ಭಾರತದ ಬಂದರುಗಳು ಮತ್ತು ಅವುಗಳ ಪ್ರಮುಖ ಲಕ್ಷಣಗಳು: (Ports in India and their Salient Features)

 

●.ಬಂದರು ಎಂದರೇನು?

ಹಡಗುಗಳು, ದೋಣಿಗಳು, ಮತ್ತು ಸರಕು ದೋಣಿಗಳು ಬಿರುಗಾಳಿಯ ಹವೆಯಿಂದ ಆಶ್ರಯ ಪಡೆಯುವ ಸ್ಥಳವಾಗಿದೆ ಅಥವಾ ಭವಿಷ್ಯದ ಬಳಕೆಗಾಗಿ ಸಂಗ್ರಹಿಸಲಾಗುತ್ತದೆ. ಬಂದರುಗಳು ನೈಸರ್ಗಿಕ ಅಥವಾ ಕೃತಕವಾಗಿರಬಹುದು.


●ಕೃತಕ ಬಂದರುಗಳು ಎಂದರೇನು ?

ಕೃತಕ ಬಂದರುಗಳನ್ನು ಸಾಮಾನ್ಯವಾಗಿ ಪೋರ್ಟ್ಗಳಾಗಿ ಬಳಕೆಗೆ ನಿರ್ಮಿಸಲಾಗುತ್ತದೆ.ಕೃತಕ ಬಂದರು ಉದ್ದೇಶಪೂರ್ವಕವಾಗಿ ನಿರ್ಮಿಸಿದ ಅಲೆತಡೆಗಳನ್ನು ಕಡಲಗೋಡೆಗಳನ್ನು ಅಥವಾ ಜೆಟ್ಟಿಗಳನ್ನು ಹೊಂದಿರುತ್ತದೆ.


●.ನೈಸರ್ಗಿಕ ಬಂದರುಗಳು ಎಂದರೇನು ?

ಭಾರತ ನೈಸರ್ಗಿಕ ಬಂದರು ಭೂರೂಪವಾಗಿದ್ದು, ನೀರಿನ ಸಂಗ್ರಹದ ಭಾಗವನ್ನು ರಕ್ಷಿಸಲಾಗಿದ್ದು, ಲಂಗರುದಾಣದ ಸೌಲಭ್ಯಕ್ಕೆ ಸಾಕಷ್ಟು ಆಳವಾಗಿದೆ. ಅಂತಹ ಅನೇಕ ಬಂದರುಗಳನ್ನು ಅಳಿವೆಗಳೆಂದು ಕರೆಯಲಾಗುತ್ತದೆ.


✧ಭಾರತದಲ್ಲಿ ಜಲಮಾರ್ಗಗಳು ಪ್ರಾಧಿಕಾರವು ಭಾರತದ ಬಂದರುಗಳನ್ನು ಪ್ರಮುಖ, ಸಣ್ಣ ಮತ್ತು ಮಧ್ಯಂತರ ಬಂದರುಗಳೆಂದು ಮೂರು ವರ್ಗಗಳಾಗಿ ವಿಂಗಡಿಸುತ್ತದೆ.

✧ಭಾರತವು ಸುಮಾರು 190 ಬಂದರುಗಳನ್ನು ಹೊಂದಿದ್ದು, 12 ಪ್ರಮುಖ ಮತ್ತು ಉಳಿದ ಎಲ್ಲಾ ಸಣ್ಣ ಮತ್ತು ಮಧ್ಯಂತರ ಬಂದರುಗಳಾಗಿ ಹೊಂದಿದೆ.

ಭಾರತದ ಪ್ರಮುಖ 12 ಬಂದರುಗಳು


ಪೂರ್ವ ಕರಾವಳಿಯಲ್ಲಿ..

1.ಕಲ್ಕತ್ತಾ ಬಂದರು -- ಪಶ್ಚಿಮ ಬಂಗಾಳ (ಹಲ್ದಿಯಾ ಸೇರಿದಂತೆ)

2.ಪಾರಾದೀಪ ಬಂದರು——ಒರಿಸ್ಸಾ.

3.ವಿಶಾಖಪಟ್ಟಣಂ ಬಂದರು ——ಆಂಧ್ರಪ್ರದೇಶ

4.ಚೆನ್ನೈ ಬಂದರು ——ತಮಿಳುನಾಡು

5.ಎನ್ನೋರ್ ಬಂದರು ——ತಮಿಳುನಾಡು

6.ಟುಟಿಕೋರಿನ್ ಬಂದರು —— ತಮಿಳುನಾಡು


ಪಶ್ಚಿಮ ಕರಾವಳಿಯಲ್ಲಿ ...

7.ಕೊಚ್ಚಿನ್ ಬಂದರು ——ಕೇರಳ

8.ನವ ಮಂಗಳೂರು ಬಂದರು ——ಕರ್ನಾಟಕ

9.ಮರ್ಮಗೋವ ಬಂದರು ——ಗೋವಾ

10.ಜವಾಹರ ಲಾಲ ನೆಹರು ಬಂದರು ——ಮಹಾರಾಷ್ಟ್ರ

11.ಮುಂಬಯಿ ಬಂದರು —— ಮಹಾರಾಷ್ಟ್ರ

12.ಕಾಂಡ್ಲಾ ಬಂದರು —— ಗುಜರಾತ್

ಪ್ರಮುಖ ಲಕ್ಷಣಗಳು


1. ಕೋಲ್ಕತಾ ಬಂದರು (ಹಲ್ದಿಯಾ ಸೇರಿದಂತೆ) : ಕೋಲ್ಕತಾದ ಬಂಗಾಳ ಕೊಲ್ಲಿಯಿಂದ 128 ಕಿಮೀ, ದೂರದಲ್ಲಿರುವ ಹೂಗ್ಲಿ ನದಿಯ ತೀರದಲ್ಲಿದೆ
*ಇದು ಒಂದು ನದಿ ತೀರದ ಬಂದರಾಗಿದೆ
*ಕೋಲ್ಕತ್ತಾ ಬಂದರನ್ನು ಭಾರತದ ಚಹದ ಬಂದರು ಎಂದು ಕರೆಯಲಾಗುತ್ತಿದೆ

2. ಹಾಲ್ಡಿಯಾ ಬಂದರು:
*ಕೊಲ್ಕತ್ತಾ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರಾಗಿದೆ
*ಕೋಲ್ಕತಾ ಬಂದರಿನ ವಿಪರೀತ ಹೂಳು ತುಂಬುವಿಕೆಯಿಂದಾಗುತ್ತಿದ್ದ ದೊಡ್ಡ ಹಡಗುಗಳು ಪ್ರವೇಶ *ತಡೆಯನ್ನು ನಿವಾರಿಸಲು ಈ ಹಲ್ದಿಯಾ ಬಂದರನ್ನು ಅಭಿವೃದ್ಧಿಪಡಿಸಲಾಯಿತು

3. ಪಾರದೀಪ್ ಬಂದರು :
*ಒರಿಸ್ಸಾದ ಬಂಗಾಳ ಕೊಲ್ಲಿಯ ತೀರದಲ್ಲಿದೆ
*ಭಾರತವು ಇಲ್ಲಿಂದ ಜಪಾನ್ ಗೆ ಕಚ್ಚಾ ಕಬ್ಬಿಣವನ್ನು ರಫ್ತು ಮಾಡುತ್ತದೆ

4. ವಿಶಾಖಪಟ್ಟಣಂ ಬಂದರು :
* ಇದು ಅತ್ಯಂತ ಆಳವಾದ ಬಂದರಾಗಿದ್ದು, ಆಂಧ್ರಪ್ರದೇಶದಲ್ಲಿದೆ
*ಇದು ಭಿಲಾಯಿ ಮತ್ತು ರೂರ್ಕೆಲಾ ಪ್ರದೇಶಗಳ ಉಕ್ಕು ಉತ್ಪಾದನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತದೆ

5. ಚೆನೈ ಬಂದರು :
*ಹಳೆಯ ಕೃತಕ ಬಂದರು
*ಈ ಬಂದರು ದಟ್ಟಣೆಯನ್ನು ನಿರ್ವಹಿಸುವ ಸಾಮರ್ಥ್ಯದ ವಿಷಯದಲ್ಲಿ ಎರಡನೇ ಮುಂಬೈ ನಂತರ ಸ್ಥಾನದಲ್ಲಿದೆ

6. ಎನ್ನೋರ್ ಬಂದರು :
*ಇದನ್ನು 2001ರಲ್ಲಿ ಪ್ರಮುಖ ಬಂದರು ಎಂದು ಘೋಷಿಸಲಾಯಿತು
*ಇದು ಖಾಸಗಿ (ಕಾರ್ಪೊರೇಟ್) ಸಹಭಾಗಿತ್ವದಲ್ಲಿರುವ ಮೊದಲ ಬಂದರಾಗಿದೆ
*ಉಷ್ಣ ಸ್ಥಾವರಕ್ಕೆ ಬೇಕಾದ ಕಲ್ಲಿದ್ದಲನ್ನು ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿ ಪವರ್ ಸ್ಟೇಷನ್ ಗೆ ಪೂರೈಸಲು ಈ ಬಂದರನ್ನು ಎಲ್ಲಾ ರೀತಿಯಿಂದ ಸುಸಜ್ಜಿತ ಆಧುನೀಕರಣಗೊಳಿಸಲಾಗಿದೆ

7. ಟುಟಿಕೊರಿನ್ ಬಂದರು :
*ಇದು ಪಾಂಡ್ಯ ರಾಜರ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ ಬಂದಿತು.
*ಇದು ಕೃತಕ ಆಳವಾದ ಸಮುದ್ರದ ಬಂದರನ್ನು ಹೊಂದಿದೆ.

8. ಕೊಚ್ಚಿನ್ ಬಂದರು :
*ಇದು ಕೇರಳ ಕರಾವಳಿಯಲ್ಲಿರುವ ಉತ್ತಮವಾದ ನೈಸರ್ಗಿಕ ಬಂದರು
*ಚಹಾ, ಕಾಫಿ ಮತ್ತು ಮೆಣಸು ಪದಾರ್ಥಗಳ ರಫ್ತು ಹಾಗು ಪೆಟ್ರೋಲಿಯಂ ಮತ್ತು ರಸ ಗೊಬ್ಬರಗಳ ಆಮದನ್ನು ನಿಭಾಯಿಸುತ್ತದೆ

9. ನವ ಮಂಗಳೂರು ಬಂದರು :
*ಇದನ್ನು 'ಕರ್ನಾಟಕದ ದ್ವಾರ' ಎಂದು ಕರೆಯುತ್ತಾರೆ
*ಕುದುರೆಮುಖದಲ್ಲಿ ತೆಗೆಯುವ ಕಬ್ಬಿಣದ ಅದಿರಿನ ರಫ್ತು ನಿಭಾಯಿಸುತ್ತದೆ

10. ಮರ್ಮಗೋವಾ ಬಂದರು :
*ಮರ್ಮಗೋವಾ ಬಂದರು ಗೋವಾ ರಾಜ್ಯದ ಝವಾರಿ ಕೊಲ್ಲಿಯ ಪ್ರದೇಶದಲ್ಲಿದೆ
*ಇದು ನೌಕಾ ನೆಲೆಯನ್ನು ಹೊಂದಿದ್ದು, ಭಾರತದ ಪ್ರಮುಖ ಕಬ್ಬಿಣದ ಅದಿರಿನ ರಫ್ತಿಗೆ ಹೆಸರಾದ ಬಂದರಾಗಿದೆ

11. ಮುಂಬೈ ಬಂದರು :
*ಇದು ಒಂದು ನೈಸರ್ಗಿಕ ಬಂದರು
*ಭಾರತದ ಹೊಸ ಅತಿ ಜನನಿಬಿಡ ಬಂದರಾಗಿದೆ

12. ನವಸೇವಾ ಬಂದರು :
*ಇದನ್ನು ಮುಂಬೈ ಬಂದರು ಬಳಿ ಅಭಿವೃದ್ಧಿಪಡಿಸಲಾಗುತ್ತಿದೆ
*ಮುಂಬಯಿ ಬಂದರಿನ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ನವಶೇವಾ ಬಂದರನ್ನು ನಿರ್ಮಿಸಲಾಗಿದೆ

13. ಜವಾಹರಲಾಲ್ ನೆಹರು ಬಂದರು :
*ವಿಶ್ವದ ವೇಗವಾಗಿ ಬೆಳೆಯುತ್ತಿರುವ ಬಂದರುಗಳಲ್ಲಿ ಇದು 5 ಸ್ಥಾನದಲ್ಲಿದೆ

14. ಕಾಂಡ್ಲಾ ಬಂದರು :
*ಇದನ್ನು ಕರಾಚಿ ಬಂದರಿನ ವಿಭಜನೆಯ ನಂತರ ಪರ್ಯಾಯವಾಗಿ ಅಭಿವೃದ್ಧಿಪಡಿಸಲಾಯಿತು
*ಇದು ಒಂದು ಉಬ್ಬರವಿಳಿತದ ಬಂದರಾಗಿದ್ದು, ಮುಕ್ತ ವ್ಯಾಪಾರ ವಲಯವಾಗಿದೆ
*ಇದು ಕಛ್ ಖಾರಿಯ ರಣ್ ಪ್ರದೇಶದ ಶಿರೋಭಾಗದಲ್ಲಿದೆ

Contributed by:Spardha Loka