Loading [MathJax]/extensions/MathML/mml3.js

ಪ್ರಧಾನ ಮಂತ್ರಿ ಜನ ಔಷಧ ಯೋಜನೆ

 

ಬಡವರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಜೆನೆರಿಕ್ ಔಷಧ ಗಳನ್ನು ಮಾರಾಟ ಮಾಡುವ ಯೋಜನೆಯೆ ಪ್ರಧಾನ ಮಂತ್ರಿ ಜನ ಔಷಧ ಯೋಜನೆ. ಜನ ಔಷಧ ಕೇಂದ್ರಗಳಲ್ಲಿ 500ಕ್ಕೂ ಹೆಚ್ಚು ಔಷಧಿಗಳು ಮತ್ತು 150 ಮಾದರಿಯ ವೈದ್ಯಕೀಯ ಪರಿಕರಗಳು ಮಾರಾಟಕ್ಕೆ ಲಭ್ಯವಿದೆ. ಜೆನೆರಿಕ್ ಔಷಧಿ ಎಂದರೆ ಯಾವುದೇ ಬ್ರಾಂಡ್ ಅಥವಾ ಕಂಪನಿಗಳ ಹೆಸರಿಂದಲ್ಲದೆ ಅವುಗಳಲ್ಲಿನ ರಾಸಾಯನಿಕ ವಸ್ತುಗಳ ಆಧಾರದ ಮೇಲೆ ಗುರ್ತಿಸುವ ಔಷದಿಗಳು. ಈ ಯೋಜನೆಯನ್ನು ಕೇಂದ್ರ ಸರ್ಕಾರದ ಔಷಧಿ ಇಲಾಖೆ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಸಹಯೋಗದಲ್ಲಿ ಜಾರಿಗೆ ತರಲಾಗಿದೆ. ಪ್ರಧಾನ ಮಂತ್ರಿ ಜನ ಔಷಧ ಯೋಜನೆಯಡಿಯಲ್ಲಿ ಪ್ರಾರಂಭಿಸಿರುವ ಪ್ರಧಾನ ಮಂತ್ರಿ ಜನ ಔಷಧ ಕೇಂದ್ರಗಳ ಸಂಖ್ಯೆ 2531(ಸೆಪ್ಟೆಂಬರ್ 2017ರ ತನಕ ದೊರಕಿರುವ ಮಾಹಿತಿ) ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 382 ಕೇಂದ್ರಗಳನ್ನು ತೆರೆಯಲಾಗಿದೆ

ಪ್ರಾರಂಭ:


1 ಜುಲೈ 2015

ಪ್ರಸ್ತುತ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್