ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ
ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯು ಕೇಂದ್ರ ಸರ್ಕಾರದಿಂದ ಪ್ರಾಯೋಜಿತವಾದ ಸಾಮಾಜಿಕ ಕಳಕಳಿಯ ಅಪಘಾತ ವಿಮೆ ಯೋಜನೆ ಯಾವುದೇ ರೀತಿಯ ಅಪಘಾತ ವಿಮೆ ಹೊಂದಿದಿಲ್ಲದವರನ್ನು ವಿಮೆಯ ವ್ಯಾಪ್ತಿಯೊಳಗೆ ತಂದು ಅವರ ಕುಟುಂಬವನ್ನು ಸುರಕ್ಷಿತ ವಾಗಿರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ
ಪ್ರಾರಂಭ:
09-05-15
ವಿಮಾ ಮೊತ್ತ:
ಅಪಘಾತದಲ್ಲಿ ಸಾವು ಸಂಭವಿಸಿದರೆ ನಾಮನಿರ್ದೇಶಿತರಿಗೆ 2 ಲಕ್ಷ ರೂಪಾಯಿಗಳ ವಿಮಾ ಪರಿಹಾರ ಧನ ನೀಡಲಾಗುತ್ತದೆ; ಅಪಘಾತದಿಂದ ಪೂರ್ಣ ಅಂಗೈಕ್ಯ ಉಂಟಾದರೆ 2 ಲಕ್ಷ ರೂಪಾಯಿವರೆಗೆ ಮತ್ತು ಅರೆ ಅಂಗೈಕ್ಯ ಉಂಟಾದರೆ 1 ಲಕ್ಷ ರೂಪಾಯಿವರೆಗೆ ವಿಮಾ ಪರಿಹಾರ ದೊರೆಯಲಿದೆ.
ಅರ್ಹತೆ:
ಯಾವುದಾದರೂ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರಬೇಕು, 18 ರಿಂದ 7೦ ವರ್ಷದ ವಯೋಮಿತಿಯಲ್ಲಿರಬೇಕು.
ಪ್ರೀಮಿಯಮ್ ಹಣ :
ವಾರ್ಷಿಕ ಕೇವಲ 12 ರೂಪಾಯಿಗಳ (ತೆರಿಗೆ ಹೊರತುಪಡಿಸಿ)ಪ್ರೀಮಿಯಮ್ ಹಣವನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ಕಡಿತ ಮಾಡಲಾಗುವುದು. 2017 ಏಪ್ರಿಲ್ ತಿಂಗಳವರೆಗಿನ ಮಾಹಿತಿ ಆಧಾರದಲ್ಲಿ ಇಲ್ಲಿಯವರೆಗೆ 10 ಕೋಟಿ ಜನರು ವಿಮಾಸೌಲಭ್ಯವನ್ನು ಪಡೆದಿದ್ದು, 9705 ಜನರಿಗೆ ವಿಮೆ ಹಣವನ್ನು ಪಾವತಿ ಮಾಡಲಾಗಿದೆ.