರ್ಕಾರಿ, ಸರ್ಕಾರಿ ಅನುದಾನಿತ ಹಾಸ್ಟಲ್ ಮತ್ತು ವಸತಿ ಶಾಲೆಯಲ್ಲಿ ಪ್ರವೇಶ ತೆಗೆದುಕೊಂಡಿರಬಾರದು ಪ್ರವರ್ಗ 1 ವಿಭಾಗದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ವರಮಾನ 2.5 ಲಕ್ಷ ಮತ್ತು 2ಎ, 3ಎ,ಮತ್ತು 3ಬಿ ವರ್ಗದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ವರಮಾನ 1 ಲಕ್ಷ ಮೀರಿರಬಾರದು. ಒಂದು ಕುಟುಂಬದ ಇಬ್ಬರಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ.