Loading [MathJax]/extensions/MathML/content-mathml.js

ಪಶ್ಚಿಮ ಘಟ್ಟಗಳು

 

ಪೀಠಿಕೆ :


ಭಾರತವು ಭೌಗೋಳಿಕವಾಗಿ ವಿಂಗಡಣೆಯನ್ನು ಮಾಡಿದಾಗ ಅದರಲ್ಲಿ ಪಶ್ವಿಮ ಘಟ್ಟವು ಒಂದಾಗಿದೆ. ಪಶ್ವಿಮ ಘಟ್ಟವು ಭಾರತದ ಸಸ್ಯವರ್ಗಕ್ಕೆ ಕಿರಿಟವಿದ್ದಂತೆ. ಅನೇಕ ಸಸ್ಯಸಂಕುಲಕ್ಕೆ, ಪ್ರಾಣಿ ಸಂಕುಲಕ್ಕೆ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಹಾಗೆಯೇ ಇದನ್ನು ರಕ್ಷಿಸುವ ಜವಾಬ್ದಾರಿಯೂ ಸರ್ಕಾರ & ನಾಗರಿಕರ ಮೇಲಿದೆ. ಆದ್ದರಿಂದ ಸರ್ಕಾರ ಅಧ್ಯಯನಕ್ಕಾಗಿ 2 ಸಮಿತಿಗಳನ್ನು ನೇಮಕ ಮಾಡಿ ವರದಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಸಮಿತಿಗಳನ್ನು ನೇಮಕ ಮಾಡಿ ವರದಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ತೊಡಗಿಕೊಂಡಿದೆ.

ಪಶ್ವಿಮ ಘಟ್ಟದ ವಿಶೇಷತೆ:


ಪಶ್ವಿಮ ಘಟ್ಟವು ಭಾರತ ದೇಶದ ಆರು ರಾಜ್ಯಗಳನ್ನು ಆವರಿಸಿದೆ ಅವುಗಳೆಂದರೆ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ & ತಮಿಳುನಾಡು ಅದೇ ರೀತಿಯಾಗಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 11 ಜಿಲ್ಲೆಗಳನ್ನು ಆವರಿಸಿದೆ. ಉತ್ತರಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿ, ಉಡುಪಿ, ಮೈಸೂರು, ಚಾಮರಾಜನಗರ, ಹಾಸನ, ದಾವಣಗೇರಿ.

ವಿಸ್ತೀರ್ಣ –


1600ಕಿ.ಮಿ. ಉದ್ದ 100ಕಿ.ಮಿ ಅಗಲ & 16,000 ಚ. ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ.

ಪಶ್ವಿಮ ಘಟ್ಟದಲ್ಲಿ ಅನ್ವೆಮುಡಿ ಅತ್ಯಂತ ಎತ್ತರದ ಶಿಖರವಾಗಿದೆ.

ಪಶ್ವಿಮ ಘಟ್ಟಗಳಲ್ಲಿ 7 ಭಾಗಗಳಿವೆ-ಅಣ್ಣಾಮಲೈ, ಅಗಸ್ತ್ಯಮಲೈ, ಪೆರಿಯಾರ, ನೀಲಗಿರಿ, ತಲಕಾವೇರಿ, ಕುದುರೆಮುಖ, ಸಹ್ಯಾದ್ರಿ, ಪಶ್ವಿಮ ಘಟ್ಟದ ಇನ್ನೊಂದು ವಿಶೇಷತೆಯೆಂದರೆ ಜುಲೈ 01, 2012ರಂದು ಯುನೆಸ್ಕೋದ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಭಾರತದಿಂದ 29ನೇ ತಾಣವಾಗಿ ಸೇರ್ಪಡೆಯಾಗಿದೆ. ಹಾಗೆಯೇ ಇದು ಭಾರತದ 6ನೇ ನೈಸರ್ಗಿಕ ತಾಣವಾಗಿ ವಿಶ್ವ ಪರಂಪರೆಯ ತಾಣಕ್ಕೆ ಸೇರಿತು.

ಪಶ್ವಿಮ ಘಟ್ಟವು 5000 ಪ್ರಭೇದದ ವಂಶಿಗಳು 308 ಜಾತಿ ಪಕ್ಷಿಗಳು, 179 ಉಭಯ ವಾಸಿಗಳನ್ನು ಒಳಗೊಂಡಿದೆ, 325 ಅಪಾಯದ ಅಂಚಿನಲ್ಲಿರುವ ಸಸ್ಯಗಳು & ಪ್ರಾಣಿಗಳನ್ನು ಇದು ಒಳಗೊಂಡಿದೆ. ‘ನೀಲಗಿರಿ’ ಬೆಟ್ಟವು ಭಾರತದ ಮೊದಲ ಜೀವ ವೈವಿದ್ಯತೆಯ ತಾಣವಾಗಿ ಯುನೆಸ್ಕೋದಿಂದ 1986ರಲ್ಲಿ ಆಯ್ಕೆಯಾಗಿದೆ.

ಪಶ್ವಿಮ ಘಟ್ಟದ ಅಧ್ಯಯನ ಕುರಿತು ಕೇಂದ್ರ ಸರಕಾರ ರಚಿಸಿದ ಸಮಿತಿಗಳು


• ಮಾಧವ ಗಾಡ್ಗೀಳ್ ಸಮಿತಿ:ಕೇಂದ್ರ ಪರಿಸರ ಸಚಿವಾಲಯ 2010ರಲ್ಲಿ ವೆಸ್ಟರ್ನ್ ಘಾಟ್ಸ್ ಇಶಾಲಜಿ ಎಕ್ಸ್ಪರ್ಟ ಪ್ಯಾನಲ್ ರಚಿಸಿ ಇದಕ್ಕೆ ವಿಜ್ಞಾನಿ ಮಾಧವ ಗಾಡ್ಗೀಳ್ ಅವರನ್ನು ಅದ್ಯಕ್ಷರನ್ನಾಗಿ ನೇಮಿಸಿತು. ಈ ಸಮಿತಿ 2011ರಲ್ಲಿ ವರದಿ ಸಲ್ಲಿಸಿತು. ಗಾಡ್ಗೀಳ್ ಸಮಿತಿ ಪಶ್ವಿಮ ಘಟ್ಟಗಳನ್ನು 3 ವಲಯಗಳನ್ನಾಗಿ ವಿಂಗಡಿಸಿ ಇವುಗಳನ್ನು “ಇಕಾಲಾಜಿಕಲ್ ಸೆನ್ಸಿಟೀವ್ ಝೋನ್” ಎಂದು ಕರೆದಿದೆ. ಈ ಸಮಿತಿಯು ಶೇ.64 ರಷ್ಟು ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಿತು.

ವಲಯ – 1



• ಗಣಿಗಾರಿಕೆಗೆ ಯಾವುದೇ ಹೊಸ ಪರವಾನಿಗೆ ನೀಡಬಾರದು, ಈಗಾಗಲೇ ಇರುವ ಗಣಿಗಳನ್ನು ಹಂತ ಹಂತವಾಗಿ 5 ವರ್ಷಗಳೊಳಗೆ ಸ್ಥಗಿತಗೊಳಿಸಬೇಕು
• ಹೊಸ ಕೈಗಾರಿಕೆಗಳಿಗೆ ಅನುಮತಿ ನೀಡುವಂತಿಲ್ಲ ಈಗಿರುವ ಅತಿ ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆಗಳು2016ರ ವೇಳೆಗೆ ಶೂನ್ಯ ಮಾಲಿನ್ಯ ಹಂತ ತಲುಪಬೇಕು. ಮಾಲಿನ್ಯ ರಹಿತ ಹಸಿರು ಹಾಗೂ ನೀಲಿ ಕೈಗಾರಿಕೆಗಳಿಗೆ ನಿಬಂಧಿತ ಅನುಮತಿ ನೀಡಬಹುದು.
• ನದಿಗಳಿಗೆ 3 ಮೀಟರ್ಗಿಂತಲೂ ಎತ್ತರವಾದ ಅಣೆಕಟ್ಟು ನಿರ್ಮಿಸುವಂತಿಲ್ಲ ಜೊತೆಗೆ ಹೊಸ ವಿದ್ಯುತ್ ಘಟಕಗಳಿಗೆ ಅನುಮತಿ ನೀಡುವಂತಿಲ್ಲ
• ಪ್ರವಾಸೋದ್ಯಮಕ್ಕೆ ಅವಕಾಶ ಆದರೆ ತ್ಯಾಜ್ಯ ನಿರ್ವಹಣೆಗೆ ನಿರ್ಬಂಧ.

ವಲಯ- 2


ವಲಯ- 2
• ಅಸ್ತಿತ್ವದಲ್ಲಿರುವ ಗಣಿಗಳ ಮೇಲೆ ನಿಯಂತ್ರಣ & ಹೊಸ
• ಗಣಿಗಾರಿಕೆಗೆ ಅನುಮತಿ ನೀಡುವಂತಿಲ್ಲ
• ಮಾಲಿನ್ಯಕಾರಕ ಕೈಗಾರಿಕೆಗಳು 2016ರ ವೇಳೆಗೆ ಶೂನ್ಯ ಮಾಲಿನ್ಯ ಹಂತ ತಲುಪಬೇಕು ಇಲ್ಲದಿದ್ದರೆ ಮುಚ್ಚಬೇಕು.
• ನದಿಗಳಿಗೆ 15 ಮೀಟರ್ಗೂ ಹೆಚ್ಚು ಎತ್ತರದ ಆಣೆಕಟ್ಟು ನಿರ್ಮಿಸುವಂತಿಲ್ಲ
• ಹೊಸವಿದ್ಯುತ್ ಘಟಕಗಳಿಗೆ ಅನುಮತಿ ನೀಡುವಂತಿಲ್ಲ
• ಅನಗತ್ಯವಾಗಿ ಹೊಸ ರೈಲು, ರಸ್ತೆ ಮಾರ್ಗ ಯೋಜಿಸುವಂತಿಲ್ಲ

ವಲಯ – 3


• ಅಪರೂಪದ ಖನಿಜ ಉತ್ಪಾದನೆ ಗಣಿಗಾರಿಕೆಗೆ ಅವಕಾಶ
• ಅಸ್ಥಿತ್ವದಲ್ಲಿರುವ ಗಣಿಗಳ ನಿಯಂತ್ರಣ ಹಾಗೂ ಸೋಷಿಯಲ್ ಆಡಿಟ್ಗೆ ಒಳಪಡಿಸುವುದು.
• ಅಣೆಕಟ್ಟು ಎತ್ತರದ ಮೇಲೆ ಯಾವುದೇ ನಿರ್ಬಂಧವಿಲ್ಲ.
• ಹೊಸ ವಿದ್ಯುತ್ ಉತ್ಪದನಾ ಕೇಂದ್ರಗಳು ಮಾಲಿನ್ಯ ರಹಿತವಾಗಿದ್ದಲ್ಲಿ ಅನುಮತಿ ನೀಡಬಹುದು.
• ನಿಯಂತ್ರಣಕೊಳಪಟ್ಟ ರೈಲು ರಸ್ತೆ ಮಾರ್ಗಗಳಿಗೆ ಅನುಮತಿ

• ಕಸ್ತೂರಿ ರಂಗನ್ ವರದಿ:


ಹೆಚ್ಚು ಪರಿಸರ ಸ್ನೇಹಿಯಾದ ಮಾಧವ ಗಾಡ್ಗೀಳ್ ವರದಿಯೂ ವಾಸ್ತವ ಸಂಗತಿಗೆ ವಿರುದ್ಧವಾದದ್ದು ಎಂಬ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರವು ಕಸ್ತೂರಿ ರಂಗನ್ ರವರ ನೇತೃತ್ವದಲ್ಲಿ ಆಗಸ್ಟ 17, 2012ರಂದು HLWG- High Level Working Group ಸಮಿತಿಯನ್ನು ನೇಮಕ ಮಾಡಲಾಯಿತು. ಇದು ಏಪ್ರೀಲ್ 15 2013ರಂದು ವರದಿಯನ್ನು ಒಪ್ಪಿಸಿತು.

• ವರದಿಯ ಮುಖ್ಯಾಂಶಗಳು:


ಕಸ್ತೂರಿ ರಂಗನ್ ವರದಿಯ 10 ಸಭೆಗಳು 4 ಕ್ಷೇತ್ರಗಳಿಗೆ ಭೇಟಿ ನೀಡಿ ವರದಿಯನ್ನು ಸಿದ್ದಪಡಿಸಿಕೊಂಡಿತು.

ಪಶ್ವಿಮ ಘಟ್ಟವನ್ನು 2 ಭಾಗಗಳಾಗಿ ವಿಂಗಡಿಸಿತು.
1. Cultural Landscape 63%
2. Natural Landscape 37%

Cultural LandScape:


ದೊಡ್ಡ ದೊಡ್ಡ ನಗರ ಪಟ್ಟಣಗಳು ಗಣಿಗಾರಿಕೆ ಕೈಗಾರಿಕೆ & ಅತಿ ಹೆಚ್ಚು ಜನಸಾಂದ್ರತೆ ಹೊಂದಿದ ಪ್ರದೇಶಗಳೆಂದು ಪರಿಗಣಿಸಲಾಗಿದ್ದು ಇಲ್ಲ ಸರಂಕ್ಷಣಾ ಕಾರ್ಯ ಅಗತ್ಯವಿಲ್ಲ.

Natural Landscape:


ನಗರ ಪಟ್ಟಣಗಳು ಕಡಿಮೆ ಇದ್ದು ಜನಸಾಂದ್ರತೆ ಕಡಿಮೆ ಇರುವ ಪ್ರದೇಶ ಸರಂಕ್ಷಣೆ ಕಾರ್ಯ ಅಗತ್ಯವಾಗಿದೆ. Natural Landscape ನಲ್ಲಿನ ಈಗಾಗಲೇ ಶೇ.10 ಅರಣ್ಯವನ್ನು ರಾಷ್ಟ್ರೀಯ ಉದ್ಯಾನವನ, ವನ್ಯಜೀವಿಧಾಮ, ಆನೆಗಳ ಓಡಾಟ ಪ್ರದೇಶ ಎಂದು ರಕ್ಷಣೆಗೆ ಒಳಪಡಿಸಿದೆ, ಆದ್ದರಿಂದ 37% ದಲ್ಲಿ 10% ತೆಗೆದರೆ ಇನ್ನುಳಿದ 27% ಮಾತ್ರ ರಕ್ಷಣೆಗೆ ಒಳಪಡಿಸಿತು.

• ಕಸ್ತೂರಿ ರಂಗನರವರ ವರದಿಯ ಪರಿಸರದ ಸೂಕ್ಷ್ಮ ಘಟಕ ಗ್ರಾಮ ಆಗಿದೆ. ಇಡೀ ಪಶ್ವಿಮ ಘಟ್ಟದಲ್ಲಿ 4156 ಗ್ರಾಮಗಳನ್ನು ರಕ್ಷಣೆಗಾಗಿ ಗುರುತಿಸಿದ್ದಾರೆ ಅವುಗಳಲ್ಲಿ ಮಹಾರಾಷ್ಟ್ರ 2159, ಕರ್ನಾಟಕ 1576 (90%) , ಕೇರಳ 123 ಗ್ರಾಮಗಳನ್ನು ಗುರುತಿಸಲಾಯಿತು.

ವರದಿಯ ಶಿಫಾರಸ್ಸುಗಳು :


• ಮರಗಳು ತೆಗೆಯುವುದು, ಕಲ್ಲುಕ್ವಾರಿ, ಎಲ್ಲ ರೀತಿಯ ಗಣಿಗಾರಿಕೆ ನಿಷೇಧ
• ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವಂತಿರಲಿಲ್ಲ ಆದರೆ ಜಲವಿದ್ಯುತ ಸ್ಥಾವರ ಸ್ಥಾಪಿಸಬಹುದು. ಪವನ ವಿದ್ಯುತ್ ಸ್ಥಾಪಿಸಬಹುದು.
• ಪರಿಸರ ಮಾಲಿನ್ಯವನ್ನುಂಟು ಮಾಡುವ ರಾಸಾಯನಿಕ, ಕ್ರಿಮಿನಾಶಕ, ಪೆಟ್ರೋಲಿಯಂ ಸೇರಿದಂತೆ 45 ಕೆಂಪುಪಟ್ಟಿ ಕೈಗಾರಿಕೆಯನ್ನು ಸ್ಥಾಪಿಸುವಂತಿಲ್ಲ
• ಗೋಡಂಬಿ, ಕಾಫಿ, ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಕಿತ್ತಾಳೆ ಪಟ್ಟಿ ಕೈಗಾರಿಕೆಗೆ ನಿಯಂತ್ರಣಕ್ಕೆ ಒಳಪಡಿಸಿ ಅನುಮತಿ ನೀಡಬಹುದು
• ಗ್ರಾಮಗಳಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳಬೇಕೆಂದರೆ ಆಯಾ ಗ್ರಾಮದ ಗ್ರಾಮ ಸಭೆಯಲ್ಲಿ ತಿಳುವಳಿಕೆ ಸಹಿತ ಅನುಮತಿ ಕಡ್ಡಾಯ.

ಇವೆರಡು ವರದಿಗಳ ಅದ್ಯಯನಗಳನ್ನು ಅಭ್ಯಸಿಸಿ ಕೊನೆಗೆ ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿ ಆಧರಿಸಿ ಅಧಿಸೂಚನೆ ಹೊರಡಿಸಿದೆ. ಈ ವರದಿಯನ್ವಯ ಜೀವವೈವಿದ್ಯ ತಾಣವನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದರಿಂದ ರಾಜ್ಯದ 33 ತಾಲೂಕುಗಳ ಅಭಿವೃದ್ದಿ ಪ್ರಕ್ರಿಯೆಗೆ ಅಡಿಯಾಗುವ ಸಂಭವ ಇದೆ.