ನವೀಕರಿಸಬಹುದಾದ ಇಂಧನಗಳು (Renewable Energy)
 
• ಎಂದಿಗೂ ಮುಗಿದುಹೋಗಲಾರದಂತಹ ಮತ್ತು ಪುನರ್ ಉತ್ಪತ್ತಿ ಮಾಡಬಹುದಾದಂತಹ ಇಂಧನಗಳನ್ನು ಅಂತಹ ಇಂಧನಗಳನ್ನು ನವೀಕರಿಸಬಹುದಾದ ಇಂಧನಗಳೆಂದು ಕರೆಯುತ್ತಾರೆ.
• ಉದಾ: ಸೌರ ವಿದ್ಯುತ್, ಪವನ ಶಕ್ತಿ ಇತ್ಯಾದಿ.
• ಸಾಮಾನ್ಯವಾಗಿ ಈ ಇಂಧನಗಳು ವಾತವರಣ ಕಲುಷಿತಗೊಳಿಸುವುದಿಲ್ಲ.
• ನವೀಕರಿಸಬಹುದಾದ ಇಂಧನ ಎಂದಿಗೂ ಮುಗಿದು ಹೋಗುವುದಿಲ್ಲ.
• ಜಗತ್ತಿನಲ್ಲಿ ಅತಿ ಹೆಚ್ಚು ನವೀಕರಿಸಬಹುದಾದ ಇಂಧನ ತಯಾರಿಸುವ ಕ್ಷಮತೆ ಭಾರತಕ್ಕ ಇದೆ.
ಸೌರ ಶಕ್ತಿ
• ಸೂರ್ಯನ ಕಿರಣಗಳ ಶಾಖ ಮತ್ತು ಬೆಳಕುಗಳಿಂದ ಸಿಗುವ ಶಕ್ತಿವನ್ನು(energy) ವಿವಿಧ ತಂತ್ರಜ್ಞಾನಗಳನ್ನು ಬಳಸಿ ಮಾನವನ ಉಪಯೋಗಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಿ ಪಡೆಯುವುದೇ ಸೌರಶಕ್ತಿ.
• ಸೌರಶಕ್ತಿಯು ನವೀಕರಿಸಬಹುದಾದ ಸಂಪನ್ಮೂಲವಾಗಿದೆ, ಏಕೆಂದರೆ ಅದು ಬಳಕೆಯಾಗುವ ದರದಲ್ಲಿಯೇ ಪುನಃ ಭರ್ತಿಯಾಗುತ್ತದೆ.
• ಭೂಮಿಗೆ ಬರುವ ಸೌರ ಶಕ್ತಿಯನ್ನು ಕೇವಲ 0.1% ಸೌರ ಶಕ್ತಿ ಬಳಕೆ ಮಾಡಿಕೊಂಡರೆ ಈಡಿ ವಿಶ್ವದ ಇಂಧನ ಸಮಸ್ಯೆ ಬಗೆಹರಿಯುತ್ತದೆ.
• ಫೋಟೋವೋಲ್ಟಾಯಿಕ್ ಸೆಲ್ಗಳನ್ನು ಬಳಸುವುದರಿಂದ ವಿದ್ಯುತ್ನ್ನು ಉತ್ಪಾದಿಸಬಹುದು.
• ಭಾರತವು ಪ್ರತಿವರ್ಷಕ್ಕೆ ಸುಮಾರು 6000 ಬಿಲಿಯನ್ ಮೆಗಾವಾಟುಗಳ ಸೌರಶಕ್ತಿಯನ್ನು ಪಡೆಯುತ್ತಿದೆ.
• ಭಾರತ ಮತ್ತು ಫ್ರಾನ್ಸೆ ಪ್ರಧಾನಮಂತ್ರಿ ಗುರಗಾಂವನ್ ಲ್ಲಿ ಇಂಟನ್ಯಾಷನಲ್ ಸೋಲಾರ್ ಅಲಾಯನ್ಸ ಪ್ರಾರಂಭಿಸಿವೆ. ಸುಮಾರು 120 ದೇಶಗಳು ಇದರ ಸದಸ್ಯರಾಗಿದ್ದಾರ
• ಕಮಥಿ ಸೋಲಾರ್ ಪ್ರೋಜೆಕ್ಟ 648 MW ಉತ್ಪಾದಿಸುತ್ತದೆ.
ಉಪಯೋಗಗಳು
1.ಸೌರ ಕುಕ್ಕರ್
ಸೌರಕುಕ್ಕರ್ ಗಳಲ್ಲಿ ಮುಖ್ಯವಾಗಿ ಈ ಕೆಳಕಂಡ ನಿಯಮಗಳನ್ವಯ ಉಷ್ಣಾಂಶವನ್ನು ಹಿಡಿದಿಡುತ್ತವೆ.
1. ಸೂರ್ಯನ ಶಕ್ತಿಯನ್ನು ಕೇಂದ್ರಿಕರಿಸುವುದು.
2. ಸೂರ್ಯ ಶಕ್ತಿಯನ್ನು ಶಾಖ ಶಕ್ತಿಯಾಗಿ ಪರಿವರ್ತಿಸುವುದು.
3. ಶಾಖವನ್ನು ಹಿಡಿದಿಡುವುದು.
ಸೌರ ಕುಕ್ಕರ್ ಗಳ ಉಪಯೋಗಗಳು
• ಯಾವುದೇ ಇಂಧನದ ಅವಶ್ಯಕತೆ ಇರುವುದಿಲ್ಲ.
• ಉಪಯೋಗಿಸುವುದು ತುಂಬಾ ಸುಲಭ.
• ಹೆಚ್ಚು ಹೆಚ್ಚು ಬಳಕೆಯಿಂದ ಅರಣ್ಯ ನಾಶವನ್ನು ತಡೆಗಟ್ಟಬಹುದು.
• ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಬಹುದು.
• ಪ್ರತ್ಯೇಕ ಅಡುಗೆ ಮನೆಯ ಅವಶ್ಯಕತೆ ಇರುವುದಿಲ್ಲ.
2. ನೀರು ಕಾಯಿಸಲು
3. ಸೋಲಾರ್ ಪಂಪ
ಪವನ ಶಕ್ತಿ
• ಇದೊಂದು ಸ್ವಚ್ಚ ಇಂಧನವಾಗಿದ್ದು ಜಾಗತಿಕ ವಿದ್ಯುತ್ ಅಭಾವ ನಿರ್ಣಯಿಸುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ 1986ರಲ್ಲಿ ಪ್ರಾರಂಭವಾಗಿದೆ.
• ಭಾರತದಲ್ಲಿ ಸುಝಲಾನ್ ಸಂಸ್ಥೆಯ ಹೆಚ್ಚು ಪವನ ವಿದ್ಯುತ ಘಟಕಗಳನ್ನು ಸ್ಥಾಪಿಸುತ್ತಿದೆ.
• ತಮಿಳುನಾಡಿನ ಮುಪ್ಪಂಡಲ್ ವಿಂಡಫಾರ್ಮ 1500 MW ಸಾಮರ್ಥ್ಯ ಹೊಂದಿದ್ದು ದೇಶದ ಅತಿ ದೊಡ್ಡ ಪವನ ವಿದ್ಯುತ್ ಕೇಂದ್ರವಾಗಿದೆ.
• 2015ರ ದತ್ತಾಂಶದಂತೆ ಭಾರತವು ಜಗತ್ತಿನ 4ನೇ ದೊಡ್ಡ ಅತಿ ಹೆಚ್ಚು ಪವನ ವಿದ್ಯುತ್ ಉತ್ಪಾದಿಸುವ ರಾಷ್ಟ್ರವಾಗಿದೆ.
• ರಾಜ್ಯಗಳಲ್ಲಿ ತಮಿಳುನಾಡು ಅತಿ ಹೆಚ್ಚು ಉತ್ಪಾದಿಸುತ್ತಿದ್ದು ಕರ್ನಾಟಕ ರಾಜ್ಯ 5 ನೇ ಸ್ಥಾನದಲ್ಲಿದೆ
• ಗುಜರಾತ ಕರಾವಳಿಯಲ್ಲಿ 100MW ಸಾಮರ್ಥ್ಯದೆ ಪವನ ವಿದ್ಯುತ್ ಕೇಂದ್ರ ಸ್ಥಾಪಿಸಲಾಗಿದೆ.
ಜೈವಿಕ ದ್ರವ್ಯ
• ಬೆಳೆ ಪಡೆದ ನಂತರ ಉಳಿಯುವ ಕಡ್ಡಿ, ಬೇರು, ಎಲೆ, ಗಿಡಮರಗಳಿಂದ ಕೆಳಗೆ ಬೀಳುವ ಎಲೆ, ಕಡ್ಡಿಗಳು, ಪ್ರಾಣಿಗಳ ಸಗಣಿ, ಚರಂಡಿ ಹೊಲಸು, ಮುಂತಾದವನ್ನು ಜೈವಿಕ ದ್ರವ್ಯ ಅಥವಾ ಬಯೋಮಾಸ್ ಎನ್ನುವರು. ಹಸಿಯಾಗಿರುವ ಜೈವಿಕ ದ್ರವ್ಯದ ವಸ್ತುಗಳಾದ ಎಲೆ, ಕಡ್ಡಿ, ಸಿಪ್ಪೆ, ಮುಂತಾದವುಗಳನ್ನು ಉರಿಸಿ, ನೀರಾವಿ ಪಡೆದು, ಅದನ್ನು ವಿದ್ಯುತ್ ಪಡೆಯಲು ಉಪಯೋಗಿಸಬಹುದು.
ಉಬ್ಬರವಿಳಿತ ಶಕ್ತಿ
• ಸಾಗರಗಳು ಸೂರ್ಯ ಮತ್ತು ಚಂದ್ರನ ಗುರುತ್ವಾಕರ್ಷಣೆಗೆ ಒಳಗಾಗಿ ಉಬ್ಬರವಿಳಿತಗಳು ಉಂಟಾಗುತ್ತವೆ. ಸಮುದ್ರದ ನೀರು ಉಕ್ಕುವುದರಿಂದ ಜಲಮಟ್ಟ ಹೆಚ್ಚಾಗುವುದನ್ನು ಉಬ್ಬರ (high tide) ಎನ್ನುವರು.
• ಅದೇ ರೀತಿ ಸಮುದ್ರದ ಜಲಮಟ್ಟ ಕಡಿಮೆಯಾಗಿ ನೀರು ಇಳಿಯುವುದನ್ನು ಇಳಿತ (low tide) ಎನ್ನುವರು.
• ಉಬ್ಬರ ಹಾಗೂ ಇಳಿತಗಳ ನಡುವೆ ಏಳು ಮೀಟರುಗಳ ವ್ಯತ್ಯಾಸವಿದ್ದಲ್ಲಿ ನಾವು ಅದನ್ನು ವಿದ್ಯುತ್ ಉತ್ಪಾದಿಸಲು ಬಳಸಬಹುದು. ಸಾಗರಗಳ ಕಿನಾರೆಗೆ ಅಡ್ಡಗೋಡೆ ನಿರ್ಮಿಸಿ ಉಬ್ಬರ ಬಂದಾಗಿ ನೀರನ್ನು ಸಂಗ್ರಹಿಸಿಕೊಂಡು, ಆನಂತರ ಟರ್ಬೆನುಗಳ ಮೂಲಕ ಹಾದುಹೋಗುವಂತೆ ಮಾಡಿದರೆ ವಿದ್ಯುತ್ ಉತ್ಪಾದನೆಯಾಗುತ್ತದೆ.
• ಭಾರತದ ಗಲ್ಫ್ ಆ ಕಚ್ ನಲ್ಲಿ ಈ ಶಕ್ತಿಯಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಸಾಗರ ಉಷ್ಣಶಕ್ತಿ
• ಉಷ್ಣ ಪ್ರದೇಶಗಳ ಸಾಗರಗಳಲ್ಲಿ ಮೇಲ್ಮೈ ನೀರಿನ ಉಷ್ಣತೆ ಹಾಗೂ ಆಳ ಸಮುದ್ರದ ನೀರಿನ ಉಷ್ಣತೆಯಲ್ಲಿ 20 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ವ್ಯತ್ಯಾಸವಿದ್ದಲ್ಲಿ ನಾವು ಅದರಿಂದ ವಿದ್ಯುತ್ ಪಡೆಯಲು ಸಾಧ್ಯವಿದೆ. ಅಮೋನಿಯ ಅನಿಲದಿಂದ ಟರ್ಬೆನುಗಳು ತಿರುಗುವಂತೆ ಮಾಡಿ, ವಿದ್ಯುತ್ ಉತ್ಪಾದಿಸಬಹುದು.
ಜೈವಿಕ ಇಂಧನಗಳು
• ಜೈವಿನ ದ್ರವ್ಯವನ್ನು ಕೊಳೆಯಿಸುವುದರಿಂದ ಎಥನಾಲ್ ಮತ್ತು ಮೆಥನಾಲ್ಗಳನ್ನು ಪಡೆದು, ಅವನ್ನು ಇಂಧನವನ್ನಾಗಿ ಬಳಸಬಹುದು. ಈಗಾಗಲೇ ಬ್ರೆಜಿಲ್ನಲ್ಲಿ ಈ ಇಂಧನ ಜನಪ್ರಿಯವಾಗಿದೆ.
• ಹೊಂಗೆ ಎಣ್ಣೆಯನ್ನು ಡೀಸೆಲ್ಗೆ ಬದಲಿಯಾಗಿ ಬಳಸಬಹುದು. ಜಟ್ರೋಪ ಗಿಡದ ಬೀಜಗಳಿಂದ ಬರುವ ಎಣ್ಣೆಯನ್ನು ಬದಲಿ ಇಂಧನವಾಗಿ ಬಳಸಬಹುದು.