ಬೆರಳಚ್ಚು ತಂತ್ರಜ್ಞಾನ(DNA finger printing)

 

ಬೆರಳಚ್ಚು ತಂತ್ರಜ್ಞಾನ


• ಒಂದು ಪ್ರಭೇದದ ಜೀವಿಗಳ ನಡುವೆ ಇರುವ ತಳಿ ಸಂಭಂದ ಸಾಮ್ಯತೆಗಳನ್ನು ಮತ್ತು ಜೀವಿಗಳನ್ನು ಗುರುತಿಸಲು ಇದು ಸಹಕಾರಿಯಾಗಿದೆ
• ಈ ವಿಧಾನವನ್ನು ಅಪರಾಧ ತನಿಖೆ ವಿಭಾಗದಲ್ಲಿ ಬಳಸಲಾಗುತ್ತಿದೆ.
• ಅತ್ಯಾಚಾರಿಗಳನ್ನು ಕಂಡುಹಿಡಿಯಲು, ಕೊಲೆಯಾದ ವ್ಯಕ್ತಿಯನ್ನು ,ಮಗುವಿನ ನಿಜವಾದ ತಂದೆ ತಾಯಿಗಳನ್ನು ಕಂಡುಹಿಡಿಯಲು ಈ ತಂತ್ರಜ್ಞಾನವನ್ನು ಬಳಸುತ್ತಾರೆ .
• ಈ ವಿಧಾನವನ್ನು ಕಂಡುಹಿಡಿದವರು ಅಲೆಕ್ ಜೆಫರಿ ಮತ್ತು ಸಂಗಡಿಗರು.

ಅಂಗಾಂಶ ಕೃಷಿ


• ಅಂಗಾಂಶ ಕೃಷಿ ಎಂಬ ತಂತ್ರಜ್ಞಾನ ಅತ್ಯಂತ ಯಶಸ್ವಿಯಾಗಿರುವುದು ಸಸ್ಯಗಳಲ್ಲಿ.
• ಅಂಗಾಂಶ ಕೃಷಿ ಎಂದರೆ ಸಸ್ಯದ ಕತ್ತರಿಸಿದ ಅಂಗ, ಅಂಗಾಂಶ ಅಥವಾ ಜೇವಕೋಶಗಳನ್ನು ಸೂಕ್ತ ಪೋಷಕ ಮಾಧ್ಯಮದ ಸಹಾಯದಿಂದ ನಿಯಂತ್ರಿತ ಸನ್ನಿವೇಶದಲ್ಲಿ ಸಸ್ಯಗಳನ್ನು ಸುಸ್ತಿಸುವ ವಿಧಾನಕ್ಕೆ ಅಂಗಾಂಶ ಕೃಷಿ ಎನ್ನುವರು.
• ಈ ತಂತ್ರಜ್ಞಾನವನ್ನು ಕಂಡು ಹಿಡಿದದ್ದು ಹೆಬರ್ ಲ್ಯಾಂಡ್ ಎಂಬ ವಿಜ್ಹ್ನಾನಿ.

ಅಂಗಾಶ ಕೃಷಿಯ ಅನ್ವಯಗಳು


1. ಈ ಆಧುನಿಕ ತಂತ್ರಜ್ಞಾನದಿಂದ ರೋಗ ನಿರೋಧಕ ಮತ್ತು ಹೆಚ್ಚು ಇಳುವರಿ ನೀಡುವ ಸಸ್ಯಗಳನ್ನು ಪಡೆಯಬಹುದು.
2. ಅತಿ ಕಡಿಮೆ ಸ್ಥಳದಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಲಕ್ಷಾಂತರ ಸಸ್ಯಗಳನ್ನು ಅಭಿವೃದ್ಧಿ ಪಡಿಸಬಹುದು.
3. ಜೀವ ದ್ರವ್ಯ ಸಂಕರಣದ ಮೂಲಕ ವಿವಿಧ ಜಾತಿಯ ಸಸ್ಯ ಜೀವ ಕೋಶಗಳನ್ನು ಬೆಸೆದು ಹೊಸ ಜಾತಿಯ ಸಸ್ಯಗಳನ್ನು ಪಡೆಯಬಹುದು.
4. ಅಳಿವಿನ ಅಂಚಿನಲ್ಲಿರುವ ಅನೇಕ ಸಸ್ಯಗಳನ್ನು ಈ ವಿಧಾನದ ಮೂಲಕ ಉಳಿಸಿ ಅವುಗಳನ್ನು ಮುಂದೂವರೆಸಬಹುದು.