ಡಿಸೆಂಬರ್ 8th, 2017
 
1.ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಕುಂಭಮೇಳ:
• ಭಾರತದಲ್ಲಿ ಪ್ರತಿವರ್ಷ ನಡೆಯುವ ಕುಂಭ ಮೇಳವನ್ನು ಮನುಕುಲದ ಅತ್ಯಂತ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಎಂದು unesco ಗೌರವಿಸಿದೆ.
• ದಕ್ಷಿಣ ಆಫ್ರಿಕಾದ ಚಮವಿನಲ್ಲಿ ಸಭೆ ಸೇರಿದ, ವಿಶಿಷ್ಟ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ರಚಿಸಲಾದ ವಿಶ್ವಸಂಸ್ಥೆಯ ಅಂತರ ಸರ್ಕಾರಿ ಸಮಿತಿಯು ಗುರುತಿಸಿದೆ.
• ಕೊಲಂಬಿಯಾ, ಬೋಟ್ಸ್ ವಾನಾ, ವೆನಿಜುವೆಲ್, ಮಂಗೋಲಿಯಾ, ಮೊರಾಕ್ಕೋ, ಟರ್ಕಿ ಹಾಗೂ ಯುಎಇ ಗಳಲ್ಲಿ ನಡೆಯುವ ಕೆಲವು ಆಚರಣೆಗಳನ್ನು ಪಟ್ಟಿಗೆ ಸೇರಿಸಲಾಗಿದೆ.
• ಈ ಪಟ್ಟಿಗೆ ಸೇರುವದರಿಂದ, ಸಾಂಸ್ಕೃತಿಕ ಪರಂಪರೆ ಆಚರಣೆಯಲ್ಲಿ ಭಾಗವಹಿಸಲು & ಅವುಗಳನ್ನು ಪ್ರಚಾರಪಡಿಸಲು ಅಂತಾರಾಷ್ಟ್ರೀಯ ಸಹಕಾರ ಸಿಗುತ್ತದೆ.
2. FRDI: ಠೇವಣಿದಾರರ & ಜನಸ್ನೇಹಿ:
• ಹಣಕಾಸು ಪರಿಹಾರ & ಠೇವಣಿ ವಿಮೆ ಮಸೂದೆಯು [FRDI] ಬ್ಯಾಂಕ್ ಠೇವಣಿದಾರರ ಸ್ನೇಹಿಯಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
• ಸದ್ಯಕ್ಕೆ ಈ ಮಸೂದೆ ಸಂಸತ್ತಿನ ಜಂಟಿ ಸಮಿತಿಯ ಪರಿಶೀಲನೆಯಲ್ಲಿದೆ.
• ತೀವ್ರ ನಷ್ಟಕ್ಕೆ ಗುರಿಯಾಗುವ ಅಥವಾ ದಿವಾಳಿ ಅಂಚಿಗೆ ತಲುಪುವ ಬ್ಯಾಂಕಗಳು ತಮ್ಮ ನಷ್ಟದ ತೀವ್ರತೆ ತಗ್ಗಿಸಲು ಠೇವಣಿದಾರರ ಹಣವನ್ನು ಬಳಸಿಕೊಳ್ಳುವ ಅವಕಾಶ ಇರುವ ಪ್ರಸ್ತಾವವನ್ನು ಮಸೂದೆ ಈ ಒಳಗೊಂಡಿದೆ.
• ಸರ್ಕಾರಿ ಸ್ವಾಮ್ಯದ ಬ್ಯಾಂಕಗಳು ಸೇರಿದಂತೆ ಎಲ್ಲ ಬ್ಯಾಂಕಗಳಿಗೆ ಹಣಕಾಸು ಮತ್ತು ಬೆಂಬಲ ಪರಿಹಾರ ಬೆಂಬಲ ನೀಡುವ ಸರ್ಕಾರದ ಅಧಿಕಾರಕ್ಕೆ ನಿಯಂತ್ರಣ ವಿಧಿಸುವ ಯಾವುದೇ ಪ್ರಸ್ತಾವ ಒಳಗೊಂಡಿಲ್ಲ.
3:ಪ್ರಿಯಾಂಕಾ “ಏಷ್ಯಾದ ಮಾದಕ ಮಹಿಳೆ”:
• ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 2017ನೇ ಸಾಲಿನ ಏಷ್ಯಾದ ಮಾದಕ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
• ಬ್ರಿಟನ್ ಮೂಲದ EASTERN EYE ವಾರಪತ್ರಿಕೆ ಪ್ರತಿವರ್ಷ ಏಷ್ಯಾದ ಮಾದಕ ಮಹಿಳೆಯರ ಪಟ್ಟಿ ಸಿದ್ಧಪಡಿಸುತ್ತದೆ
• ಈ ಹಿಂದೆ 4 ಬಾರಿ ಪ್ರಿಯಾಂಕಾ ಹೆಸರು ಈ ಪಟ್ಟಿಯಲ್ಲಿತ್ತು. ಆದರೆ ಇದೇ ಮೊದಲ ಬಾರಿಗೆ ಈ ಖ್ಯಾತಿಗೆ ಆಯ್ಕೆಯಾಗಿದ್ದಾರೆ
• ಈ ಜಾತಿಯ 2016ನೇ ಸಾಲಿನಲ್ಲಿ ಈ ಜಾತಿಗೆ ಆಯ್ಕೆಯಾದವರು - ದೀಪಿಕಾ ಪಡುಕೋಣೆ ಆದರೆ ಈ ಬಾರಿ 3ನೇ ಸ್ಥಾನ ಲಭಿಸಿದೆ.
• 4 ನೇ ಸ್ಥಾನ - ಅಲಿಯ ಭಟ್
5 ನೇ ಸ್ಥಾನ - ಮಹಿರಾ ಖಾನ್ (ಪಾಕಿಸ್ತಾನದ ನಟಿ)
49 ನೇ ಸ್ಥಾನ - ಶ್ರೀದೇವಿ (ಪಟ್ಟಿಯಲ್ಲಿಯೇ ಅತಿ ಹಿರಿಯರು)
4. ಆಸ್ಟ್ರೇಲಿಯಾ: ಸಲಿಂಗಿಗಳ ವಿವಾಹ:
• ಸಲಿಂಗಿಗಳ ವಿವಾಹ ಕಾನೂನುಬದ್ಧಗೊಳಿಸುವ ಮಸೂದೆಯನ್ನು ಆಸ್ಟ್ರೇಲಿಯದ ಸಂಸತ್ತು ಅಂಗೀಕರಿಸಿದೆ.
• ಇದರಿಂದಾಗಿ ಸಲಿಂಗಿಗಳ ವಿವಾಹ ಕಾನೂನು ಬದ್ದವಾಗಿಸಿದ 20 ದೇಶಗಳ ಸಾಲಿಗೆ ಆಸ್ಟ್ರೇಲಿಯಾ ಸೇರಿದೆ.
• ಅಂಚೆ ಮತದ ಮೂಲಕ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು.
• 1.2 ಕೋಟಿ ಮತದಾರರಲ್ಲಿ 62% ಜನ ಸಲಿಂಗಿಗಳ ವಿವಾಹ ಬೆಂಬಲಿಸಿದ್ದಾರೆ.
• ಡಿಸೆಂಬರ್ 9ರಿಂದ ಈ ಕಾನೂನು ಜಾರಿಗೆ ಆಗಲಿದೆ.
• 80%ರಷ್ಟು ಮತದಾರರು ಇದರಲ್ಲಿ ಪಾಲ್ಗೊಂಡಿದ್ದರು.
5. ಇಸ್ರೇಲ್ ರಾಜಧಾನಿ ಜೆರುಸಲೇಮ್ ಘೋಷಣೆ
• ಜೆರುಸಲೆಂ ಅನ್ನು ಇಸ್ರೇಲ್ ನ ರಾಜಧಾನಿಯಾಗಿ ಅಮೆರಿಕಾಧ್ಯಕ್ಷ ಡೊನಾಲ್ಡ್ ಟ್ರಂಪ್ DEC 9 ರ ತಡರಾತ್ರಿ ಅಧಿಕೃತವಾಗಿ ಘೋಷಿಸಿದ್ದಾರೆ.
• ವಿವಾದಾತ್ಮಕ ಪಟ್ಟಣದ ಕುರಿತು ಅಮೆರಿಕ ಕಳೆದ 70 ವರ್ಷಗಳಿಂದ ಅಮೇರಿಕ ಈಗ ಅಂತ್ಯಗೊಳಿಸಿದೆ.
• ಸೌದಿ ಅರೆಬಿಯಾದ ರಾಜ ಸಲ್ಮಾನ್ ಅವರು ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಇದು ಪ್ಯಾಲೆಸ್ಟೈನ್ ಜನರ ಐತಿಹಾಸಿಕ ಮತ್ತು ಕಾಯಂ ಹಕ್ಕುಗಳಿಗೆ ವಿರುದ್ಧವಾದದ್ದು ಇದನ್ನು ಮರುಪರಿಶೀಲಿಸಲು ಆಗ್ರಹಿಸಿದ್ದಾರೆ.
• ಸೌದಿ,ಪಾಕಿಸ್ತಾನ,ರಷ್ಯ,& ಲಂಡನ್ ಈ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
• ಟೆಲ್ ಅವಿವನಿಂದ ಜೆರುಸಲೇಂಗೆ ಅಮೆರಿಕಾದ ರಾಯಭಾರ ಕಚೇರಿಯನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ.
• ಈ ನಿರ್ಧಾರದ ಮುಂದಿನ ಬೆಳವಣಿಗೆ ಕುರಿತು ಚರ್ಚಿಸಲು ಭದ್ರತಾ ಮಂಡಳಿಯ 15 ಜನ ಸದಸ್ಯ ರಾಷ್ಟ್ರಗಳ ಪೈಕಿ 8 ದೇಶಗಳ ಮನವಿ ಮೇರೆಗೆ ಭದ್ರತಾ ಮಂಡಳಿ ಸಭೆ ಕರೆದಿದೆ.
• ಇದರ ಕುರಿತು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಚೋನಿಯಾ ಗುಟೆರಸ್ ಅಧ್ಯಕ್ಷತೆ ವಹಿಸಲಿದ್ದಾರೆ.
Contributed by: Mallikajan.Korbu