ಕೆಲಸ ಮತ್ತು ಶಕ್ತಿ (Work & Energy)
 
ಕೆಲಸ
• ಯಾವುದೇ ವಸ್ತುವಿನ ಮೇಲೆ ಬಲ ಪ್ರಯೋಗವಾದಾಗ ಕೆಲಸವಾಗುತ್ತದೆ. ಹಾಗೇಯೆ ಒಂದು ವಸ್ತುವಿನ ಚಲನೆಯಲ್ಲಿ ಬದಲಾವಣೆ ಯಾವಾಗಲೂ ಕೆಲಸ ಆಗಿರುತ್ತದೆ.
• ಉದಾ- ಒಂದು ಕಲ್ಲನ್ನು ಎತ್ತಿ ಇಟ್ಟಾಗ ಬಲ ಪ್ರಯೋಗ ಹಾಗೂ ಸ್ಥಾನ ಪಲ್ಲಟ ಎರಡು ಆಗುವುದು.
• W=F*S
ಇಲ್ಲಿ
• W=Work- ಕೆಲಸ
• F= Force- ಬಲ
• S= displacement- ಸ್ಥಾನ ಪಲ್ಲಟ
• ಈ ಮೇಲಿನ ವ್ಯಾಖ್ಯಾನಗಳ ಪ್ರಕಾರ ಕೆಲಸ ಎಂದರೆ,
• ಯಾಂತ್ರಿಕ ಕೆಲಸ ಎಂದರ್ಥ.
• ಬಲ ಪ್ರಯೋಗದ ದಿಕ್ಕಿನಲ್ಲಿಯೇ ಕಾಯ ಚಲಿಸಬೇಕು.
• ಬಲ ಪ್ರಯೋಗವಾಗಿಯೂ ಚಲನೆ ಉಂಟಾಗದಿದ್ದರೆ ಕೆಲಸ ಶೂನ್ಯ.
• ಬಲ ಪ್ರಯೋಗ ಅಥವಾ ಕೆಲಸದಲ್ಲಿ ಶಕ್ತಿ ವರ್ಗಾವಣೆಗೊಳ್ಳುತ್ತದೆ.
• ಕೆಲಸದ ಮೂಲಮಾನ ಜೌಲ (J).
• ಕೆಲಸದ ಮೂಲಮಾನ=ನ್ಯೂಟನ್ *ಮೀಟರ್
ಶಕ್ತಿ
• ಕೆಲಸ ಮಾಡಲು ಅವಶ್ಯಕತೆ ಇರುವ ಸಾಮಥ್ರ್ಯ.
• ಬೆಳಕು, ಶಬ್ದ, ಶಾಖ ಇತ್ಯಾದಿ ಶಕ್ತಿಯ ರೂಪಗಳು.
• ಶಕ್ತಿಯನ್ನು ತಯಾರಿಸಲು ನಶಿಸಲು ಆಗುವುದಿಲ್ಲ ಅದನ್ನು ಕೇವಲ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ವರ್ಗಾಯಿಸಬಹುದು.
• ಚಲನಶಕ್ತಿ (Kinetic Energy) : ಒಂದು ವಸ್ತು ಚಲನದಿಂದ ಶಕ್ತಿ ಪಡೆದರೇ ಚಲನಶಕ್ತಿ ಎನ್ನುವರು.
• Kinetic Energy=1/2 mv^2
• ಪ್ರಚ್ಚನ್ನಶಕ್ತಿ ((Potential Energy) : ಒಂದು ವಸ್ತು ತನ್ನ ಸ್ಥಾನ ಬಲದಿಂದ ಶಕ್ತಿ ಪಡೆದರೇ ಪ್ರಚ್ಚನ್ನಶಕ್ತಿ ಎನ್ನುವರು.
• (Potential Energy)=mgh
ಸಾಮರ್ಥ್ಯ
• ಏಕಮಾನ ಕಾಲದಲ್ಲಿ ಮಾಡಿದ ಕೆಲಸದ ದರ
• ಶಕ್ತಿಯನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸುವ ದರಕ್ಕೆ ಸಾಮರ್ಥ್ಯ ಎನ್ನುವರು.
• ಸಾಮರ್ಥ್ಯ =ಕೆಲಸ /ಸಮಯ
• ಅಂತರಾಷ್ಟ್ರೀಯ ಏಕಮಾನ ವ್ಯಾಟ್(W).
• ಹಾರ್ಸ್ ಪಾವರ್ (HP)--ಬ್ರಿಟಿಷ್ ವ್ಯವಸ್ಥೆಯಲ್ಲಿ ಸಾಮಥ್ರ್ಯದ ಏಕಮಾನ.
• 1HP= 746 Watt
• 1Kilo Watt Hour(Kwh)=3.6×10^6