Loading [Contrib]/a11y/accessibility-menu.js

“11ನೇ ಪಂಚವಾರ್ಷಿಕ ಯೋಜನೆ ”

 

“11ನೇ ಪಂಚವಾರ್ಷಿಕ ಯೋಜನೆ ”ಸ್ವತಂತ್ರ್ಯಭಾರತದ ಆರ್ಥಿಕಾಭಿವೃದ್ಧಿಯ ಹೊಂಗನಸು ಕಂಡಿದ್ದ ಪ್ರಧಾನಿ ಜವಾಹಾರಲಾಲ್ ನೆಹರೂದೀರ್ಘಕಾಲೀನ ಆರ್ಥಿಕ ಯೋಜನೆಗಳನ್ನು ಹಾಕಿಕೊಂಡರು, ನೆಹರೂರವರ ದೂರದೃಷ್ಟಿಯ ಫಲವೇ ಪಂಚವಾರ್ಷಿಕಯೋಜನೆಗಳು ಭಾರತ ಇಲ್ಲಿಯವರೆಗೆ 10 ಪಂಚವಾರ್ಷಿಕ ಯೋಜನೆಗಳನ್ನು ಪೊರೈಸಿದೆ. 11ನೇ ಯೋಜನೆ 2007-12ರಅವಧಿಯಲ್ಲಿ ಮುಂದುವರೆದಿದೆ. ಕೇಂದ್ರ ಸಚಿವ ಸಂಪುಟವು ಕೈಗೊಂಡ ನಿರ್ಣಯದ ಮೇರೆಗೆ 1950ರ ಮಾರ್ಚ್ನಲ್ಲಿಯೋಜನಾ ಆಯೋಗವನ್ನು ರಚಿಸಲಾಯಿತು. ಈ ಆಯೋಗವು ಹೆಚ್ಚುವರಿ ಸಾಂವಿಧಾನಿಕ ಅಧಿಕಾರ ಹೊಂದಿದಸ್ವಾಯುತ್ತ ಸಂಸ್ಥೆಯಾಗಿದೆ. ಭಾರತದ ಪ್ರಧಾನ ಮಂತ್ರಿಯವರು ಇದರ ಅಧ್ಯಕ್ಷರಾಗಿರುತ್ತಾರೆ. ಯೋಜನಾ ಆಯೋಗದ ಉಪಾಧ್ಯಕ್ಷರನ್ನು ಪ್ರಧಾನ ಮಂತ್ರಿ ಹಾಗೂ ಪೂರ್ಣಕಾಲಿಕ ಸದಸ್ಯರು ನೇಮಕ ಮಾಡುತ್ತಾರೆ. ಇದರ ಸದಸ್ಯರನ್ನುಸರ್ಕಾರವು ನೇಮಿಸುತ್ತದೆ.

ಯೋಜನಾ ಆಯೋಗದ ಕಾರ್ಯಗಳು ಕೆಳಗಿನಂತಿವೆ.

1. ದೇಶದ ಭೌಗೋಳಿಕ, ತಲಾ ಆದಾಯ & ಮಾನವ ಸಂಪನ್ಮೂಲಗಳ ಬಗ್ಗೆ ಅಂದಾಜು ಮಾಡುತ್ತದೆ.
2. ಮಾನವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಹಾಗೂ ಸಮತೋಲನಾತ್ಮಕವಾಗಿ ಬಳಸುವುದಕ್ಕೆಯೋಜನೆಯನ್ನು ರೂಪಿಸುವುದು.
3. ಯೋಜನೆಯ ವಿವಿಧ ಹಂತಗಳನ್ನು ನಿರ್ಧರಿಸುವುದು ಹಾಗೂ ಆಧ್ಯತೆಯ ಮೇರೆಗೆ ಸಂಪನ್ಮೂಲಗಳನ್ನು ಹಂಚುವ ಪ್ರಸ್ತಾಪ ಮಾಡುವುದು.
4. ಕೇಂದ್ರ ಸರ್ಕಾರದೊಂದಿಗೆ ಸಲಹಾ ಮಂಡಳಿಯಂತೆ ಕಾರ್ಯನಿರ್ವಹಿಸುವುದು.

ಹನ್ನೊಂದನೇ ಪಂಚವಾರ್ಷಿಕ ಯೋಜನೆಯು ಬಡತನವನ್ನು ಬೇಗನೆ ಕಡಿಮೆಗೊಳಿಸುವುದಕ್ಕೆ ಸಂಬಂಧಿಸಿದಂತೆ ನೀತಿಗಳನ್ನು ಪುನರ್ ರಚಿಸುವ ಅವಕಾಶ ಒದಗಿಸಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಮಾನ್ಯ ಕನಿಷ್ಟ ಕಾರ್ಯಕ್ರಮದ ಆಧಾರದಲ್ಲಿ ಹತ್ತನೇಯ ಪಂಚವಾರ್ಷಿಕ ಯೋಜನೆಯ ಜಾರಿಯ ಹಂತದಲ್ಲಿ ಮೊದಲ ಹೆಜ್ಜೆಗಳನ್ನು ಇಡಲಾಯಿತು.ಹನ್ನೊಂದನೆಯ ಪಂಚವಾರ್ಷಿಕ ಯೋಜನೆಗೆ ಕಾರ್ಯತಂತ್ರವನ್ನು ರೂಪಿಸಲು ಈ ಹೆಜ್ಜೆಗಳನ್ನು ಮತ್ತಷ್ಟು ಬಲಗೊಳಿಸಬೇಕು ಹಾಗೂ ಸದೃಢಗೊಳಿಸಬೇಕಾಗಿದೆ.
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಜನರ ಜೀವನ ಮಟ್ಟದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿಜನರ ಆದಾಯವು ಸಾಕಷ್ಟು ಹೆಚ್ಚಾಗಬೇಕಾಗಿರುದದರಿಂದ ತ್ವರಿತ ಬೆಳವಣಿಗೆಯು ಕಾರ್ಯತಂತ್ರದ ಗೌರವ ಪ್ರಮುಖ ಭಾಗವಾಗಿದೆ.ಸುದೈವವಶಾತ್ ಹನ್ನೊಂದನೇಯ ಪಂಚವಾರ್ಷಿಕ ಯೋಜನೆಯಲ್ಲಿ ನಿಗದಿಪಡಿಸಿರುವ ಬೆಳವಣಿಗೆ ದರವು ಅಧಿಕವಾಗಿರುವುದರಿಂದ ಈ ಮೊದಲಿಗಿಂತಲೂ ಹೆಚ್ಚಿನದನ್ನು ಸಾಧಿಸಬಹುದಾಗಿದೆ. ಸೂಕ್ತ ನೀತಿಗಳ ಮೂಲಕ ವಾರ್ಷಿಕ ಶೇ.8 ಹಾಗೂ ಶೇ.9 ರ ಮಧ್ಯದ ಪ್ರಮಾಣದ ಆರ್ಥಿಕ ಬೆಳವಣಿಗೆಯನ್ನು ಸಾಧಿಸಬಹುದೆಂದು ಯೋಜನಾಆಯೋಗ ತಿಳಿಸಿದೆ. ದೇಶದಲ್ಲಿ ವಾರ್ಷಿಕ ಶೇ.1.5ರಷ್ಟು ಜನಸಂಖ್ಯೆಯು ಏರಿಕೆಯಾಗುತ್ತಿದ್ದು ಇನ್ನು ಹತ್ತು ವರ್ಷಗಳಲ್ಲಿಸಾಮಾನ್ಯ ಭಾರತೀಯನ ನೈಜ ಆದಾಯ ಎಷ್ಟು ಎನ್ನುವುದು ದೃಢಪಡಿಸಲಿದೆ. ಬೆಳವಣಿಗೆಯು ವಿಶಾಲವ್ಯಾಪ್ತಿಯು ವ್ಯಾಪ್ತಿಯುಳದ್ದು ದೇಶದ ಎಲ್ಲಾ ಭಾಗಗಳಿಗೂ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಿಗೆ ಪ್ರಯೋಜನಕಾರಿಯಾಗುವಂತದ್ದು ಎನ್ನುವುದನ್ನು ದೃಢಪಡಿಸುವಂತ ನೀತಿಗಳನ್ನು ರೂಪಿಸಲು ಸಹ ಸಾಧ್ಯವಿದೆ.
ಹನ್ನೊಂದನೇಯ ಪಂಚವಾರ್ಷಿಕ ಯೋಜನೆಯಲ್ಲಿ ಒಂದು ವೇಳೆ ದೀರ್ಘವ್ಯಾಪ್ತಿ ಬೆಳವಣಿಗೆಯನ್ನು ಸಾಧಿಸಿದರೂ ಕೂಡ ಹಲವು ಗುಂಪುಗಳಿಗೆ ಆಧ್ಯತೆ ನೀಡಲು ಅವಕಾಶವಿದೆ. ಈ ಗುಂಪುಗಳು ಯಾವುದೆಂದರೆ, ಪ್ರಾಚೀನ ಬುಡಕಟ್ಟು ಜನಾಂಗಗಳು, ಯುವ ಜನಾಂಗ, 0 ರಿಂದ 3ರ ನಡುವಿನ ವಯಸ್ಸಿನ ಮಕ್ಕಳೂ ಹಾಗೂ ತಮ್ಮ ಹಕ್ಕುಗಳಿಂದ ವಂಚಿತರಾದವರು. ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ ಈ ಜನರ ಅಗತ್ಯಗಳಿಗೆ ವಿಶೇಷ ಆಧ್ಯತೆನೀಡಬೇಕು.
ಕೃಷಿ, ಸಣ್ಣ ಉದ್ದಿಮೆ ಹಾಗೂ ಮಧ್ಯಮ ಗಾತ್ರದ ಉಧ್ಯಮ ಸೇರಿದಂತೆ ಖಾಸಗಿ ವಲಯವು ವೇಗದಾಯಕವಾದ& ಅಧಿಕವಾದ ಬೆಳವಣಿಗೆಯನ್ನು ಸಾಧಿಸಲು ನಿರ್ಣಾಯಕ ಪಾತ್ರ ಹೊಂದಿದೆ. ಈ ವಲಯವು ಆರ್ಥಿಕತೆಯಲ್ಲಿನ ಒಟ್ಟು ಬಂಡವಾಳದ ಶೇಕಡಾ 70 ರಷ್ಟು ಪಾಲು ಹೊಂದಿದೆ. ಉಧ್ಯಮವು ಅಭಿವೃದ್ದಿ ಹೊಂದುವಂತಹ ಪರಿಸರವನ್ನುಸೃಷ್ಠಿಸುವ ರೀತಿಯಲ್ಲಿ ನಮ್ಮ ನೀತಿಗಳನ್ನು ರೂಪಿಸಬೇಕು. ಕಾರ್ಯತಂತ್ರವು ಎರಡು ಕಾರಣಗಳಿಂದ ಪ್ರಮುಖವೆನಿಸಿದೆ.ಇದು ಜನರ ಆದಾಯದ ಮಟ್ಟಗಳು ಹಾಗು ಉದ್ಯೋಗವಕಾಶಗಳನ್ನು ಹೆಚ್ಚಿಸುವ ಮೂಲಕ ಉಧ್ಯಮದ ನೇರಕೊಡುಗೆಯನ್ನು ಸಲ್ಲಿಸುತ್ತದೆ & ಕಾರ್ಯಕ್ರಮಗಳಿಗೆ ನೆರವು ಒದಗಿಸುತ್ತದೆ.
ಯೋಜನೆಯ ಕಾರ್ಯಕ್ರಮ ಹಾಗೂ ನೀತಿಗಳನ್ನು ಜಾರಿಗೆ ತರುವುದು. ಸುಲಭದ ಕೆಲಸವೇನಲ್ಲ. ಯಾವುದನ್ನುಕಾರ್ಯರೂಪಕ್ಕೆ ತರಲಾಗುತ್ತದೆ , ಯಾವುದನ್ನು ತರುತ್ತಿಲ್ಲ ಎನ್ನುವುದನ್ನು ಅರಿಯಲು ನಮ್ಮ ಕಾರ್ಯಕ್ರಮ ಹಾಗೂ ನೀತಿಗಳ ಕಡೆಗೆ ವಿಮರ್ಶಾತ್ಮಕ ದೃಷ್ಟಿಕೋನ ಹರಿಸುವುದು ಅಗತ್ಯವಾಗಿದೆ. ಅಪಾರ ವೆಚ್ಚವನ್ನು ಮಾಡಿದರೂ ಸಹ ನಿರ್ದಿಷ್ಟ ಗುರಿಗಳನ್ನು ಸಾಧಿಸಲು ರೂಪಿಸಿದ ಕಾರ್ಯಕ್ರಮವು ವಿಪಲವಾಗಬಹದು. ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಫಲಿತಾಂಶಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.
ಯಶಸ್ವಿ ಸರ್ಕಾರಗಳು ಮಾಡಿದ ಆರ್ಥಿಕ ಸುಧಾರಣೆಗಳಿಂದ ಅವುಗಳ ಕಳೆದ ಇಪ್ಪತ್ತಕ್ಕಿಂತಲೂ ಹೆಚ್ಚಿನ ವರ್ಷಗಳಲ್ಲಿದೇಶದ ಆರ್ಥಿಕತೆಯು ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಬೆಳವಣಿಗೆಯನ್ನು ಕಂಡಿದೆ. ಭಾರತದ ಆರ್ಥಿಕತೆಯು ಈಗಪ್ರಪಂಚದ ಆರ್ಥಿಕತೆಯೊಂದಿಗೆ ಹೆಚ್ಚು ಏಕೀಕರಣಗೊಂಡಿದೆ ಹಾಗು ಈ ಏಕೀಕರಣದಿಂದ ಲಾಭವನ್ನು ಪಡೆದಿದೆ.ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಸಂಬಂಧಿತ ಸೇವೆಗಳು, ಔಷಧಿ, ವಾಹನದ ಬಿಡಿಭಾಗಗಳು ಹಾಗೂ ಜವಳಿ ಬಂಡವಾಳ ಆಕರ್ಷಿಸುವ ಪ್ರಮುಖ ವಲಯಗಳಾಗಿವೆ.
ಜಾಗತಿಕ, ಆರ್ಥಿಕ ಏಕೀಕರಣದಿಂದ ಭಾರತಕ್ಕೆ ಆದ ಮತ್ತೊಂದು ಪ್ರಯೋಜನವೆಂದರೆ ವಿದೇಶಿ ನೇರಬಂಡವಾಳದಲ್ಲಿ ಹೆಚ್ಚಳ ಉಂಟಾಗಿರುವುದಾಗಿದೆ. ಒಂಬತ್ತನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ 3.7ಬಿಲಿಯನ್ ಡಾಲರ್ಗಳಿಷ್ಟಿದ್ದು ಡಾಲರ್ಗಳಿಗೆ ಏರಿಕೆಯಾಯಿತು. ಆದರೂ ಇದು ನಮ್ಮ ಸಾಮಥ್ರ್ಯಕ್ಕೆಅನುಗುಣವಾಗಿರಲಿಲ್ಲ. ವಿದೇಶಿ ನೇರ ಬಂಡವಾಳದ ಪ್ರಮಾಣವು ಹೆಚ್ಚಾಗಬೇಕಾಗಿರುವುದರಿಂದ ಹನ್ನೊಂದನೆಯಪಂಚವಾರ್ಷಿಕ ಯೋಜನೆಯ ಪ್ರಮುಖ ಗುರಿಯಾಗಿದೆ.
ಧೀರ್ಘಾವಧಿಯಲ್ಲಿ ಭಾರತದ ಅವಲಂಬನೆ (ದುಡಿಯುತ್ತಿರುವ ಜನರನ್ನು ಅವಲಂಬಿಸುವವರ ಅನುಪಾತ) ದರವು ಕಡಿಮೆಯಾಗುತ್ತಿರುವುದು ಉತ್ತಮ ಲಕ್ಷಣವಾಗಿದೆ ಆದರೆ ಚೀನಾ ಸೇರಿದಂತೆ ಔದ್ಯೋಗೀಕರಣಗೊಂಡ ರಾಷ್ಟ್ರಗಳಲ್ಲಿ ಈ ದರವು ಹೆಚ್ಚುತ್ತಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿಗೆ ಆಧ್ಯತೆ ನೀಡುವುದರೊಂದಿಗೆ ಮಾನವ ಸಂಪನ್ಮೂಲವನ್ನು ಸರಿಯಾಗಿನಿರ್ವಹಿಸಿದರೆ ನುರಿತ ಯುವ ಉದ್ಯೋಗಿಗಳು ದೇಶಕ್ಕೆ ಪ್ರಯೋಜನಕಾರಿಯಾಗಿ ಪರಿಣಮಿಸಬಲ್ಲರು.

ಹನ್ನೊಂದನೇಯ ಪಂಚವಾರ್ಷಿಕ ಯೋಜನೆಯ ಕೆಲವು ಪ್ರಮುಖ ಉದ್ದೇಶಗಳು ಯಾವುವೆಂದರೆ
1. ಬಡವರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು
2. ಕೃಷಿ ರಂಗದ ಪುನರುತ್ತಾನ
3. ನಿರ್ಮಾಣ ವಲಯದಲ್ಲಿ ಸ್ಪರ್ಧೆಯನ್ನು ಹೆಚ್ಚಿಸುವುದು
4. ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಗೊಳಿಸುವುದು
5. ಪರಿಸರವನ್ನು ರಕ್ಷಿಸುವುದು
6. ಪುನರ್ ವಸತಿ ಯೋಜನೆಗಳನ್ನು ಉತ್ತಮ ಪಡಿಸುವುದು
7. ಆಡಳಿತವನ್ನು ಉತ್ತಮಗೊಳಿಸುವುದು

ಹನ್ನೊಂದನೆ ಪಂಚವಾರ್ಷಿಕ ಯೋಜನೆಯ ಸಾಮಾಜಿಕ & ಆರ್ಥಿಕ ಗುರಿಗಳೆಂದರೆ,
• 2011-12ರ ವೇಳೆಗೆ ತಲಾದಾಯವನ್ನು ದುಪ್ಪಟಗೊಳಿಸಲು ಒಟ್ಟು ಆಂತರಿಕ ಉತ್ಪನ್ನದ ಪ್ರಮಾಣವನ್ನು8% ರಿಂದ 10% ಕ್ಕೇರಿಸುವುದು ಹಾಗೂ ಹನ್ನೆರಡನೆ ಪಂಚವಾರ್ಷಿಕ ಯೋಜನೆಯಲ್ಲಿ ಈ ಪ್ರಮಾಣವನ್ನು10% ರಷ್ಟಕ್ಕೆ ಕಾಯ್ದುಕೊಳ್ಳುವುದು.
• ಸೌಲಭ್ಯಗಳನ್ನು ವಿಸ್ತರಿಸಲು ಕೃಷಿಯ ಒಟ್ಟು ದೇಶೀಯ ಉತ್ಪನ್ನದ ಪ್ರಮಾಣವನ್ನು ವಾರ್ಷಿಕ 4% ರಷ್ಟಕ್ಕೆಏರಿಸುವುದು
• 70 ಮಿಲಿಯನ್ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು
• ವಿದ್ಯಾವಂತ ನಿರುದ್ಯೋಗಿಗಳ ಪ್ರಮಾಣವನ್ನು 5% ಕ್ಕಿಂತಲೂ ಕಡಿಮೆಗೊಳಿಸುವುದು
• ಕಾರ್ಮಿಕರ ಕೂಲಿಯನ್ನು 20% ರಷ್ಟು ಹೆಚ್ಚಿಸುವುದು.

ಶಿಕ್ಷಣ:


• 2003 – 04ರಲ್ಲಿ ಶೇಕಡಾ 52.2 ರಷ್ಟಿದ್ದ ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಅರ್ಧಕ್ಕೆ ಶಾಲೆ ಬಿಡುವ ಮಕ್ಕಳ ಪ್ರಮಾಣವನ್ನು 2011-12ರ ವೇಳೆಗೆ ಶೇಕಡಾ 20 ರಷ್ಟಕ್ಕೆ ಇಳಿಸುವುದು.
• 7 ಅಥವಾ ಇದಕ್ಕಿಂತಲೂ ಹೆಚ್ಚು ವಯಸ್ಸಿನ ಪ್ರತಿ ವ್ಯಕ್ತಿಯ ಸಾಕ್ಷರತಾ ಪ್ರಮಾಣವನ್ನು ಶೇಕಡಾ 80 ರಷ್ಟಕ್ಕೆಏರಿಸುವುದು
• ಸಾಕ್ಷರತೆಯಲ್ಲಿನ ಲಿಂಗ ಅಂತರವನ್ನು ಶೇಕಡಾ ಹತ್ತು ಪಾಯಿಂಟ್ಗಳಿಗೆ ಇಳಿಸುವುದು.
• ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣವನ್ನು ಸಧ್ಯದ ಶೇಕಡಾ 10 ರಿಂದ ಶೇಕಡಾ 15 ರಷ್ಟಕ್ಕೆ ಏರಿಸುವುದು.

ಆರೋಗ್ಯ:


• ಶಿಶು ಮರಣ ದರವನ್ನು 28ಕ್ಕೆ ಹಾಗೂ ಗರ್ಭಿಣಿ ಮರಣ ದರವನ್ನು 1ಕ್ಕೆ ಇಳಿಸುವುದು (ಪ್ರತಿ 1,000ಶಿಶುಗಳ ಲೆಕ್ಕದಲ್ಲಿ)
• ಒಟ್ಟು ಜನನ ದರವನ್ನು 2.1ಕ್ಕೆ ಇಳಿಸುವುದು
• 2009ರ ವೇಳೆಗೆ ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವುದು
• 0-3 ವಯಸ್ಸಿನ ಮಕ್ಕಳ ಗುಂಪಿನ ಅಪೌಷ್ಠಿಕತೆಯನ್ನು ಕಡಿಮೆಗೊಳಿಸುವುದು
• ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ ಮಹಿಳೆಯರು & ಬಾಲಕಿಯರಲ್ಲಿ ಅನಿಮಿಯಾ ರೋಗವನ್ನು ಶೇಕಡಾ 50ರ ಪ್ರಮಾಣಕ್ಕೆ ತಗ್ಗಿಸುವುದು.

ಮಹಿಳೆ & ಮಕ್ಕಳು:


• 2011-12ರ ವೇಳೆಗೆ 0-6 ವಯಸ್ಸಿನ ಮಕ್ಕಳ ಗುಂಪಿನ ಲಿಂಗ ಅನುಪಾತವನ್ನು 935ಕ್ಕೆ ಹಾಗೂ 2016-17ರ ವೇಳೆಗೆ 950ಕ್ಕೆ ಏರಿಸುವುದು.
• ಕನಿಷ್ಠ ಪಕ್ಷ ಶೇಕಡಾ 33 ರಷ್ಟು ಮಹಿಳೆಯರು & ಬಾಲಕಿಯರು ನೇರವಾಗಿ ಹಾಗೂ ಪರೋಕ್ಷವಾಗಿಸರ್ಕಾರದ ಎಲ್ಲಾ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎನ್ನುವುದನ್ನು ಖಾತ್ರಿ ಪಡಿಸುವುದು.
• ಬಾಲ್ಯದಲ್ಲಿಯೇ ದುಡಿಯಲಾರಂಭಿಸಿದ ಎಲ್ಲ ಮಕ್ಕಳ ಸುರಕ್ಷಿತ ಬಾಲ್ಯವನ್ನು ಆನಂದಿಸುತ್ತಿದ್ದಾರೆ ಎನ್ನುವುದನ್ನು ಖಾತ್ರಿ ಪಡಿಸುವುದು.

ಮೂಲ ಸೌಕರ್ಯ:


• 2009ರ ವೇಳೆಗೆ ಎಲ್ಲಾ ಗ್ರಾಮಗಳು ಹಾಗೂ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆವಿದ್ಯುತ್ ಸಂಪರ್ಕ ಕಲ್ಪಿಸುವುದು ಹಾಗು ಯೋಜನೆಯ ಅಂತ್ಯದ ವೇಳೆಗೆ 24 ಗಂಟೆಗಳ ಕಾಲ ನಿರಂತರವಿದ್ಯುತ್ ಒದಗಿಸುವುದನ್ನು ಖಾತ್ರಿಗೊಳಿಸುವುದು.
• 2009ರ ವೇಳೆಗೆ 1,000 ಜನಸಂಖ್ಯೆಯುಳ್ಳ ಎಲ್ಲ ವಸತಿ ಪ್ರದೇಶ ಹಾಗೂ 500 ಕ್ಕಿಂತಲೂ ಅಧಿಕ ಜನರುವಾಸಿಸುವ ಗುಡ್ಡನಾಡು & ಬುಡಕಟ್ಟು ಪ್ರದೇಶಗಳಿಗೆ ಹಾಗು 2015ರ ವೇಳೆಗೆ ಎಲ್ಲ ಪ್ರಮುಖ ಜನವಸತಿ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವುದನ್ನು ಖಾತ್ರಿಪಡಿಸುವುದು.
• 2007ರ ನವೆಂಬರ್ ವೇಳೆಗೆ ಪ್ರತಿಯೊಂದು ಗ್ರಾಮಕ್ಕೆ ದೂರವಾಣಿ ಸಂಪರ್ಕ ಹಾಗೂ 2012ರ ವೇಳೆಗೆಎಲ್ಲ ಗ್ರಾಮಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಕಲ್ಪಿಸುವುದು.
• 2012ರ ವೇಳೆಗೆ ಎಲ್ಲರಿಗು ನಿವೇಶನವನ್ನು ಒದಗಿಸುವುದು ಹಾಗೂ 2015-17ರ ವೇಳೆಗೆ ಎಲ್ಲಗ್ರಾಮಾಂತರ ಬಡವರಿಗೊಸ್ಕರ ಮನೆಗಳ ನಿರ್ಮಾಣವನ್ನು ಆರಂಭಿಸುವುದು.

ಪರಿಸರ:


• ಅರಣ್ಯ ಪ್ರದೇಶವನ್ನು 5% ಪಾಯಿಂಟ್ಗಳಿಗೆ ಹೆಚ್ಚಿಸುವುದು
• 2011-12ರ ವೇಳೆಗೆ ಎಲ್ಲ ಪ್ರಮುಖ ನಗರಗಳನ್ನು ವಾಯು ಮಾಲಿನ್ಯದಿಂದ ಮುಕ್ತಗೊಳಿಸುವುದು
• 2011-12ರ ವೇಳೆಗೆ ನಗರ ಪ್ರದೇಶಗಳ ನಿರುಪಯುಕ್ತ ನೀರನ್ನು ಸ್ವಚ್ಛ ನದಿ ನೀರಾಗಿ ಮಾರ್ಪಡಿಸುವುದು.
• 2016-17ರ ವೇಳೆಗೆ ವಿದ್ಯುತ್ನ ಕ್ಷಮತೆಯನ್ನು ಶೇಕಡಾ 26ರಷ್ಟು ಪಾಯಿಂಟ್ಗಳಿಗೆ ಹೆಚ್ಚಿಸುವುದು.