ಬೆಳಕು (Light)

 

• ಬೆಳಕು ಒಂದು ರೀತಿಯ ವಿದ್ಯುದಯಸ್ಕಾಂತೀಯ ವಿಕಿರಣ. ತಾಂತ್ರಿಕವಾಗಿ, ಯಾವುದೇ ಪುನರಾವರ್ತನೆಯನ್ನು ಹೊಂದಿರುವ ವಿದ್ಯುದಯಸ್ಕಾಂತೀಯ ವಿಕಿರಣವನ್ನು ಬೆಳಕು ಎನ್ನಬಹುದು.
• ಬೆಳಕು ಮೂಲಭೂತವಾಗಿ ಫೋಟಾನ್ ಎಂಬ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ.
• ಇದು ಸಾಮಾನ್ಯವಾಗಿ 400-700 ಎಂಎಂ ತರಗಾಂತರ ಹೊಂದಿರುತ್ತದೆ.
• ಇದೊಂದು ಶಕ್ತಿಯ ರೂಪವಾಗಿದೆ.
• ಭೂಮಿಗೆ ನೈಸರ್ಗಿಕ ಬೆಳಕಿನ ಮೂಲ ಸೂರ್ಯ
• ಸೂರ್ಯನ ಬೆಳಕು ಭೂಮಿಯನ್ನು ತಲುಪಲು 8-9 ಸೆಕೆಂಡ ಬೇಕು.
• ಯಾವುದೇ ಮಾದ್ಯಮವಿಲ್ಲದೆ ಸರಳ ರೇಖೆಯಲ್ಲಿ ಚಲಿಸುತ್ತದೆ.
• ಬೆಳಕಿನ ವೇಗವನ್ನು ಅಳೆಯಲು ನಡೆಸಲಾದ ಪ್ರಸಿದ್ಧ ಆಧುನಿಕ ಪ್ರಯೋಗ ಆಲ್ಬರ್ಟ್ ಮೈಕೇಲ್ ಸನ್ ಅವರದ್ದು - ಇದರಂತೆ ಬೆಳಕಿನ ವೇಗ ಸೆಕೆಂಡಿಗೆ ಸುಮಾರು 2.99 ಲಕ್ಷ ಕಿಮೀ ಎಂದು ಕಂಡುಹಿಡಿಯಲಾಯಿತು.

ಬೆಳಕಿನ ಮಾನಗಳು


1) ದ್ಯುತಿ ತೀವ್ರತೆ(Candela) – ಕ್ಯಾಂಡೇಲಾ
2) ಪ್ರಕಾಶತೆ (Lumination) - ಲಕ್ಸ್
3) ದ್ಯುತಿಜಾಲ (Luminor Flux) - ಲ್ಯುಮೆನ್

ಬೆಳಕಿನ ಶಾಸ್ತ್ರ (Optics)


1) ಬೆಳಕಿನ ವಕ್ರೀಬವನ (Diffraction)


• ಒಂದು ಮಾದ್ಯಮದಿಂದ ಇನ್ನೊಂದು ಮಾದ್ಯಮಕ್ಕೆ ಬೆಳಕು ಚಲಿಸುವಾಗ ತನ್ನ ಪ್ರಸರಣ ದಿಕ್ಕನ್ನು ಬದಲಾಯಿಸುತ್ತದೆ. ಇದಕ್ಕೆ ವಕ್ರೀಬವನ ಎನ್ನಲಾಗುವುದು.
• ಹೆಚ್ಚು ಸಾಂದ್ರತೆಯ ಮಾಧ್ಯಮದಿಂದ ಕಡಿಮೆ ಸಾಂದ್ರತೆ ಮಾಧ್ಯಮದ ವಸ್ತು ನೋಡಿದಾಗ ದೂರ ಕಾಣುತ್ತದೆ.
• ಕಡಿಮೆ ಸಾಂದ್ರತೆ ಮಾದ್ಯಮದಿಂದ ಹೆಚ್ಚು ಸಾಂದ್ರತೆ ಮಾದ್ಯಮದ ವಸ್ತು ನೋಡಿದಾಗ ಸಮೀಪ ಕಾಣುತ್ತದೆ.

ವಕ್ರೀಭವನದ ಪರಿಣಾಮಗಳು


1) ಒಂದು ಬೀಕರಿನಲ್ಲಿಟ್ಟ ಕೋಲು ಮುರಿದಂತೆ ಕಾಣುವುದು.
2) ನೀರಿನಲ್ಲಿ ನಾಣ್ಯ ಮೇಲೆ ಇದ್ದಂತೆ ಕಾಣುವುದು.

2) ಬೆಳಕಿನ ಪ್ರತಿಪಲನ (Reflection)


• ಒಂದು ಮಾದ್ಯಮದಿಂದ ಮತ್ತೊಂದು ಮಾದ್ಯಮಕ್ಕೆ ಬೆಳಕು ಚಲಿಸಿ ಮತ್ತೇ ಅದೇ ಮಾದ್ಯಮಕ್ಕೆ ಹಿಂದುರುಗಿದರೇ ಅದನ್ನು ಪ್ರತಿಪಲನ ಎನ್ನುವರು.
• ಬೆಳಕು ಯಾವ ಕೋನದಲ್ಲಿ ಬೀಳುತ್ತದೆಯೋ ಅದೇ ಕೋನದಲ್ಲಿ ಪ್ರತಿಪಲಿಸುತ್ತದೆ.

3) ಬೆಳಕಿನ ಹೀರುವಿಕೆ (Absorption)


• ಒಂದು ವಸ್ತುವಿನ ಮೇಲೆ ಬೆಳಕು ಬಿದ್ದಾಗ ಯಾವ ಬಣ್ಣ ಹೀರಿಕೊಳ್ಳುವುದಿಲ್ಲವೋ ಅದು ಬಣ್ಣವಾಗಿ ಗೋಚರಿಸುತ್ತದೆ.
• ಉದಾ: ನೀಲಿ ಬಣ್ಣದ ವಸ್ತು ನೀಲಿ ಹೊರತುಪಡಿಸಿ ಉಳಿದೆಲ್ಲ ಬಣ್ಣಗಳನ್ನು ಹೀರಿಕೊಳ್ಳುತ್ತದೆ.

ಸಂಪೂರ್ಣ ಆಂತರಿಕ ಪ್ರತಿಪಲನ (Total Internal Reflection)


• ಪತನಕೋನ ಒಂದು ನಿರ್ದಿಷ್ಟ ಮಿತಿ ತಲುಪಿದಾಗ ವಕ್ರೀಮಕಿರಣ ವಕ್ರೀಭವನ ಆಗುವುದಿಲ್ಲ. ಬದಲಿಗೆ ಸಂಪೂರ್ಣವಾಗಿ ಮೊದಲಿನ ಮಾದ್ಯಮದಲ್ಲಿ ಪ್ರತಿಫಲಿಸುತ್ತದೆ. ಇದನ್ನು ಸಂಪೂರ್ಣ ಆಂತರಿಕ ಪ್ರತಿಪಲನ ಅನ್ನುವರು.
• ಆಪ್ಟಿಕಲ್ ಪೈಬ್ರ್, ವಜ್ರದ ಹೊಳಪು, ದೂರದರ್ಶಕಗಳಲ್ಲಿ ಈ ತತ್ವ ಅನುಸರಿಸಲಾಗುತ್ತದೆ.
• ಉದಾ: ಮರಿಚಿಕೆ (Mirage)

ಬೆಳಕಿನ ವರ್ಣ ವಿಭಜನೆ


• ಬಿಳಿಯ ಬಣ್ಣದಲ್ಲಿ 7 ಬಣ್ಣಗಳಿವೆ ಎಮದು ನ್ಯೂಟನ್ ಪತ್ತೆ ಹಚ್ಚಿದನು.
• ವರ್ಣ ವಿಭಜನಗೊಂಡಾಗ ಅಂದರೆ ಬಿಳಿ ಬಣ್ಣವನ್ನು ಸ್ಪಟಿಕದ ಮೂಲಕ ಹಾಯಿಸಿದಾಗ ನೆರಳೆ(Violet), ಬೂದು(Indigo), ನೀಲಿ(Blue), ಹಸಿರು(Green), ಹಳದಿ(Yellow), ಕಿತ್ತಳೆ(Orange), ಹಾಗೂ ಕೆಂಪು(Red) ಎಂಬ 7 ವರ್ಣಗಳಲ್ಲಿ ವಿಭಜನೆಗೊಳ್ಳುತ್ತದೆ.
• ((VIBGYOR) ಇದರಲ್ಲಿ ನೇರಳೆ ಅತೀ ಕಡಿಮೆ ಮತ್ತು ಕೆಂಪು ಬಣ್ಣ ಹೆಚ್ಚು ತರಂಗ ಅಂತರ ಹೊಂದಿದೆ.
• ಬೆಳಕಿನ ಚದುರುವಿಕೆಯಿಂದ ಕಾಮನಬಿಲ್ಲು ಕಾಣುವುದು ಮಳೆಯ ನೀರಿನ ಮೇಲೆ ಬೆಳಕು ಬಿದಾಗ ಅದು ವಿಭಜನೆ ಆಗುತ್ತದೆ.
• ಪ್ರಾಥಮಿಕ ಬಣ್ಣಗಳು ನೀಲಿ, ಹಸಿರು, ಕೆಂಪು

ದರ್ಪಣಗಳು


ನುಣುಪಾದ ಮೆರಗುಗೊಳಿಸಿದ ಮೇಲ್ಮೈಯನ್ನು ದರ್ಪಣ ಎನ್ನುವರು. ದರ್ಪಣದ ಮೇಲೆ ಬಿದ್ದ ಬೆಳಕಿನ ಹೆಚ್ಚಿನ ಭಾಗ ಪ್ರತಿಪಾಲನವಾಗುತ್ತದೆ.

ಸಮತಲ ದರ್ಪಣಗಳು


ದರ್ಪಣದ ಮೇಲ್ಮೈ ಸಮತಲವಾಗಿದ್ದರೇ ಸಮತಲ ದರ್ಪಣ. ಇದರಲ್ಲಿ ಉಂಟಾಗುವ ಪ್ರತಿಬಿಂಬ ಮಿಥ್ಯ ಪ್ರತಿಬಿಂಭವಾಗಿರುತ್ತದೆ.
ಉಪಯೋಗಗಳು:
• ಅಲಂಕಾರ ದರ್ಪಣಗಳಾಗಿ
• ಸೂಕ್ಷ್ಮ ದರ್ಶಕಗಳಲ್ಲಿ
• ಸೌರ ಒಲೆಗಳಲ್ಲಿ
• ಕ್ಷೌರದ ಅಂಗಡಿಗಳಲ್ಲಿ

ನಿಮ್ನ ದರ್ಪಣಗಳು


ಈ ದರ್ಪಣ ಗೊಲವಾಗಿದ್ದು ತಗ್ಗು ಇರುವ ಕಡೆ ಪ್ರತಿಪಲನವಾಗುತ್ತದೆ.
ಉಪಯೋಗಗಳು
ದೂರದರ್ಶಕಗಳು, ವೈದ್ಯಕೀಯ ಸಲಕರಣೆಗಳು, ಮೋಟಾರು ದೀಪಗಳಲ್ಲಿ ನಿಮ್ನ ದರ್ಪಣ ಬಳಸುತ್ತಾರೆ.

ಪೀನ ದರ್ಪಣ


ಇದೊಂದು ಗೋಲಿಯ ದರ್ಪಣವಾಗಿದೆ. ದರ್ಪಣದ ಉಬ್ಬಿದ ಮೈ ಪ್ರತಿಫಲಿಸುವ ಭಾಗವಾಗಿದ್ದಾರೆ ಅದು ಪೀನ ದರ್ಪಣವಾಗಿರುತ್ತದೆ.
ಉಪಉಯೋಗಗಳು
• ವಾಹನಗಳಲ್ಲಿ ಹಿನ್ನೋಟ ದರ್ಪಣಗಳಾಗಿ
• ಬೀದಿ ದೀಪಗಳಲ್ಲಿ

ನೆನಪಿಡಬೇಕಾದ ಅಂಶಗಳು


• ಸೂರ್ಯನ ಶಾಖವು ಭೂಮಿಗೆ ಯಾವ ವಿಧಾನದಿಂದ ಪ್ರಸಾರವಾಗುತ್ತದೆ – ವಿಕಿರಣ.
• ಬೆಳಕು ಅಲೆಗಳ ಮತ್ತು ಕಣಗಳ ಸಮ್ಮಿಲನ ಎಂದು ವಿವರಿಸಿದ ವಿಜ್ಞಾನಿ - ಮ್ಯಾಕ್ಸ್ ಪ್ಲಾಂಕ್.
• ಬೆಳಕು ಕಣಗಳಂತೆ ವರ್ತಿಸುವ ಶಕ್ತಿ ಪ್ಯಾಕೆಟ್ಟುಗಳನ್ನು - ಫೋಟಾನು ಎಂದು ಕರೆಯುತ್ತಾರೆ.
• ಬೆಳಕಿನ ಯಾವ ಗುಣವು ನೆರಳನ್ನು ಉಂಟುಮಾಡುವುದು - ಬೆಳಕಿನ ಸರಳ ರೇಖಾಪ್ರಸರಣ ಗುಣ.
• ಸನ್ ಡಯಲ್ ಎಂದರೆ ಏನು - ನೆರಳಿನ ಉದ್ದವನ್ನುಸರಿಸಿ ಸಮಯ ತಿಳಿಸುವ ಉಪಕರಣ.
• ಬೆಳಕಿನ ಕಣ ಫೋಟಾನ್ನ ಚೈತನ್ಯವನ್ನು ಪ್ರಾಯೋಗಿಕವಾಗಿ ಸಾದರಪಡಿಸಿ ತೋರಿಸಿದವರು – ಐನ್ಸ್ಟಿನ್.
• ಸುತ್ತಲಿನ ಜಗತ್ತನ್ನು ಕಾಣುವಂತೆ ಮಾಡಿ, ನಮಗೆ ದೃಷ್ಟಿಯನುಭವ ನೀಡುವ ಪ್ರಕೃತಿಯ ಶಕ್ತಿಗೆ - ಬೆಳಕು ಎಂದು ಕರೆಯುತ್ತಾರೆ.
• ನೆರಳಿನ ಮಧ್ಯಭಾಗವು ಅತಿ ಕಪ್ಪಾಗಿರುವ ಪ್ರದೇಶವೇ - ಪೂರ್ಣಛಾಯೆ.
• ಪೂರ್ಣಛಾಯೆಯ ಸುತ್ತಲೆನ ನುಸುನೆರಳು ಪ್ರದೇಶವೇ - ಖಂಡಛಾಯೆ.
• ಶಬ್ದಮತ್ತು ನೀರಿನಂತೆ ಬೆಳಕು ಕೂಡ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆ ಅಲೆಯಾಗಿ ಚಲಿಸುತ್ತದೆ ಎಂದು ಹೇಳಿದ ವಿಜ್ಞಾನಿ - ಕ್ರಿಶ್ಚಿಯನ್ ಹೈಗನ್ಸ್.
• 17ನೇ ಶತಮಾನದಲ್ಲಿ ಆಧುನಿಕ ವಿಜ್ಞಾನ ಮೊಳಕೆಯೊಡೆಯುತಿದ್ದ ಕಾಲದಲ್ಲಿ ಬೆಳಕಿನಲ್ಲಿ ಏನಿದೆ ಎಂಬ ಪ್ರಶ್ನೆಯನ್ನು ಕೈಗತ್ತಿಕೊಂಡು ಮೊಟ್ಟ ಮೊದಲು ಅದನ್ನು ಹಿಡಿದು ನೋಡಲು, ಒಡೆದು ನೋಡಲು ಪ್ರಯತ್ನಿಸಿದ ವಿಜ್ಞಾನಿ - ಸರ್ ಐಸಾಕ್ ನ್ಯೂಟನ್.
• ಅಧುನಿಕ ವಿಜ್ಞಾನದ ಪಿತಾಮಹ ಎಂದು - ಸರ್ ಐಸಾಕ್ ನ್ಯೂಟನ್ ಕರೆಯುತ್ತಾರೆ.
• ಬೆಳಕು ಸಣ್ಣ ಸಣ್ಣ ಸೂಕ್ಷ ಕಣಗಳಿಂದ ಮಾಡಲ್ಪಟ್ಟಿದೆ. ಇವು ಒಂದೆಡೆಯಿಂದ ಮತ್ತೊಂದೆಡೆಗೆ ನೇರವಾಗಿ ವೇಗವಾಗಿ ಚಲಿಸುತ್ತವೆ. ಎಂದು ಸರ್ ಐಸಾಕ್ ನ್ಯೂಟನ್ ವಿವರಿಸಿದ ಈ ಸಿದ್ಧಾಂತಕ್ಕೆ - ನ್ಯೂಟನ್ ಕಾರ್ಪಸಲ್ಸ್ ಥಿಯರಿ ಎಂದು ಕರೆಯುತ್ತಾರೆ.
• ಗೋಲರ್ದಣದ ಹೊರ ಮೇಲ್ಮೈ ಮೆರುಗು ಮಾಡಿದ್ದು ತಗ್ಗಾದ ಒಳ ಮೇಲ್ಮೈನಿಂದ ಪ್ರಿಫಲನ ಹೊಂದಿದ್ದರೆ ಅದನ್ನು - ನಿಮ್ಮ ಪರ್ದಣವೆಂದು ಕರೆಯುತ್ತಾರೆ.
• ವಾಹನ ಚಾಲಕರು ಹಿನ್ನೋಟ ಪಡೆಯಲು ಉಪಯೋಗಿಸುವ ದರ್ಪಣ - ಪೀನ ದರ್ಪಣ.
• ಎಂತಹ ಮೇಲ್ಮೈ ಮೇಲೆ ಬಿದ್ದಾಗ ಬೆಳಕು ಅನಿಯತ ಪ್ರತಿಫಲನ ಹೊಂದುತ್ತದೆ - ನುಣುಪಾಗಿಲ್ಲದ ಮೇಲ್ಮೈ ಬಿದ್ದಾಗ ಅನಿಯತ ಪ್ರತಿಫಲನ ಹೊಂದುತ್ತದೆ.
• ಬೆಳಕು ನುಣುಪಾದ ಮೇಲ್ಮೈ ಮೇಲೆ ಬಿದ್ದಾಗ - ನಿಯತ ಪ್ರತಿಫಲನ ಉಂಟಾಗುತ್ತದೆ.
• ಬೆಳಕು ಸಾಂದ್ರ ಮಾಧ್ಯಮದಿಂದ ವಿರಳ ಮಾಧ್ಯಮವನ್ನು ಪ್ರವೇಶಿಸುವಾಗ ಪತನ ಕೋನವು ಅಧಿಕ ಕೋನಕ್ಕಿಂತ ಹೆಚ್ಚಾದರೆ ಬೆಳಕಿನ ಕಿರಣಗಳು ಅದೇ ಮಾಧ್ಯಮದಲ್ಲಿ ಪ್ರತಿಫಲಿಸುವುವು ಇದಕ್ಕೆ ಷ- ಪೂರ್ಣಂತರಿಕೆ ಪ್ರತಿಫಲನ ಎಂದು ಕರೆಯುತ್ತಾರೆ.
• ಸೂಜಿ ರಂಧ್ರ ಕ್ಯಾಮರಾವು ಯಾವ ತತ್ವದ ಆಧಾರದ ಮೇಲಿದೆ - ಬೆಳಕಿನ ಸರಳರೇಖಾ ಪ್ರಸರಣ ತತ್ವದ ಆಧಾರದ ಮೇಲಿದೆ.
• ನಿಮ್ಮ ಮಸೂರದಲ್ಲಿ ಯಾವಾಗಲೂ – ಮಿಥ್ಯ ಪ್ರತಿಬಿಂಬ ಉಂಟಾಗುತ್ತದೆ.
• ಬೆಳಕನ್ನು ಕೇಂದ್ರೀಕರಿಸುವ ಮಸೂರ - ಪೀನ ಮಸೂರ.
• ಸಂಯುಕ್ತ ಸೂಕ್ಷ್ಮ ದರ್ಶಕದಲ್ಲಿ ಉಂಟಾಗವ ಪ್ರತಿಬಿಂಬದ ಲಕ್ಷಣ – ತಲೆಕೆಳಗಾದ, ದೊಡ್ಡದಾದ ಮಿಥ್ಯ ಪ್ರತಿಬಿಂಬವಾಗಿರುತ್ತದೆ.
• ಸೂರ್ಯನ ಬಿಳಿ ಬೆಳಕು ಏಳು ವಿಭಿನ್ ಬಣ್ಣದ ಬೆಳಕುಗಳ ಮಿಶ್ರಣ ಎಂದು ತೀರ್ಮಾನಿಸಿದ ವಿಜ್ಞಾನಿ - ಸರ್ ಐಸಾಕ್ ನ್ಯೂಟನ್.
• ವಕ್ರೀಭವನ ಆಗುವಾಗ ಯಾವ ಬೆಳಕು ಅತಿ ಹೆಚ್ಚು ಬಾಗುತ್ತದೆ - ನೇರಳೆ ಬೆಳಕು ಅತೀ ಹೆಚ್ಚು ಬಾಗುತ್ತದೆ.
• ವಕ್ರೀಭವನ ಆಗುವಾಗ ಯಾವ ಬೆಳಕು ಅತಿ ಕಡಿಮೆ ಬಾಗುತ್ತದೆ – ಕೆಂಪು ಬೆಳಕು ಅತಿ ಕಡಿಮೆ ಬಾಗುತ್ತದೆ.
• ದ್ಯುತಿ ತಂತು (ಆಪ್ಟಿಕ್ ಪೈಬರ್) ಕೇಬಲ್ಗಳು - ಸಂಪೂರ್ಣ ಆಂತರಿಕ ಪ್ರತಿಫಲನ ತತ್ವದ ಮೇಲೆ ಕಾರ್ಯನಿರ್ವಹಿಸುತ್ತವೆ.
• ನಿಸರ್ಗದಲ್ಲಿ ಸ್ವಾಭಾವಿಕವಾಗಿ ಆಗುವ ಸಂಪೂರ್ಣ ಆಂತರಿಕ ಪ್ರತಿಫಲನಕ್ಕೆ ಪ್ರಚಲಿತ ಉದಾಹರಣೆ – ಮರೀಚಿಕೆ (ಮರಿಭೂಮಿಯಲ್ಲಿ)
• ಪ್ರಕೃತಿಯಲ್ಲಿ ಬೆಳಕಿನ ಚದುರುವಿಕೆಯಿಂದ ಉಂಟಾಗುವ ಕ್ರಿಯೆ – ಕಾಮನಬಿಲ್ಲು.
• ಸರಳ ಸೂಕ್ಷ್ಮ ದರ್ಶಕದಲ್ಲಿ ಯಾವ ಮಸೂರವನ್ನು ಉಪಯೋಗಿಸುತ್ತಾರೆ. - ಪೀನಮಸೂರಿವನ್ನು ಉಪಯೋಗಿಸುತ್ತಾರೆ.
• ಕಾಮನಬಿಲ್ಲು ಸೂರ್ಯನ ಯಾವ ದಿಕ್ಕಿಗೆ ಕಾಣಿಸುತ್ತದೆ - ವಿರುದ್ದ ದಿಕ್ಕಿಗೆ ಕಾಣಿಸುತ್ತದೆ.
• ಸಮೀಪ ದೂರದೃಷ್ಟಿ ದೋಷವನ್ನು ಸರಿಪಡಿಸಲು ಉಪಯೋಗಿಸುವ ಮಸೂರ - ನಿಮ್ಮ ಮಸೂರ.
• ದೂರದೃಷ್ಟಿ ದೋಷವನ್ನು ಸರಿಪಡಿಸಲು ಉಪಯೋಗಿಸುವ ಮಸೂರ - ಪೀನ ಮಸೂರ.
• ಪೋಟೋ ಎಲೆಕ್ಟ್ರಿಕ್ ಪರಿಣಾಮದ ಸಂಶೋಧನೆಗಾಗಿ ಕ್ರಿ.ಶ. 1921 ರಲ್ಲಿ ನೊಬೆಲ್ ಪಾರಿತೋಷಕ ಪಡೆದ ವಿಜ್ಞಾನಿ - ಆಲ್ಬರ್ಟ್ ಐನ್ಸ್ಟಿನ್.
• ಸಮರ್ಪಕವಾದ ಬಣ್ಣದ ಟಿ.ವಿ. ಛಾಯಗ್ರಾಹಿ (ಕ್ಯಾಮರಾ) ವನ್ನು ಮೊಟ್ಟಮೊದಲಿಗೆ ಅಬಿವೃದ್ಧಿಪಡಿಸಿದ ದೇಶ ಮತ್ತು ವರ್ಷ – ಅಮೆರಿಕ, 1960.
• ಗೋಲಿಯ ದರ್ಪಣದ ವಕ್ರತಾ ತ್ರಿಜ್ಯವು ಅದರ ಸಂಗಮದೂರದ – ಎರಡರಷ್ಟಿರುತ್ತದೆ.
• 25 ಸೆಂ.ಮಿ. ಸಂಗಮ ದೂರದ ಗೋಲಿಯ ದರ್ಪಣದ ವಕ್ರತಾ ತ್ರಿಜ್ಯ 50 ಸೆಂ.ಮೀ. ಇರುತ್ತದೆ.
• ಸೌರ ವಾತಾವರಣದಲ್ಲಿರುವ ಪ್ರಮಾಣಗಳು ಕೆಲವು ವಿಶಿಷ್ಟ ಬಣ್ಣಗಳನ್ನು ಹೀರಿಕೊಳ್ಳುವುದರಿಂದ ದೊರೆಯುವ ಗೆರೆಗಳು - ಫ್ರಾನ್ಸ್ ಹೋಪರ್ ಗೆರೆ.
• ಈ ಗೆರೆಗಳ ಅಧ್ಯಯನದಿಂದ ಸೌರ ವಾತಾವರಣದಲ್ಲಿ ಧಾತುಗಳನ್ನು ಗುರುತಿಸಬಹುದು - ಫ್ರಾನ್ಸ್ ಹೋಷರ್ ಗೆರೆ.
• ಗ್ರಹಗಳಲ್ಲಿಯೇ ಅತ್ಯಂತ ಶೀತಗ್ರಹ - ನೆಪ್ಚೂನ್.
• ಹ್ಯಾಲೀ ಧೂಮಕೇತು ಭವಿಷ್ಯದಲ್ಲಿ ಕಾಣಿಸಿಕೊಳ್ಳಲಿರುವ ವರ್ಷ – 2062.
• ಅದಿಶ ಪರಿಮಾಣಗಳಿಗೆ ಉದಾಹರಣೆಗಳು – ರಾಶಿ, ಸಾಂದ್ರತೆ, ಉಷ್ಣತೆ.
• ಸದಿಶ ಪರಮಾಣಗಳಿಗೆ ಉದಾಹರಣೆಗೆಳು – ವೇಗೋತ್ಕರ್ಷ, ಬಲ, ಸ್ಥಾನಪಲ್ಲಟ.
• ದೀಪ್ತಿ ತೀವ್ರತೆಯ ಮೂಲಮಾನ – ಕ್ಯಾಂಡೆಲ (Cd).
• ದೀಪನ/ಪ್ರದೀಪ್ತಿಯನ ಮಾನ - ಲಕ್ಸ್ (Ix).