ಋಣಮುಕ್ತ ಯೋಜನೆ:
ಅಂಬೇಡ್ಕರ್ ಅಭಿವೃದ್ಧಿ ನಿಗಮ, ಡಿ.ದೆವರಾಜು ಅರಸು ಅಭಿವೃದ್ಧಿ ನಿಗಮ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಸಾಲ ಪಡೆದಿದ್ದ ಪ.ಜಾ, ಪ.ಪಂ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಸಾಲ ಮನ್ನಾ ಮಾಡಿ ಅವರನ್ನು ಋಣ ಮುಕ್ತರನ್ನಾಗಿಸುವ ಯೋಜನೆಯೆ ಋಣ ಮುಕ್ತ ಯೋಜನೆ. ಈ ಯೋಜನೆಯಡಿಯಲ್ಲಿ 1986ರಿಂದ 2013 ವರೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸಾಲ ಪಡೆದಿದ್ದ ಪ.ಜಾತಿಯ 1.86 ಲಕ್ಷ ಜನರ 397.47 ಕೋಟಿ ಮತ್ತು ಪ.ಪಂಗಡದ 40 ಸಾವಿರ ಜನರ 58.69 ಕೋಟಿ, ಡಿ.ದೆವರಾಜು ಅರಸು ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಪಡೆದಿದ್ದ 4.98 ಲಕ್ಷ ಹಿಂದುಳಿದವರ 514 ಕೋಟಿ ರೂಪಾಯಿ ಹಾಗೂ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಸಾಲ ಪಡೆದಿದ್ದ 2.94 ಲಕ್ಷ ಅಲ್ಪ ಸಂಖ್ಯಾತರ ೬೨.೮೮ ಕೋಟಿ ಸಾಲ ಮನ್ನ ಮಾಡಲಾಗಿದೆ.