ಮೀಸಲಾತಿ ಇನ್ನೂ ಅಗತ್ಯವೇ?
“ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣಕಯಂತ್ರ” ವಾದ ಭಾರತ ದೇಶದಸಂವಿಧಾನದ ಪ್ರಸ್ತಾವನೆಯಲ್ಲಿ ಸಮಸ್ತ ನಾಗರಿಕರಿಗೂ “ಸಾಮಾಜಿಕ, ರಾಜಕೀಯ & ಆರ್ಥಿಕ ನ್ಯಾಯ”ಒದಗಿಸುತ್ತೇವೆಂದು ಸಂವಿಧಾನ ರಚನಾ ಸಭೆಯ ವೇದಿಕೆಯಲ್ಲಿ (ನವೆಂಬರ್ 26, 1949 ರಂದು) ನಾವು ಪ್ರಮಾಣೀಕರಿಸಿಈ ನಮ್ಮ ಸಂವಿಧಾನವನ್ನು ನಮಗೆ ನಾವೇ ಆತ್ಮಾರ್ಪಣೆ ಮಾಡಿಕೊಂಡಿದ್ದೇವೆ.
ಭಾರತ ದೇಶದ ಸಾಂಸ್ಕೃತಿಕ ಇತಿಹಾಸದೆಡೆಗೊಮ್ಮೆ ಹಿನ್ನೋಟ ಬೀರಿದರೆ ಸುಮಾರು (5000) ಐದು ಸಾವಿರವರ್ಷಗಳ ಹಿಂದೆ ಹೋಗಬೇಕಾಗುತ್ತದೆ. ಸಿಂಧೂ ಬಯಲಿನ ನಾಗರಿಕತೆಯಿಂದ ಹಿಡಿದು ಇಂದಿನ ಮಾಹಿತಿ ತಂತ್ರಜ್ಞಾನ& ಜೈವಿಕ ತಂತ್ರಜ್ಞಾನ 21ನೇ ಶತಮಾನದವರೆಗೆ ನಡೆದು ಬಂದ ಹಾದಿಯನ್ನು ಪರಿಶೀಲಿಸಿದಾಗ ನಮ್ಮ ಸಮಾಜವಿಕಾಸದ ಹಾದಿಯ ವಿರಳತೆಗಳು & ಅದರ ಕಾರಣ ಪರಿಣಾಮಗಳು ನಮ್ಮ ಅರಿವಿಗೆ ಬರುತ್ತದೆ.
ಆಧುನಿಕ ಮಾನವನ ಸಾಮಾಜಿಕ - ಸಾಂಸ್ಕೃತಿಕ & ಜೈವಿಕ ವಿಕಾಸವನ್ನು ಪರಾಮರ್ಶಿಸಿದಾಗ ತಿಳಿದುಬರುವುದೇನೆಂದರೆ ಜೈವಿಕವಾಗಿ ನಾವೆಲ್ಲರೂ ಒಂದು ಮೂಲದಿಂದ ವಿಕಾಸವಾಗಿರುವ ಬಗ್ಗೆ ಮಾನವಶಾಸ್ತ್ರಜ್ಞರು ತಮ್ಮಅಧ್ಯಯನಗಳಿಂದ ಸಾಬೀತುಪಡಿಸಿದ್ದರೂ ಸಹ ಸಮಾಜ ವಿಕಾಸವಾದಂತೆಲ್ಲಾ ನಮ್ಮ ನಡುವೆ ಏರ್ಪಟ್ಟ ಸಾಂಸ್ಕೃತಿಕ ವೈವಿಧ್ಯತೆಗಳಿಂದಾಗಿ ಧಾರ್ಮಿಕ ನೆಲಗಟ್ಟಿನಲ್ಲಿ ಭಿನ್ನತೆಯನ್ನು ಪ್ರತಿಬಿಂಬಿಸುತ್ತಾ ಬೇರೆ ಬೇರೆ ಮತ, ಧರ್ಮ & ಜಾತಿಜನಾಂಗವಾದದ ಹೆಸರಿನಲ್ಲಿ ಅಸಮಾನ ಸಮಾಜವನ್ನು ಸೃಷ್ಟಿಸಿಕೊಂಡು ಬದುಕುತ್ತಿದ್ದೇವೆ.
ನಮ್ಮ ದೇಶ ಹಳ್ಳಿಗಳ ದೇಶ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ನಾವು ವಿಶ್ವದ ಭೂಭಾಗದಲ್ಲಿ ಕೇವಲ ಶೇ.24 ರಷ್ಟು ಹೊಂದಿದ್ದರೂ ಜನಸಂಖ್ಯೆಯಲ್ಲಿ ನಮ್ಮ ಪಾಲು ಶೇ.16ಕ್ಕೂ ಅಧಿಕ ಸಾಮಾಜಿಕವಾಗಿಭಾರತ ಸುಮಾರು 3500ಕ್ಕೂ ಅಧಿಕ ಜಾತಿಗಳನ್ನು ಹೊಂದಿದ್ದು, (ಕೃಷಿಯೇ ನಮ್ಮ ಜನರ ಆರ್ಥಿಕತೆಯಾಗಿದ್ದು) ಶೇ. 65ರಷ್ಟು ಜನರ ಆರ್ಥಿಕತೆಯು ಮೂಲ ಕೃಷಿಯಾಗಿದ್ದು, ಭಾಷಾ ಜನಾಂಗೀಯ & ಭೌಗೋಳಿಕ ವೈವಿಧ್ಯತೆಗಳಿದ್ದರೂವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸಿ ಅಭಿವೃದ್ಧಿಯೆಡೆಗೆ ಸಾಗುತ್ತಿರಲು ಮುಖ್ಯ ಕಾರಣವೆಂದರೆ ನಮ್ಮ ವಿಶಿಷ್ಟಸಾಂಸ್ಕೃತಿಕ ಪರಂಪರೆಯೆಂದು ಹೆಮ್ಮೆ ಪಡಬಹುದು.
ಈ ಹಿನ್ನಲೆಯಲ್ಲಿ ಮೂಲ ವಿಚಾರದೆಡೆ ದೃಷ್ಟಿ ಬೀರಿದರೆ “ಮೀಸಲಾತಿ ಇನ್ನೂ ಅಗತ್ಯವೇ?” ಎಂಬ ಪ್ರಶ್ನೆಗೆನೇರವಾಗಿ ಹೌದು ಅಥವಾ ಇಲ್ಲವೆಂದು ಸಾರಾಸಗಟಾಗಿ ವಿಚಾರವನ್ನು ಅನುಮೋದಿಸುವುದಾಗಲಿ ಇಲ್ಲವೇ ತಳ್ಳಿಹಾಕುವುದಾಗಲಿ ಸಾಧ್ಯವಾಗದ ಮಾತು ಕಾರಣವೇನೆಂದರೆ ಮೀಸಲಾತಿ ಎಂದರೆ ಏನು? ಇದು ಏತಕ್ಕೆ ಬೇಕು? ಯಾವಯಾವ ವಲಯಗಳಲ್ಲಿ ಯಾರು ಯಾರಿಗೆ ಎಷ್ಟು ಪ್ರಮಾಣದಲ್ಲಿ, ಎಲ್ಲಿಯವರೆಗೆ ಬೇಕು? ಎಂಬಿತ್ಯಾದಿ ಮೂಲ ಪ್ರಶ್ನೆಗಳುಉದ್ಭವಿಸುವುದು ಸಹಜ.
ಭಾರತ ಸಂವಿಧಾನದ ಪೀಠಿಕೆಯಂತೆ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯಒದಗಿಸುವ ಸಲುವಾಗಿ ಸಂವಿಧಾನ ಪಿತಾಮಹರುಗಳು ಹಾಗು (ರಚನಾಸಭೆಯ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್)ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಒಮ್ಮತದ ತೀರ್ಮಾನದಂತೆ ಸಾಮಾಜಿಕಅಸಮತೋಲನವನ್ನು ನಿರ್ಮೂಲನೆ ಮಾಡಿ ಸಮಾನತೆಯನ್ನು ತರುವ ಸಲುವಾಗಿ ಮೂಲ ಸಂವಿಧಾನದಲ್ಲಿಯೇ ಅನೇಕರೀತಿಯ ಮೀಸಲಾತಿಗಳನ್ನು ನೀಡಿರುವುದೇ ಅಲ್ಲದೆ, ತದನಂತರದಲ್ಲಿ ಅನೇಕ ತಿದ್ದುಪಡಿಗಳನ್ನು ಮಾಡಿ ಅಂಥಹ ಅನೇಕಬಗೆಯ ಮೀಸಲಾತಿಗಳನ್ನು ಈಗಲೂ ಸಹ ಮುಂದುವರೆಸಿಕೊಂಡು ಬರಲಾಗುತ್ತಿದೆ.
ಸಂವಿಧಾನಾತ್ಮಕವಾಗಿ ನೀಡಲಾಗಿರುವ ಮೀಸಲಾತಿಗಳಲ್ಲಿ ಮುಖ್ಯವಾದವುಗಳು:
ಎ) ಶೈಕ್ಷಣಿಕ & ಆರ್ಥಿಕ
• ಸಂವಿಧಾನದ ವಿಧಿನಿಯಮ 30ರಂತೆ - ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ & ಅವುಗಳ ಆಡಳಿತ ನಡೆಸಿಕೊಂಡು ಬರುವುದಕ್ಕೆ ಅಲ್ಪ ಸಂಖ್ಯಾತರಿಗೆ ವಿಶೇಷ ಹಕ್ಕುಗಳು.
• ನಿಯಮ 45ರಂತೆ – ಮಕ್ಕಳಿಗೆ ಉಚಿತ & ಕಡ್ಡಾಯ ಶಿಕ್ಷಣಕ್ಕಾಗಿ ಅವಕಾಶ – ಇದನ್ನು 93ನೇ ತಿದ್ದು ಪಡಿಯಂತೆ ಮೂಲ ಭೂತ ಹಕ್ಕಾಗಿ ಪರಿವರ್ತಿಸಲಾಗಿದೆ.
• ನಿಯಮ 46ರಂತೆ – ಅನುಸೂಚಿತ ಜಾತಿಗಳ & ಅನುಸೂಚಿತ ಬುಡಕಟ್ಟುಗಳ & ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಹಾಗೂ ಆರ್ಥಿಕ ಹಿತಾಶಕ್ತಿಗಳ ಸಂವರ್ಧನೆ.
• ನಿಯಮ 38ರಂತೆ – ಜನತೆಯ ಕಲ್ಯಾಣೋತ್ತಿಗಾಗಿ ರಾಜ್ಯವು ಸಾಮಾಜಿಕ ವ್ಯವಸ್ಥೆಯನ್ನು ಸುನಿಶ್ಚಿತಗೊಳಿಸುವುದು ರಾಜ್ಯವು ವಿಶೇಷವಾಗಿ ಆದಾಯದಲ್ಲಿನ ಅಸಮಾನತೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸತಕ್ಕದ್ದು & ವ್ಯಕ್ತಿಗಳಲ್ಲಿ ಮಾತ್ರವಲ್ಲದೆ, ಬೇರೆ-ಬೇರೆ ಪ್ರದೇಶಗಳಲ್ಲಿ ವಾಸಿಸುವ ಬೇರೆ-ಬೇರೆ ವೃತ್ತಿಗಳಲ್ಲಿ ತೊಡಗಿರುವ ಜನಗಳ ಗುಂಪುಗಳಲ್ಲಿಯೂ ಸಹ ಸ್ಥಾನಮಾನ ಸೌಲಭ್ಯ & ಅವಕಾಶಗಳಲ್ಲಿರುವ ಅಸಮಾನತೆಗಳನ್ನು ತೆಗೆದು ಹಾಕಲು ಪ್ರಯತ್ನಿಸತಕ್ಕದ್ದು.
ಬಿ) ರಾಜಕೀಯ ಸೌಲತ್ತುಗಳು:
• ವಿಧಿನಿಯಮ – 33 ರಂತೆ ಪರಿಶಿಷ್ಟ ಜಾತಿ & ಬುಡಕಟ್ಟು ಜನರಿಗೆ ಲೋಕಸಭಾ ಸ್ಥಾನ ಮೀಸಲಾತಿ
• ವಿಧಿನಿಯಮ – 33 ರಂತೆ ಆಂಗ್ಲೋ- ಇಂಡಿಯನ್ ಸಮುದಾಯದವರಿಗೆ ಲೋಕ ಸಭೆಯಲ್ಲಿ ಎರಡು ಸ್ಥಾನಗಳ ಮೀಸಲಾತಿ.
• ವಿಧಿನಿಯಮ – 32ರಂತೆ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಜನರಿಗೆ ರಾಜ್ಯಗಳ ವಿಧಾನ ಸಭೆಯಲ್ಲಿ ಸ್ಥಾನ ಮೀಸಲಾತಿ.
• ವಿಧಿನಿಯಮ – 40 ರಲ್ಲಿರುವ ಗ್ರಾಮ ಪಂಚಾಯತಿಗಳ ಸಂಘಟನೆ 1992 ರಲ್ಲಿ ಇದನ್ನು 73 & 74ನೇ ತಿದ್ದು ಪಡಿಯಂತೆ ಸಂವಿಧಾನಕ್ಕೆ 11 & 12ನೇ ಅನುಸೂಚಿತಗಳನ್ನು ಸೇರಿಸುವುದರೊಂದಿಗೆ ಗ್ರಾಮೀಣ & ನಗರ ಸ್ಥಳೀಯ ಸರ್ಕಾರಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಿ ಆ ಮೂಲಕ ಪರಿಶಿಷ್ಟ ಜಾತಿ, ಬುಡಗಟ್ಟು & ಮಹಿಳೆಯರಿಗೆ ಸ್ಥಾನ ಮೀಸಲಾತಿ ಕಲ್ಪಿಸಿರುವುದು.
ಮೀಸಲಾತಿಯ ಅಗತ್ಯವೇನು?
ಶ್ರೇಣಿಕೃತ ನಮ್ಮ ಸಮಾಜದಲ್ಲಿ ಜಾತಿ, ವರ್ಗ & ಮಹಿಳೆ-ಪುರುಷರ ನಡುವೆ ಅನೇಕ ರೀತಿಯಲ್ಲಿತಾರತಮ್ಯಗಳಿರುವುದನ್ನು ನಾವು ಕಾಣಬಹುದಾಗಿದೆ. ಉಳ್ಳವರು ಇಲ್ಲದವರ ನಡುವೆ ಏರ್ಪಡುವ ಅಂತರ ದಿನೇ -ದಿನೇ ಹೆಚ್ಚಾಗುತ್ತಿದೆ. ಸಮಾಜದಲ್ಲಿ ಸಾಮಾಜಿಕ, ಆರ್ಥಿಕ & ರಾಜಕೀಯ ಶೋಷಣೆಗಳು ಹೊಸ ರೂಪಪಡೆದುಕೊಳ್ಳುತ್ತಿವೆ. ಇದಕ್ಕೆಲ್ಲಾ ಮೂಲ ಕಾರಣ ಜನರ ನಡುವೆ ಏರ್ಪಡುತ್ತಿರುವ ಅಸಮಾನತೆಗಳೇ ಕಾರಣವಾಗಿವೆ,ಇಂತಹ ಅಸಮಾನತೆಗಳನ್ನು ನಿವಾರಿಸಲು ಅತ್ಯುತ್ತಮ ಮಾರ್ಗವೆಂದರೆ ಜನತೆಗೆ ಸಾಮಾಜಿಕ, ಆರ್ಥಿಕ ಹಾಗೂರಾಜಕೀಯ ನ್ಯಾಯ ಒದಗಿಸುವುದಾಗಿದೆ.
ಸಂವಿಧಾನಬದ್ಧವಾಗಿ ಜನತೆಗೆ ನೀಡಲಾಗಿರುವ ಕೆಲವಾರು ಮೀಸಲಾತಿ ಸೌಲಭ್ಯಗಳನ್ನು ಅವರು ಸಾಮಾಜಿಕ& ಆರ್ಥಿಕವಾಗಿ ಸದೃಢತೆ ಹೊಂದುವವರೆಗೆ ಕಾಲಮಿತಿಯಲ್ಲಿ ಮುಂದುವರೆಸುವುದು ಅನಿವಾರ್ಯ ಅಗತ್ಯವಾಗಿದೆ.
ಈಗಿರುವ (ಸಾಮಾಜಿಕ & ಆರ್ಥಿಕ) ಅಸಮಾನತೆಗಳು:
• ಸಾಕ್ಷರತಾ ಪ್ರಮಾಣ 2011ರಂತೆ - ಶೇ.75.
• ಬಡತನ ರೇಖೆಗಿಂತ ಕೆಳಗೆ ವಾಸಿಸುವವರ ಸಂಖ್ಯೆ ಶೇ. 25.
• ನಗರೀಕರಣದ ಪ್ರಮಾಣ ಶೇ. 30ರ ಒಳಗಿದೆ. ನಗರ & ಗ್ರಾಮೀಣ ಜನರ ಆರ್ಥಿಕತೆಯ ಅಂತರ ವಿಶಾಲವಾಗಿದೆ.
• ಪುರುಷ & ಮಹಿಳಾ ಸಾಕ್ಷರತೆ ನಡುವಿನ ಆಗಾದ ಅಂತರ, ಸಮಾನ ಕೆಲಸಕ್ಕೆ ಸಮಾನ ವೇತನದ ತತ್ವ ಸಾರ್ವಜನಿಕ ವಲಯದಲ್ಲಿ ಕಂಡು ಬಂದರೂ ಖಾಸಗಿ ವಲಯದಲ್ಲಿ ಇನ್ನೂ ಸಾರ್ವತ್ರಿಕವಾಗಿ ಜಾರಿಯಾಗದಿರುವುದು.
• ಲಿಂಗ ತಾರತಮ್ಯ & ಒಂದು ಸಾವಿರ ಪುರುಷರಿಗೆ ಸರಾಸರಿ 940 ಮಹಿಳೆಯರಿದ್ದಾರೆ.
• ರಾಜಕೀಯ ವಲಯದಲ್ಲಿ ಮಹಿಳೆಯರಿಗೆ ನೀಡಬೇಕೆಂದು ಉದ್ದೇಶಿಸಲಾಗಿರುವ ಶೇ.33ರ ಮೀಸಲಾತಿ ಇನ್ನೂ ಕಾನೂನು ಸ್ವರೂಪ ಪಡೆಯದಿರುವುದು ಇತ್ಯಾದಿ.
ಇಂಥಹ ಅನೇಕ ಅಸಮಾನತೆಗಳು ಇನ್ನೂ ನಮ್ಮ ಸಮಾಜದಲ್ಲಿ ಅಸ್ಥಿತ್ವದಲ್ಲಿರುವಾಗ ಸಮಾನತೆಯೆಂಬುದು ಕೇವಲ ಕಾಲ್ಪನಿಕ ತತ್ವವಾಗೆ ಉಳಿದಿದೆ.
ಸಾಮಾಜಿಕ ಅಸಮಾನತೆಗಳನ್ನು ಹೊಡೆದೋಡಿಸಲು ನಾವು ಮಾಡಬೇಕಾಗಿರುವುದೇನು?
• ಯಾವುದೇ ಘನ ಸರ್ಕಾರಗಳು ಮಾಡಬೇಕಾದ ಪ್ರಪ್ರಥಮ ಆದ್ಯ ಕರ್ತವ್ಯವೆಂದರೆ, ಜನರ ಮೂಲಭೂತ ಅವಶ್ಯಕತೆಗಳಾದ ಆಹಾರ, ವಸತಿ, ಶಿಕ್ಷಣ & ಪ್ರಾಥಮಿಕ ಆರೋಗ್ಯ ಸೌಕರ್ಯಗಳನ್ನು ಜನತೆಗೆ ಸಕಾಲದಲ್ಲಿ ಒದಗಿಸಬೇಕು.
• ಜನರ ಮೂಲ ಸಮಸ್ಯೆಗಳನ್ನು ಯಾವುವೆಂದು ನಿರ್ದರಿಸಿ, ಅವುಗಳನ್ನು ಆಳವಾಗಿ ಆಭ್ಯಸಿಸಿ ಸೂಕ್ತವಾದ ಕಾನೂನುಗಳ ಮೂಲಕ ಪರಿಹಾರಗಳನ್ನು ಅಗತ್ಯವಿರುವವರಿಗೆ ಸಾರ್ವತ್ರಿಕವಾಗಿ ದೊರಕುವಂತೆ ನೋಡಿಕೊಳ್ಳಬೇಕು.
• ಯಾವುದೇ ಸಮಸ್ಯೆಯ ದುಷ್ಪರಿಣಾಮದ ಬಗ್ಗೆ ಜನತೆಗೆ ಸೂಕ್ತವಾದ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
• ಇಂತಹ ಕಾರ್ಯಕ್ರಮಗಳು ಸಕಾಲದಲ್ಲಿ ನಾಗರಿಕರಿಗೆ ತಲುಪ ಬೇಕಾದರೆ ಸರ್ಕಾರದೊಂದಿಗೆ ಸರ್ಕಾರೇತ್ ಸಂಘ-ಸಂಸ್ಥೆಗಳು, ಮಾಧ್ಯಮ ವಲಯದವರು & ಸಮಸ್ತ ನಾಗರಿಕರೂ ಒಮ್ಮನಸ್ಸಿನಿಂದ ಕೈ ಜೋಡಿಸಬೇಕು.
ಹೀಗಾದಲ್ಲಿ ಮಾತ್ರ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಾಮಾಜಿಕ – ಆರ್ಥಿಕ ಅಸಮಾನತೆಗಳು ದೂರಹೋಗಿ ಸಮಾಜದಲ್ಲಿ ಶಾಂತಿ- ನೆಮ್ಮದಿ ಮೂಡಿಬಂದು ಬದುಕಿನಲ್ಲಿ ಹೊಸತನ ಕಂಡುಕೊಂಡು ಸೌಹಾರ್ದ ಜೀವನವನ್ನು ನಿರೀಕ್ಷಿಸಬಹುದು, ಆದರೆ ಅಂತಹ ಸಮಾಜದ ಕಲ್ಪನೆ ಸಾಕಾರವಾಗುವುದು ಇನ್ನೂ ದೂರ ಉಳಿದಿರುವುದರಿಂದ ಅಲ್ಲಿಯವರೆಗೆ ಸಂವಿಧಾನ ಬದ್ಧವಾಗಿರುವ ಮೀಸಲಾತಿಗಳು ಮುಂದುವರೆಯಲೇ ಬೇಕಾಗಿರುವುದು ಅನಿವಾರ್ಯ & ಅಗತ್ಯವೂ ಹೌದು.
ಸ್ವಾತಂತ್ರ್ಯ/ಸ್ವತಂತ್ರ ಭಾರತದ ಸಾಧನೆ/ಪಂಚವಾರ್ಷಿಕ ಯೋಜನೆಗಳ ಮೂಲಕ ಭಾರತದ ಆರ್ಥಿಕಾಭಿವೃದ್ಧಿ.
“ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ , ಪ್ರಜಾಸತ್ತಾತ್ಮಕ, ಗಣತಂತ್ರ” ದೇಶವಾದ ಭಾರತ ವಿಶ್ವದಲ್ಲಿಯೇದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿದ್ದು ಜನಸಂಖ್ಯೆಯಲ್ಲಿ ಚೀನಾದ ನಂತರ 2ನೇ ಸ್ಥಾನವನ್ನು ಪಡೆದಿದ್ದರೂ,ಭೌಗೋಳಿಕವಾಗಿ ನಾವು ಹೊಂದಿರುವುದು ವಿಶ್ವದ ಕೇವಲ ಶೇ.2.4ರಷ್ಟು ಭೂಭಾಗವಾದರೂ ಶೇ.16 ಜನವಸತಿಗೆಆಶ್ರಯ ನೀಡಿದ್ದೇವೆ. ಇಲ್ಲಿನ ಭೌಗೋಳಿಕ, ಭಾಷಾ, ಜನಾಂಗೀಯ ಹಾಗೂ ಸಾಂಸ್ಕೃತಿಕ ವೈವಿಧ್ಯತೆಗಳ ನಡುವೆಯೂನಾವು ಏಕತೆಯನ್ನು ಮೈಗೂಡಿಸಿಕೊಂಡು ಒಂದು ಅಖಂಡ ರಾಷ್ಟ್ರವಾಗಿ ಅಭಿವೃದ್ಧಿ ಶೀಲ (developing )ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದ್ದು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರಲು ಪ್ರಮುಖ ಕಾರಣವೇ ನಮ್ಮಸಹಜಶೀಲತೆ & ವಿಶಿಷ್ಟ ಸಾಂಸ್ಕೃತಿಕ ಪರಂಪರೆಗಳಾಗಿವೆ ಎನ್ನುವುದನ್ನು ಹೆಮ್ಮೆಯಿಂದ ಹೇಳಬಹುದು.
ಭಾರತ ದೇಶಕ್ಕೆ ಸುಮಾರು 5000 ವರ್ಷಗಳ ಭವ್ಯ ಸಾಂಸ್ಕೃತಿಕ ಇತಿಹಾಸವಿದೆ, ಸಿಂಧೂ ಬಯಲಿನನಾಗರಿಕತೆಯಿಂದ ಹಿಡಿದು ಇಂದಿನ ಐ.ಟಿ. & ಬಿ.ಟಿ. ಯುಗವಾದ 21ನೇ ಶತಮಾನದವರೆಗೆ ಒಮ್ಮೆ ಹಿನ್ನೋಟಬೀರಿದರೆ ನಮ್ಮ ಸಾಧನೆಯ ಏರಿಳಿತಗಳನ್ನು ಪರಾಮರ್ಶಿಸಹುದು.
ಈ ಹಿನ್ನಲೆಯಲ್ಲಿ ವಿಚಾರದೆಡೆಗೆ ದೃಷ್ಟಿ ಹಾಯಿಸಿದರೆ, ನಮಗೆ ತಿಳಿದು ಬರುವುದೇನೆಂದರೆ ಸ್ವತಂತ್ರ್ಯ ಪೂರ್ವದ ಭಾರವೇನಾಗಿತ್ತು. 1950ರ ದಶಕದಲ್ಲಿ ನಾವೆಲ್ಲಿದ್ದೆವು. ಈಗ ಏನಾಗಿದ್ದೇವೆ ಎಂಬುದನ್ನು ಗಮನಿಸಬಹುದು.
ಸುಮಾರು 300 ವರ್ಷಗಳ ಯುರೋಪಿಯನ್ನರ ಆಳ್ವಿಕೆಯಿಂದ ಮುಕ್ತಿ ಪಡೆದ ಭಾರತ ಬುದ್ಧ. ಬಸವರ ತತ್ವಗಳನ್ನು ಅಳವಡಿಸಿಕೊಂಡು ಹೋರಾಡಿದ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳುವಳಿ ಮಾಡಿ ಅಂತಿಮವಾಗಿ 1947 ಆಗಸ್ಟ್ 15 ರಂದು ಸ್ವತಂತ್ರ್ಯ ರಾಷ್ಟ್ರವಾಗಿ ಜನ್ಮ ತಾಳಿತು.
ಸ್ವಾತಂತ್ರ್ಯ ಭಾರತ 1950 ದಶಕದಲ್ಲಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಿತ್ತು. ಅಂದರೆ ನಮ್ಮ ಸಾಕ್ಷರತೆ ಮಟ್ಟ ಕೇವಲ ಜನಸಂಖ್ಯೆಯ ಶೇ.20 ರಷ್ಟಿತ್ತು ಆಹಾರ ಉತ್ಪಾದನಾ ಸಾಮಥ್ರ್ಯ ವಾರ್ಷಿಕ ಸರಾಸರಿ 40-45 ಮಿಲಿಯನ್ ಟನ್‍ಗಳಷ್ಟಿತ್ತು.
• ಬಡತನ ರೇಖೆಗಿಂತ ಕೆಳಗಿನ ಜನಸಂಖ್ಯೆ ಶೇ.50
• ಶಿಶು ಮರಣ ದರ 1000ಕ್ಕೆ 140ರೂ ಅಧಿಕ
• ನಮ್ಮ ಸರಾಸರಿ ಜೀವಿತಾವಧಿ 40ರ ಆಜು ಬಾಜು
• ಸಾಂಕ್ರಾಮಿಕ ರೋಗಗಳ ತೌರೂರು ಭಾರವಾಗಿತ್ತು
ಮಾನವನ ಮೂಲ ಭೂತ ಅಗತ್ಯಗಳಾದ ಆಹಾರ, ವಸತಿ, ಶಿಕ್ಷಣ & ಆರೋಗ್ಯ ಎಂಬ ಮಾತುಗಳು ದೂರವೇ ಆಗಿದ್ದ ಕಾಲದಲ್ಲಿ ನಮಗೆ ನಡುರಾತ್ರಿ ಬಂದ ಸ್ವಾತಂತ್ರ್ಯ ಸ್ವಾತಂತ್ರ್ಯವೇ ಆಗಿರಲಿಲ್ಲ. ಬದಲಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವವೇ ಆಗಿತ್ತು.
ಸ್ವತಂತ್ರ್ಯ ಭಾರತದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ ನೇತೃತ್ವದ ಸರ್ಕಾರ, ಆಧುನಿಕ ಭಾರತದ ರೂವಾರಿಗಳಲ್ಲೊಬ್ಬರಾದ ಸರ್.ಎಂ. ವಿಶ್ವೇಶ್ವರಯ್ಯನವರ ಕೈಗಾರೀಕರಣ ತತ್ವಗಳನ್ನು ಅಳವಡಿಸಿಕೊಂಡು ವಿಶ್ವದಲ್ಲಿಯೇ ಪಂಚವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಂಡ ಮೊದಲ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿತು.
ಸರ್.ಎಂ. ವಿಶ್ವೇಶ್ವರಯ್ಯರವರ A Planned Economy(1934)ಎಂಬ ಪುಸ್ತಕ ಅವರ ತತ್ವವಾದ “ಕೈಗಾರೀಕರಣ ಇಲ್ಲವೇ ವಿನಾಶ” ಎಂಬ ಧ್ಯೇಯಗಳನ್ನು ಆಧುನಿಕ ಭಾರತದ ರೂವಾರಿಗಳು ಅಳವಡಿಸಿಕೊಂಡಿದ್ದರ
ಪರಿಣಾಮವಾಗಿ ನಾವಿಂದು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆಂದು ಹೇಳಬಹುದು.
50 ವರ್ಷದ ಹಿಂದೆ ನಮ್ಮ ಮೊದಲ ಆಧ್ಯತೆ ಸಹಜವಾಗಿಯೇ ಆಹಾರ ಉತ್ಪಾದನೆಯಾಗಿತ್ತು ಕಾರಣ ಸುಮಾರು35 ಕೋಟಿಯಷ್ಟಿದ್ದ ಭಾರತದ ಜನತೆಗೆ ಆಹಾರ ಒದಗಿದುವುದು ಸರ್ಕಾರದ ಆಧ್ಯ ಕರ್ತವ್ಯವಾಗಿತ್ತು. ಭಾರತದಆರ್ಥಿಕತೆಯಲ್ಲಿ ಕೃಷಿಯೇ ಪ್ರಧಾನವಾಗಿದ್ದ ಕಾಲವದು ದೇಶದ ಒಟ್ಟು ಉತ್ಪಾದನೆಯಲ್ಲಿ ಕೃಷಿಯೇ ಕಾಣಿಕೆ ಸುಮಾರು ಶೇ.50 ರಷ್ಟಿದ್ದ ಕಾಲವಾದರೂ, ನಮ್ಮ ಸಾಂಪ್ರದಾಯಿಕ ಕೃಷಿ ಗ್ರಾಮೀಣ ವಸತಿ, ಜನರ, ಅಜ್ಞಾನ, ಸರ್ಕಾರದ ತಾರತಮ್ಯಧೋರಣೆಗಳಿಂದಾಗಿ ನಾವು ಕೃಷಿಯಲ್ಲಿ ಸ್ವಾವಲಂಬಿಗಳಾಗಿರಲಿಲ್ಲ & ರೈತರ ಶೋಷಣೆಯಿಂದಾಗಿ ಕೃಷಿ ಕೇವಲಜೀವನೋಪಾಯಕ್ಕಾಗಿತ್ತು, ಆದರೆ ಸ್ವತಂತ್ರ್ಯ ಭಾರತದ ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಗೆ ಪ್ರಥಮ ಆಧ್ಯತೆನೀಡಿ, ನಂತರ ಎರಡು ಯೋಜನೆಗಳಲ್ಲೂ ಕೃಷಿಯನ್ನು ಕೈಗಾರಿಕೆಯೊಂದಿಗೆ ಸಮಾನವಾಗಿ ಪರಿಗಣಿಸಿ ಆಹಾರದಸಮಸ್ಯೆಯನ್ನು ನೀಗಿಸಿಕೊಂಡಿದ್ದೇವೆ.
• ಸಂಪ್ರದಾಯಿಕ ಕೃಷಿಯಿಂದ – ಯಾಂತ್ರಿಕ ಕೃಷಿಗೆ
• ಉತ್ತಮ ತಳಿಯ ಬೀಜ ಬಳಕೆ,ರಸಗೊಬ್ಬರ ಬಳಕೆ
• ವಿವಿದೋದ್ದೇಶ ನದಿ ಕಣಿವೆ ಯೋಜನೆಗಳ ನೆರವು – ಔಷಧಗಳ ಬಳಕೆ
• ಸಾಂಸ್ಥಿಕ ನೆರವು - ಹಣಕಾಸು, ಮಾರುಕಟ್ಟೆ
• ಮೂಲಭೂತ ಸೌಕರ್ಯಗಳಾದ - ನೀರು, ವಿದ್ಯುತ್, ರಸ್ತೆಗಳ ಸುಧಾರಣೆಯಿಂದಾಗಿ ಕೃಷಿಯಲ್ಲಿ ಸುಧಾರಣೆಯಾಗಿದೆ.
ಎರಡನೆಯದಾಗಿ ಭಾರತದ ಕೈಗಾರಿಕಾ ಸಾಧನೆ ನೋಡಿದರೆ – 50 ವರ್ಷಗಳ ಹಿಂದೆ ನಾವು ಪ್ರತಿಯೊಂದುತಂತ್ರಜ್ಞಾನವಸ್ತುವಿಗೂ ವಿದೇಶಿ ತಂತ್ರಜ್ಞಾನವನ್ನೇ ಅವಲಂಬಿಸಬೇಕಾದ ವಾತಾವರಣವಿತ್ತು. ಬ್ರಿಟೀಷರ ಕಾಲದಲ್ಲಿ ಭಾರತದತಂತ್ರಜ್ಞಾನತಂತ್ರಜ್ಞಾನ ವ್ಯವಸ್ಥೆ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ದೇಶದ ಒಟ್ಟು ಉತ್ಪಾದನೆ (ಜೆ.ಡಿ.ಪಿ)ಯಲ್ಲಿ ಕೈಗಾರಿಕಾ ಕ್ಷೇತ್ರದತಂತ್ರಜ್ಞಾನಪಾಲು ಶೇ. 10ಕ್ಕಿಂತಲೂ ಕಡಿಮೆ ಇತ್ತು.
ಪ್ರಸ್ತುತ ಕೈಗಾರಿಕಾ ಕ್ಷೇತ್ರದ ಕೊಡುಗೆ ಶೇ. 25ಕ್ಕೂ ಅಧಿಕವಾಗಿರಲು ಕಾರಣ, ಪಂಚವಾರ್ಷಿಕ ಯೋಜನೆಗಳಲ್ಲಿತಂತ್ರಜ್ಞಾನಕೈಗಾರಿಕಾ ಕ್ಷೇತ್ರಕ್ಕೆ ನೀಡಿದ ಆಧ್ಯತೆಯೇ ಆಗಿದೆ. 2 & 3ನೇ ಪಂಚವಾರ್ಷಿಕ ಯೋಜನೆಗಳಲ್ಲಿ ಮೂಲ & ಭಾರಿತಂತ್ರಜ್ಞಾನಕೈಗಾರಿಕೆಗಳಿಗೆ ಆಧ್ಯತೆ ನೀಡುವುದರ ಮೂಲಕ ದೇಶದಲ್ಲಿ ಅನೇಕ ಕಬ್ಬಿಣ & ಉಕ್ಕಿನ ಸ್ಥಾವರಗಳನ್ನು ಸ್ಥಾಪಿಸಲಾಯಿತು.ತಂತ್ರಜ್ಞಾನಉದಾ: ಬಿಲಾಯ್, ರೂರೈಲಾ, ದುರ್ಗಾಪುರ & ಭೊಕಾರೋ ಅಲ್ಲದೇ ರಸಗೊಬ್ಬರ ಮತ್ತು ರಾಸಾಯನಿಕತಂತ್ರಜ್ಞಾನಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಆ ಮೂಲಕ ಜನರಿಗೆ ಉದ್ಯೋಗಗಳು ದೊರೆತವು, ರಾಷ್ಟ್ರದ ಆಧಾಯವುತಂತ್ರಜ್ಞಾನಹೆಚ್ಚಳವಾಯಿತು.
ಪ್ರಸ್ತುತ ಭಾರತ ದೇಶ ಕೈಗಾರಿಕಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿದ ರಾಷ್ಟ್ರವೆನ್ನಬಹುದು. ಕೈಗಾರಿಕಾ ಕ್ಷೇತ್ರವನ್ನು ಅನೇಕ ವಿಭಾಗಗಳಾಗಿ ವಿಂಗಡಿಸಿ ಅಭ್ಯಸಿದರೆ ಸಾಧನೆಯನ್ನು ಸಮೀಕ್ಷಿಸಬಹುದು.
ಕೃಷಿ ವಿಜ್ಞಾನ, ರಾಸಾಯನ ವಿಜ್ಞಾನ, ಭೌತ ವಿಜ್ಞಾನ, ರಕ್ಷಣಾ ವಿಜ್ಞಾನ, ಮಾಹಿತಿ ತಂತ್ರಜ್ಞಾನ & ಜೈವಿಕ ತಂತ್ರಜ್ಞಾನ ಹೀಗೆ ಹಲವು ವಿಜ್ಞಾನ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.
ಕೃಷಿ ಕ್ಷೇತ್ರದಲ್ಲಾಗದ ಗಣನೀಯ ಬದಲಾವಣೆಗೆ ಕೃಷಿ & ರಸಾಯನ ವಿಜ್ಞಾನಿಗಳ ಸಂಶೋಧನೆಗಳು & ಆವಿಷ್ಕಾರಗಳು ಕಾರಣವಾಗಿವೆ. ಉದಾ: ಉತ್ತಮ ತಳಿಯ ಬೀಜೋತ್ಪಾದನೆ, ರಸಗೊಬ್ಬರಗಳ ತಯಾರಿಕೆ,ಕೀಟೋಪಹಾರಿ ಔಷಧಿಗಳ ಸಂಶೋಧನೆ, ಟ್ರಾಕ್ಟರ್, ಟಿಲ್ಲರ್‍ಗಳ ಬಳಕೆ ಇತ್ಯಾದಿ.
ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಾದ ಬದಲಾವಣೆಗೆ ಕಾರಣ - ಭೌತ ವಿಜ್ಞಾನದ ಮೂಲ ಸಂಶೋಧನೆಗಳೇ ಆಗಿವೆ, ಇದಕ್ಕೆ ಕಾರಣವಾದ ಸಂಸ್ಥೆಗಳು & ವ್ಯಕ್ತಿಗಳನ್ನು ನೆನೆಯುವುದಾದರೆ, ಟಾಟಾ ವಿಜ್ಞಾನ ಸಂಸ್ಥೆ, ನ್ಯಾಷನಲ್ ಫಿಸಿಕಲ್ ಲ್ಯಾಬ್, ಫಿಸಿಕಲ್ ರಿಸರ್ಚ್ ಲ್ಯಾಬ್, ಇಸ್ರೋ ಇತ್ಯಾದಿ ವಿಜ್ಞಾನಿಗಳಾದ ವಿಕ್ರಮ್ ಸಾರಾಬಾಯಿ, ಸತೀಶ್ ಧವನ್, ಪ್ರೋ.ಯು.ಆರ್. ರಾವ್ ಇತ್ಯಾದಿ.
ಔಷಧ ವಿಜ್ಞಾನ ಕ್ಷೇತ್ರದಲ್ಲಾದ ಬದಲಾವಣೆ- ಮಾನವಾಭಿವೃದ್ಧಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎನ್ನಬಹುದುತಂತ್ರಜ್ಞಾನ50ರ ದಶಕದಲ್ಲಿದ್ದ ಸರಾಸರಿ ಜೀವಿತಾವಧಿ 40, ಈಗಿನ 63ಕ್ಕೆ ಏರಿಸಲು ಕಾರಣವೇ ಔಷಧ ವಿಜ್ಞಾನ + ಕೃಷಿ ಕ್ಷೇತ್ರದತಂತ್ರಜ್ಞಾನಸಂಶೋಧನೆಗಳು ಎಲ್ಲಾ ರೀತಿಯ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣಕ್ಕೆ ತರಲಾಗಿದೆ. (ಏಡ್ಸ್ ಹೊರತುಪಡಿಸಿ) ಶಿಶುತಂತ್ರಜ್ಞಾನಮರಣ ದರವನ್ನು 72ಕ್ಕೆ ಇಳಿಸಲಾಗಿದೆ. ಅಪೌಷ್ಟಿಕತೆಯಿಂದ ನರಳುವವರನ್ನು ಗುರುತಿಸಿ ಅವರಿಗೆ ಸೂಕ್ತ ರೀತಿಯಲ್ಲಿತಂತ್ರಜ್ಞಾನಆಹಾರ & ಔಷಧಿಗಳನ್ನು ನೀಡಿ ಸುಧಾರಿಸಲಾಗಿದೆ.
ಸ್ವಾತಂತ್ರ್ಯ ಬಂದಾಗ ಇದ್ದ ಬಹು ದೊಡ್ಡ ಸಮಸ್ಯೆ ದೇಶದ ಗಡಿ ಗುರುತಿಸುವುದು & ಅದನ್ನು ರಕ್ಷಿಸುವುದಾಗಿತ್ತು,ತಂತ್ರಜ್ಞಾನನಂತರ 1962,1965 & 1971ರಲ್ಲಿ ಯುದ್ಧಗಳು ಭಾರತವನ್ನು ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿ ರಾಷ್ಟ್ರಗಳ ಸಾಲಿಗೆತಂತ್ರಜ್ಞಾನಸೇರಿಸುವ ಪಾಠ ಕಲಿಸಿದವು, ವಿಶ್ವದ ಬಲಾಢ್ಯ ಸೈನಿಕ ರಾಷ್ಟ್ರಗಳಲ್ಲಿ ಭಾರತವೂ ಒಂದು. ನಮ್ಮ ರಕ್ಷಣಾ ವಿಜ್ಞಾನಿಗಳುತಂತ್ರಜ್ಞಾನಅಭಿವೃದ್ಧಿಪಡಿಸಿದ ಕ್ಷಿಪಣಿಗಳಲ್ಲಿ ಪ್ರಮುಖವಾದವುಗಳೆಂದರೆ ಅಗ್ನಿ, ಪೃಥ್ವಿ, ತ್ರಿಶೂಲ್, ಆಕಾಶ್, ನಾಗ್, ಬ್ರಹ್ಮೋಸ್ತಂತ್ರಜ್ಞಾನಇತ್ಯಾದಿ. ದೇಶದ ಕ್ಷಿಪಣಿಳ ಜನಕನೆಂದೇ ಖ್ಯಾತರಾದ ರಾಷ್ಟ್ರಪತಿ ಭಾರತರತ್ನ ಡಾ. ಎ.ಪಿ.ಜೆ. ಅಬ್ಧುಲ್ ಕಲಾಂ &ತಂತ್ರಜ್ಞಾನಸಂಗಡಿಗರ ಸಾಧನೆ ವಿಶ್ವವೇ ತಲೆದೂಗುವಂತದ್ದು.
ಭಾರತದ ಆರ್ಥಿಕಾಭಿವೃದ್ಧಿಯಲ್ಲಿ ಉಪಗ್ರಹಗಳ ಪಾತ್ರವೇನು ಎಂದು ನೋಡಿದರೆ, 1975ರಲ್ಲಿ ನಾವು ಆರ್ಯಭಟತಂತ್ರಜ್ಞಾನಉಪಗ್ರಹವನ್ನು ಖ್ಯಾತ ವಿಜ್ಞಾನಿ ಪ್ರೊ .ಯು.ಆರ್.ರಾವ್ ನೇತೃತ್ವದ ವಿಜ್ನ್ಯಾನಿಗಳ ತಂಡದ ಪರಿಶ್ರಮದಿಂದ ಹಾರಿಸಲುತಂತ್ರಜ್ಞಾನಸಾಧ್ಯವಾಯಿತು. ಅಲ್ಲಿಂದೀಚೆಗೆ 20ಕ್ಕೂ ಹೆಚ್ಚು ಯಶಸ್ವಿ ಉಪಗ್ರಹಗಳನ್ನು ಉಡಾಯಿಸಲಾಗಿದೆ & ಅವುಗಳಿಂದತಂತ್ರಜ್ಞಾನಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆಯಲು ಅನುವಾಗಿದೆ.
ಭಾರತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ರಾಷ್ಟ್ರಗಳಲ್ಲೊಂದು, ನಮಗೆ ಬೇಕಾದ ಎಲ್ಲಾ ರೀತಿಯಮಾಹಿತಿಗಳನ್ನು ಈ ಉಪಗ್ರಹಗಳು ನೀಡುತ್ತವೆ. ಅಂದರೆ ಭಾರತದ ಭೌಗೋಳಿಕ ವಾತಾವರಣವನ್ನು ಅಭ್ಯಸಿಸವುದು,ಸಂಪನ್ಮೂಲವನ್ನು ಸರ್ವೇಕ್ಷಣೆ ಮಾಡುವುದು ಹವಾಮಾನ ವೀಕ್ಷಣೆ, ಟೆಲಿ ಸಂಪರ್ಕ ವ್ಯವಸ್ಥೆಯನ್ನು ಸುಸ್ಥಿರವಾಗಿನೀಡುವುದು, ಟೆಲಿವಿಷನ್ ಚಾನಲ್‍ಗಳ ಪ್ರಸಾರ, ಅಂತರ್ ಜಾಲ, ಮೊಬೈಲ್ ದೂರವಾಣೀ, ವಿದ್ಯೂನ್ಮಾನ ಅಂಚೆ,ಇ-ಆಡಳಿತ ಇ-ವ್ಯವಹಾರ ಇತ್ಯಾದಿ, ಒಟ್ಟಾರೆ ಆರ್ಥಿಕಾಭಿವೃದ್ಧಿಯಲ್ಲಿ ಉಪಗ್ರಹಗಳ ಪಾತ್ರ ತುಂಬ ಗಣನೀಯವಾಗಿದೆ.
ಬಾಹ್ಯಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಾಯವಾದ ವಿಜ್ಞಾನಿಗಳು & ಸಂಸ್ಥೆಗಳನ್ನು ಹೆಸರಿಸುವುದಾದರೆ –ಖ್ಯಾತ ವಿಜ್ಞಾನಿಗಳಾದ ವಿಕ್ರಂ ಸಾರಾಬಾಯಿ, ಸತೀಶ್ ಧವನ್, ಪ್ರೋ.ಯು.ಆರ್.ರಾವ್, ಡಾ. ಕಸ್ತೂರಿ ರಂಗನ್,ಮಾಧವನ್ ನಾಯರ್ ಇತ್ಯಾದಿ. ಇಸ್ರೋ - ಬೆಂಗಳೂರು, ಮಾಸ್ಟರ್ ಕಂಟ್ರೋಲ್ ಸೌಕರ್ಯ - ಹಾಸನ, ವಿಕ್ರಂಸಾರಾಬಾಯಿ ಬಾಹ್ಯಾಕಾಶ ಕೇಂದ್ರ – ತ್ರಿವೆಂಡ್ರಮ್, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ - ಶ್ರೀ ಹರಿಕೋಟಿ (ಆಂಧ್ರಪ್ರದೇಶ) ಇತ್ಯಾದಿಗಳಾಗಿದೆ.
ಇನ್ನು ಜೈವಿಕ ತಂತ್ರಜ್ಞಾನ (ಬಿ.ಟಿ.) ಕ್ಷೇತ್ರದಲ್ಲಾಗುವ ಬದಲಾವಣೆಗಳನ್ನು ಗಮನಿಸುವುದಾದರೆ, ವಿಶ್ವದ ಆಹಾರಸಮಸ್ಯೆಯನ್ನು ನೀಗಿಸಿದ ಕೀರ್ತಿ ಖ್ಯಾತ ವಿಜ್ಞಾನಿ ಡಾ. ನಾರ್ಮನ್ ಬೋರ್ಲಾಗ್ ಅವರಿಗೆ ಸಲ್ಲುವುದು. ಉತ್ತಮತಳಿಯ ಹೈಬ್ರಿಡ್ ಬೀಜ ಉತ್ಪಾದಿಸಿ ವಿಶ್ವದ ಹಸಿರು ಕ್ರಾಂತಿಯ ಆರಂಭ ಪುರುಷನೆನ್ನಲಾಗಿದೆ. ಭಾರತದಲ್ಲೂ ಇವರನೆರವಿನಿಂದ 1965-66ರಲ್ಲಿ ಹಸಿರು ಕ್ರಾಂತಿಯನ್ನು ಆರಂಭಿಸಲಾಯ್ತು.
ಇತ್ತೀಚೆಗೆ ಜೈವಿಕ ತಂತ್ರಜ್ಞಾನವೆಂಬ ಒಂದು ಹೊಸ ವಿಜ್ಞಾನ ಕ್ಷೇತ್ರದಿಂದಾಗಿ ಕೃಷಿಯಲ್ಲಿ ಕ್ರಾಂತಿಯುಂಟಾಗುತ್ತಿದೆ.ಸಸ್ಯಗಳನ್ನು ಬಾಧಿಸುತ್ತಿರುವ ರೋಗಾಣುಗಳು & ಕೀಟಗಳ ವಿರುದ್ಧ ಬೀಜಗಳನ್ನೆ ಔಷಧಿ ಗುಣಗಳನ್ನುಸೇರಿಸುವುದರಿಂದ ರೋಗ ಭಾದೆಯನ್ನು ತಡೆಗಟ್ಟಿ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ. ಇದರಿಂದ ರೈತರಆದಾಯ ಹೆಚ್ಚುವುದಲ್ಲದೆ, ರಾಷ್ಟ್ರದ ಒಟ್ಟಾರೆ ಆರ್ಥಿಕಾಭಿವೃದ್ಧಿಗೆ ಸಹಾಯವಾಗುವುದು.
ಜೈವಿಕ ತಂತ್ರಜ್ಞಾನವನ್ನು ಕೇವಲ ಕೃಷಿ ಕ್ಷೇತ್ರಕ್ಕೆ ಸೀಮಿತವಾಗಿ ಉಪಯೋಗಿಸುವುದಿಲ್ಲ. ಬದಲಿಗೆ ಮಾನವನಿಗೆಆರ್ಥಿಕ ಲಾಭ ತರುವ ಪಶು ತಳಿ ಕೋಳಿ ತಳಿ ಅಭಿವೃದ್ಧಿ ಇತ್ಯಾದಿ ಕ್ಷೇತ್ರಕ್ಕೂ ಅನ್ವಯಿಸಬಹುದು. ಜೊತೆಗೆಮಾನವರಿಗೆ ಅನೇಕ ರೋಗಗಳ ವಿರುದ್ಧ ಹೋರಾಡುವ ಸೂಕ್ಷ್ಮ ಜೀವಿಗಳನ್ನು ಮಾನವ ದೇಹದಲ್ಲೇ ಉತ್ಪಾದಿಸುವಂತಹಮಟ್ಟಕ್ಕೂ ನಾವಿಂದು ಕಾಲಿಟ್ಟದ್ದೇವೆಂದರೆ, ವಿಜ್ಞಾನ & ತಂತ್ರಜ್ಞಾನದ ನೆರವಿನಿಂದ ಕೇವಲ ಆರ್ಥಿಕಾಭಿವೃದ್ಧಿ ಮಾತ್ರವಲ್ಲದೆಇಡೀ ಮಾನವ ಕುಲವೇ ಅಭಿವೃಧ್ದಿಯತ್ತ ಸಾಗುವಂತೆ ಮಾಡಿದ್ದೇವೆ ಎನ್ನಬಹುದು.
ಒಟ್ಟಾರೆಯಾಗಿ ಸಮೀಕ್ಷೆ ಮಾಡುವುದಾದರೆ 50 ವರ್ಷಗಳ ಸ್ವತಂತ್ರಯ ಭಾರತದಲ್ಲಿ ಅನೇಕ ಕ್ಷೇತ್ರಗಳಲ್ಲಿ ಗಣನೀಯಸಾಧನೆಗೈದಿರುವುದು ತಿಳಿದು ಬರುತ್ತದೆ. ಸಾಕಷ್ಟಾದರೂ ಸಾಧಿಸಬೇಕಾದ್ದು ಬಹಳಿಷ್ಟಿದೆ ಎನ್ನುವುದು ನಮ್ಮ ಗಮನಕ್ಕೆಬರುತ್ತದೆ. ಉದಾಹರಣೆಗೆ 10ನೇ ಪಂಚ ವಾರ್ಷಿಕ ಯೋಜನೆಯ ಪ್ರಮುಖ ಗುರಿಗಳನ್ನು ನೋಡೋಣ.
• ಸಾಕ್ಷರತೆಯನ್ನು ಈಗಿನ 65 ರಿಂದ 75ಕ್ಕೆ ಹೆಚ್ಚಿಸುವುದು
• ಶಿಶು ಮರಣ ದರ 72ರಿಂದ 45ಕ್ಕೆ ಇಳಿಸುವುದು
• ಅರಣ್ಣ್ಯೀಜರ ಶೇ. 20ರಿಂದ 25ಕ್ಕೆ ಹೆಚ್ಚಿಸುವುದು
• ಜನಸಂಖ್ಯಾ ಬೆಳವಣಿಗೆ ದರವನ್ನು 21ರಿಂದ 16.2ಕ್ಕೆ (2001-11) ಇಳಿಸುವುದು.
• ಎಲ್ಲಾ ಗ್ರಾಮೀಣ ಜನರಿಗೂ 2012ರ ಹೊತ್ತಿಗಾದರೂ ಶುದ್ಧ ಕುಡಿಯುವ ನೀರು ಒದಗಿಸುವುದು ಇತ್ಯಾದಿ.
ಅಂದರೆ ನಾವಿನ್ನೂ ಜನರ ಮೂಲಭೂತ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸಲು ವಿಫಲವಾಗಿದ್ದೇವೆಂದೇ ಇದರ ಅರ್ಥ. ಹಾಗಾಗಿ ಈಗಿನ ಯಾವುದೆ ಘನ ಸರ್ಕಾರಗಳ ಆದ್ಯ ಕರ್ತವ್ಯಗಳೆಂದರೆ,
• ಆಹಾರ, ವಸತಿ, ಆರೋಗ್ಯ & ಶಿಕ್ಷಣವನ್ನು ಎಲ್ಲಾ ನಾಗರಿಕರಿಗೂ ಸಕಾಲದಲ್ಲಿ ಒದಗಿಸುವುದು
• ಯಾವುದೇ ಸಮಸ್ಯೆಗಳ ದುಷ್ಪರಿಣಾಮಗಳನ್ನು ಜನರಿಗೆ ಮನವರಿಕೆ ಮಾಡಿಸುವುದು.
• ಸಮಸ್ಯೆಗಳನ್ನು ಆಳವಾಗಿ ಅಭ್ಯಸಿಸಿ ತಜ್ಞರ ಸಲಹೆಯಂತೆ ಸೂಕ್ತವಾದ ಪರಿಹಾರಗಳನ್ನು ಕಂಡುಹಿಡಿದು,ಅವುಗಳನ್ನು ನಾಗರಿಕರಿಗೆ ತಲುಪಿಸುವುದು
• ಇಂತಹ ಕಾರ್ಯಗಳಲ್ಲಿ ಸರ್ಕಾರದೊಂದಿಗೆ ಸರ್ಕಾರೇತರ ಸಂಘ ಸಂಸ್ಥೆಗಳು, ಸಾರ್ವಜನಿಕರು & ಮಾಧ್ಯಮ ವಲಯಗಳ ನೆರವನ್ನೂ ಪಡೆದರೆ ಅಭಿವೃದ್ಧಿಯ ವೇಗವನ್ನು ಇನ್ನೂ ಹೆಚ್ಚಿಸಬಹುದೆಂದು ಆಶಿಸಬಹದು.