ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು: (Karnataka state physical, geographical Features)

 

●ಭಾರತ ಒಕ್ಕೂಟದ ಎರಡು ಬೃಹತ್ ಪ್ರಾಂತ್ಯಗಳ ಭಾಗವಾಗಿ ಕರ್ನಾಟಕ ರಾಜ್ಯದ ಭೂ ಭೌತಲಕ್ಷಣಗಳು ಕಂಡುಬರುತ್ತವೆ. ಆ ಎರಡು ಲಕ್ಷಣಗಳೆಂದರ ದಕ್ಷಿಣ ಪ್ರಸ್ಥಭೂಮಿ ಮತ್ತು ಕಡಲತೀರದ ಬಯಲು ಹಾಗೂ ದ್ವೀಪಗಳು.

● ರಾಜ್ಯದಲ್ಲಿ ಪ್ರಮುಖವಾದ ನಾಲ್ಕು ಭೂಭೌತಲಕ್ಷಣಗಳನ್ನು ಕಾಣಬಹುದು.
1. ಉತ್ತರ ಕರ್ನಾಟಕ ಪ್ರಸ್ಥಭೂಮಿ.(North Karnataka plateau)
2. ಮಧ್ಯಕರ್ನಾಟಕ ಪ್ರಸ್ಥಭೂಮಿ.(Midst karnataka plateau)
3. ದಕ್ಷಿಣ ಕರ್ನಾಟಕ ಪ್ರಸ್ಥಭೂಮಿ.(Southern Karnataka Plateau)
4. ಕರ್ನಾಟಕದ ಕರಾವಳಿ ಪ್ರದೇಶ. (Karnataka coastal region)

✧ಉತ್ತರ ಕರ್ನಾಟಕ ಪ್ರಸ್ಥಭೂಮಿಯು ಬೆಳಗಾವಿ, ಬೀದರ್, ಬಿಜಾಪುರ, ಬಾಗಲಕೋಟೆ ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿದೆ
✧ಇದು ಬಹುತೇಕ ದಖನ್ ಪ್ರಸ್ಥಭೂಮಿಯಿಂದಾಗಿದೆ
✧ಈ ಪ್ರಸ್ಥಭೂಮಿಯಲ್ಲಿ ಏಕತಾನತೆ ತರುವ ವೃಕ್ಷರಹಿತ ದೃಶ್ಯಾವಳಿ ಎದ್ದುಕಾಣುತ್ತದೆ
✧ಸರಾಸರಿ ಸಮುದ್ರ ಮಟ್ಟದಿಂದ ಸಾಮಾನ್ಯವಾಗಿ 300 ರಿಂದ 600 ಮೀಟರ್ ಎತ್ತರವಿದೆ ಆದಾಗ್ಯೂ ಕೃಷ್ಣಾ, ಭೀಮಾ, ಘಟಪ್ರಭಾ, ಮಲಪ್ರಭಾ ನದಿಗಳ ಬಯಲು, ಅವುಗಳ ಮಧ್ಯೆ ಅಲ್ಲಲ್ಲೇ ಕಾಣಿಸುವ ಜಲಾನಯನ ಪ್ರದೇಶಗಳು, ಮೆಟ್ಟಿಲಿನಾಕಾರದ ದೃಶ್ಯಾವಳಿ, ಲ್ಯಾಟರೈಟ್ನಿಂದಾದ ಕಡಿದಾದ ಭಾಗಗಳು, ಶೇಷ ಗುಡ್ಡಗಳು ಮತ್ತು ಏಣುಗಳಿಂದಾಗಿ ವಿಶಾಲವಾದ ಪ್ರಸ್ಥಾಭೂಮಿಯ ಏಕತಾನತೆ ಭಂಗವಾಗುತ್ತದೆ
✧ಪೂರ್ವದೆಡೆಗೆ ಪ್ರಸ್ಥಭೂಮಿಯ ಸಾಮಾನ್ಯ ಇಳಿಜಾರಿದೆ ಈ ಪ್ರಾಂತ್ಯದ ಬಲುಪಾಲು ಕಪ್ಪು ಹತ್ತಿ ಮಣ್ಣಿನಿಂದ ಆವೃತವಾಗಿವೆ

2. ಮಧ್ಯಕರ್ನಾಟಕ ಪ್ರಸ್ಥಭೂಮಿ:


✧ಮಧ್ಯಕರ್ನಾಟಕ ಪ್ರಸ್ಥಭೂಮಿಯ ಬಳ್ಳಾರಿ,ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ರಾಯಚೂರು ಕೊಪ್ಪಳ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡಿದೆ

✧ಈ ಪ್ರಾಂತ್ಯವು ಒಂದೆಡೆ ದಖನ್ ಪ್ರಸ್ಥಭೂಮಿಯಿಂದಾದ ಉತ್ತರ ಕರ್ನಾಟಕ ಪ್ರಸ್ಥಭೂಮಿ, ಇನ್ನೊಂದೆಡೆ ಸಾಪೇಕ್ಷವಾಗಿ ಎತ್ತರಿಸಿರುವ ದಕ್ಷಿಣ ಕರ್ನಾಟಕ ಪ್ರಸ್ಥಭೂಮಿಯ ನಡುವಿನ ಪರಿವರ್ತನಾ ಹೊರಮೈಯ್ಯನ್ನು ಪ್ರತಿನಿಧಿಸುತ್ತದೆ

✧ಹೆಚ್ಚೂ ಕಡಿಮೆ ಈ ಪ್ರಾಂತ್ಯವು ತುಂಗಭದ್ರಾ ತಗ್ಗು ಪ್ರದೇಶವನ್ನು ಪ್ರತಿನಿಧಿಸುತ್ತದೆ ಈ ಭಾಗದ ಸಾಧಾರಣ ಔನ್ನತ್ಯ 450 ರಿಂದ 700 ಮೀಟರ್ವರೆಗೆ ವ್ಯತ್ಯಯಗೊಳ್ಳುತ್ತದೆ ಆದರೂ ಈ ಪರಿವರ್ತನಾ ವಲಯವನ್ನು ಛೇದಿಸಿದಂತೆ ಧಾರವಾಡ ಗುಂಪಿನ ಶಿಲೆಗಳು ಅನೇಕ ಸಮಾಂತರ ಏಣುಗಳಾಗಿ ಕಂಡುಬರುತ್ತವೆ

✧ಇಂಥ ಶೇಷ ಬೆಟ್ಟಗಳು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು 900 ಮೀಟರ್ ಎತ್ತರದಲ್ಲಿವೆ

✧ಪೂರ್ವದೆಡೆಗೆ ಈ ಪ್ರಾಂತ್ಯದ ಸಾಮಾನ್ಯ ಇಳಿಜಾರನ್ನು ಕಾಣಬಹುದು

3. ದಕ್ಷಿಣ ಕರ್ನಾಟಕ ಪ್ರಸ್ಥಭೂಮಿ:


✧ದಕ್ಷಿಣ ಕರ್ನಾಟಕ ಪ್ರಸ್ಥಭೂಮಿಯು ಬೆಂಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಗಳನ್ನು ಒಳಗೊಂಡಿದೆ

✧ಈ ಪ್ರಾಂತ್ಯವು ಬಹುತೇಕ ಕರ್ನಾಟಕ ಭಾಗದ ಕಾವೇರಿ ನದಿಯ ಕೊಳ್ಳವನ್ನು ಒಳಗೊಳ್ಳುತ್ತದೆ

✧ಇದು 600 ಮೀಟರ್ ಸಮೋನ್ನತ ರೇಖೆಯಿಂದ ಆವೃತವಾಗಿದ್ದು, ಕಡಿದಾದ ಇಳಿಜಾರಿರುವುದು ಇದರ ವಿಶೇಷ ಲಕ್ಷಣ

✧ಪಶ್ಚಿಮ ಮತ್ತು ದಕ್ಷಿಣದಲ್ಲಿ ಪಶ್ಚಿಮಘಟ್ಟಗಳ ಗಿರಿಗಳಿಂದ ಆವೃತವಾಗಿವೆ

✧ಇದರ ಉತ್ತರ ಭಾಗವು ಸ್ಪಷ್ಟವಾಗಿ ಗುರುತಿಸಬಹುದಾದ ಉನ್ನತ ಪ್ರಸ್ಥಭೂಮಿಯಿಂದ ಛೇದಗೊಂಡಿದೆ

✧ಪೂರ್ವದಲ್ಲಿ ಕಾವೇರಿ ನದಿಯ ಕಣಿವೆ ಮತ್ತು ಈ ನದಿಯ ಉಪನದಿಗಳು ಅನಾವರಣಗೊಂಡು ಅಸಮ ಬಯಲನ್ನು ಸೃಷ್ಟಿಸಿವೆ

✧ಈ ಪ್ರಾಂತ್ಯದ ಸಾಧಾರಣ ಎತ್ತರ 600 ರಿಂದ 900 ಮೀಟರುಗಳಷ್ಟು ವ್ಯತ್ಯಯವಾಗುತ್ತವೆ ಆದಾಗ್ಗೂ ಶೇಷ ಔನ್ನತ್ಯ 1,500 ರಿಂದ 1,700 ಮೀಟರುಗಳಷ್ಟು ಇರುವುದನ್ನು ಮೈಸೂರು ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತು ಕೊಡಗು ಜಿಲ್ಲೆಯ ಬ್ರಹ್ಮಗಿರಿ ಶ್ರೇಣಿಗಳಲ್ಲಿ ಕಾಣಬಹುದು

4. ಕರ್ನಾಟಕದ ಕರಾವಳಿ ಪ್ರದೇಶ


✧ಕರ್ನಾಟಕದ ಕರಾವಳಿ ಪ್ರದೇಶವು ಪೂರ್ವದಲ್ಲಿ ಕರ್ನಾಟಕ ಪ್ರಸ್ಥಭೂಮಿಯ ಪಶ್ಚಿಮಘಟ್ಟಗಳ ಅಂಚಿನ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರದ ನಡುವೆ ಹರಡಿದೆ

✧ಈ ಭಾಗ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ

✧ಈ ಪ್ರದೇಶದಲ್ಲಿ ಪಶ್ಚಿಮಘಟ್ಟದ ಅನೇಕ ಏಣುಗಳು ಚಾಚಿದ ಭಾಗಗಳು ಅಡ್ಡಹಾಯ್ದಂತೆ ಕಂಡುಬರುತ್ತದೆ ಈ ಪ್ರದೇಶವೇ ಅತ್ಯಂತ ಸಂಕೀರ್ಣವಾದುದು ಇದರ ತುಂಬ ನದಿಗಳಿವೆ, ನದಿಚಾಚುಗಳಿವೆ, ಜಲಪಾತಗಳಿವೆ, ಗಿರಿಶೃಂಗಗಳಿವೆ, ಬೆಟ್ಟಸಾಲುಗಳಿವೆ


●ಕರಾವಳಿ ಪ್ರದೇಶವನ್ನು ಎರಡು ಪ್ರಮುಖ ಭೂಭೌತಘಟಕಗಳಾಗಿ ವಿಭಜಿಸಬಹುದು -
✧ಬಯಲು ಮತ್ತು
✧ಪಶ್ಚಿಮಘಟ್ಟಗಳು

✧ಕರಾವಳಿ ಬಯಲು ಅಳಿವೆಯ ಇಕ್ಕಟ್ಟಾದ ವಿಸ್ತರಣೆಯನ್ನೂ ಮತ್ತು ಕಡಲ ಬಯಲನ್ನು ಪ್ರತಿನಿಧಿಸುತ್ತದೆ

✧ಪೂರ್ವದೆಡೆ ದಿಢೀರೆಂದು ಎದ್ದಿರುವ ಭಾಗವೇ ಪಶ್ಚಿಮ ಘಟ್ಟಗಳನ್ನು ರೂಪಿಸಿದೆ

✧ದಕ್ಷಿಣ ಭಾಗಕ್ಕೆ ಹೋಲಿಸಿದರೆ (900 ರಿಂದ 1,500 ಮೀಟರ್) ಘಟ್ಟದ ಉತ್ತರ ಭಾಗದ ಔನ್ನತ್ಯ ಕೆಳಮಟ್ಟದ್ದು ಎಂದೇ ಹೇಳಬಹುದು (450 ರಿಂದ 600 ಮೀಟರ್)

✧ಕರಾವಳಿ ಪಟ್ಟಿಯು ಸರಾಸರಿ 50ರಿಂದ 80 ಕಿಲೋ ಮೀಟರ್ ಅಗಲವಾಗಿದೆ

✧ಉದ್ದ ಉತ್ತರ ದಕ್ಷಿಣವಾಗಿ ಸುಮಾರು 267 ಕಿಲೋ ಮೀಟರ್ ಕೆಲವೆಡೆ ಪಕ್ಕದ ಪಶ್ಚಿಮಘಟ್ಟಗಳ ಶೃಂಗಗಳು ಕಾರವಾರದ ಬಳಿ ಕಾಣುವಂತೆ ಹದಿಮೂರು ಕಿಲೋ ಮೀಟರುಗಳಷ್ಟು ಸನಿಹದಲ್ಲಿದೆ

✧ಸರಾಸರಿ ಸಮುದ್ರ ಮಟ್ಟದಿಂದ ಈ ಭಾಗದ ಸರಾಸರಿ ಎತ್ತರ 75 ಮೀಟರುಗಳಷ್ಟು

Contributed by:Spardha Loka