ಲೋಹಗಳು ಮತ್ತು ಅಲೋಹಗಳು (Metals and Non Metals )
 
ಲೋಹಗಳು
• ಲೋಹಗಳ ಗುಣ ಲಕ್ಷಣಗಳು ಕೆಳಗಿನಂತಿವೆ.
• ದ್ರವರೂಪದಲ್ಲಿರುವ ಪಾದರಸ ಮತ್ತು ಗ್ಯಾಲಿಯಮ್ಅನ್ನು ಹೊರತುಪಡಿಸಿ ಸಾಮಾನ್ಯ ತಾಪಮಾನದಲ್ಲಿ ಘನರೂಪದಲ್ಲಿರುತ್ತವೆ
• ಸಾಮಾನ್ಯವಾಗಿ ಗಟ್ಟಿಯಾಗಿರುತ್ತವೆ ಹಾಗು ಹೊಳೆಯುತ್ತವೆ.
• ಉಷ್ಣ ಮತ್ತು ವಿದ್ಯುತ್ನ ವಾಹಕಗಳಾಗಿರುತ್ತವೆ.
• ಸೋಡಿಯಮ್, ಪೆÇಟ್ಯಾಸಿಯಮ್ ಮತ್ತು ಪಾದರಸವನ್ನು ಹೊರತುಪಡಿಸಿ ಪತ್ರಶೀಲತ್ವ ಮತ್ತು ತಂತುಶೀಲತ್ವ ಗುಣಗಳನ್ನು ಹೊಂದಿರುತ್ತವೆ.
• ಸೋಡಿಯಮ್, ಪೆÇಟ್ಯಾಸಿಯಮ್ ಮತ್ತು ಪಾದರಸವನ್ನು ಹೊರತುಪಡಿಸಿ ರಿಂಗಣಿಸುತ್ತವೆ.
• ಲೋಹಗಳು ಗಾಳಿಯಲ್ಲಿನ ಆಮ್ಲಜನಕದೊಂದಿಗೆ ವರ್ತಿಸಿ ಜಲಿಯ ಫೆರಸ್ ಆಕ್ಸೈಡ (ಈe2ಔ3.2ಊ2ಔ) ಉಂಟುಮಾಡಿ ತುಕ್ಕು ಹಿಡಿಯುತ್ತವೆ.
• ರಿಂಗಣಿಸುವ ಶಬ್ದವನ್ನು ಉಂಟುಮಾಡುತ್ತವೆ. (ಸೋಡಿಯಮ್, ಪೆÇಟ್ಯಾಸಿಯಮ್ ಮತ್ತು ಪಾದರಸವನ್ನು ಹೊರತುಪಡಿಸಿ)
• ಉದಾಹರಣೆ : ಕಬ್ಬಿಣ, ತಾಮ್ರ, ಅಲ್ಯೂಮಿನಿಯಮ್ ಇತ್ಯಾದಿ.
ಅಲೋಹಗಳು
• ಅಲೋಹಗಳ ಗುಣ ಲಕ್ಷಣಗಳು ಕೆಳಗಿನಂತಿವೆ.
• ಸಾಮಾನ್ಯ ತಾಪದಲ್ಲಿ ಘನ ದ್ರವ ಮತ್ತು ಅನಿಲ ಸ್ಥಿತಿಯಲ್ಲಿರುತ್ತವೆ.
• ಗ್ರಾಫೈಟ್ ಮತ್ತು ಅಯೊಡಿನ್ಅನ್ನು ಹೊರತುಪಡಿಸಿ ಸಾಮಾನ್ಯವಾಗಿ ಹೊಳೆಯುವುದಿಲ್ಲ.
• ಸಾಮಾನ್ಯವಾಗಿ ಮೃದುವಾಗಿರುತ್ತವೆ.
• ಗ್ರಾಫೈಟನ್ನು ಹೊರತುಪಡಿಸಿ ಉಷ್ಣ ಮತ್ತು ವಿದ್ಯುತ್ನ ಅವಾಹಕಗಳು.
• ಪತ್ರಶೀಲತ್ವ ಮತ್ತು ತಂತುಶೀಲತ್ವ ಗುಣಗಳನ್ನು ಹೊಂದಿರುವುದಿಲ್ಲ.
• ರಿಂಗಣಿಸುವ ಶಬ್ದವನ್ನು ಉಂಟುಮಾಡುವುದಿಲ್ಲ.
• ಲೋಹದ ಸಂಯುಕ್ತದಿಂದ ಲೋಹವನ್ನು ಲಾಭದಾಯಕವಾಗಿ ತೆಗೆಯಬಹುದಾದಂತ ಸಂಯುಕ್ತಕ್ಕೆ ಅದುರು ಎನ್ನುತ್ತಾರೆ. ಸಂಯುಕ್ತವನ್ನು ಖನಿಜ ಎನ್ನುತ್ತಾರೆ.
• ರಿಂಗಣಿಸುವ ಶಬ್ದವನ್ನು ಉಂಟುಮಾಡುವುದಿಲ್ಲ
• ಅಲೋಹಗಳಿಗೆ ಉದಾಹರಣೆ : ಗಂಧಕ, ಕಾರ್ಬನ್, ಆಕ್ಸಿಜನ್ ಇತ್ಯಾದಿ
ಲೋಹಾಭಗಳು
ಕೆಲವು ಧಾತುಗಳು ಹೆಚ್ಚು ಲೋಹೀಯ ಗುಣಗಳನ್ನು ಹೊಂದಿವೆ. ಆದರೆ ಕೆಲವು ಧಾತುಗಳು ಹೆಚ್ಚು ಅಲೋಹೀಯ ಗುಣಗಳನ್ನು ಹೊಂದಿವೆ. ಜರ್ಮೇನಿಯಮ್ ಮತ್ತು ಬೋರಾನ್ಗಳ ವಾಹಕತೆಯು ಲೋಹ ಮತ್ತು ಅಲೋಹಗಳ ನಡುವೆ ಇದೆ. ಆದ್ದರಿಂದ ಅವುಗಳನ್ನು ಲೋಹ ಅಥವಾ ಅಲೋಹವೆಂದು ವರ್ಗೀಕರಿಸಲಾಗುವುದಿಲ್ಲ. ಅಂತಹಧಾತುಗಳನ್ನು ಲೋಹಾಭಗಳು ಎನ್ನುವರು.
ಲೋಹಾಭಗಳ ಲಕ್ಷಣಗಳು
• ಲೋಹಾಭಗಳ ಲಕ್ಷಣಗಳು (Pಡಿoಠಿeಡಿಣies oಜಿ ಒeಣಚಿಟಟoiಜs) :
• ಸಾಮಾನ್ಯವಾಗಿ ಲೋಹಾಭಗಳು ಘನಸ್ಥತಿಯಲ್ಲಿರುತ್ತವೆ.
• ಅವು ಹೊಳೆಯುವ ಅಥವಾ ಹೊಳೆಯದ ಗುಣವನ್ನು ಹೊಂದಿವೆ.
• ಅವುಗಳ ವಾಹಕತೆಯು ಲೋಹ ಮತ್ತು ಅಲೋಹಗಳ ನಡುವೆ ಇದೆ.
• ಅವು ತನ್ಯವಾಗಿದ್ದು ಸುರುಳಿಯಾಕಾರದಲ್ಲಿ ಬಗ್ಗಿಸಬಹುದು.
• ಎಲ್ಲ ಲೋಹಾಭಗಳು ಬೇರೆ ಬೇರೆ ಕರಗು ಬಿಂದು ಮತ್ತು ಕುಡಿ ಬಿಂದುಗಳನ್ನು ಹೊಂದಿವೆ.
• ಸಾಮಾನ್ಯವಾಗಿ ಲೋಹಾಭಗಳನ್ನು ಅರೆವಾಹಕಗಳು ಎನ್ನುವರು.
ಶ್ರೇಷ್ಠ ಅನಿಲಗಳು
• ವಿಶ್ವದಲ್ಲಿರುವ ಎಲ್ಲಾ ವಸ್ತುಗಳು ಬೇರೆ ಬೇರೆ ಧಾತುಗಳ ಸಂಯೋಗದಿಂದ ಉಂಟಾಗಿವೆ. ಕೆಲವು ಧಾತುಗಳು ತಮ್ಮವಿಶಿಷ್ಟ ಗುಣಗಳಿರುವ ಕಾರಣದಿಂದ ಸಂಯೋಗ ಹೊಂದಿ ವಸ್ತುಗಳಾಗಲಾರವು.ಅಂತಹ ಧಾತುಗಳನ್ನು ಶ್ರೇಷ್ಠ ಅನಿಲಗಳು ಎನ್ನುವರು.
• ಉದಾಹರಣೆ : ಹೀಲಿಯಮ್, ನಿಯಾನ್, ಆರ್ಗಾನ್ ಇತ್ಯಾದಿ.
ಶ್ರೇಷ್ಠ ಅನಿಲಗಳ ಲಕ್ಷಣಗಳು
• ಶ್ರೇಷ್ಠ ಅನಿಲಗಳಿಗೆ ಬಣ್ಣ ಮತ್ತು ವಾಸನೆ ಇರುವುದಿಲ್ಲ.
• ಇವುಗಳನ್ನು ಕಡಿಮೆ ತಾಪಮಾನದಲ್ಲಿ ದ್ರವೀಕರಿಸಬಹುದು.
• ಇವು ಏಕ ಪರಮಾಣ್ವಕಗಳು (mono atomic).
• ಇವುಗಳ ಕರಗುಬಿಂದು ಮತ್ತು ಕುದಿಬಿಂದು ತುಂಬಾ ಕಡಿಮೆ.
• ಸಾಮಾನ್ಯವಾಗಿ ಅತಿ ಕಡಿಮೆ ರಾಸಾಯನಿಕ ಕ್ರಿಯೆಗಳಲ್ಲಿ ಭಾಗವಹಿಸುತ್ತವೆ.
• ಇವುಗಳಿಗೆ ಅನೇಕ ಔದ್ಯೋಗಿಕ ಉಪಯೋಗಗಳಿವೆ.