Loading [MathJax]/extensions/MathML/mml3.js

“ಚಂದ್ರಯಾನ – 1”

 

ಭಾರತದ ಚಂದ್ರಯಾನದ ಕನಸು ನನಸಾಗುವ ಕಾಲವಿದು, ಅಕ್ಟೋಬರ್ ಅಂತ್ಯಕ್ಕೆ ಚಂದ್ರನತ್ತ ಸಾಗಲು ವ್ಯೋಮನೌಕೆ ಸಿದ್ದಗೊಂಡಿದೆ, ಭಾರತದ ಮಹಾತ್ವಾಕಾಂಕ್ಷೆಯ ಯೋಜನೆ ಗರಿಗೆದರಲಿದೆ.
ಚಂದ್ರ ಭೂಮಿಯ ಪುಟ್ಟ ಉಪಗ್ರಹ ಚಂದ್ರನ ಮೇಲೆ ಅಧ್ಯ ಯನಗಳನ್ನು ವಿವಿಧ ರಾಷ್ಟ್ರಗಳು ಕೈಗೊಂಡಿವೇಯಾದರೂ ಭಾರತವು ತನ್ನದೇ ರೀತಿಯಲ್ಲಿ ವಿಶಿಷ್ಟವಾಗಿ ಅಧ್ಯಯನ ಮಾಡಲು ಯೋಜನೆ ರೂಪಿಸಿದ್ದು ‘ಚಂದ್ರಯಾನ ’ ಯೋಜನೆ ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲುಗಲ್ಲಾಗಲಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪರಿಣಿತ ಸಾಧಿಸುತ್ತಿದ್ದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲೊಂದಾಗಿ ಅಂತರಿಕ್ಷ ವಿಜ್ಞಾನದಲ್ಲಿ ತನ್ನ ಪ್ರತಿಷ್ಠೆ ಬೆಳೆಸಿಕೊಂಡಿತು, ಇಸ್ರೋ ರೂಪಿಸಿದ ಉಡಾವಣಾ ವಾಹಕಗಳಾದ (GSLV) & (PSLV) ಗಳು ಯಶಸ್ವಿಯಾಗಿ ಕೃತಕ ಉಪಗ್ರಹಗಳನ್ನು ಬಾಹ್ಯಾಕಾಶ ಶೋಧಕಯಂತ್ರಗಳನ್ನು ಭೂಸ್ಥಿರ ಕಕ್ಷೆ & ಅಂತರಿಕ್ಷದಲ್ಲಿ ಸ್ಥಾಪಿಸಿ ಮರಳಿ ಬಂದಾಗ ವಿಜ್ಞಾನಿಗಳಲ್ಲಿ ಆಸೆಯೊಂದು ಚಿಗುರೊಡೆಯಿತು. ಚಂದ್ರನ ಬಗ್ಗೆ ಆಳವಾದ ಅಧ್ಯಯನಕ್ಕೆ ತಾನೂ ಏಕೆ ಮುಂದಾಗಬಾರದೆಂಬ ಆಲೋಚನೆಗೆ (GSLV) & (PSLV) ಗಳ ಯಶಸ್ವಿ ಕಾರ್ಯಕ್ಷಮತೆ ಪ್ರೇರಣೆ ನೀಡಿತು. ಅದೇ ಮುಂದೆ ಚಂದ್ರಮಾನ ಯೋಜನೆಗೆ ಅಡಿಪಾಯವಾಯಿತು. ಭಾರತದ ‘ಇಸ್ರೋ’ ಬಾಹ್ಯಾಕಾಶ ಸಂಸ್ಥೆಯ ಪರಿಕಲ್ಪನೆಯಾದ ‘ಚಂದ್ರಮಾನ’ ಯೋಜನೆ ಮೊಳಕೆಯೊಡೆದ್ದು 1999ರಲ್ಲಿ ಅಂದಿನ ಇಸ್ರೋ ಅಧ್ಯಕ್ಷ ಖ್ಯಾತ ಖಗೋಳ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಇದರ ನೀಲನಕ್ಷೆಗೆ ಕಾರಣರಾದರು. ಚಂದ್ರಯಾನ ಯೋಜನೆಯು ರೂಪರೇಷ ಸಾಧ್ಯ ತೆ & ತಾಂತ್ರಿಕ ರಚನೆ ಕುರಿತು ವರದಿಯನ್ನುರೂಪಿಸುವ ಜವಾಬ್ದಾರಿ ಹೊತ್ತವರು ಡಾ. ಜಾರ್ಜ್ ಜೋಸೆಫ್ 2000ರಲ್ಲಿ ನಡೆದ ಖಗೋಳ ಶಾಸ್ತ್ರಜ್ಞರ ರಾಷ್ಟ್ರೀಯ ಸಮ್ಮೇಳನದಲ್ಲಿ ಚಂದ್ರಯಾನದ ಸಾಧ್ಯ ತೆಗಳ ಕುರಿತು ವಿವಿಧ ವಿಜ್ಞಾನಿಗಳ ಚರ್ಚೆ ನಡೆಸಿ, ಕಾರ್ಯಾಚರಣೆಯೊಂದನ್ನು ರಚಿಸಿದರು ನಂತರ ಇಸ್ರೋ ಸಂಸ್ಥೆಯ ಹಲವು ವಿಜ್ಞಾನಿಗಳು ಚಂದ್ರಯಾನ ಯೋಜನೆಗೆ ಹೇಗಿರಬೇಕು, ಅದರಅಗತ್ಯಗಳು ತಾಂತ್ರಿಕ ವಿವರಗಳನ್ನು ಕೂಲಂಕುಷವಾಗಿ ಚರ್ಚಿಸಿ ಯೋಜನೆ ಸಿದ್ದಪಡಿಸಿ 2003ರಲ್ಲಿ ಕೇಂದ್ರ ಸರಕಾರಕ್ಕೆಸಲ್ಲಿಸಿ ಒಪ್ಪಿಗೆ ಪಡೆಯಿತು, ಹೀಗೆ ಅರಂಭಗೊಂಡಿತು ಭಾರತದ ಚಂದ್ರಮಾನ ಕನಸು ನನಸಾಗುತ್ತ ಪ್ರಥಮ ಹೆಜ್ಜೆ.
ಚಂದ್ರಮಾನ ಯೋಜನೆಯನ್ನು ಕೈಗೊಂಡ 3ನೇ ರಾಷ್ಟ್ರವಾಗಿರುವ ಭಾರತ ಈ ಯೋಜನೆಗೆ 2 ವರ್ಷನಿಗದಿಪಡಿಸಿದೆ. ಚಂದ್ರಯಾನದ ಮುಖ್ಯ ಉದ್ದೇಶ ಚಂದ್ರನ ವಿಸ್ಕೃತ ಅಧ್ಯಯನ, ಈಗಾಗಲೇ 2007ರಲ್ಲಿ ಜಪಾನ್ಸೆಪ್ಟೆಂಬರ್ 2007ರಲ್ಲಿ ಸೆಲೆನ್ ಮಿಷನ್ & ಅಕ್ಪೋಬರ್ 2007ರಲ್ಲಿ ಬೆನಿವು ಜಾಂಗ್ – ಇ ಎಂಬ ನೌಕೆಗಳನ್ನುಚಂದ್ರನತ್ತ ಅಧ್ಯಯನಕ್ಕೆ ಹಾರಿಬಿಟ್ಟಿವೆ. ಭಾರತದ ಚಂದ್ರಯಾನ ಯೋಜನೆಗೆ ವೆಚ್ಚವು 386 ಕೋಟಿಗಳದ್ದು (83ಮಿಲಿಯನ್ ಡಾಲರು) ಈ ಯೋಜನೆಯ ಮುಖ್ಯಸ್ಥರು ಮೈಲು ಸ್ವಾಮಿ ಅಣ್ಣದೊರೈ.
ಚಂದ್ರ ದ್ರಯಾನಕ್ಕೆ ಉಡಾವಣೆಗೊಳ್ಳಲಿರುವ ಉಪಗ್ರಹವು ಚಂದ್ರನಿಂದ 100 ಕಿ.ಮೀ ಅಂತರದಲ್ಲಿ ಕಕ್ಷೆಯಲ್ಲಿಸುತ್ತುವುದು. ಇದಕ್ಕೆ ಚಂದ್ರನ ಮೇಲೈಯನ್ನು ಅಧ್ಯ ಯನ ಮಾಡಿ ದತ್ತಾಂಶಗಳನ್ನು ಸಂಗ್ರಹಿಸಲು ಅಗತ್ಯವಾಗಿರುವ ದೂರಸಂವೇದಿ ಉಪಕರಣಗಳನ್ನು ಅಳವಡಿಸಿದೆ. ಈ ಉಪಗ್ರಹ ಉಡಾವಣಾ ವಾಹನವು ಶೋಧಕ ಚಂದ್ರಯಾನವನ್ನುಹೊತ್ತೊಯ್ಯಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ಧವನ್ ಅಂತರಿಕ್ಷ ಕೇಂದ್ರ ಇದು ಉಡಾವಣಾ ಸ್ಥಳ ಇದು ಮೊದಲು ಚಂದ್ರನ ದೀರ್ಘ ವೃತ್ತಾಕಾರದ ಕಕ್ಷೆಗೆ ಸೇರಿ ನಂತರ ಚಂದ್ರ ವರ್ಗಾವಣಾ ಪಥಕ್ಕೆ ಸ್ಥಿರಗೊಳ್ಳಲಿದೆ. ಚಂದ್ರಯಾನ ಉಪಗ್ರಹವು ಒಟ್ಟು 11 ತಾಂತ್ರಿಕ ಮಹತ್ವದ ಉಪಕರಣಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಲಿದೆ. ಇದುದೃಗ್ಗೋಚರ, ಅವಗೆಂಪು, ಕ್ಷಕಿರಣಗಳನ್ನು ಉಪಯೋಗಿಸುವ ಸೂಕ್ಷ್ಮ ದೂರಸಂವೇದಿ ಉಪಕರಣಗಳಿಂದ ಕೂಡಿದ್ದು,ಚಂದ್ರಕಕ್ಷೆಗೆ ಸೇರಿದೊಡನೆ ಚಂದ್ರನ ಮೇಲ್ಮೈ ರಚನೆಯ ನಕಾಶೆ, ಖನಿಜಗಳ ಅಧ್ಯಯನ & ವಾತಾವಣದಲ್ಲಿನಬದಲಾವಣೆ, ಜೀವಿಗಳಿರುವ ಬಗ್ಗೆ ಅನ್ವೇಷಣೆ ನಡೆಸುವುದು, ಚಂದ್ರನ ಭೂಸ್ತರವನ್ನು & ಅದರಲ್ಲಿರುವ ಖನಿಜಗಳ ನಿಖರ ಅಧ್ಯಯನ ಈ ಚಂದ್ರಯಾನದ ಪ್ರಮುಖ ಉದ್ದೇಶ. ಅದಕ್ಕಾಗಿ ರೂಪಿಸಿರುವ ಅತ್ಯಾಧುನಿಕ ಉಪಕರಣಗಳು ತಾಂತ್ರಿಕವಾಗಿ ಉತ್ಕೃಷ್ಟ ಮಟ್ಟದವು.
ಚಂದ್ರ ನ ಕಕ್ಷೆಯಲ್ಲಿ 100 ಕಿ.ಮೀ. ಅಂತರದಲ್ಲಿ ಸುತ್ತುವ ಚಂದ್ರಯಾನ ಉಪಗ್ರಹ ವು ತನ್ನ ಅಧ್ಯಯನ ಮಾಹಿತಿಯನ್ನು ಆಗಾಗ ಭೂಮಿಗೆ ರವಾನಿಸುತ್ತದೆ. ಈ ನೌಕೆಯ ಕಾರ್ಯ ಸಾಮಥ್ರ್ಯವು 2 ವರ್ಷಗಳ ಕಾಲಾವಧಿಯದ್ದು ಈವರೆಗೂ ಕೈಗೊಂಡಿರುವ ಚಂದ್ರ ಶೋಧಗಳಲ್ಲಿ ಕಂಡು ಬರುವ ರಾಸಾಯನಿಕ & ಖನಿಜಾಂಶಗಳ ಪತ್ತೆ ಹೊಸ ಅನ್ವೇಷಣಾ ಸಾಧ್ಯತೆಗಳನ್ನು ಈ ಉಪಗ್ರಹಕೈಗೊಳ್ಳಲಿದೆ, ಚಂದ್ರನ ಮಾಹಿತಿ ನೀಡಲು ಅನುವಾಗುವಂತೆ ಜೊತೆ ಕೊಂಡೊಯ್ದು ಉಪಕರಣಗಳು ಕಾರ್ಯನಿರ್ವಹಿಸಲಿವೆ. ಚಂದ್ರನ ಮೂರು ಅಯಾಮ (3ಡಿ) ನಕ್ಷೆತಯಾರಿಸುವುದು. 20 ಕಿ.ಮಿ. ವರೆಗೂ ದೂರವ್ಯಾಪ್ತಿಯ ನಿಖರತೆಯ ಸಾಮಥ್ರ್ಯವಿರುವ ಉಪಕರಣಗಳಿಂದ ರೇಡಾನ್,ಯುರೇನಿಯಂ & ಥೋರಿಯಂ ನಂತರ ರಾಸಾಯನಿಕ ಧಾತುಗಳ ನಿಕ್ಷೇಪ ಶೋಧ ಮಾಡಲಿವೆ. ಚಂದ್ರನ ಒಟ್ಟಾರೆ ಸೂಕ್ಷ್ಮಅಧ್ಯಯನ ಮಾಡಲಿರುವ ಈ ಉಪ ಗ್ರಹ ವು 525 ಕಿಲೋಗ್ರಾಂ ತೂಗುತ್ತದೆ. ಚಂದ್ರ ದ್ರನ ಕೈಯಲ್ಲಿದ್ದಾಗ ಚಂದ್ರ ದ್ರನು ಈಉಪಗ್ರಹ ತಲುಪಲು 5 1/2 ದಿನಬೇಕು. ಇದರಿಂದಾಗಿಯೇ ಉಡಾವಣಾ ವಾಹನ ( PSLV ) ಯನ್ನು ಮತ್ತಷ್ಟುಅಭಿವೃದ್ಧಿಪಡಿಸಿ PSLV - XL ಎಂದು ಹೆಸರಿಸಲಾಗಿದೆ. ಕತ್ತಲಿನ ಸಂದರ್ಭದಲ್ಲಿ ಇದಕ್ಕೆ ಶಕ್ತಿ ಸರಬರಾಜು ಆಗಲು ಸೌರಶಕ್ತಿ ಚಾಲಿತ ಫಲಕಗಳು & ಲಿಥುಯಂ ಆಯನ್‍ಗಳ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದರಲ್ಲಿರುವಅತ್ಯಾಧುನಿಕ ಎಕ್ಸ್ ರೇ ಉಪಕರಣಗಳು ಚಂದ್ರನ ಅತೀ ಸಮೀಪ & ಅತೀ ದೂರದಿಂದ ವಿವಿಧ ಹಂತಗಳಲ್ಲಿ &ವಿವಿಧ ಬಗೆಯಿಂದ ಅಧ್ಯಯನ ನಡೆಸಿ ಬದಲಾವಣೆಗಳನ್ನು ಗುರುತಿಸಿ ವರದಿಯನ್ನು (ಮಾಹಿತಿ) ಭೂಮಿಗೆ ರವಾನಿಸುತ್ತದೆ.

ಚಂದ್ರುಯಾನ ಉಪಗ್ರಹವು ಆಕಾರದಲ್ಲಿ ಘನಾಕೃತಿ ಹೊಂದಿದೆ. ಇದರ ಬದಿಯ ಅಳತೆ 1.5 ಮೀಟರ್ನಷ್ಟಿದೆ.ಇದಕ್ಕೆ ಒಂದು ಕಡೆ ಸೌರಶಕ್ತಿಯ ಫಲಕ ಹಾಗೂ ಮತ್ತೊಂದು ಟ್ರಾನ್ಸ್ ಮೀಟರ್ ಅಂಟೆನಾ ಇದೆ. ಬೆಳಕಿನ ಸಮಯದಲ್ಲಿ700 ವ್ಯಾಟ್ ಶಕ್ತಿ ಉತ್ಪಾದಿಸುವ ಈ ಫಲಕಗಳಲ್ಲಿ ಬ್ಯಾಟರಿಯಿಂದ ಚಾಲನಾ ಶಕ್ತಿ ಪಡೆಯುತ್ತದೆ. ಚಂದ್ರನಗೋಚರ, ಅಗೋಚರ ಮುಖಗಳನ್ನು ವಿಜ್ಞಾನಿಗಳಿಗೆ ಪರಿಚಯಿಸುವ ಈ ಉಪಗ್ರಹ ವಿನ್ಯಾಸವು ಭಾರತದ ಈಪ್ರಥಮವಾಗಿ ಹಾರಿಬಿಟ್ಟ ಹವಾಮಾನ ಅಧ್ಯಯನ ಉಪ ಗ್ರಹ ಕಲ್ಪನಾ 1 ಅನ್ನು ಹೋಲುತ್ತದೆ. ಇದರಲ್ಲಿ ತೃಯಾಕ್ಷಿಯನಿಯಂತ್ರಣ ಉಪಗ್ರಹವು ದ್ವಿಪ್ರಣೋದಕ (Bi-propellant) ವ್ಯವಸ್ಥೆ ಅಳವಡಿಸಲಾಗಿದೆ. ದೂರ ಮಾಪನ & ದೂರ ಆದೇಶಗಳ ವ್ಯವಸ್ಥೆ ಹೊಂದಿದ್ದು ಅದಕ್ಕಾಗಿ 5 ಕಂಪನ ಪಟ್ಟಗಳನ್ನು ರೂಪಿಸಿದೆ. ಚಂದ್ರನತ್ತ ಉಡಾವಣೆಗೊಂಡಾಗ 1000ಕಿ.ಮೀ. ದೂರದ ವೃತ್ತಿಯ ಚಂದ್ರನ ಕಕ್ಷೆಯನ್ನು ಸೇರುವುದರೊಂದಿಗೆ ನಂತರ 100 ಕಿ.ಮೀ ಕಕ್ಷೆಗೆ ಸ್ಥಾನಾಂತರಿಸಲಾಗುವುದು. ಚಂದ್ರನ ಕಕ್ಷೆ ಸೇರಿದಾಗ ಅದರ ಸೌರಫಲಕಗಳು ಬಿಚ್ಚಿಕೊಂಡು ಕಾರ್ಯಾಚರಣೆಗೊಳ್ಳುತ್ತವೆ.ಈ ಉಪಗ್ರಹ ಚಂದ್ರನನ್ನು ಸೇರಿದಾಗ ಅದರ ದೂರವು ಸುಮಾರು 4,00,000 ಕಿ.ಮಿ. ಗಳಷ್ಟಿರುತ್ತದೆ. ಈ ಉಪಗ್ರಹದ ಜೊತೆಗಿರುವ ಉಪಕರಣಗಳು ಮಾಹಿತಿಯನ್ನು ಗಿಂಬೆಲ್ ಅಂಟೆನ್ನಾ ಮೂಲಕ ರವಾನಿಸುತ್ತದೆ.

ಚಂದ್ರಯಾನ ಜೊತೆ ಕೈಗೂಡಿಸಿದವರು:


ಇಸ್ರೋದ ಈ ಯೋಜನೆಗೆ ರಾಷ್ಟ್ರಗಳು ಕೈ ಜೋಡಿಸಿವೆ, ಅಮೇರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾಇದರ ಸಹಭಾಹಿತ್ವದಲ್ಲಿದೆ. ನೌಕೆಯ ಹೊತ್ತೊಯ್ಯಲಿರುವ 5 ಉಪಕರಣಗಳು ಭಾರತದ್ದಾದರೆ ಉಳಿದ ಆರುಉಪಕರಣಗಳನ್ನು (ಪೆ ಲೋಡ್) ವಿದೇಶಿ ಬಾಹ್ಯಾಕಾಶ ಸಂಸ್ಥೆಯು ನೌಕೆಯೊಂದಿಗೆ ತಮ್ಮ ತಾಂತ್ರಿಕ ಅಧ್ಯಯನ ಉಪಕರಣಗಳನ್ನು ಕಳುಹಿಸಲಿವೆ. ಈ ದೂರ ಸಂವೇದಿ ನೌಕೆಯ ಒಟ್ಟು ತೂಕ 1304 ಕಿಲೋ ಗ್ರಾಂ.ಗಳು ಅತ್ಯಂತಸುಧಾರಿತ ಡಿಜಿಟಲ್ ಉಪಕರಣಗಳನ್ನು ಇದರ ಜೊತೆಗೆ ಕಳುಹಿಸಲಾಗುತ್ತಿದ್ದು, ಅದರಲ್ಲಿ ನೇರಳಾತೀತ ಕ್ಷ-ಕಿರಣಉಪಕರಣಗಳು ಇದ್ದು ಚಂದ್ರನ ಮೇಲ್ಮೈ & ವಾತಾವರಣವನ್ನು ಅಧ್ಯಯನ ಮಾಡಲಿವೆ.
ಚಂದ್ರಯಾನ I ರ ಯಶಸ್ಸು ಅದರ ಹಿಂದೆಯೇ ಚಂದ್ರಯಾನ II ಯೋಜನೆಗೆ ಪ್ರೇರಣೆ ನೀಡಿದೆ. ಚಂದ್ರಯಾನದ ಎರಡನೆ ಯೋಜನೆಯನ್ನು ಭಾರತ ರಷ್ಯಾದ ಸಹಯೋಗದಲ್ಲಿ ನಡೆಯಲಿದೆ. ಈ ಯೋಜನೆಯಲ್ಲಿ ಯಾಂತ್ರಿಕೃತ ರೋಬೋಟ್ ಯಂತ್ರವೊಂದನ್ನು ಚಂದ್ರನ ಮೇಲಿಳಿಸಿ, ಅಧ್ಯಯನ ಮಾಡುವುದಾಗಿದೆ. ರಷ್ಯಾದ ಅಂತರಾಷ್ಟ್ರೀಯ ಸಂಶೋಧನಾ ಕೇಂದ್ರ ಕೊಸ್ಕೋಸ್ಮೋವ್ನ ವಿಜ್ಞಾನಿಗಳ ಜೊತೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಕೈ ಜೋಡಿಸಿದ್ದು, ಚಂದ್ರನತ್ತ ಒಯ್ಯುವ ಉಪಕರಣಗಳಲ್ಲಿ ರಷ್ಯದ ಉಪಕರಣಗಳು ಸೇರಲಿವೆ. ಚಂದ್ರನಕಕ್ಷೆಗೆ ಮೊದಲ ಉಪಗ್ರಹವನ್ನು ಸೇರಿಸಿ ನಂತರ ರೋಬೋಟ್ ಯಂತ್ರವನ್ನು ನಿರ್ಧಾರಿತ ಸ್ಥಳದಲ್ಲಿ ಇಳಿಸಿ ಚಂದ್ರನ ಕುರಿತು ಮಾಹಿತಿ ಸಂಗ್ರಹಿಸಲಿದೆ. ಈ ರೋಬೋಟ್ ಎಲ್ಲಿ ಇಳಿಸಬೇಕು ಎಂಬುದನ್ನು ಚಂದ್ರಯಾನ I ಯೋಜನೆಯ ಲಭ್ಯ ಫಲಿತಾಂಶದ ನಂತರ ನಿರ್ಧರಿಸಲಾಗುವುದು. ಈ ರೋಬೋಟ್ ಯಂತ್ರವು ಚಂದ್ರನ ಮೇಲೆ ಶಿಲೆಗಳ ಅಧ್ಯಯನ & ರಾಸಾಯನಿಕಗಳನ್ನು ವಿಶ್ಲೇಷಿಸಿ ಚಂದ್ರ ಕಕ್ಷೆಯಲ್ಲಿರುವ ಉಪಗ್ರಹಕ್ಕೆ ಮಾಹಿತಿ ರವಾನಿಸುತ್ತದೆ. ಆ ಮಾಹಿತಿ ಉಪಗ್ರಹದ ಮೂಲಕ ಭೂಮಿಯಲ್ಲಿರುವ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ವಿದ್ಯುತ್ ತರಂಗಳ ಮೂಲಕ ಬಿತ್ತರಿಸಲಾಗುತ್ತದೆ. ಬರುವ 2011-12ರ ವೇಳೆಗೆ ಚಂದ್ರ ದ್ರಯಾನ II ಉಪಗ್ರಹ ಕಕ್ಷೆಗೆ ಸೇರಿಸುವ ಉದ್ದೇಶವಿದೆ. ನಂತರ 2030ರ ವೇಳೆಗೆ ಚಂದ್ರನತ್ತ ಮಾನವ ರಹಿತ ನೌಕೆ ಕಳುಹಿಸುವ ಯೋಜನೆ ರೂಪಿಸಿದೆ. ಇಸ್ರೋ ಸಂಸ್ಥೆ ಅಂತರಿಕ್ಷ ವಿಮಾನದಲ್ಲಿ ಅಪಾರ ಯಶಸ್ಸು ಹಾಗೂ ಅನುಭವ ಹೊಂದಿದ್ದು, ಅದರ ಸಫಲತೆಯು ಚಂದ್ರಮಾನ II ರ ಉಪಗ್ರಹವನ್ನು (GSLV) ವಾಹನ ಉಡ್ಡಯನ ಮಾಡಲಿದೆ.
ಚಂದ್ರನ ಕುರಿತು ಆದಮ್ಯ ಆಸಕ್ತಿ ಆದಿಕಾಲದಿಂದಲೂ ಇದ್ದದ್ದೆ, ಪ್ರಾಚೀನ ಭಾರತೀಯರು ಚಂದ್ರನ ಬಗ್ಗೆ ಸಾಕಷ್ಟು ಅರಿತಿದ್ದರು. ಚಂದ್ರನ ಕಲೆಗಳ ಕುರಿತು ಜ್ಯೋತಿಷ್ಯ ಶಾಸ್ತ್ರದ ಮೂಲಕ ಮಾಹಿತಿ ಹೊಂದಿದ್ದರು., ಕ್ರಿ.ಶ. 7ನೇ ಶತಮಾನದ ಚಂದ್ರಯಾನ ಪಂಚಾಂಗವು ಸಿದ್ಧಗೊಂಡಿತ್ತು ಕ್ರಿ.ಶ 500 ರಷ್ಯ ಹಿಂದೆಯೇ ಭಾರತದ ಖ್ಯಾತ ಖಗೋಳಶಾಸ್ತ್ರದಲ್ಲಿ ಆರ್ಯಭಟನು ಚಂದ್ರನ ಗಾತ್ರ & ಭೂಮಿಯಿಂದ ಚಂದ್ರನ ದೂರದ ಕುರಿತು ಪ್ರಸ್ತಾಪಿಸಿದ್ದು.ಮಹತ್ವದ ಸಂಗತಿ ಕ್ರಿ.ಶ. 1610 ರಲ್ಲಿ ಇಟಲಿಯ ಖಗೋಳಶಾಸ್ತ್ರಜ್ಞ ಗೆಲಿಲಿಯೋ ದೂರದರ್ಶಕ ಯಂತ್ರದ ಮೂಲಕ ವಿಶ್ಲೇಷಿಸಿ ಚಂದ್ರನ ಮೇಲಿನ ಗಿರಿ ಕಪ್ಪು ಕುಳಿಗಳ ಬಗ್ಗೆ ಮೇಲ್ಮೈ ಚಿತ್ರವನ್ನು ರಚಿಸಿದ್ದ.
ಆಧುನಿಕ ಕಾಲದಲ್ಲಿ ಚಂದ್ರನತ್ತ ಹಾರಿದ ಪ್ರಥಮ ಉಪಗ್ರಹ ರಷ್ಯ ದೇಶದ್ದು 1957ರ ಅಕ್ಟೋಬರ್ 4 ರಂದು ರಷ್ಯಾ ‘ಸ್ಪುಟ್ನಿಕ್ ‘ ಎಂಬ ಉಪ ಗ್ರಹ ಚಂದ್ರನತ್ತ ಹಾರಿಸಿ ಹೊಸ ಯುಗಕ್ಕೆ ನಾಂದಿ ಹಾಡಿತು. ಅಮೇರಿಕ ಸಹ ತನ್ನದೇ ಚಂದ್ರನ ಕುರಿತ ಯೋಜನೆಗಳನ್ನು ರೂಪಿಸಿತು. ರಷ್ಯಾದ ಲೂನಾ I ಉಪಗ್ರಹವು ಚಂದ್ರನ ಮೇಲೆ ತನ್ನ ಪ್ರಥಮ ಕುರುಹನ್ನು ಇಳಿಸಿತು. ನಂತರ ಕಳುಹಿಸಿದ ಲೂನಾ III ಉಪಗ್ರಹವು ಚಂದ್ರನ ಛಾಯಾಚಿತ್ರ ರವಾನಿಸಿತು. ಹೀಗೆ ಸಾಗಿದ ಅನ್ವೇಷಣೆಗಳು ಮುಂದೆ 1969ರಲ್ಲಿ ಜಾಗತಿಕ ಇತಿಹಾಸದಲ್ಲಿ ಸುವರ್ಣ ಅಧ್ಯಾಯವೊಂದಕ್ಕೆ ನಾಂದಿ ಹಾಡಿತು.ಪ್ರಥಮವಾಗಿ ಮಾನವ ಚಂದ್ರನ ಮೇಲಿಳಿದ.
ಅಮೇರಿಕಾದ ನಾಸಾ ಸಂಸ್ಥೆಯು ಮೊದಲು ಸರ್ವೆಯರ್ ನೌಕೆಗಳನ್ನು ಚಂದ್ರಾಧ್ಯಯನಕ್ಕೆ ಕಳುಹಿಸಿತು.ಅವುಗಳನ್ನು ಕಳುಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ಮತ್ತಷ್ಟು ಅಧ್ಯಯನಕ್ಕೆ ಅಪೋಲೋ ಸರಣಿಯ 11,12,13,14,15,16& 17 ನೌಕೆಗಳನ್ನು ರವಾನಿಸಿತು. ಅತ್ತ ಲೂನಾ 16,20,29 ನೌಕೆಗಳಲ್ಲಿ ಚಂದ್ರನ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿಮಾನವ ಚಂದ್ರನ ಮೇಲಿಳಿಯಲು ವಿಫುಲ ವಿವರಗಳನ್ನು ಪಡೆಯುವಂತಾಯಿತು.
1969ರ ಜುಲೈ 20 ಸುವರ್ಣ ದಿನ. ಅಮೇರಿಕದ ನೀಲ್ ಆರ್ಮ್ಸ್ಟ್ರಾಂಗ್ & ಎಡ್ವಿನ್ ಅಲ್ಡ್ರಿನ್ ಅಪೋಲೋ I ಉಪಗ್ರಹದ ಮೂಲಕ ಚಂದ್ರನ ಮೇಲೆ ಪ್ರಥಮವಾಗಿ ಪಾದಾರ್ಪಣೆ ಮಾಡಿದರು.
1990ರಲ್ಲಿ ಕ್ಲೆಮೆಂಟೈನ್ & ಲೂನಾರ್ ಪ್ರೋಸ್ಪೆಕ್ಟರ್ ಶೋಧಕ ಉಪಗ್ರಹಳು ನೀಡಿದ ಮಾಹಿತಿ ಮಹತ್ವ ಪೂರ್ಣವಾಗಿದೆ. ಯುರೋಪ್ ದೇಶವೂ ತನ್ನ ಸ್ಮಾರ್ಟ್ I ಉಪಗ್ರಹ ಯೋಜನೆ ರೂಪಿಸಿ, 2003 ಚಂದ್ರಯಾನಅನ್ವೇಷಣೆಗೆ ದಾರಿ ಮಾಡಿಕೊಟ್ಟಿತು. ಈಗಾಗಲೇ 12 ಜನ ಗಗನ ಯಾತ್ರಿಗಳು ಚಂದ್ರನ ಮೇಲೆ ನಡೆದಾಡಿದ್ದಾರೆ. ಚಂದ್ರನನೂರಾರು ಕಿಲೋ ಗ್ರಾಂಗಳಷ್ಟು ಖನಿಜ, ಶಿಲೆ & ದ್ರವ್ಯಗಳನ್ನು ಶೋಧನೆಗಾಗಿ ಭೂಮಿಗೆ ತರಲಾಗಿದೆ. ಆದರೂ ಹೊಸ ಅನ್ವೇಷಣೆಯ ಕುತೂಹಲ ಇನ್ನು ತಣ್ಣಿದಿಲ್ಲ. ಮುಂದೊಂದು ದಿನ ಚಂದ್ರನ ಮೇಲೆ ಮಾನವ ಮನೆ ಮಾಡುವ ದಿನಗಳು ದೂರವಿಲ್ಲ. ಭಾರತದ ಮಹತ್ವಾಕಾಂಕ್ಷೆಯ ಕನಸು ನನಸಾಗಿದೆ ಉಪಗ್ರಹ ಉಡ್ಡಯನಕ್ಕೆ ಕ್ಷಣಗಣನೆ ಸಾಗಿದೆ.
ಕೆಲವು ಮಹತ್ವದ ಚಿಕಿತ್ಸೆಗಳೆಂದರೆ ಪಾರ್ಕಿನಸನ್ ರೋಗಿಯ ಮೆದುಳಿನಲ್ಲಿರುವ ಡೋಪಮಿನ್ರಾಸಾಯನಿಕಗಳನ್ನು ಉತ್ಪಾದಿಸುವ ಕೋಶಗಳ ಬದಲಿಗೆ ಈ ಕಾಂಡ ಕೋಶಗಳನ್ನು ಬಳಸುವುದು. ಒಂದನೆ ಮಾದರಿ(ಟೈಪ್ -1) ಮಧುಮೇಹದಲ್ಲಿ ಇನ್ಸುಲಿನ್ ಕೋಶಗಳಾಗಿ & ಹಾನಿಗೊಂಡ ಹೃದಯದ ಸ್ನಾಯುಕೋಶಗಳ ದುರಸ್ತಿ.
ಪ್ರೌಢ ಆಕರ ಕೋಶಗಳು ಎರಡು ರೀತಿಯಲ್ಲಿ ಪರಿವರ್ತನೆ ಹೊಂದುತ್ತವೆ. ಒಂದನೇಯ ರೀತಿಯೆಂದರೆ,ಅವುಗಳು ತಾವಿರುವ ಮೂಲ ಅಂಗಾಂಶ ಕೋಶಗಳಾದರೆ ಇನ್ನೊಂದು ಸಂಪೂರ್ಣ ಭಿನ್ನ ಕೋಶಗಳಾಗುವುದು.
ರಕ್ತದ ಆಕರ ಕೋಶಗಳು ಎಲ್ಲ ರೀತಿಯ ರಕ್ತ ಕೋಶಗಳಾಗಿ ಬದಲಾಗುತ್ತವೆ. ಅವುಗಳೆಂದರೆ ಕೆಂಪು ರಕ್ತಕಣ ಬಿ ಲಿಂಫೋಸೈಟ್ಸ್, ನೈಸರ್ಗಿಕ ನಾಶಕ ಕೋಶಗಳು, ನ್ಯೂಟ್ರೋಫಿಲ್ಸ್, ಬೇಸೋಫಿಲ್ಸ್, ಇಯೋಸಿನೋಫಿಲ್ಸ್,ಮನೋಸೈಟ್ಸ್, ಮ್ಯಾಕ್ರೋಫೆಜಸ್ & ರಕ್ತಫಲಕಗಳು (ಫ್ಲೇಟ್ಸ್ ಲೈಟ್ಸ್) ಮೂಳೆಯಲ್ಲಿರುವ ಆಕರ ಕೋಶಗಳು ಆಸ್ಟಿಯೋಸೈಟ್ಸ್ (ಮೂಳೆ ಕೋಶ), ಕಾಂಡ್ರೋಸೈಟ್ಸ್ (ಮೃದ್ವಸ್ತಿ ಕೋಶಗಳು), ಕೊಬ್ಬಿನ ಕೋಶಗಳನ್ನು (ಆಡಿಪೋ ಸೈಟ್ಸ್)ತಯಾರಿಸುತ್ತವೆ.
ನರಮಾತೃ ಕೋಶಗಳು ಮೂರು ಮುಖ್ಯಕೋಶಗಳಿಗೆ ಕಾರಣವಾಗುತ್ತವೆ. ಅವುಗಳೆಂದರೆ ನರಕೋಶಗಳು(ನ್ಯೂರಾನ್ಸ್), ಆಸ್ರ್ಟೋ ಸೈಟ್ಸ್ & ಆಲಿಗೋ ಡೆಂಡ್ರೋಸೈಟ್ಸ್.
ಜೀರ್ಣಾಂಗವ್ಯೂಹದ ಒಳಗೋಡೆಯಲ್ಲಿರುವ ಎಫಿಥಿಲಿಯಲ್ ಮಾತೃಕೋಶಗಳಿಂದ ಹೀರುವ ಕೋಶಗಳು.ಕರುಳಿನ ನಿರ್ನಾಳ ಕೋಶಗಳು, ಗಾಬ್ಲೆಟ್ ಕೋಶಗಳು & ಪ್ಯಾನೆಥ್ ಕೋಶಗಳು ರಚನೆಯಾಗುತ್ತದೆ.
ರೋಮ ರೂಪದ & ಚರ್ಮದ ಮಾತೃಕೋಶಗಳು ಕೆರಾಟಿನೋ ಪ್ರೌಢ ಆಕರ ಕೋಶಗಳು ತಮ್ಮ ಮೂಲ ಅಂಶಗಳಾದ ಕೋಶಗಳಿಲ್ಲದೆ ಭಿನ್ನವಾದ ಕೋಶಗಳನ್ನು ತಯಾರಿಸುತ್ತವೆ. ಅದಕ್ಕೆ ಪ್ಲಾಸ್ಟಿಸಿಟಿ ಎನ್ನುವರು. ರಕ್ತ ಆಕರಕೋಶಗಳು ಮೆದುಳಿನ ಕೋಶ, ಎಲುಬಿನ ಸ್ನಾಯುಕೋಶ, ಹೃದಯದ ಸ್ನಾಯುಕೋಶ & ಯುಕೃತ್ತು ಕೋಶಗಳಾಗಿಪರಿವರ್ತನೆ ಹೊಂದುತ್ತವೆ.
ಮೂಳೆಯ ಆಕರಕೋಶಗಳು ಹೃದಯದ ಸ್ನಾಯುಕೋಶ & ಎಲುಬುಗೂಡಿನ ಸ್ನಾಯು ಕೋಶಗಳಾಗುತ್ತವೆ,ಮೆದುಳಿನ ಆಕರ ಕೋಶಗಳು ರಕ್ತಕೋಶ & ಎಲುಬುಗೂಡಿನ ಸ್ನಾಯು ಕೋಶಗಳಾಗುತ್ತವೆ.
ಮಾನವ ಭ್ರೂಣ ಮಾತೃಕೋಶಗಳ ಸೃಷ್ಟಿ ಬಳಕೆ & ನಾಶಗಳು ಅನೇಕ ನೈತಿಕ ಪ್ರಶ್ನೆ & ಚರ್ಚೆಗಳಿಗೆ ಕಾರಣವಾಗಿದೆ. ಸ್ಟೇಮ್ಸೇಲ್ ಸಂಶೋಧನೆಯನ್ನು ವಿರೋಧಿಸುವವರು. ಈ ಪ್ರಯೋಗಗಳು ಮಾನವನ ಮೌಲ್ಯವನ್ನುಕಡಿಮೆ ಮಾಡುವುದೆಂದು ಪ್ರತಿಭಟಿಸುತ್ತಿದ್ದಾರೆ. ಜೀವಪರ ಇರುವವರು ಮಾನವನ ಭ್ರೂಣದ ಬಳಕೆಯು ಭ್ರೂಣಹತ್ಯೆಯೆಂದು ಜಗತ್ತಿನಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಭ್ರೂಣ ಮಾತೃ ಕೋಶ ಸಂಶೋಧನೆಯ ಸಾಮಾಜಿಕ &ನೈತಿಕ ಸವಾಲುಗಳನ್ನು ಒತ್ತಡ ಸಾಧ್ಯತೆ ಇವೆಯೆಂದು ಅನೇಕ ರಾಷ್ಟ್ರಗಳು ಸ್ಟೆಮ್ಸೆಲ್ ಸಂಶೋಧನೆಯ ಮೇಲೆ ನಿಯಂತ್ರಣಗಳನ್ನು ಹೇರಿವೆ.