ಚಾಲುಕ್ಯರು

 

ಚಾಲುಕ್ಯರು


ಚಾಲುಕ್ಯರ ರಾಜಧಾನಿ - ಬಾದಾಮಿ
ಪ್ರಸ್ತುತ ಬಾದಮಿಯು - ಇಂದಿನ ಬಾಗಲಕೋಟ ಜಿಲ್ಲೆಯಲ್ಲಿದೆ
ಬಾದಾಮಿಯ ಪ್ರಾಚೀನ ಹೆಸರು - ವಾತಾಪಿ
ಬಾದಾಮಿ ಚಾಲುಕ್ಯರ ರಾಜ್ಯ ಲಾಂಛನ - ವರಾಹ
ಬಾದಾಮಿ ಚಾಲುಕ್ಯರು ರಾಜ್ಯ ಭಾರ ಮಾಡಿದ್ದ ಅವಧಿ ಕ್ರಿ.ಶ. 6 – 8 ಶತಮಾನದವರೆಗೆ
ಬಾದಾಮಿ ಚಾಲುಕ್ಯರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ವಾಸ್ತುಶಿಲ್ಪ ಶೈಲಿಯ ಹೆಸರು - ವೇಸರ ಶೈಲಿ ( ಕರ್ನಾಟಕ ಶೈಲಿ )
ಬಾದಾಮಿ ಚಾಲುಕ್ಯರ ಕಲೆ ಬೆಳವಣಿಗೆಯನ್ನು “ಸುವರ್ಣ ಯುಗ ” ಎಂದು ಹೇಳಿದವರು - ಡಾ//.ಶಿವರಾಮ
ಪ್ರಥಮ ವಾತಾಪಿ ನಿರ್ಮಾಪಕ - ಒಂದನೇ ಕೀರ್ತಿ ವರ್ಮ
ಐಹೋಳೆ ಶಾಸನವು ನಿರ್ಮಾಣವಾದುದು - ಕ್ರಿ.ಶ.634
ಐಹೋಳೆ ಶಾಸನವನ್ನು - ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
ಐಹೋಳೆ ಶಾಸನವು - ಕನ್ನಡ ಭಾಷೆ ಹಾಗೂ ಸಂಸ್ಕೃತ ಲಿಪಿಯಲ್ಲಿದೆ
ಐಹೋಳೆ ಶಾಸನವು ಪುರಿ ಬಂದರನ್ನು - ಪಶ್ಚಿಮ ಕರಾವಳಿಯ ಲಕ್ಷ್ಮೀ ಎಂದು ಬಣ್ಣಿಸಲಾಗಿದೆ
ವೆಂಗಿ ಚಾಲುಕ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು - ವಿಷ್ಣುವರ್ಧನ
ಯುದ್ಧ ಮಲ್ಲ ಎಂಬ ಬಿರುದನ್ನು ಹೊಂದಿದ್ದವನು - ವಿನಯಾದಿತ್ಯ
ರನ್ನನು ತನ್ನ ಗಾದಯುದ್ದ ಕೃತಿಯಲ್ಲಿ ವಿನಯಾದಿತ್ಯನನ್ನ - ದುರ್ಧರ ಮಲ್ಲ ಎಂದು ವರ್ಣಿಸಿದ್ದಾನೆ
ಪಟ್ಟದ ಕಲ್ಲಿನ ವಿಜಯೇಶ್ವರ ( ಸಂಗಮೇಶ್ವರ ) ದೇವಾಲಯದ ನಿರ್ಮಾತೃ - ವಿಜಯಾದಿತ್ಯ
ಚಾಲುಕ್ಯರ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು - ಬಾದಾಮಿ , ಐಹೋಳೆ , ಪಟ್ಟದ ಕಲ್ಲು
ಪಟ್ಟದ ಕಲ್ಲಿನ ಅತಿ ದೊಡ್ಡ ದೇವಾಲಯ - ವಿರೂಪಾಕ್ಷ ದೇವಾಲಯ
ಚಾಲುಕ್ಯರ ವಸ್ತು ಶಿಲ್ಪದ ತವರು ಮನೆ - ಪಟ್ಟದ ಕಲ್ಲು
ವಿರೂಪಾಕ್ಷ ದೇವಾಲಯ ಹಾಗೂ ತ್ರೈಲೋಕೇಶ್ವರ ದೇವಾಲಯಗಳನ್ನು ಕೆತ್ತಿದ ಮಹಾಶಿಲ್ಪಿ - ಅನಿವರತ ಗೂಂಡಾಚಾರಿ
ಬಾದಾಮಿ ಚಾಲುಕ್ಯರ ಆಡಳಿತ ಭಾಷೆ - ಕನ್ನಡ
ಚಾಲುಕ್ಯರ ರಾಜ್ಯಾಡಳಿತ ಪ್ರಾರಂಭಿಸಿದ ಮೊದಲ ದೊರೆ - 1 ನೇ ಪುಲಿಕೇಶಿ
ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕ್ಕೆ ಅಡಿಗಲ್ಲು ಹಾಕಿದ ಮೊದಲ ದೊರೆ - 1 ನೇ ಕೀರ್ತಿ ವರ್ಮ
ಐಹೋಳೆ ಶಾಸನದ ಕರ್ತೃ ಈ ಧರ್ಮದವನ್ನು - ಜೈನಧರ್ಮ
ನರ್ಮದಾ ನದಿ ತೀರದ ಕದನವು ನಡೆದ ವರ್ಷ - ಕ್ರಿ.ಶ.630 – 634
ದಕ್ಷಿಣ ಪಥಿ ಸುಧಾರಕ ಎಂಬ ಬಿರುದನ್ನು ಧರಿಸಿದ್ದ ದೊರೆ - 2 ನೇ ವಿಕ್ರಮಾದಿತ್ಯ
ಲೋಕೇಶ್ವರ ದೇವಾಲಯದ ಇಂದಿನ ಹೆಸರು - ವಿರೂಪಾಕ್ಷ ದೇವಾಲಯ
ತ್ರೈಲೋಕೇಶ್ವರ ದೇವಾಲಯದ ಇಂದಿನ ಹೆಸರು - ಮಲ್ಲಿಕಾರ್ಜುನ
ಬಾದಾಮಿ ಚಾಲುಕ್ಯರ ಕಲೆ ಮತ್ತು ವಾಸ್ತು ಶಿಲ್ಪ ಪ್ರಮುಖ ಕೇಂದ್ರಗಳು - ಬಾಗಲಕೋಟೆ ಜಿಲ್ಲೆಯಲ್ಲಿದೆ .
ಪುಲಿಕೇಶಿಯ ಆಸ್ಥಾನಕ್ಕೆ ರಾಯಭಾರಿಯನ್ನು ಕಳಿಸಿದ್ದ ಪರ್ಸಿಯನ್ ದೊರೆಯ ಹೆಸರು - ಎರಡನೇ ಖುಸ್ರು
ಗೋವದ ಬಳಿ ಚಂದ್ರಾಪುರ ( ಚಾಂದೋಲ್ ) ಪಟ್ಟಣವನ್ನು ಸ್ಥಾಪಿಸಿದ ಚಾಲುಕ್ಯ ದೊರೆ - ಚಂದ್ರಾದಿತ್ಯ
ಇವರು ಟಂಕಿಸಿದ ನಾಣ್ಯಗಳು - ವರಹ ಹಾಗೂ ಗದ್ಯಾಣ
ಕರ್ನಾಟಕ ವಾಸ್ತುಶಿಲ್ಪದ ಪ್ರವರ್ತಕರು - ಚಾಲುಕ್ಯರು

ಆಧಾರಗಳು


ವಿಜಯ ಭಟ್ಟಾರಿಕೆಯ - ಕೌಮುದಿ ಮಹೋತ್ಸವ
ಬಿಲ್ಹಣನ - ವಿಕ್ರಮಾಂಕ ದೇವಚರಿತ
1 ನೇ ಪುಲಿಕೇಶಿಯ - ಬಾದಾಮಿ ಬಂಡೆ ಶಾಸನ
ಮಂಗಳೇಶನ - ಮಹಾ ಕೂಟ ಶಾಸನ
ರವಿ ಕೀರ್ತೀಯ - ಐಹೋಳೆ ಶಾಸನ
ಬಾದಾಮಿ ಚಾಲುಕ್ಯರ ನಾಣ್ಯಗಳು ಹಾಗೂ ಸ್ಮಾರಕಗಳು
ತಬಲ ಹಾಗೂ ಹ್ಯೂಯನ್ ತ್ಸಾಂಗ್ ಬರವಣಿಗೆಗಳು .

ರಾಜಕೀಯ ಇತಿಹಾಸ


ಮಂಗಳೇಶನ ಮಹಾಕೂಟ ಶಾಸನ ಹಾಗೂ ರವಿಕೀರ್ತಿಯ ಐಹೋಳೆ ಶಾಸನದ ಪ್ರಕಾರ ಚಾಲುಕ್ಯರ ಮೂಲ ಪುರುಷ - ಜಯಸಿಂಹ
ಜಯಸಿಂಹನ ನಂತರ ಅಧಿಕಾರಕ್ಕೆ ಬಂದವರು - ಮಗ ರಮರಾಗ
ರಮರಾಗನ ನಂತರ ಅಧಿಕಾರಕ್ಕೆ ಬಂದವರು - ಮಗ 1 ನೇ ಪುಲಿಕೇಶಿ ಕ್ರಿ.ಶ.540
ಪುಲಿಕೇಶಿ ಪದದ ಅರ್ಥ - ಹುಲಿಯ ಕೂದಲಿನವರು
1 ನೇ ಪುಲಿಕೇಶಿ - ಚಾಲುಕ್ಯ ಸಂತತಿಯ ಸ್ವತಂತ್ರ ರಾಜ
1 ನೇ ಪುಲಿಕೇಶಿ ಯ ರಾಜಧಾನಿ - ಬಾದಾಮಿ
ಬಾದಾಮಿ ಶಾಸನದ ಕರ್ತೃ - 1 ನೇ ಪುಲಿಕೇಶಿ
1 ನೇ ಪುಲಿಕೇಶಿ ಯ ನಂತರ ಅಧಿಕಾರಕ್ಕೆ ಬಂದವನು - ಕೀರ್ತಿ ವರ್ಮ
ಕೀರ್ತಿ ವರ್ಮ ನನ್ನು - ಕೀರ್ತಿ ರಾಜ , ಕತ್ತಿರಾಜ ಅರಸ ಎಂದು ಕರೆಯಲಾಗಿದೆ
ನಳ , ಕದಂಬ ಹಾಗೂ ಮೌರ್ಯರನ್ನು ಸೋಲಿಸಿದ್ದರಿಂದ ಈತನನ್ನು - “ನಳ , ಮೌರ್ಯ ಕದಂಬ ಕಾಳ ರಾತ್ರಿ ” ಎಂದು ಕರೆಯಲಾಗಿದೆ
ಕೀರ್ತಿವರ್ಮನ್ನು - - ವಾತಾಪಿಯ ಮೊದಲ ನಿರ್ಮಾತೃ ಎಂದು ಕರೆಯಲಾಗಿದೆ
ಕೀರ್ತಿ ವರ್ಮನ ಮಗ - ಇಮ್ಮಡಿ ಪುಲಿಕೇಶ
ಕೀರ್ತಿವರ್ಮನ ನಂತರ ಅಧಿಕಾರಕ್ಕೆ ಬಂದವನು - ಸಹೋದರ ಮಂಗಳೇಶ ಕ್ರಿ.ಶ.596
ಮಹಾಕೂಟ ಸ್ತಂಭ ಶಾಸನದ ಕರ್ತೃ - ಮಂಗಳೇಶ
ಮಹಾಕೂಟ ಸ್ತಂಭ ಶಾಸನದ - ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ
ಮಂಗಳೇಶನ ಆಡಳಿತ ಕೇಂದ್ರ - ರೇವತಿ ದ್ವೀಪ
ಮಂಗಳೇಶನ ನಂತರ ಅಧಿಕಾರಕ್ಕೆ ಬಂದವರು - ಇಮ್ಮಡಿ ಪುಲಿಕೇಶಿ
ಜಯಸಿಂಹನ ತಂದೆಯ ಹೆಸರು - ವಿಜಯಾದಿತ್ಯ
ಜಯಸಿಂಹನಿಗಿದ್ದ ಬಿರುದು - ವಲ್ಲಭ
ಒಂದನೇ ಪುಲಿಕೇಶಿ - ಚಾಲುಕ್ಯರ ನಿಜವಾದ ಸಂಸ್ಥಾಪಕ

ಇಮ್ಮಡಿ ಪುಲಿಕೇಶ


ಚಾಲುಕ್ಯರ ಅತ್ಯಂತ ಪ್ರಸಿದ್ದ ದೊರೆ
ಈತನನ್ನ - ಪೊತಿಕೇಶಿ ಎಂತಲೂ ಕರೆಯುವರು
ಇವನ ರೂಢನಾಮ - ಸತ್ಯಶ್ರಯ
ಈತನ ತಂದೆ ತಾಯಿಗಳು - ಸೇಂದ್ರಕ ವಂಶದ ರಾಜಕುಮಾರಿ ಮತ್ತು 1 ನೇ ಕೀರ್ತಿ ವರ್ಮ
ಈತನ ಅಧಿಕಾರವಧಿ - ಕ್ರಿ.ಶ.610 – 642

ಆಧಾರಗಳು


ಕ್ರಿ.ಶ.630 ರ ಲೊಹರೇನ್ ದಾಖಲೆ
ಪಲ್ಲವರ ಕಾಸಕುಡಿ ಶಾಸನ
ಕ್ರಿ.ಶ.613 ರ ಹೈದರಾಬಾದ್ ದಾಖಲೆ
ಕೊಪ್ಪ ರಮ್ ದಾಖಲೆ
ಬಾಣನ - ಹರ್ಷಚರಿತೆ ದಾಖಲೆ
ತಬರಿಯ ಬರವಣಿಗೆಗಳು
ಹ್ಯೂಯನ್ ತ್ಸಾಂಗ್ ನ ಬರವಣಿಗೆ

ಇಮ್ಮಡಿ ಪುಲಿಕೇಶಯ ದಿಗ್ವಿಜಯಗಳು


ಮಂಗಳೇಶನನ್ನು - ಎಳವತ್ತು ಸಿಂಬಿಗ ಎಂಬಲ್ಲಿ ಕೊಂದು ಅದಿಕಾರಕ್ಕೆ ಬಂದ
ರಾಷ್ಟ್ರಕೂಟರ ಮಾಂಡಲೀಕರಾಗಿದ್ದ - ಅಪ್ಪಯಿಕಾ ಹಾಗೂ ಗೋವಿಂದರನ್ನು ಬೀಮಾ ನದಿ ದಂಡೆಯಲ್ಲಿ ಸೋಲಿಸಿದ
ಕದಂಬರ ರಾಜ್ಯದ ಮೇಲೆ ದಾಳಿ ನಡೆಸಿ ಆ ಸಾಮ್ರಾಜ್ಯ ವಶಪಡಿಸಿಕೊಂಡ
ದಕ್ಷಿಣ ಕನ್ನಡದ - ಅಳುಪರನ್ನು ಸೋಲಿಸಿ ಮಹಾದೇವಿಯನ್ನು ವಿವಾಹವಾದ
ಗಂಗ ಅರಸ ಅವನೀತ ವಿರುದ್ದ ಹೋರಾಡಿ ಒಬ್ಬಳನ್ನ ವಿವಾಹವಾದ
ಮೌರ್ಯರ ಮೇಲೆ ದಾಳಿ ನಡೆಸಿ ಪುರಿನಗರವನ್ನು ವಶಪಡಿಸಿಕೊಂಡ
ಗುಜರಾತಿನ ಲಾಟರು ,ಮಾಳವರು ಹಾಗೂ ಗುರ್ಜರರನ್ನು ಸೋಲಿಸಿದ
ದಕ್ಷಿಣ ಪೂರ್ವ ರಾಜ್ಯಗಳ ಮೇಲೆ ದಾಳಿ
ನರ್ಮದಾ ಕಾಳಗದಲ್ಲಿ ಹರ್ಷವರ್ಧನನ್ನು ಸೋಲಿಸಿದ
ವಿಜಯದ ಸಂಕೇತವಾಗಿ ಪಡೆದ ಬಿರುದು - ದಕ್ಷಿಮ ಪಥೇಶ್ವರ ಹಾಗೂ ಪರಮೇಶ್ವರ
ಉತ್ತರ ಪಥೇಶ್ವರ ಎಂಬ ಬಿರುದುಳ್ಳ ಅರಸ - ಹರ್ಷ ವರ್ಧನ
ಪಲ್ಲವರ ಅರಸ 1 ನೇ ಮಹೇಂದ್ರ ವರ್ಮನನ್ನು ಪಲ್ಲಲೂರ್ ಎಂಬಲ್ಲಿ ಸೋಲಿಸಿದ .
ಚೋಳರು ಹಾಗೂ ಪಾಂಡ್ಯರನ್ನು ಸೋಲಿಸಿ ಅವರ ರಾಜ್ಯಗಳನ್ನು ವಶಪಡಿಸಿಕೊಂಡನು

ಇಮ್ಮಡಿ ಪುಲಿಕೇಶಿಯ ಬಿರುದುಗಳು


ವಲ್ಲಭ , ವಲ್ಲಭರಾಜ , ವಲ್ಲಬೇಂದ್ರ , ಪೃಥ್ವೀವಲ್ಲಭ , ಭಟ್ಟಾರಿಕ , ಮಹಾರಾಜಾಧಿರಾಜ , ಪರಮೇಶ್ವರ ಹಾಗೂ ದಕ್ಷಿಣ ಪಥೇಶ್ವರ
ಲೋಹನೇರ್ ಶಾಸನ “ ಪೂರ್ವಪರ ಸಮುದ್ರಾಧಿಪತಿ ” ಎಂದು ವರ್ಣಿಸಿದೆ
ತಬರಿ - ಪರ್ಶಿಯಾದ ಇತಿಹಾಸಕಾರ ಈತನ ಆಸ್ಥಾನಕ್ಕೆ ಬಂದಿದ್ದ ಚೀನಾದ ಯಾತ್ರಿಕ - ಹ್ಯೂಯನ್ ತ್ಸಾಂಗ್
ಸಿ-ಯು-ಕಿ ಯ ಇನ್ನೊಂದು ಹೆಸರು - ಪಶ್ಚಿಮ ದೇಶಗಳ ದಾಖಲೆ

ಪುಲಿಕೇಶಿಯ ಅಂತ್ಯ


ಒಂದನೇ ನರಸಿಂಹ ವರ್ಮ ಸಿಂಹಳದ ರಾಜವರ್ಮನ ಸಹಾಯದಿಂದ ಬಾದಾಮಿಗೆ ಬಂದು ಪೆರಿಯಾಲ ಮಮಿಮಂಗಲ ಹಾಗೂ ಸುರಮಾರ ಕದನಗಳಲ್ಲಿ 2ನೇ ಪುಲಿಕೇಶಿಯನ್ನು ಸೋಲಿಸಿದನು ಪುಲಿಕೇಶಿಯು ಕ್ರಿ.ಶ.642 ರಲ್ಲಿ ಪ್ರಾಣ ಕಳೆದುಕೊಂಡ
2 ನೇ ಪುಲಿಕೇಶಿಯನ್ನು ಸೋಲಿಸಿದ 1 ನೇ ನರಸಿಂಬ ವರ್ಮ ಧರಿಸಿದ ಬಿರುದ - ವಾತಾಪಿಕೊಂಡ
ಬಾದಾಮಿ ಚಾಲುಕ್ಯರ ಕೊನೆಯ ಅರಸ - ಎರಡನೇ ಕೀರ್ತಿವರ್ಮ
ಬಾದಾಮಿ ಬಾದಾಮಿ ಚಾಲುಕ್ಯರನ್ನು ಭಾರತದ ರಾಜಕೀಯ ಭೂಪಟದಿಂದ ಅಳಿಸಿದವನು - ಒಂದನೇ ಕೃಷ್ಣ

ಚಾಲುಕ್ಯರ ಆಡಳಿತ


ಇವರ ಆಡಳಿತ ಪದ್ದತಿ - ಕದಂಬರು ಮತ್ತು ಗುಪ್ತರು ಆಡಳಿತವನ್ನು ಹೋಲುತ್ತಿತ್ತು
ಇವರ ಆಡಳಿತ - ಸಪ್ತಾಂಗಗಳಿಗೆ ಅನುಗುಣವಾಗಿತ್ತು
ಇವರು ಗ್ರಾಮ ಸಭೆಗಳನ್ನು - ಮಹಜನರು ಎಂದು ಕರೆಯುತ್ತಿದ್ದರು
ಗ್ರಾಮ ಸಭೆಯ ಮುಖ್ಯಸ್ಥ - ಗೌಡ
ಗೌಡನ ಸಹಾಯಕ - ಕರ್ಣ
ಚಾಲುಕ್ಯರ ಸೈನ್ಯ - ಕರ್ನಾಟಕ ಬಲ ಎಂದು ಪ್ರಸಿದ್ದವಾಗಿತ್ತು ಹಾಗೇಯೆ ಅಜೇಯ ಎಂಬ ಕೀರ್ತೀ ಪಡೆದಿತ್ತು .
ಸೈನಿಕ ಕೇಂದ್ರಗಳು - ದುರ್ಗ ವಾಸವಾಗಿದ್ದವು
ಭೂ ಕಂದಾಯವನ್ನು - ಸಿದ್ದಯ್ಯ ಎಂದು ಕರೆಯುತ್ತಿದ್ದರು
ಸಂತೆಯ ತೆರಿಗೆಗಳು - ಪಣ್ಣಯ ಮತ್ತು ಸಂತೆವಣ
ತೆರಿಗೆ ವಸೂಲಿಗಾರರು - ಜಿಲ್ಲೆಯಲ್ಲಿ - ವಿಷಯ ಪತಿ , ತಾಲ್ಲೂಕಿನಲ್ಲಿ - ಭೋಗಪತಿ , ಹಾಗೂ ಗ್ರಾಮದಲ್ಲಿ - ಗಾವುಂಡ ವಸೂಲಿ ಮಾಡುತ್ತಿದ್ದರು

ಸಾಮಾಜಿಕ ಜೀವನ


ಇವರ ಕಾಲದ ಪ್ರಸಿದ್ದ ಕವಯಿತ್ರಿ - ವಿಜಯ ಭಟ್ಟರಿಕೆ
ಇವರ ಚಿನ್ನದ ನಾಣ್ಯದ ಹೆಸರು - ವರಾಹ
“ಪರಮ ಭಾಗವತ ” ಎಂಬ ಬಿರುದನ್ನು ಹೊಂದಿದ್ದ ಅರಸ - ಎರಡನೇ ಪುಲಿಕೇಶಿ
ಚಾಲುಕ್ಯರ ಕುಲ ದೈವ - ವಿಷ್ಣು
ಲಕ್ಷ್ಮೀಶ್ವರದಲ್ಲಿ “ ಆನೆ ಸಜ್ಜೆಯ ಜೈನ ಬಸದಿ ” ಯ ನಿರ್ಮಾತೃ - ಕುಂಕುಮ ಮಹಾದೇವಿ
ಎರಡನೇ ಪುಲಿಕೇಶಿಯ ದಂಡ ನಾಯಕ - ರವಿಕೀರ್ತಿ
ಐಹೋಳೆಯಲ್ಲಿ ಜಿನೇಂದ್ರ ದೇವಾಲಯ ನಿರ್ಮಿಸಿದವನು - ರವಿಕೀರ್ತಿ

ಸಾಹಿತ್ಯ


ಕನ್ನಡದ ಮೊಟ್ಟ ಮೊದಲ ಉಪಲಬ್ದ ಕವಿತೆ - ಕಪ್ಪೆ ಆರ್ಯಭಟನ ಶಾಸನ
“ಕೌಮುದಿ ಮಹೋತ್ಸವ ” - ವಿಜಯ ಭಟ್ಟಾರಿಕೆ
ಕರ್ನಾಟಕ ಸರಸ್ವತಿ - ವಿಜಯ ಭಟ್ಟಾರಿಕೆ
ಪರಪಾರ್ವತಿಯ ನಾಟಕ - ಶಿವ ಭಟ್ಟಾರಿಕೆ
ಐಹೋಳೆ ಶಾಸನ ( ಕ್ರಿ.ಶ.634 ) - ರವಿಕೀರ್ತೀ

ಕಲೆ ಮತ್ತು ವಾಸ್ತುಶಿಲ್ಪ


ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಇವರ ಕಾಲವನ್ನು ದಖನ್ನಿನ್ನ ನವೋದಯ ಕಾಲ ಹಾಗೂ ಸುವರ್ಣಯುಗ ಎಂದು ಕರೆಯಲಾಗಿದೆ
ಇವರು ವೇಸರ ಶೈಲಿಯ ನಿರ್ಮಾತೃ
ವೇಸರ ಶೈಲಿಯು - ಕಲಾ ಶೈಲಿ , ಕರ್ನಾಟಕ ಶೈಲಿ ಎಂದು ಪ್ರಸಿದ್ದವಾಗಿದೆ
ವೇಸರ ಶೈಲಿ - ಇದು ಉತ್ತರದ ಭಾರತದ ನಾಗರಶೈಲಿ ಹಾಗೂ ದಕ್ಷಿಣ ದ್ರಾವಿಡ ಶಾಲಿಗಳ ಸಮ್ಮಿಶ್ರಣ
ಚಾಲುಕ್ಯರ ಶಿಲ್ಪ ಕಲೆಯ ಪಿತಾಮಹಾ - ಮಂಗಳೇಶ
ಐಹೋಳೆಯಲ್ಲಿರುವ ಜೈನ ಗುಹಾಂತರ ದೇವಾಲಯವನ್ನು - ಮೇಣ ಮೀನಾ ಬಸದಿ ಎಂದು ಕರೆಯಲಾಗಿದೆ
ಐಹೋಳೆಯಲ್ಲಿರುವ ಶೈವ ಗುಹಾಂತರ ದೇವಾಲಯವನ್ನು - ರಾವಣ ಪಡಿ ಎಂದು ಕರೆಯಲಾಗಿದೆ
ಚಾಲುಕ್ಯರ ಕಲೆ ಮತ್ತು ಶಿಲ್ಪ ಪ್ರಮುಖ ಕೇಂದ್ರ - ಬಾಗಲಕೋಟೆ ಜಿಲ್ಲೆಯ ಬಾದಾಮಿ
ಭಾರತೀಯ ದೇವಾಲಯಗಳ ಪ್ರಯೋಗ ಶಾಲೆ ಅಥವಾ ದೇವಾಲಯಗಳ ವಾಸ್ತು ಶಿಲ್ಪಿ ತೊಟ್ಟಿಲು ಎಂದು ಕರೆಯುವ ಪ್ರದೇಶ - ಐಹೋಳೆ
ಭಾರತೀಯ ದೇವಾಲಯಗಳ ಪ್ರಯೋಗ ಶಾಲೆ ಅಥವಾ ದೇವಾಲಯಗಳ ವಾಸ್ತು ಶಿಲ್ಪಿ ತೊಟ್ಟಿಲು ಎಂದು ಕರೆದವರು - ಪೆರ್ಸಿಬ್ರೌನ್
ಲಡಾಖಾನ್ ದೇವಾಲಯ ಅಥವಾ ಸೂರ್ಯ ದೇವಾಲಯ ಶೈಲಿಯನ್ನು ಹೋಲುತ್ತದೆ - ಗುಪ್ತರ ನಾಗರ ಶೈಲಿಯನ್ನು ಹೋಲುತ್ತದೆ
ಮೇಗುತಿ ದೇವಾಲಯದ ನಿರ್ಮಾತೃ - ರವಿಕೀರ್ತಿ
ಮೇಗುತಿ ಎಂದರೆ - ಮೇಲಿನ ಗುಡಿ ಎಂದರ್ಥ
ಚಾಲುಕ್ಯರ ಕಾಲದ ಪ್ರಸಿದ್ದ ನರ್ತಕಿ - ವೀಣಾ ಪೋಟಿ ( ವಿಜಯಾದಿತ್ಯ )
ವೀಣಾ ಪೋಟಿಯ ಬಿರುದು - ನೃತ್ಯ ವಿಧ್ಯಾಧರಿ
ಅಚಲನ್ - ಮತ್ತೊಬ್ಬ ನರ್ತಕಿ
ಚಾಲುಕ್ಯರ ಪ್ರಸಿದ್ದ ನೃತ್ಯ ಗಾತಿ - ಲಚಾಲು ದೇವಿ - ಈಕೆಯ ಬಿರುದು ಶ್ರೀವಿಧ್ಯಾಧರಿ

ಚಾಲುಕ್ಯರ ತೆರಿಗೆಗಳು


ವಡ್ಡರಾಪುಲ - ಅರಸರ ಕುಟುಂಬದ ಮೇಲಿನ ತೆರಿಗೆ
ಹೆರ್ಜೆಂಕ - ಶೇರುಗಳ ಮೇಲೆ ಹಾಕುತ್ತಿದ್ದ ತೆರಿಗೆ
ಬಿದೈಡೆ - ವ್ಯಾಪರ ತೆರಿಗೆ
ಪನ್ನಯ - ವಿಳ್ಯಾದೆಲೆ ತೆರಿಗೆ