Loading [MathJax]/extensions/MathML/mml3.js

ಯೋಗ ಶಿಕ್ಷಣದ ಮಹತ್ವ :

 

ಪೀಠಿಕೆ:


ಪ್ರಾಚೀನ ಭಾರತವು ಕಲಿಕೆಗೆ ಪ್ರಖ್ಯಾತವಾದ ದೇಶವಾಗಿತ್ತು. ಅದಕ್ಕೆ ವೇದಗಳು’ಉಪನಿಶತ್ತುಗಳು, ಸಂಸ್ಕತ ಸಾಹಿತ್ಯವೇ ಸಾಕ್ಷಿ. ಜ್ಞಾನವಷ್ಟೇ ಅಲ್ಲದೇ ಯೋಗ ಶಿಕ್ಷಣಕ್ಕೂ ಪ್ರಾಚೀನರು ಆದ್ಯತೆ ನೀಡಿದ್ದರು. ಹಗಾಗಿ ದೇಹ ಮತ್ತು ಮನಸ್ಸಿನ ಆರೋಗ್ಯ ಸದೃಢವಾಗಲು ಸಹಾಯಕವಾಯಿತು. ಇಂದಿನ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇನ್ನು ನಾಗರೀಕತೆಯ ಹೊಸ್ತಿಲು ಮೆಟ್ಟುವ ಮೊದಲೇ ಭಾರತವು ವಿಜ್ಞಾನ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿತ್ತು.

ವಿಷಯ ನಿರೂಪಣೆ:


ಯೋಗ ಶಿಕ್ಷಣವು ದೈಹಿಕ-ಮಾನಸಿಕ ವಿಕಾಸಕ್ಕೆ ಸಾಧನ. ಮಾನವನ ದೇಹದ ಪ್ರತಿಯೊಂದು ಅವಯವದ ಸಕ್ರಿಯ ಚಟುವಟಿಕೆಗೆ ಯೋಗ ಶಿಕ್ಷಣವು ಆಧ್ಯತೆ ನೀಡುವುದಲ್ಲದೇ ,ವೃದ್ಯಾಪ್ಯದಲ್ಲಿ ಸಂಭವಿಸಬಹುದಾದ ಅನೇಕ ದೈಹಿಕ-ಮಾನಸಿಕ ಕಾಯಿಲೆಗಳಿಗೆ ಸವಾಲಾಗಿ ನಿಲ್ಲುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ.ಅಷ್ಟೇ ಅಲ್ಲದೇ ಚಿಕ್ಕ ವಯಸ್ಸಿನಲ್ಲಿಯೇ ಯೋಗ ಪಾಠವನ್ನು ಮಕ್ಕಳಿಗೆ ಕಲಿಸುವುದರಿಮದ ಅವರಲ್ಲಿ ಮೆದುಲು ,ಕಣ್ಣು ಮೊದಲಾದ ಸೂಕ್ಷ್ಮ ಅಂಗಗಳು ಚುರುಕುಗೊಳ್ಳಲು ಸಹಾಯ ಮಡುತ್ತದೆ.

ಇಂದು ಭಾರತ ದೇಶದ ಅನೇಕ ಶಾಲೆಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ. ಯೋಗದ ನಿರಂತರ ಅಭ್ಯಾಸದಿಂದ ಮನೋನಿಯಂತ್ರಣ,ಇಂದ್ರೀಯ ನಿಗ್ರಹ ಅಧಿಕ ಕಾರ್ಯೋತ್ಸಾಹ ಮೊದಲಾದ ಸಾಮರ್ತ್ಯಗಳನ್ನು ಬೆಳೆಸಿಕೊಳ್ಳಬಹುದು.ಯೋಗಭ್ಯಾಸವನ್ನು ಪ್ರತಿಯೊಬ್ಬರು ಅಭ್ಯಾಸ ಮಾಡಿ ಆಚರಣೆಯಲ್ಲಿರಿಸಿಕೊಂಡರೆ ಇಡೀ ದೇಶ ಎದುರಿಸುತ್ತಿರುವ ಅನೇಕ ನೈತಿಕ ಸವಾಲುಗಳನ್ನು ಎದುರಿಸಲು ಸಾಧ್ಯ.

ಉಪಸಂಹಾರ :


ಯೋಗ ಶಿಕ್ಷಣವು ಸಾಂಪ್ರದಾಯಿಕ ಶಿಕ್ಷಣವೆಂಬ ಕಾರಣದಿಂದ ಅನೇಕರು ಇದನ್ನು ಹೀಗಳೆಯುವುದು ಉಂಟು. ಆದರೆ ಯೋಗ ಶಿಕ್ಷಣದ ಮಹತ್ವವನ್ನು ಅರಿತ ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಯೋಗ ಶಿಕ್ಷಣವನ್ನು ತಮ್ಮ ನೆಲದಲ್ಲಿ ಅಳವಡಿಸಿವೆ. ಆದ್ದರಿಂದ ಯೋಗ ಶಿಕ್ಷಣವನ್ನು ಅಳವಡಿಸುವುದರಿಂದ ಶಿಸ್ತಿನ ಜೀವನ ನಡೆಸಲು ಸಾಧ್ಯವಾಗುತ್ತದೆ.