ಹೆತ್ತ ತಾಯಿ, ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು
 
ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು ಇವುಗಳಿಂದ ಜೀವನದ ಮ್ಯೌ ಹೆಚ್ಚುತ್ತದೆ.ಆದ್ದರಿಂದಲೇ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ‘ಗಾದೆಗಳನ್ನು ವೇದಗಳಿಗೆ ಸಮಾನ’ ಎಂದುಹೇಳುವರು. ಅಂತಹ ಹಲವು ಪ್ರಸಿದ್ಧ ಗಾದೆಗಳಲ್ಲಿ ಇದು ಒಂದಾಗಿದೆ.
ಜೀವನದಲ್ಲಿ ನಮಗೆ ಹಲವಾರು ಸೌಲಭ್ಯಗಳು ದೊರೆತು ನಾವು ಅತ್ಯುನ್ನತ ದರ್ಜೆಗೆ ಏರಲು ಸಾಧ್ಯವಾಗಬಹುದು. ಅದರಿಂದ ನಮಗೆ ಹಲವಾರು ವಿಧದ ಸುಖ ಹುಡುಕಿಕೊಂಡು ಬರಬಹುದು. ಆದರೆ ಹೆತ್ತ ತಾಯಿ ಮಡಿಲಲ್ಲಿ ದೊರಕುವ ಸುಖಕ್ಕೆ ಸಮನಾದ ಸುಖ ಯಾವುದರಿಂದಲೂ ಸಿಗುವುದಿಲ್ಲ. ಅದೇರೀತಿ ನಾವು ಜನ್ಮ ಪಡೆದ ನಾಡು ನಮಗೆ ಇಂದ್ರನ ನಂದನವಕ್ಕಿಂತಲೂ ಮಿಗಿಲಾದುದು. ಅದಕ್ಕೆ ಕಾರಣ ನಮ್ಮ ಮನಸ್ಸಿನಲ್ಲಿ ಹುದುಗಿರುವ ಮಾತೃಭೂಮಿ ಕುರಿತಾದ ಗೌರವದ ಭಾವನೆಗಳು.ಸಂಸ್ಕೃತದ ‚ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ‛ ಎನ್ನುವ ಉಕ್ತಿಯು ಇದೇ ಅರ್ಥವನ್ನು ನೀಡುತ್ತದೆ.