ಲೋಕಸಭೆ

 

* ಲೋಕಸಭೆಯನ್ನು ಸಂಸತ್ತಿನ ಕೆಳಮನೆ ಎಂದು ಕರೆಯುತ್ತಾರೆ.
* ಸಂವಿಧಾನದ ಪ್ರಕಾರ ಲೋಕಸಭೆಯು 552 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವಂತಿಲ್ಲ (81ನೇ ವಿಧಿ)
* ರಾಜ್ಯಗಳ ವಿವಿಧ ಕ್ಷೇತ್ರಗಳಿಂದ 530ಕ್ಕಿಂತ ಹೆಚ್ಚು ಸದಸ್ಯರನ್ನು ಚುನಾಯಿಸುವಂತಿಲ್ಲ.
* ಕೇಂದ್ರಾಡಳಿತ ಪ್ರದೇಶಗಳಿಂದ 20 ಕ್ಕಿಂತ ಹೆಚ್ಚು ಸದಸ್ಯರನ್ನು ಚುನಾಯಿಸುವಂತಿಲ್ಲ.
* ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ 79 ಸ್ಥಾನಗಳನ್ನು ಪರಿಶಿಷ್ಟ ಜಾತಿಗಳಿಗೆ, 38 ಸ್ಥಾನಗಳನ್ನು ಪರಿಶಿಷ್ಟ ವರ್ಗಗಳಿಗೆ ಮೀಸಲಿಡಲಾಗಿದೆ.
* 160 ದಿನಗಳು ಲೋಕಸಭೆಯ ಅಧಿವೇಶನ ನಡೆಯುತ್ತದೆ.

ಅರ್ಹತೆಗಳು


* ಭಾರತದ ಪ್ರಜೆಯಾಗಿರಬೇಕು
* 25 ವರ್ಷ ವಯಸ್ಸಾಗಿರಬೇಕು
* ಸಂಸತ್ತು ನಿರ್ಧರಿಸಿದ ಅರ್ಹತೆಗಳನ್ನು ಹೊಂದಿರಬೇಕು
* ಯಾವುದೇ ಲಾಭದಾಯಕ ಹುದ್ದೆಯಲ್ಲಿರಬಾರದು (ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ)

ಲೋಕಸಭೆಯ ಸದಸ್ಯರ ಅಧಿಕಾರಾವಧಿ


* ಸಂವಿಧಾನ ಬದ್ಧವಾಗಿ 5 ವರ್ಷಗಳು (83ನೇ ವಿಧಿ)

* ಲೋಕಸಭೆಯು ವರ್ಷದಲ್ಲಿ 2 ಬಾರಿ ಅಧಿವೇಶನ ನಡೆಸತಕ್ಕದ್ದು ಒಂದು ಅಧಿವೇಶನಕ್ಕೂ ಮತ್ತೊಂದು ಅಧಿವೇಶನಕ್ಕೂ ನಡುವಿನ ಅಂತರ 6 ತಿಂಗಳು ಮೀರಬಾರದು.
* ಲೋಕಸಭೆಯ ಅಧಿವೇಶನ ನಡೆಸಲು ಒಟ್ಟು ಸದಸ್ಯರಲ್ಲಿ 1/10 ರಷ್ಟು ಸದಸ್ಯರ ಸಂಖ್ಯೆ ಅಗತ್ಯ (ಕನಿಷ್ಠ 55 ಹಾಜರಿರಬೇಕಾದ ಸದಸ್ಯರು)

ಅಧಿಕಾರ ಹಾಗೂ ಕಾರ್ಯಗಳು


1. ಶಾಸನೀಯ ಅಧಿಕಾರಗಳು
* ಲೋಕಸಭೆ ಶಾಸನ ರಚನೆಯಲ್ಲಿ ಹೆಚ್ಚು ಅಧಿಕಾರ ಹೊಂದಿದೆ. ಆದರೆ ಯಾವುದೇ ಸಾಮಾನ್ಯ ಮಸೂದೆಗಳಿಗೂ ಉಭಯ ಸದನಗಳ ಅನುಮೋದನೆ ಅಗತ್ಯ.
2. ಆಡಳಿತದ ಮೇಲೆ ನಿಯಂತ್ರಣ
* ಪ್ರತಿಯೊಬ್ಬ ಮಂತ್ರಿಯು ತನ್ನ ಇಲಾಖೆಯ ಆಡಳಿತ ನಿರ್ವಹಣೆಯಲ್ಲಿ ಸಂಪೂರ್ಣ ಹೊಣೆಯಾಗಿರುತ್ತಾನೆ. ಸರ್ಕಾರದ ನೀತಿ ಹಾಗೂ ಕಾರ್ಯಕ್ರಮಗಳನ್ನು ಪ್ರಶ್ನಿಸುವ ಮೂಲಕ ಲೋಕಸಭೆ ಮಂತ್ರಿಮಂಡಲವನ್ನು ನಿಯಂತ್ರಿಸುತ್ತದೆ.
3. ಹಣಕಾಸಿನ ಅಧಿಕಾರ
* ರಾಷ್ಟ್ರದ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಲೋಕಸಭೆ ಸಂಪೂರ್ಣ ಅಧಿಕಾರ ಹೊಂದಿದೆ.
* ಹಣಕಾಸು ಮಸೂದೆಯನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಬೇಕು (107 ನೇ ವಿಧಿ)
* ಲೋಕಸಭೆಯನ್ನು ರಾಷ್ಟ್ರೀಯ ಖಜಾನೆಯ ವ್ಯವಸ್ಥಾಪಕ ಎಂದು ಕರೆಯಲಾಗುತ್ತದೆ.
4. ನ್ಯಾಯಿಕ ಅಧಿಕಾರ
* ಲೋಕಸಭೆಯು ರಾಷ್ಟ್ರಪತಿಗಳನ್ನು ಮಹಾಭಿಯೋಗ ಪ್ರಕ್ರಿಯೆಯ ಮೂಲಕ ಪದಚ್ಯುತಿಗೊಳಿಸುವ ಅಧಿಕಾರ ಹೊಂದಿದೆ.
* ಸಂಸದರ, ಸುಪ್ರಿಂ ಮತ್ತು ಹೈಕೋರ್ಟ್‍ಗಳ ನ್ಯಾಯಾಧೀಶರ, ರಾಷ್ಟ್ರಪತಿ, ಉಪರಾಷ್ಟ್ರಪತಿಯ ವೇತನ ನಿರ್ಧರಿಸುವ ಮೊದಲಾದ ಅಧಿಕಾರಗಳನ್ನು ಹೊಂದಿದೆ

ಲೋಕಸಭೆಯ ವಿಶೇಷ ಅಧಿಕಾರಗಳು


* ಹಣಕಾಸು ಮಸೂದೆಯನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಬೇಕು.
* ಒಂದು ಮಸೂದೆಯು ಹಣಕಾಸಿನ ಮಸೂದೆಯೇ ಅಥವಾ ಸಾಮಾನ್ಯ ಮಸೂದೆಯೇ ಎಂಬುದನ್ನು ನಿರ್ಧರಿಸುವ ಅಧಿಕಾರ ಲೋಕಸಭೆಯ ಅಧ್ಯಕ್ಷರಿಗಿರುತ್ತದೆ.
* ಲೋಕಸಭೆಯ ಅಧ್ಯಕ್ಷರು ಜಂಟಿ ಸದನದ ಅಧ್ಯಕ್ಷತೆಯನ್ನು ವಹಿಸುತ್ತಾರೆ.
* ರಾಜ್ಯ ಸಭೆಯು ಆಯವ್ಯಯ ಪಟ್ಟಿಯ ಮೇಲೆ ಚರ್ಚಿಸಬಹುದೇ ವಿನ: ಅನುದಾನ ಬೇಡಿಕೆಯ ಮೇಲೆ ಮತ ಹಾಕುವ ಅಧಿಕಾರವನ್ನು ಹೊಂದಿಲ್ಲ.
* ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಹಿಂಪಡೆಯುವ ಗೊತ್ತುವಳಿಯನ್ನು ಮಂಡಿಸುವ ಅಧಿಕಾರ ಲೋಕಸಭೆಗಿರುತ್ತದೆ.
* ಲೋಕಸಭೆಯು ಅವಿಶ್ವಾಸ ಗೊತ್ತುವಳಿಯ ನಿರ್ಣಯವನ್ನು ಅಂಗೀಕರಿಸುವುದರ ಮೂಲಕ ಮಂತ್ರಿಮಂಡಲವನ್ನು ಅಧಿಕಾರದಿಂದ ವಜಾಗೊಳಿಸಬಹುದು ಈ ಅಧಿಕಾರ ರಾಜ್ಯಭೆಗೆ ಇರುವುದಿಲ್ಲ.