ನ್ಯಾನೋ ತಂತ್ರಜ್ಞಾನ (Nano Technology)

 

• ನ್ಯಾನೋ ಶಬ್ದವು ಗ್ರೀಕ್ ಭಾಷೆಯಿಂದ ಪಡೆಯಲಾಗಿದ್ದು ನ್ಯಾನೋ ಎಂದರೆ ಕುಬ್ಜ ಎಂದರ್ಥ. ಅತಿ ಸೂಕ್ಷ್ಮ ಎಂದರೆ ಅಣು ಮಟ್ಟದಲ್ಲಿ ಸಂಶೋಧಿಸುವ ತಂತ್ರಜ್ಞಾನವೇ ನ್ಯಾನೋ ತಂತ್ರಜ್ಞಾನವಾಗಿದೆ.
• 1 ನ್ಯಾನೋ ಮೀಟರ್ (nm) ಎಂದರೆ ಮಿಟರ್ ನ ಬಿಲಿಯನ್ ಭಾಗ.
• ಮಾನವ ಕೂದಲಿನ ಎಳೆಯ 1 ಲಕ್ಷದ ಒಂದು ಭಾಗ
• ನ್ಯಾನೋ ತಂತ್ರಜ್ಞಾನವನ್ನು ಜಪಾನಿನ ನೋರಿ ತನಿಗುಜ್ಜಿ ಪರಿಚಯಿಸಿದರು.
• ನ್ಯಾನೋ ತಂತ್ರಜ್ಞಾನವು 1nm ದಿಂದ 100 nm ನಡುವೆ ಸಂಶೋಧನವಾಗಿದೆ
• ‘ಅಮೇರಿಕಾದ ಭೌತಶಾಸ್ತ್ರಜ್ಞ ರಿಜಾರ್ಡ ಫೆಯೆಮೆನ್ ರವರನ್ನು ನ್ಯಾನೋ ತಂತ್ರಜ್ಞಾನದ ಪಿತಾಮಹ ಎಂದು ಕರೆಯುಲಾಗುತ್ತದೆ
• ನ್ಯಾನೋ ಪದ್ಧತಿಯಗಳನ್ನು ವಸ್ತುಗಳನ್ನು ಸ್ಥಾನಿಕ ಜೋಡಣೆ ಹಾಗೂ ಅಣುಗಳ ತಿದ್ದುವಿಕೆ ತಂತ್ರಜ್ಞಾನದಿಂದ ತಯಾರು ಮಾಡಲಾಗುತ್ತದೆ
• ಟಾಪ್-ಡೌನ್ ಹಾಗೂ ಬಟಮ್- ಆಪ್ ವಿಧಾನಗಳಿಂದ ನಿಖರ ಸಲಕರಣೆಗಳನ್ನು ಬಳಸಿ ಹಾಗೂ ರಾಸಾಯನಿಕ ಕ್ರಿಯೆಗಳಿಂದ ನ್ಯಾನೋ ವಸ್ತುಗಳನ್ನು ತಯಾರು ಮಾಡಲಾಗುತ್ತದೆ

ನ್ಯಾನೋ ವಸ್ತುಗಳು


1) ಇಂಗಾಲದ ನ್ಯಾನೋಟ್ಯೂಬ್ ಗಳು (Carbon Nanotubes)


• ಇದನ್ನು ಕಂಡು ಹಿಡಿಯುವರು ಸುಮಿಯೋ ಐಜಿಯಾ
• ಹೆಚ್ಚು ಸಾಂದ್ರತೆಯಿರುವ ಗ್ರಾಫೈಟ್ ರಚನೆಗಳನ್ನು ಸುತ್ತಿ ಕೊಳವೆ ಆಕಾರದಲ್ಲಿ ನ್ಯಾನೊ ಟ್ಯೂಬ್ ಗಳನ್ನು ರಚಿಸಲಾಗುತ್ತದೆ
• ಸಾಮಾನವಾಗಿ ಲಭ್ಯವಿರುವ ಕಬ್ಬಿಣಕ್ಕಿಂತ 100 ಪಟ್ಟು ಶಕ್ತಿಶಾಲಿ ಹಾಗೂ 600 ಪಟ್ಟು ಹಗುರವಾಗಿರುತ್ತವೆ
• ತಾಮ್ರ ಬೆಳ್ಳಿಯಿಂದ ಸಾವಿರ ಪಟ್ಟು ಹೆಚ್ಚು ವಿದ್ಯುಚ್ಛಕ್ತಿ ಪ್ರವಾಹ ಮಾಡುವ ಸಾಮರ್ಥ್ಯ
• ವಜ್ರಗಿಂತಲೂ ಹೆಚ್ಚಾಗಿ ಶಾಖವನ್ನು ಸಾಗಿಸಬಲ್ಲದು.

2) ನ್ಯಾನೋ ತಂತಿಗಳು


ಸುಮಾರು 20nm ಗಾತ್ರದ ನ್ಯಾನೋ ತಂತಿಗಳನ್ನು ಉತ್ಪಾದಿಸಲಾಗಿವೆ. ಇವುಗಳನ್ನು ಸಿಲಿಕಾನ್, ಇಂಪಿರಿಯಲ್, ಫಾಸ್ಪೈಟ್, ಮತ್ತು ಗೇಲಿಯಂ ನೈಟ್ರೆಟ್ ಗಳಿಂದ ತಯಾರಿಸಲಾಗುತ್ತದೆ. ಟ್ರಾನಿಸ್ಟರ್ ಉತ್ಪಾದನೆಯ್ಲಿ ಬಳಸಿ ಸಾಮರ್ಥ್ಯ ಹೆಚ್ಚಿಸಲಾಗಿದೆ.

3) ನ್ಯಾನೋ ಸ್ಟ್ರೀಂಗ್ ಗಳು


ಇವುಗಳನ್ನು ಆಯಸ್ಕಾಂತಿಕ ಉತ್ಪಾದಕಗಳಲ್ಲಿ ಹಾಗೂ ಡಿಟೆಕ್ಟರ್ ಗಳಲ್ಲಿ ಬಳಸಲಾಗುತ್ತದೆ

ನ್ಯಾನೋ ತಾಂತ್ರಿಕತೆಯ ಉಪಯೋಗಗಳು


ನ್ಯಾನೋ ತಂತ್ರಜ್ಞಾನವನ್ನು ಈ ಕೆಳಗಿನವುಗಳಲ್ಲಿ ಬಳಸುತ್ತಾರೆ.
• ಕಂಪ್ಯೂಟರ್ ಗಳ ಡಾಟಾ ಸಂಗ್ರಹಣೆ ಹೆಚ್ಚಿಸಲು
• ನ್ಯಾನೋ ಆಪ್ಟಿಕಲ್ ಫೈಬರ್ ಗಳು
• ಬಾಹ್ಯಾಕಾಶದಲ್ಲಿ
• ಕೃಷಿ ಕ್ಷೇತ್ರದಲ್ಲಿ ಹಾಗೂ ನೀರಿನ ಶುಧ್ಧಿಕರಣದಲ್ಲಿ
• ಜಲವಿದ್ಯುತ್ ಹಾಗೂ ವಿದ್ಯುತ್ ಶೇಖರಿಸಲು

ನ್ಯಾನೋ ತಾಂತ್ರಿಕತೆಯ ದುಷ್ಪರಿಣಾಮಗಳು


• ನ್ಯಾನೋ ಟ್ಯೂಬ್ ಗಳು ಮಾನವನ ಚಟುವಟಿಕೆಗಳನ್ನು ಮಾಡಬಹುದು. ಇದನ್ನು ಗ್ರೇ ಗೊ ಸಮಸ್ಯೆ ಎಂದು ಕರೆಯಲಾಗುತ್ತದೆ
• ನ್ಯಾನೋ ಕಣಗಳಿಂದ ಆರೋಗ್ಯದ ಮೆಲೆ ದುಷ್ಪರಿಣಾಮ
• ನ್ಯಾನೋ ತಂತ್ರಜ್ಞಾನದಿಂದ ಒಳನುಸುಳುವಿಕೆ ಹಾಗೂ ಪತ್ತೆದಾರಿ
• ವ್ಯಯಕ್ತಿಕ ಸ್ವಾತಂತ್ರಕ್ಕೆ ಹಾನಿ
• ನ್ಯಾನೋ ಔಷಧಿಯ ನ್ಯಾನೋ ಕಣಗಳು ದೇಹದಲ್ಲಿ ಉಳಿಯಬಹುದು
• ನ್ಯಾನೋ ಬಟ್ಟೆಗಳು ಪ್ರಸ್ತುತ ಜವಳಿ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಬಹುದು.
• ನ್ಯಾನೋ ರೋಬೋಟಿಗಳಿಂದ ಕಳ್ಳತನ ಹೆಚ್ಚಿಸಬಹುದು. ಹಾಗೂ ವೈಧ್ಯಕೀಯ ಕ್ಷೇತ್ರದಲ್ಲಿ ಸವಾಲಾಗಿ ಪರಿಣಮಿಸಬಹುದು.