ಪ್ರಚಲಿತ ಘಟನೆಗಳು (Current Affairs)-1
 
ಭಾರತಕ್ಕೆ ಸಿಕ್ಕಿತು ವಾಸೆನಾರ್ ಸದಸ್ಯತ್ವ
• ರಫ್ತು ನಿಯಂತ್ರಣ ಒಕ್ಕೂಟ, ವಾಸೆನಾರ್ ಅರೇಂಜ್ಮೆಂಟ್ಗೆ ಸೇರಲು ಭಾರತಕ್ಕೆ ಹಸಿರು ನಿಶಾನೆ ದೊರಕಿದ್ದು ಅಣ್ವಸ್ತ್ರ ಪ್ರಸರಣ ತಡೆ ವಿಚಾರವಾಗಿ ಭಾರತದ ವಿಶ್ವಾಶಾರ್ಹತೆಯನ್ನು ಮತ್ತಷ್ಟು ಪ್ರಚುರಪಡಿಸಿದಂತಾಗಿದೆ.
• ವಿಯೆನ್ನಾದಲ್ಲಿ ಎರಡು ದಿನಗಳ ಮಟ್ಟಿಗೆ ಸೇರಿದ್ದ ಸಭೆಯಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ.
• ಭಾರತ ರಫ್ತು ನಿಯಂತ್ರಣ ಒಕ್ಕೂಟ ವ್ಯವಸ್ಥೆಯ 42ನೇ ಸದಸ್ಯ ರಾಷ್ಟ್ರವಾಗಲಿದೆ.
• ಸಾಂಪ್ರದಾಯಿಕ ಶಸ್ತ್ರಾಸ್ತ್ರ ಖರೀದಿಯಲ್ಲಿ ನೆರವಾಗಲಿರುವ ವಾಸೆನಾರ್ ಅರೇಂಜ್ಮೆಂಟ್ ಈ ನಿಟ್ಟಿನಲ್ಲಿ ಸಾಕಷ್ಟು ಪಾರದರ್ಶಕತೆ ಹಾಗೂ ಹೆಚ್ಚಿನ ಹೊಣೆದಾರಿಕೆಯನ್ನು ಕಾಪಾಡಲಿದೆ. ಶಸ್ತ್ರಾಸ್ತ್ರ ವರ್ಗವಣೆ ಮೂಲಕ ಯಾವುದೇ ಸದಸ್ಯ ದೇಶ ತನ್ನ ಮಿಲಿಟರಿ ಸಾಮರ್ಥ್ಯ ವೃದ್ಧಿಸಲು ಯತ್ನಿಸುವುದಿಲ್ಲ ಎಂದು ಬದ್ಧವಾಗಿರಬೇಕಿದೆ.
• ಭಯೋತ್ಪದಕರಿಗೆ ಶಸ್ತ್ರಾಸ್ತ್ರ ದೊರಕದಂಥೆ ನೋಡಿಕೊಳ್ಳುವುದೂ ಈ ವ್ಯವಸ್ಥೆಯ ಉದ್ದೇಶಗಳಲ್ಲಿ ಒಂದಾಗಿದೆ.
• ಕಳೆದ ವರ್ಷ ಜೂನ್ನಲ್ಲಿ ಕ್ಷಿಪಣಿ ತಂತ್ರಜ್ಞಾನ ವರ್ಗಾವಣೆ ನಿಯಂತ್ರಣ ವ್ಯವಸ್ಥೆ(ಎಂಟಿಸಿಆರ್)ಯ ಸದಸ್ಯತ್ವ ಭಾರತಕ್ಕೆ ದೊರಕಿತ್ತು.
ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ
• ಇದು ಕರ್ನಾಟಕ ಸರ್ಕಾರದ ಕಾರ್ಯಕ್ರಮವಾಗಿದ್ದು, ವಾರ್ಷಿಕ ಆದಾಯ ₹ 87,600 ಕ್ಕಿಂತ ಕಡಿಮೆ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ವರ್ಗದವರು ಅರ್ಜಿ ಸಲ್ಲಿಸಬಹುದು.
• ವಸತಿ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ 30, ಪರಿಶಿಷ್ಟ ಪಂಗಡಕ್ಕೆ ಶೇ 10, ಅಲ್ಪಸಂಖ್ಯಾತರಿಗೆ ಶೇ 10 ರಷ್ಟು ಮೀಸಲು ಇದೆ. ಉಳಿದ ಶೇ 50 ಮನೆಗಳನ್ನು ಸಾಮಾನ್ಯ ವರ್ಗಕ್ಕೆ ಹಂಚಲಾಗುತ್ತದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರಿಗೆ ₹ 3.50 ಲಕ್ಷ ಹಾಗೂ ಸಾಮಾನ್ಯ ವರ್ಗಕ್ಕೆ ₹ 2.70 ಲಕ್ಷ ಸಹಾಯ ಧನ ನೀಡಲಾಗುತ್ತದೆ.
ಯುನೆಸ್ಕೋ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಕುಂಭಮೇಳ
• ಯುನೆಸ್ಕೋದ ಜಾಗತಿಕ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ತೀರ್ಥಯಾತ್ರಿಗಳ ಪ್ರಸಿದ್ಧ ಕುಂಭಮೇಳ ಸೇರಿದೆ..
• ಹರಿದ್ವಾರ ಹಾಗೂ ಅಲಹಾಬಾದ್ ನ ಗಂಗಾ ತೀರದಲ್ಲಿ ಹಾಗೂ ಉಜ್ಜಯನಿಯ ಕ್ಷಿಪ್ರ ನದಿ ಹಾಗೂ ನಾಸಿಕದ ಗೋದಾವರಿ ನದಿಯ ತೀರದಲ್ಲಿ ನಡೆಯುತ್ತದೆ.
• ಈ ಮಹಾಮೇಳಕ್ಕೆ ವಿಶ್ವದ ಮೂಲೆಮೂಲೆಗಳಿಂದ ಲಕ್ಷಾಂತರ ಜನ ಆಗಮಿಸುತ್ತಿದ್ದಾರೆ.
ಪೊಲಿಟಿಕೋ ಪವರ್ ಲಿಸ್ಟ್’ನಲ್ಲಿ ಭಾರತ ಮೂಲದ ಪ್ರಮೀಳಾ ಜಯಪಾಲ್ ಗೆ ಸ್ಥಾನ
• ಭಾರತೀಯ ಮೂಲದ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್ ಅವರಿಗೆ 'ಪೊಲಿಟಿಕೋ' ಪತ್ರಿಕೆಯು 2018ರ ಪವರ್ ಲಿಸ್ಟ್ ನಲ್ಲಿ ಐದನೇ ಸ್ಥಾನ ನೀಡಿದೆ.
• 2018ರಲ್ಲಿ ಗಮನಿಸಬೇಕಾದ ಪ್ರಮುಖ 18 ಅಮೆರಿಕನ್ನರ ಪಟ್ಟಿಯಲ್ಲಿ ಹೋರಾಟಗಾರರು, ರಾಜಕಾರಣಿಗಳು ಹಾಗೂ ಇತರೆ ಕಾರ್ಯಕಾರಿ ವ್ಯಕ್ತಿಗಳನ್ನು ಹೆಸರಿಸಲಾಗಿದೆ.
ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾಚಾರ್ಯರಿಗೆ ಮಹಾವೀರ ಶಾಂತಿ ಪ್ರಶಸ್ತಿ-2017
• ಶ್ರವಣ ಬೆಳಗೊಳ ಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಅವರನ್ನು 2017ನೇ ಸಾಲಿನ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
• 44 ವರ್ಷಗಳಿಂದ ಶ್ರವಣ ಬೆಳಗೊಳದ ಮಠದ ಪೀಠಾಧ್ಯಕ್ಷರಾಗಿ ಜನಹಿತ ಮತ್ತು ಆಧ್ಯಾತ್ಮಿಕ ಕೈಂಕರ್ಯದಲ್ಲಿ ತೊಡಗಿರುವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಶ್ರವಣ ಬೆಳಗೊಳದಲ್ಲಿ ಪ್ರಾಕೃತ ಅಧ್ಯಯನನ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಅನೇಕ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.
• ಮಹಾವೀರ ಶಾಂತಿ ಪ್ರಶಸ್ತಿಯು ₹10 ಲಕ್ಷ ನಗದು, ಸ್ಮರಣಿಕೆ ಹಾಗೂ ಫಲಕಗಳನ್ನು ಒಳಗೊಂಡಿದೆ.