ಡಿಸೆಂಬರ್ 9th, 2017
 
1.ಇಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ
• ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2003ರಲ್ಲಿ ಡಿಸೆಂಬರ್ 9 ನ್ನು ಅಂತರಾಷ್ಟೀಯ ಬ್ರಷ್ಟಾಚಾರ ವಿರೋಧಿ ದಿನವೆಂದು ಘೋಷಿಸಿದೆ.
• ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು
ಭ್ರಷ್ಟಾಚಾರವನ್ನು ಹೇಗೆ ತಡೆಯಬಹುದು?
ಭ್ರಷ್ಟಾಚಾರವನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸುವ ಕ್ರಮ
(ಎಂಬುದರ ಕುರಿತು ಇದನ್ನು ಆಚರಿಸಲಾಗುತ್ತದೆ)
• 2014ನೇ ವರ್ಷದ ವರದಿ ಪ್ರಕಾರ, ಜಗತ್ತಿನ ಅತ್ಯಂತ ಭ್ರಷ್ಟಾಚಾರ ಪೀಡಿತ ರಾಷ್ಟ್ರಗಳಲ್ಲಿ ಹೈಟಿ, ಇರಾಕ್, ಉತ್ತರ ಕೊರಿಯಾ,ವೆನುಜುವೆಲಾ,ಸೋಮಾಲಿಯಾ ಮತ್ತು ಅಫಘಾನಿಸ್ತಾನ ಪ್ರಮುಖವಾಗಿದೆ.
• 2017 ರ theme-> ಅಭಿವೃದ್ಧಿ, ಶಾಂತಿ ಮತ್ತು ಭದ್ರತೆಗಾಗಿ ಭ್ರಷ್ಟಾಚಾರ ವಿರುದ್ಧ ಒಗ್ಗೂಡುವುದು.
2.ಹಿಂದುಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ಅಧ್ಯಯನಕ್ಕೆ ಸಮಿತಿ
• ಎಂಟು ರಾಜ್ಯ ಮತ್ತು ೧ ಕೇಂದ್ರಾಡಳಿತ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಇವರಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡುವ ಕುರಿತು ಅಧ್ಯಯನ ನಡೆಸಲು ರಾಷ್ಟೀಯ ಅಲ್ಪಸಂಖ್ಯಾತ ಆಯೋಗ ೩ ಸದಸ್ಯರ ಸಮಿತಿಯನ್ನು ರಚಿಸಿದೆ
• ಆಯೋಗದ ಉಪಾಧ್ಯಕ್ಷರು ಸಮಿತಿಯ ಅಧ್ಯಕ್ಷರು
• ಈ ಕುರಿತು ಬಿಜೆಪಿ ಮುಖಂಡ ಅಷ್ವಿನಿ ಉಪಾದ್ಯಾಯ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದರು ಇದನ್ನು ಕೋರ್ಟ್ ತಿರಸ್ಕರಿಸಿ, ಅಲ್ಪಸಂಖ್ಯಾತ ಆಯೋಗಕ್ಕೆ ಮನವಿ ಮಾಡಲು ಸೂಚಿಸಿತ್ತು.
• ಲಕ್ಷದ್ವೀಪ,ಮಿಜೋರಾಂ,ನಾಗಾಲ್ಯಾಂಡ,ಮೇಘಾಲಯ ಮತ್ತು ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಿದೆ
3.ರೊನಾಲ್ಡೊ ಗೆ ೫ ನೇ ಬಾರಿ ಬ್ಯಾಲನ ಡಿಬರ್
• ಕ್ರಿಸ್ಟಿಯಾನೊ ರೊನಾಲ್ಡೊ ೫ ನೇ ಬಾರಿಗೆ ಪ್ರತಿಷ್ಠಿತ ಬ್ಯಾಲನ ಡಿಬರ್ (ಚಿನ್ನದ ಚೆಂಡು) ಪ್ರಶಸ್ತಿ ಪಡೆದಿದ್ದಾರೆ.
• ವರ್ಷದ ಶ್ರೇಷ್ಠ ಫುಟ್ಬಾಲ್ ಆಟಗಾರನಿಗೆ ನೀಡುವ ಪ್ರಶಸ್ತಿ ಇದಾಗಿದೆ.
• ಅತಿ ಹೆಚ್ಚು ಬಾರಿ ಪ್ರಶಸ್ತಿ ಆಟಗಾರರ ಪೈಕಿ ಅರ್ಜೆಂಟೀನಾದ->ಲಿಯೊನೆಲ್ ಮೆಸ್ಸಿ ಜತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ
• ಮ್ಯಾಂಚೆಸ್ಟರ್ ಯುನೈಟೆಡ್ ಗೆ ಆಡುವ ವೇಳೆ ರೊನಾಲ್ಡೊ ೨೦೦೮, ೨೦೧೩, ೨೦೧೪ರಲ್ಲಿ ಈ ಪ್ರಶಸ್ತಿ ಜಯಿಸಿದ್ದರು.
• ಫ್ರಾನ್ಸ್ ನ ಪ್ರತಿಷ್ಠಿತ ಫುಟ್ಬಾಲ್ ಮ್ಯಾಗಜಿನ್ ೧೯೫೬ ರಿಂದ ಈ ಪ್ರಶಸ್ತಿ ನೀಡುತ್ತಾ ಬಂದಿದೆ.
• ಪತ್ರಕರ್ತರ ತಂಡ ಅಗ್ರ ೫ ಆಟಗಾರರನ್ನು ಈ ಪ್ರಶಸ್ತಿಗೆ ಸೂಚಿಸುತ್ತದೆ
• ರೊನಾಲ್ಡೊ ಅಕ್ಟೋಬರ್-೨೦೧೭ ರಲ್ಲಿ ಫಿಫಾ ವರ್ಷದ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದರು
• ಕಳೆದ ವರ್ಷ ಪೋರ್ಚುಗಲ್ ತಂಡ ಯುರೋಪಿಯನ್ ಚಾಂಪಿಯನ್ ಪಟ್ಟದೇರಲು ಪ್ರಮುಖ ಪಾತ್ರ ವಹಿಸಿದ್ದರು
• ರೊನಾಲ್ಡೊ ೫ ವರ್ಷಗಳ ಬಳಿಕ ರಿಯಲ್ ಮ್ಯಾಡ್ರಿಡ್, ಸ್ಪ್ಯಾನಿಷ್ ಲಾ ಲೀಗ್ ಟೂರ್ನಿ ಜಯಿಸಲು ನೆರವಾಗಿದ್ದರು.
4.ವಾಸೇನಾರ್ ಗುಂಪಿಗೆ ಭಾರತ ಸೇರ್ಪಡೆ
• ಸಾಂಪ್ರದಾಯಿಕ ಶಸ್ತ್ರಾಸ್ತ್ರ, ದ್ವಿ ಬಳಕೆ ಸಾಧನಗಳು & ತಂತ್ರಜ್ಞಾನಗಳ ರಫ್ತ್ತು ನಿಯಂತ್ರಿಸುವ ವಾಸೇನಾರ್ ಅರೆಂಜ್ ಮೆಂಟ್ (WA) ಗುಂಪಿನಲ್ಲಿ ಭಾರತಕ್ಕೆ ಸದಸ್ಯತ್ವ ದೊರೆತಿದೆ.
• ದ್ವಿ ಬಳಕೆ ಎಂದರೆ ->೧. ನಾಗರಿಕ {ಬಳಕೆಗಳೆರಡಕ್ಕೂ ಉಪಯೋಗಿಸಬಹುದಾದ ತಂತ್ರಜ್ಞಾನ
೨. ಸೇನಾ
Example -> ಪರಮಾಣು ತಂತ್ರಜ್ಞಾನ
• ವಿಯೆನ್ನಾದಲ್ಲಿ ನಡೆದ WA ೨೩ ನೇ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ.
• ಭಾರತ WA ದ ೪೨ ನೇ ಸದಸ್ಯ ರಾಷ್ಟ್ರವಾಗಿದೆ
• ಅಣ್ವಸ್ತ್ರ ಪ್ರಸರಣ ತಡೆ [NPT] ಒಪ್ಪಂದಕ್ಕೆ ಸಹಿ ಹಾಕದಿದ್ದರೂ ಭಾರತಕ್ಕೆ ಈ ಸದಸ್ಯತ್ವ ದೊರೆತಿರುವುದು ವಿಶೇಷ
• WA ಸದಸ್ಯತ್ವದಿಂದಾಗಿ ೪೮ ಸದಸ್ಯರನ್ನು ಹೊಂದಿರುವ ಪರಮಾಣು ಪೂರೈಕೆದಾರ ಗುಂಪಿನ [NSG] ಸದಸ್ಯತ್ವ ಪಡೆಯಲು ತೊಡಕಾಗಿರುವ ಚೀನಾಕ್ಕೆ ಸದಸ್ಯತ್ವ ಇಲ್ಲ
• ರಫ್ತ್ತುನಿಯಂತ್ರಣ ಗುಂಪಾದ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಗುಂಪಿಗೆ (MTCR) ಜೂನ್ - ೨೦೧೭ ರಲ್ಲಿ ಭಾರತ ಸೇರ್ಪಡೆಯಾಗಿತ್ತು.
• ಸಾಂಪ್ರದಾಯಿಕ ಶಸ್ತ್ರಾಸ್ತ್ರ ಮತ್ತು ದ್ವಿಬಳಕೆ ಸಾಧನೆಗಳು ಮತ್ತು ತಂತ್ರಜ್ಞಾನದ ವರ್ಗಾವಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದು ಇದರ [WA] ಗುರಿ
• ಇಂತಹ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನ ಭಯೋತ್ಪಾದಕರ ಕೈಗೆ ಸಿಗದಂತೆ ನೋಡಿಕೊಳ್ಳುವುದು WA ಇನ್ನೊಂದು ಗುರಿ
5.ಇಂಧನ ಕ್ಷಮತೆ ರೈಲು ನಿಲ್ದಾಣ
• ಇಂಧನ ಕ್ಷಮತೆ ರೈಲು ನಿಲ್ದಾಣ ಸಾಧಿಸಿದ ದೇಶದ ಮೊದಲ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೆ ಹೈದರಾಬಾದಿನ ಕಾಚಿಗುಡ ರೈಲು ನಿಲ್ದಾಣ ಪಾತ್ರವಾಗಿದೆ ಎಂದು ದಕ್ಷಿಣ ಮದ್ಯೆ ರೈಲ್ವೆ ವಿಭಾಗ [SCR] ತಿಳಿಸಿದೆ
• ಇಂಧನ ಕ್ಷಮತೆಗಾಗಿ 1321 ವಿದ್ಯುತ್ ಬಲ್ಬಗಳನ್ನು ಬದಲಿಸಿ, LED ಬಲ್ಬಗಳನ್ನು ಅಳವಡಿಸಲಾಗಿದೆ.
6.ಚಾರು ಕೀರ್ತಿ ಭಟ್ಟಾಚಾರ್ಯರಿಗೆ:ಮಹಾವೀರ ಶಾಂತಿ ಪ್ರಶಸ್ತಿ
• ಶ್ರವಣಬೆಳಗೊಳದ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 2017 ನೆ ಸಾಲಿನ ಮಹಾವೀರ ಶಾಂತಿ ರಾಷ್ಟೀಯ ಪ್ರಶಸ್ತಿ ದೊರೆತಿದೆ.
• ೧೦ ಲಕ್ಷ ನಗದು ಪುರಸ್ಕಾರ ಹೊಂದಿದೆ.
• ಸಾಹಿತಿ ಜಿನದತ್ತ ದೇಸಾಯಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಸ್ವಾಮೀಜಿಯವರನ್ನು ಆಯ್ಕೆ ಮಾಡಿದೆ.
• ಮಹಾವೀರ ಜಯಂತಿಯ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.