Loading [MathJax]/extensions/MathML/content-mathml.js

ಪ್ರಧಾನ ಮಂತ್ರಿ ಉಜ್ವಲ ಯೋಜನೆ

 

ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಬಿ.ಪಿ.ಎಲ್ ಕುಟುಂಬಗಳಿಗೆ ಉಚಿತವಾಗಿ ಎಲ್.ಪಿ.ಜಿ ಸಂಪರ್ಕವನ್ನು ನೀಡುವ ಗುರಿಯೊಂದಿಗೆ ಆರಂಭಿಸಿರುವ ಯೋಜನೆಯೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಈ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 1 ಮೇ 2016 ರಂದು ಚಾಲನೆ ನೀಡಿದರು. ಈ ಯೋಜನೆ ಅಡಿಯಲ್ಲಿ 2019 ರೊಳಗೆ 5 ಕೋಟಿ ಕುಟುಂಬಗಳಿಗೆ 8000 ಕೋಟಿ ವೆಚ್ಚದಲ್ಲಿ ಉಚಿತ ಎಲ್‍ಪಿಜಿ ಸಂಪರ್ಕ ನೀಡುವ ಗುರಿಯನ್ನು ಹೊಂದಲಾಗಿದೆ. 2017 ಮಾರ್ಚ್ ತಿಂಗಳೊಳಗೆ 2.5 ಕೋಟಿ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ ಈ ಯೋಜನೆ ವ್ಯಾಪ್ತಿಯಿಂದ ಹೊರಗುಳಿಯುವವರಿಗಾಗಿ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ‘ಅನಿಲ ಭಾಗ್ಯ ಯೋಜನೆ ಯಡಿಯಲ್ಲಿ 5 ಲಕ್ಷ ಕುಟುಂಬಗಳಿಗೆ ಪ್ರತಿ ಸಂಪರ್ಕಕ್ಕೆ 1600 ರೂಗಳ ವೆಚ್ಚದಲ್ಲಿ ಗ್ಯಾಸ್ ಸಂಪರ್ಕ ನೀಡಲಾಗುತ್ತಿದೆ. ಇತ್ತೀಚೆಗೆ ಉಜ್ವಲ ಯೋಜನೆಗೆ ಪೂರಕವಾದ “ ಪ್ರಧಾನ ಮಂತ್ರಿ ಎಲ್.ಪಿ.ಜಿ ಪಂಚಾಯತ್ ಯೋಜನೆ”ಗೆ ಚಾಲನೆ ನೀಡಲಾಗಿದೆ. ಪ್ರಧಾನ ಮಂತ್ರಿ ಎಲ್.ಪಿ.ಜಿ ಪಂಚಾಯತ್ ಯೋಜನೆಗೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ರವರು 25.ಸೆ.2017 ರಂದು ಚಾಲನೆ ನೀಡಿದರು. ಈ ಪಂಚಾಯಿತಿಯ ಮೂಲಕ ಉಜ್ವಲ ಯೋಜನೆಯ ಮೂಲಕ ಅಡುಗೆ ಅನಿಲ ಸಂಪರ್ಕ ಪಡೆದ ಮಹಿಳೆಯರನ್ನು ಒಟ್ಟು ಗೂಡಿಸಿ ಸಿಲಿಂಡರ್‍ಗಳ ಬಳಕೆ ಮತ್ತು ಸುರಕ್ಷತೆಯ ಕುರಿತು ಅರಿವು ಮೂಡಿಸುವುದು ಇದರ ಉದ್ದೇಶ.