Loading [MathJax]/extensions/MathML/mml3.js

ರಾಷ್ಟ್ರೀಯ ವಯೋಶ್ರೀ ಯೋಜನೆ

 

ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಉಚಿತವಾಗಿ ಜೀವನ ಸಹಾಯಕ ಉಪಕರಣಗಳನ್ನು ವಿತರಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಯೇ ರಾಷ್ಟ್ರೀಯ ವಯೋಶ್ರೀ ಯೋಜನೆ ಈ ಯೋಜನೆಯಡಿಯಲ್ಲಿ ಬಿ.ಪಿ.ಎಲ್. ಕುಟುಂಬದ ಹಿರಿಯ ನಾಗರೀಕರಿಗೆ ಊರುಗೋಲು, ವ್ಹೀಲ್ ಚೇರ್ , ಕನ್ನಡಕ, ಕೃತಕ ದಂತ ಪಂಕ್ತಿ, ಕಿವುಡು ದೋಷ ನಿಯಂತ್ರಣ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಈ ಯೋಜನೆಗಾಗಿ ಕೇಂದ್ರ ಸರ್ಕಾರವು 477 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು ಇದು ಸಂಪೂರ್ಣ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆ ಈ ಯೋಜನೆಯಡಿ, ಮೊದಲ ಹಂತದಲ್ಲಿ ಪ್ರತಿ ರಾಜ್ಯದಲ್ಲಿ ಎರಡು ವಿತರಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಮತ್ತು ಪ್ರತಿ ವಿತರಣಾ ಶಿಬಿರದಲ್ಲಿ ಕನಿಷ್ಟ 2000 ಜನರಿಗೆ ಸಹಾಯಕ ಉಪಕರಣಗಳನ್ನು ವಿತರಿಸುವ ಗುರಿಹೊಂದಲಾಗಿದೆ ಮುಂದಿನ 3 ವರ್ಷಗಳಲ್ಲಿ 5 ಲಕ್ಷದ 20 ಸಾವಿರ ಹಿರಿಯ ನಾಗರೀಕರಿಗೆ ಈ ಯೋಜನೆಯನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರದ ಒಡೆತನದ ‘ಆಲಿಮ್‍ಕೋ’ ((ALIMCO- Artificial Limbs Manufacturing Corporation)) ಸಂಸ್ಥೆಯ ನೇತೃತ್ವದಡಿ ಕಾರ್ಯರೂಪಕ್ಕೆ ತರಲಾಗುತ್ತದೆ.ಈ ಯೋಜನೆಯ ಫಲಾನುಭವಿಗಳನ್ನು ರಾಜ್ಯ ಸರ್ಕಾರವು ಗುರುತಿಸಬೇಕಾಗುತ್ತದೆ ಈ ಯೋಜನೆಯ ಮೊದಲ ವಿತರಣಾ ಕ್ಯಾಂಪ್ ಅನ್ನು ಮಾರ್ಚ್ 25 ರಂದು ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಆಯೋಜಿಸಲಾಗಿತ್ತು