ಸ್ವಯಂ(SWAYAM):
STUDY WEBS OF ACTIVE LEARNING FOR YOUNG ASPIRING MINDS
ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯವು AICTE ಜೊತೆಗೂಡಿ ಆನ್‍ಲೈನ್ ಮೂಲಕ ವಿದ್ಯಾಭ್ಯಾಸ ಮಾಡುವವರ ಅನೂಕೂಲಕ್ಕಾಗಿ ಆರಂಭ ಮಾಡಿರುವ ಹೊಸ ಆನ್‍ಲೈನ್ ಕೋರ್ಸ್‍ಗಳ ಯೋಜನೆಯೆ ಸ್ವಯಂ. ಈ ಯೋಜನೆಗಾಗಿ ಮೈಕ್ರೋಸಾಫ್ಟ್ ಸಹಯೋಗದೊಂದಿಗೆ “ಸ್ವಯಂ” ಎಂಬ ವೆಬ್ ಪೋರ್ಟಲ್ ಅಭಿವೃದ್ಧಿ ಪಡಿಸಿದ್ದು, ಇದರ ಮೂಲಕ ಸುಮಾರು 2000 ಆನ್‍ಲೈನ್ ಕೋರ್ಸ್‍ಗಳನ್ನು ನಡೆ¸ಲಾಗುತ್ತದೆ. 80000 ಗಂಟೆ ಕಲಿಕೆಯ ವೀಡಿಯೋ ಮತ್ತು ಆಡಿಯೋಗಳ ಪಾಠವನ್ನು ಈ ಜಾಲತಾಣದಲ್ಲಿ ಲೋಡ್ ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಮುಂದಿನ 3 ವರ್ಷಗಳಲ್ಲಿ ಸುಮಾರು 1 ಕೋಟಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಆನ್ ಲೈನ್ ಕೋರ್ಸ್‍ಗಳ ಅಧ್ಯಯನ ಮಾಡುವವರ ಸಹಾಯಕ್ಕಾಗಿ ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಪ್ರಖ್ಯಾತ ವಿದ್ಯಾಸಂಸ್ಥೆಗಳ ತಜ್ಞ ಪ್ರಾದ್ಯಪಕರ ವೀಡಿಯೋ ತರಗತಿಗಳನ್ನು ಸ್ವಯಂ ಪ್ರಭಾ ಎಂಬುವ ಡಿ.ಟಿ.ಹೆಚ್ ಮೂಲಕ ಉಚಿತವಾಗಿ ಪ್ರಸಾರ ಮಾಡಲಾಗುತ್ತದೆ ಇದರ ಪ್ರಸಾರಕ್ಕಾಗಿ ಜಿಸ್ಯಾಟ್-15 ಉಪಗ್ರಹದ ಟ್ರಾನ್ಸ್‍ಪಾಂಡರ್‍ಗಳ ಬಳಕೆಮಾಡಲು ಇಸ್ರೋದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.