ಬ್ರಿಟಿಷ್ ಪ್ರಮುಖ ಕಾಯ್ದೆಗಳು

 

* ಭಾರತದಲ್ಲಿ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು 1599 ರಲ್ಲಿ ‘ಈಸ್ಟ್ ಇಂಡಿಯಾ ಕಂಪನಿ’ ಸ್ಥಾಪಿಸುವ ಮೂಲಕ ಭಾರತದ ರಾಜಕೀಯದಲ್ಲಿ ಪ್ರವೇಶ ಮಾಡಿದರು.
* 1600 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಬ್ರಿಟಿಷ್ ರಾಣಿಯ ಅನುಮತಿ ಪಡೆಯಿತು.
* ಭಾರತದಲ್ಲಿ ಬ್ರಿಟಿಷರು 1857 ರಿಂದ 1947 ರ ಅಗಸ್ಟ್ 15 ರವರೆಗೆ ನೇರ ಆಳ್ವಿಕೆ ನಡೆಸಿದರು.

1. 1773 ರ ರೆಗ್ಯೂಲೇಟಿಂಗ್ ಕಾಯ್ದೆ :


* ಗವರ್ನರ್ ಜನರಲ್ ನೇಮಕ, ಮೊದಲ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ (ಬೆಂಗಾಲ್)
* ಮೊದಲ ಬಾರಿಗೆ ಕಲ್ಕತ್ತಾದಲ್ಲಿ ಸುಪ್ರಿಂಕೋರ್ಟ 1774 ರಲ್ಲಿ ಸ್ಥಾಪಿಸಲಾಯಿತು. ಎಲಿಜಾ ಇಂಪೆ ಮೊದಲ ಮುಖ್ಯ ನ್ಯಾಯಾಧೀಶರು. ಒಬ್ಬ ಮುಖ್ಯ ನ್ಯಾಯಾಧೀಶ, ಮೂರು ಜನ ಅಧೀನ ನ್ಯಾಯಾಧೀಶರಿದ್ದರು.
* ಇದು ಭಾರತ ರಾಜ್ಯಾಂಗದ ಅಭಿವೃದ್ದಿಯ ದೃಷ್ಟಿಯಿಂದ ಮಾಡಿದ ಮೊದಲ ಕಾಯ್ದೆ.

2. 1784 ರ ಪಿಟ್ಸ್ ಇಂಡಿಯಾ ಕಾಯ್ದೆ :


* ಬ್ರಿಟಿಷ್ ಪ್ರಧಾನಿ ‘ವಿಲಿಯಂ ಪಿಟ್ಸ್’ ಹೆಸರಿನಿಂದಲೇ ಈ ಕಾಯ್ದೆಯನ್ನು ಕರೆಯಲಾಗುತ್ತದೆ. ಈ ಕಾಯ್ದೆ ದ್ವಿಸರ್ಕಾರ ಪದ್ದತಿಗೆ ಅವಕಾಶ ನೀಡಿತು.
* ಭಾರತದ ಆಡಳಿತ ವ್ಯವಸ್ಥೆಯು ನೇರವಾಗಿ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು.
* ಜಂಟಿ ಆಡಳಿತ ವಿಧಾನದ ಪರಿಚಯದ ಜೊತೆಗೆ ಈಸ್ಟ್ ಇಂಡಿಯಾ ಕಂಪನಿಯ ವಾಣಿಜ್ಯ ಮತ್ತು ರಾಜಕೀಯ ಚಟುವಟಿಕೆಗಳನ್ನು ಪ್ರತ್ಯೇಕಿಸಿತು.

3. 1813 ರ ಚಾರ್ಟರ್ ಕಾಯ್ದೆ :


*ಇದು ಕ್ರಿಶ್ಚಿಯನ್ ಮಿಷಿನರಿಗಳಿಗೆ ತಮ್ಮ ಧರ್ಮದ ಬಗ್ಗೆ ಭೋದಿಸಲು ಅನುಮತಿ ಕೊಟ್ಟಿತು.
* 1 ಲಕ್ಷ ರೂಪಾಯಿಯನ್ನು ಪ್ರತಿವರ್ಷವು ಮೀಸಲಿಟ್ಟಿದ್ದರು. (ಶಿಕ್ಷಣ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗೆ)

4. 1833 ರ ಚಾರ್ಟರ್ ಕಾಯ್ದೆ :


* ಬಂಗಾಳದ ಗವರ್ನರ್ ಜನರಲ್‍ನನ್ನು ಭಾರತದ ಗವರ್ನರ್ ಜನರಲ್‍ನನ್ನಾಗಿ ಮಾಡಿತು.ಈ ಮೂಲಕ ಭಾರತ ಸರ್ಕಾರದ ಸೃಷ್ಟಿ.
* ಲಾರ್ಡ್ ವಿಲಿಯಂ ಬೆಂಟಿಕ್ ರವರನ್ನು ಭಾರತದ ಪ್ರಥಮ ಗವರ್ನರ್ ಜನರಲ್ಲರನ್ನಾಗಿ ನೇಮಿಸಲಾಯಿತು.
* ಈ ಕಾಯ್ದೆ ನಾಗರೀಕ ಸೇವೆಗಳಲ್ಲಿ ಮೆರಿಟ್ ಆಧಾರಿತ ವ್ಯವಸ್ಥೆಯನ್ನು ಪರಿಚಯಿಸಿತು.

5. 1853 ರ ಚಾರ್ಟರ್ ಕಾಯ್ದೆ :


* ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಮತ್ತು ನೇಮಕ ಮಾಡುವ ವ್ಯವಸ್ಥೆಗೆ ಅವಕಾಶ
* ಮೊದಲ ಶಾಸನ ಸಭೆಯ ರಚನೆ. ಇದರಲ್ಲಿ ಪ್ರಥಮ ಬಾರಿಗೆ ಸ್ಥಳೀಯರಿಗೆ ಅವಕಾಶ ನೀಡಲಾಯಿತು.
* ಭಾರತೀಯರಿಗೆ ನಾಗರೀಕ ಸೇವೆಯಲ್ಲಿ ಅವಕಾಶ ಕಲ್ಪಿಸಲಾಯಿತು.

6. 1858 ರ ಭಾರತ ಸರ್ಕಾರದ ಕಾಯ್ದೆ :


* ಭಾರತ ರಾಜ್ಯ ಕಾರ್ಯದರ್ಶಿಯ ಹುದ್ದೆಯ ಸೃಷ್ಟಿ.
* ಭಾರತದ ಗವರ್ನರ್ ಜನರಲ್ ಬದಲಿಗೆ ಭಾರತದ ವೈಸ್ ರಾಯ್ ಎಂಬ ಪದ ಬಳಸಲಾಯಿತು. ಭಾರತದ ಮೊದಲ ವೈಸ್ ರಾಯ್ ಲಾರ್ಡ್ ಕ್ಯಾನಿಂಗ್
* ಈ ಸಂದರ್ಭದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಬ್ರಿಟಿಷ್ ರಾಣಿಗೆ ವರ್ಗಾಯಿಸಲಾಯಿತು.

7. 1861 ರ ಭಾರತ ಕೌನ್ಸಿಲ್ ಕಾಯ್ದೆ :


* ಭಾರತ ಶಾಸನ ಸಭೆಗಳ ಬೆಳವಣಿಗೆಯಲ್ಲಿ ಈ ಕಾಯ್ದೆ ಒಂದು ಮೈಲಿಗಲ್ಲು.
* ಪ್ರಥಮ ಬಾರಿಗೆ ಭಾರತೀಯರಿಗೆ ಶಾಸನ ಸಭೆಯನ್ನು ಪ್ರವೇಶಿಸಲು ಅವಕಾಶ ನೀಡಲಾಯಿತು.
* ಈ ಕಾಯ್ದೆ ದೇಶದಲ್ಲಿ ಪೋರ್ಟ ಪೋಲಿಯೋ ವಿಧಾನವನ್ನು ಪರಿಚಯಿಸಿತು.

8. 1892 ರ ಇಂಡಿಯನ್ ಕೌನ್ಸಿಲ್ ಕಾಯ್ದೆ :


* ಈ ಕಾಯ್ದೆ ಪ್ರಕಾರ ದೇಶದಲ್ಲಿ ಮೊದಲಬಾರಿಗೆ ಜನಗಣತಿ ಆರಂಭಿಸಲಾಯಿತು.
* ಶಾಸನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ, ಪ್ರಶ್ನೆಗಳನ್ನು ಕೇಳುವ, ಕಾರ್ಯಾಂಗದ ಕಾರ್ಯವನ್ನು ಪ್ರಶ್ನಿಸುವ ಅವಕಾಶ ನೀಡಲಾಯಿತು.

9. 1909 ರ ಮಾರ್ಲೆ – ಮಿಂಟೋ ಕಾಯ್ದೆ :


* ಮುಸ್ಲಿಮರಿಗೆ ಪ್ರತ್ಯೇಕ ಪ್ರಾತಿನಿಧ್ಯತೆಯನ್ನು ನೀಡಿ ಅವರ ಪ್ರತಿನಿಧಿಗಳನ್ನು ಅವರೇ ಆಯ್ಕೆ ಮಾಡಿಕೊಳ್ಳುವ ಪದ್ದತಿಯನ್ನು ಜಾರಿಗೆ ತರಲಾಯಿತು. ಇದರಿಂದಾಗಿ ಲಾರ್ಡ್ ಮಿಂಟೋರವರನ್ನು ಕೋಮುವಾದದ ಪಿತಾಮಹ ಎಂದು ಕರೆಯಲಾಗುತ್ತದೆ.
* ಪರೋಕ್ಷ ಚುನಾವಣೆ ಮತ್ತು ಕೋಮು ಪ್ರಾತಿನಿದ್ಯ ಪದ್ದತಿಯ ಜಾರಿ.
* ರಾಜಕೀಯ ಅಪರಾಧಿಗಳು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಲಾಯಿತು.
* ವೈಸ್‍ರಾಯ್‍ರವರ ಕಾರ್ಯಾಂಗೀಯ ಪರಿಷತ್ತಿಗೆ ನೇಮಕಗೊಂಡ ಪ್ರಥಮ ಭಾರತೀಯ ‘ಸತ್ಯೇಂದ್ರ ಪ್ರಸಾದ ಸಿನ್ಹ’
* ವಾಣಿಜ್ಯೋದ್ಯಮಿಗಳಿಗೆ, ವಿಶ್ವ ವಿದ್ಯಾಲಯಗಳಿಗೆ ಪ್ರೆಸಿಡೆನ್ಸಿ ಕಾರ್ಪೋರೇಷನ್‍ಗಳಿಗೆ, ಜಮೀನ್ದಾರರಿಗೆ, ಶಾಸನ ಸಭೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯತೆಯನ್ನು ನೀಡಲಾಗಿತ್ತು.

10. 1919ರ ಮಾಂಟೆಗೋ- ಚೆಲ್ಮ್ಸ್‍ಫರ್ಡ್ ಕಾಯ್ದೆ :


* ದ್ವಿಸದನ ಶಾಸಕಾಂಗ, ಪದ್ಧತಿ ಜಾರಿ (ಕೌನ್ಸಿಲ್ ಆಫ್ ಸ್ಟೇಟ್ ಮೇಲ್ಮನೆ) (ಲೆಜಿಸ್ಲೇಟಿವ್ ಅಸೆಂಬ್ಲಿ ಕೆಳಮನೆ)
* ದ್ವಿಸರ್ಕಾರ ಪದ್ಧತಿ ಜಾರಿಗೆ ತರಲಾಯಿತು.
* ಸುಗ್ರೀವಾಜ್ಞೆಗಳನ್ನು ಹೊರಡಿಸುವ ಅಧಿಕಾರದ ಜಾರಿ
* ಲೋಕಸೇವಾ ಆಯೋಗದ ಸ್ಥಾಪನೆಗೆ ಅವಕಾಶ ನೀಡಲಾಯಿತು (1926ರಲ್ಲಿ)
* ಶಾಸಕಾಂಗದ ಅಧಿಕಾರಗಳನ್ನು ಕೇಂದ್ರ ವಿಷಯಗಳು ಮತ್ತು ಪ್ರಾಂತೀಯ ವಿಷಯಗಳೆಂದು ವರ್ಗೀಕರಣ ಮಾಡಲಾಯಿತು.
* ಸಿಖ್ಖರು, ಭಾರತೀಯ ಕ್ರೀಶ್ಚಿಯನ್ನರು, ಯುರೋಪಿಯನ್ನರು, ಆಂಗ್ಲೋ-ಇಂಡಿಯನ್ನರಿಗೆ ಪ್ರತ್ಯೇಕ ಮತದಾರ ವರ್ಗ ನೀಡಲಾಯಿತು.
* ತೆರಿಗೆ ಪಾವತಿ, ಆಸ್ತಿ ಅಥವಾ ಶಿಕ್ಷಣ ಇವುಗಳ ಆಧಾರದ ಮೇಲೆ ಜನರಿಗೆ ಮತದಾನದ ಹಕ್ಕನ್ನು ನೀಡಲಾಯಿತು.
* ಕೇಂದ್ರ ಆಯ-ವ್ಯಯ ಪಟ್ಟಿಯಿಂದ ಪ್ರಾಂತೀಯ ಆಯ-ವ್ಯಯ ಪಟ್ಟಿಯನ್ನು ಮೊದಲಬಾರಿಗೆ ಪ್ರತ್ಯೇಕಿಸಲಾಯಿತು.
* ಭಾರತೀಯರಿಗೆ ಹೈಕಮಿಷನರ್ (ಲಂಡನ್‍ನಲ್ಲಿ) ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಲಾ ಯಿತು.

11. 1927ರ - ಸೈಮನ್ ಆಯೋಗ :


* ಈ ಆಯೋಗದಲ್ಲಿ ಭಾರತೀಯರಿಗೆ ಪ್ರಾತಿನಿಧ್ಯವಿರಲಿಲ್ಲ. ಆದ್ದರಿಂದ ಭಾರತದೆಲ್ಲೆಡೆ ‘ಸೈಮನ್ ಹಿಂದಿರುಗಿ’ ಎಂಬ ಘೋಷಣೆ. (1929 ಇಂಗ್ಲೇಡಿಗೆ ಹಿಂದಿರುಗಿದರು).
* ಪ್ರಾಂತ್ಯಗಳಿಗೆ ಸ್ವಾಯತ್ತತೆ
* ಕೋಮುವಾರು ಚುನಾವಣಾ ಕ್ಷೇತ್ರಗಳನ್ನು ಮುಂದುವರಿಸುವುದು.
* ಫೆಡರಲ್ ವ್ಯವಸ್ಥೆಗೆ ಶಿಫಾರಸ್ಸು.

12. 1930-31-32 ಮೂರು ದುಂಡು ಮೇಜಿನ ಪರಿಷತ್‍ಗಳು :


* ಮೊದಲ ದುಂಡು ಮೇಜಿನ ಪರಿಷತ್ತಿನಲ್ಲಿ ಕಾಂಗ್ರೇಸ್ ಭಾಗವಹಿಸಿರಲಿಲ್ಲ.
* ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿ ಕಾಂಗ್ರೇಸ್ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
* ಮೂರನೇ ದುಂಡು ಮೇಜಿನ ಪರಿಷತ್ತಿನಲ್ಲಿ ಕಾಂಗ್ರೇಸ್ ಭಾಗವಹಿಸಿರಲಿಲ್ಲ.
* ಅಂಬೇಡ್ಕರ್ ಅವರು ಈ ಮೇಲಿನ ಎಲ್ಲಾ ದುಂಡು ಮೇಜಿನ ಸಭೆಗಳಲ್ಲಿ ಭಾಗವಹಿಸಿದ ಏಕೈಕ ವ್ಯಕ್ತಿಯಾಗಿದ್ದಾರೆ.
* ಈ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಿತು.
* ಭಾರತಕ್ಕೆ ಒಂದು ಹೊಸ ಸಂವಿಧಾನ, ಒಕ್ಕೂಟ ಸ್ವರೂಪದ ಸರ್ಕಾರ ಮೊದಲಾದವುಗಳು, ಶ್ವೇತಪತ್ರದ ಪ್ರಮುಖ ಅಂಶಗಳಾಗಿದ್ದವು.

13. 1935 ರ ಭಾರತ ಸರ್ಕಾರ ಕಾಯ್ದೆ :


* ಈ ಕಾಯ್ದೆಯನ್ನು ಭಾರತ ಸಂವಿಧಾನದ ‘ನೀಲಿ ನಕ್ಷೆ ಎಂದು ಕರೆಯಲಾಗುತ್ತದೆ.
* ಭಾರತದಲ್ಲಿ ಸಂಯುಕ್ತ ಪದ್ಧತಿಯನ್ನು ಜಾರಿಗೆ ತಂದಿತು.
* ಶೇಷಾಧಿಕಾರಗಳನ್ನು ವೈಸ್‍ರಾಯಗೆ ನೀಡಲಾಯಿತು.
* ಪ್ರಾಂತ್ಯಗಳಲ್ಲಿ ದ್ವಿಸದನ ಶಾಸಕಾಂಗ ಪದ್ದತಿಯನ್ನು ಜಾರಿಗೆ ತಂದಿತು.
* ಪ್ರಾಂತೀಯ ಸ್ವಾಯತತ್ತೆ.
* ಅಖಿಲ ಭಾರತ ಫೆಟರೇಷನ್ ರಚನೆ.
* ಒಕ್ಕೂಟ ವ್ಯವಸ್ಥೆಯ ಸ್ಥಾಪನೆಗೆ ಅವಕಾಶ.
* ಶಾಸನಾಧಿಕಾರದ ವಿಭಜನೆ, ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಸಮವರ್ತಿ ಪಟ್ಟಿ.
* ಭಾರತೀಯ ರಿಸರ್ವ ಬ್ಯಾಂಕ್ ಸ್ಥಾಪನೆ.
* ಭಾರತದಲ್ಲಿ ಪ್ರಥಮ ಬಾರಿಗೆ ದೆಹಲಿಯಲ್ಲಿ ಒಕ್ಕೂಟ ನ್ಯಾಯಾಲಯದ ಸ್ಥಾಪನೆ
* ಕೇಂದ್ರದಲ್ಲಿ ದ್ವಿಸರ್ಕಾರಕ್ಕೆ ಅವಕಾಶ.
* ಲೋಕಸೇವಾ ಆಯೋಗಗಳ ರಚನೆಗೆ ಅವಕಾಶ. (ಫೆಡರಲ್ ಪ್ರಾವಿಸನ್ಸ್‍ಗಳು)

14. 1940- ಅಗಸ್ಟ್ ಕೊಡುಗೆ :


* 1942 ಮಾರ್ಚನಲ್ಲಿ ಬ್ರಿಟಿಷ್ ಪ್ರಧಾನಿ ಚರ್ಚಿಲ್ ಭಾರತದ ಸಮಸ್ಯೆಯನ್ನು ಬಗೆಹರಿಸಲು ಕ್ರಿಪ್ಸ್‍ರವರನ್ನು ಕಳುಹಿಸಿದ ಸಂವಿಧಾನ ರಚನೆಗೆ ಕ್ರಮ, ಭಾರತಕ್ಕೆ ಸ್ವಯಂ ಸರ್ಕಾರ ನೀಡುವುದು ಕ್ರಿಪ್ಸ್ ಯೋಜನೆಯ ಉದ್ದೇಶ. ಆದರೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಇದನ್ನು ತಿರಸ್ಕರಿಸಿದರು.
* 1945 ಫೆಬ್ರವರಿ 8 ರಂದು ಬ್ರಿಟನ್ ಪ್ರಧಾನಿ ಅಟ್ಲಿಯವರು ಭಾರತೀಯ ಸಮಸ್ಯೆ ಬಗೆಹರಿಸಲು ಮೂರು ಜನ ಸದಸ್ಯರನ್ನೊಳಗೊಂಡ ಕ್ಯಾಬಿನೆಟ್ ಮಿಷನ್ ರಚಿಸಿ ಭಾರತಕ್ಕೆ ಕಳುಹಿಸಿದರು (ಲಾರೆನ್ಸ್, ಕ್ರಿಪ್ಸ್, ಎ.ವಿ. ಅಲೆಕ್ಸಾಂಡರ್)
* ಕ್ಯಾಬಿನೆಟ್ ಮಿಷನ್ ಯೋಜನೆಯಂತೆ 1946 ಅಗಸ್ಟ್ 12 ರಂದು ನೆಹರು ತಾತ್ಕಾಲಿಕ ಸರ್ಕಾರ ರಚಿಸಿದರು.

15. 1947 ಜುಲೈ 4- ಭಾರತ ಸ್ವಾತಂತ್ರ್ಯ ಕಾಯ್ದೆ :


* ಭಾರತವನ್ನು ವಿಭಜಿಸಿ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವಾತಂತ್ರ ಡೊಮಿನಿಯನ್‍ಗಳನ್ನು ರಚಿಸಲಾಯಿತು.
* ಪಾಕಿಸ್ತಾನಕ್ಕೆ ಸೇರಿದ ಪ್ರಾಂತ್ಯಗಳನ್ನು ಬಿಟ್ಟು ಉಳಿದ ಎಲ್ಲಾ ಬ್ರಿಟಿಷ ಇಂಡಿಯಾದ ಪ್ರಾಂತ್ಯಗಳನ್ನು ಭಾರತ ಒಳಗೊಂಡಿರುತ್ತದೆ.
* ಪಾಕಿಸ್ಥಾನಕ್ಕೆ ಸೇರಿ ಭಾಗಗಳು - ಪೂರ್ವ ಬಂಗಾಳ, ಪಶ್ಚಿಮ ಪಂಜಾಬ್, ಸಿಂಧ್, ಬಲೂಚಿಸ್ಥಾನ, ನಾರ್ತ ವೆಸ್ಟ್ ಫ್ರಾಂಟಿಯರ್ ಪ್ರಾವಿನ್ಸ್‍ಗಳು.
* ದೇಶೀಯ ಸಂಸ್ಥಾನಗಳು ಯಾವುದೇ ಡೊಮಿನಿಯನ್‍ಗಳಲ್ಲಿ ವಿಲೀನವಾಗಲು ಸ್ವಾತಂತ್ರ್ಯ ವಿತ್ತು.
* ವೈಸ್ ರಾಯ್ ಹುದ್ದೆ ರದ್ದು ಪ್ರಾಂತ್ಯಗಳಲ್ಲಿ ಗವರ್ನರ್ ಜನರಲ್ ನೇಮಕಕ್ಕೆ ಅವಕಾಶ.
* 1947 ಅಗಸ್ಟ 15 ರಿಂದ ಭಾರತ ಒಂದು ಸ್ವಾತಂತ್ರ್ಯ, ಸಾರ್ವಭೌಮ ರಾಷ್ಟ್ರವೆಂದು ಘೋಷಿಸಲಾಯಿತು.