ಸಂಪದ (SAMPADA):-
SAMPADA :
SCHCEME FOR AGRO MARINE PROCESSING & DEVELOPMENT OF AGRO PROCESSING CLUSTER
ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಸಚಿವಾಲಯದಡಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎಲ್ಲಾ ಯೋಜನೆಗಳನ್ನು ಒಂದೇ ಸೂರಿನಡಿಯಲ್ಲಿ ತರಲು ಹೊಸದಾಗಿ ಆರಂಭಿಸಿರುವ ಯೋಜನೆಯೇ ಸಂಪದ ಯೋಜನೆ. ಕೃಷಿ ಕ್ಷೇತ್ರಕ್ಕೆ ಪೂರಕವಾಗಿ 6000 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೆ ತಂದಿರುವ ಹೊಸ ಯೋಜನೆಯಲ್ಲಿ ಆಹಾರ ಸಂಸ್ಕರಣೆಯ ವಿಧಾನವನ್ನು ಆಧುನೀಕರಿಸುವ ಮೂಲಕ ಆಹಾರ ಪದಾರ್ಥಗಳು ವ್ಯರ್ಥವಾಗುವುದನ್ನು ತಪ್ಪಿಸುವುದು ಇದರ ಮೂಲ ಉದ್ದೇಶ. ಈ ಯೋಜನೆಯಡಿಯಲ್ಲಿ ಆಹಾರ ಸಂಕ್ಷರಣಾ ಕ್ಷೇತ್ರದಲ್ಲಿ 31400 ಕೋಟಿ ರೂಪಾಯಿಗಳ ಹೂಡಿಕೆಯನ್ನು ನಿರೀಕ್ಷಿಸಿದ್ದು, 1041125 ಕೋಟಿ ಮೌಲ್ಯದ 334 ಮೆಟ್ರಿಕ್ ಟನ್ ಆಹಾರ ಪದಾರ್ಥಗಳನ್ನು ನಿಭಾಯಿಸುವ ಗುರಿಯನ್ನು ಹೊಂದಲಾಗಿದೆ. ಸುಮಾರು 20 ಲಕ್ಷ ರೈತರು ಇದರ ಸದುಪಯೋಗ ಪಡೆಯಲಿದ್ದಾರೆ. ಹಾಗೂ 2019ರೊಳಗೆ ಸುಮಾರು 5.3ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಇತ್ತೀಚೆಗೆ ಈ ಯೋಜನೆಗೆ ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆ ಎಂದು ಮರು ನಾಮಕರಣ ಮಾಡಲು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಒಪ್ಪಿಗೆ ಸೂಚಿಸಿದೆ.
ಹರ್ ಸಿಮ್ರತ್ ಕೌರ್