ದ್ವೀಪ ಮತ್ತು ಹವಳದ ದಿಣ್ಣೆ

 

ಹವಳವು ಒಂದು ಜಾತಿಯ ಸಮುದ್ರ ಜೀವಿಯಾಗಿದ್ದು ಇದರ ಅಸ್ಥಿಪಂಜರಗಳು ಸುಣ್ಣ ಮತ್ತು ಡೊಲೋಮೈಟ್ ಅಂಶಗಳಿಂದ ರಚನೆಗೊಂಡಿರುತ್ತದೆ ಇಂತಹ ಹವಳ ಜೀವಿಗಳು ಸತ್ತ ನಂತರ ಅವುಗಳ ಅಸ್ತಿಪಂಜರಗಳು ಕಾಲಕ್ರಮೇಣ ಒಂದರ ಮೇಲೊಂದರಂತೆ ಪದರಗಳ ರೂಪದಲ್ಲಿ ಸಂಚಯನಗೊಳ್ಳುತ್ತವೆ. ಈ ರೀತಿ ಸಂಚಯನಗೊಂಡ ಅಸ್ಥಿಪಂಜರುಗಳು ಗಟ್ಟಿಯಾಗುತ್ತವೆ. ಹೀಗೆ ಹಲವಾರು ವರ್ಷ ಹವಳ ಜೀವಿಗಳ ಅಸ್ಥಿಪಂಜರಗಳು ಸಂಚಯನಗೊಂಡು ಹವಳ ದಿಬ್ಬಗಳಾಗಿ ಪರಿಣಮಿಸುತ್ತದೆ. ಇಂತಹ ಹವಳ ದಿಬ್ಬಳು ಸಮುದ್ರ ಮಟ್ಟಕ್ಕಿಂತ ಸಲ್ಪ ಕೆಳಗಿದ್ದಾಗ ಸಮುದ್ರ ತೆರೆಗಳು ಹವಳ ದಿಬ್ಬಗಳ ಮೇಲೆ ಮರಳು, ಮಣ್ಣು, ಮುಂತಾದವುಗಳನ್ನು ಸಂಚಯನ ಮಾಡುವುದರಿಂದ ಈ ಹವಳ ದಿಬ್ಬಗಳು ಎತ್ತರವಾಗಿ ಪರಣಮಿಸಿ ಹವಳ ದ್ವೀಪಗಳಾಗಿ ರೂಪುಗೊಳ್ಳುತ್ತವೆ. ಹವಳ ಜೀವಿಗಳು ಗುಂಪುಗುಂಪಾಗಿ ಲಕ್ಷಾಂತರ ಜೀವಿಗಳನ್ನು ಒಳಗೊಂಡ ಒಂದು ನಿರ್ದಿಷ್ಟ ಸ್ಥಳದಲ್ಲಿ ಜೀವಿಸುತ್ತವೆ.

ಹವಳ ದಿಬ್ಬಗಳ ಪ್ರಕಾರಗಳು


ಹವಳ ದಿಬ್ಬಗಳು ಉತ್ಪತ್ತಿಯಾಗಿರುವ ಸ್ಥಾನ ಮತ್ತು ಆಕಾರದ ಮೇಲೆ ಹವಳ ದಿಬ್ಬವನ್ನು ಮುಖ್ಯವಾಗಿ 3 ಪ್ರಕಾರದಲ್ಲಿ ವಿಂಗಡಿಸಲಾಗಿದೆ.
(1) ಅಂಚು ಹವಳ ದಿಬ್ಬಗಳು(Fringin Reefs)
ಕರಾವಳಿಗೆ ಹೊಂದಿಕೊಂಡಂತೆ ಸಾಗರಗಳ ಕಡೆಗೆ ನಿರ್ಮಾಣವಾಘಿರುವ ಹವಳ ದಿಬ್ಬಗಳನ್ನು ಅಂಚು ಹವಳ ದಿಬ್ಬಗಳು ಎನ್ನುವರು.
Ex: ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪ
(2) ಪ್ರತಿಬಂಧಕ ಹವಳ ದಿಬ್ಬಗಳು (Barrier Reefs)
ಸಮುದ್ರದಲ್ಲಿ ಆಳವಾದ ನೀರಿನ ಹರಿವಿನಿಂದ ಬೇರ್ಪಡಿಸಲ್ಪಟ್ಟು ಮತ್ತು ಭೂಖಂಡಕ್ಕೆ ಸಮಾನಂತರವಾಗಿ ಹಬ್ಬಿರುವ ಹವಳ ದಿಬ್ಬಕ್ಕೆ ಪ್ರತಿಬಂಧಕ ಹವಳ ದಿಬ್ಬಗಳೆನ್ನುವರು. ಕರಾವಳಿ ಮತ್ತು ಹವಳ ದಿಬ್ಬಗಳ ನಡುವೆ ಆಳವಾದ ಮತ್ತು ಅಗಲವಾದ “ಲಗೂನ್‍ಗಳಿರುತ್ತವೆ. ಆಸ್ಟ್ರೇಲಿಯಾ ಖಂಡದ ಕ್ವೀನ್ಸ್‍ಲ್ಯೆಂಡ್ ಜಗತ್ತಿನ ಅತಿ ದೊಡ್ಡ ಪ್ರತಿಬಂಧಕ ಹವಳ ದಿಬ್ಬವಾಗಿದೆ.
(3) ವೃತ್ತಾಕಾರದ ಹವಳ ದಿಬ್ಬಗಳು (Atolls Reef)
ವೃತ್ತಾಕಾರದ / ಕಂಕಣ ಹವಳ ದಿಬ್ಬಗಳು ವಕ್ರವಾದ ಅಂಚುಳ್ಳ ನಡುವೆ ತಗ್ಗಾದ ಪಾತ್ರವನ್ನು ಒಳಗೊಂಡ ಉಂಗುರಾಕಾರದ ವರ್ತಲಗಳಾಗಿರುತ್ತವೆ. ಇವು ನೀರಿನಲ್ಲಿ ಅರ್ಧಂಬರ್ಧ ಮುಳುಗಿರುತ್ತದೆ. ಅಲ್ಲಲ್ಲಿ ಒಡೆದಿರುತ್ತವೆ. 90% ರಷ್ಟು ಈ ದಿಬ್ಬಗಳು ಹಿಂದೂ ಮಹಾಸಾಗರ ಮತ್ತು ಶಾಂತ ಸಾಗರದಲ್ಲಿ ಕಂಡು ಬರುತ್ತವೆ. ಶಾಂತಮಹಾಶಾಘರದ – ಮಧ್ಯದಲ್ಲಿ – ಕೋಕೋಸ್, ಎಲಿಸ್, ಜಿಲ್‍ಬರ್ಟ್ ದ್ವೀಪಗಳಲ್ಲಿ ಹಿಂದೂ ಮಹಾಸಾಗರದಲ್ಲಿ – ಮಾಲ್ಡೀವ್ಸ್ ದ್ವೀಗಳಲ್ಲಿ ಕಂಡು ಬರುತ್ತವೆ. ಹಿಂದೂ ಮಹಾಸಾಗರದ ಮಾಲ್ಡೀವ್ಸ್‍ನ ಸುರಾಡಿವಾ, ಕಂಕಣ ಹವಳ ದಿಬ್ಬವು ಪ್ರಪಂಚದಲ್ಲೇ ಅತೀ ದೊಡ್ಡ ಕಂಕಣ ಹವಳ ದಿಬ್ಬವಾಗಿದೆ.