ರೈತರ ಆತ್ಮಹತ್ಯೆಗೆ ಕಾರಣಗಳು & ಪರಿಹಾರೋಪಾಯಗಳು
ರೈತ ನಮ್ಮ ದೇಶದ ಬೆನ್ನುಲುಬು ರೈತ ಸಮುದಾಯ ನಮ್ಮ ಸಂಸ್ಕೃತಿ ಕಲೆ & ಜಾನಪದ ಸಾಹಿತ್ಯದ ಪ್ರತೀಕ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬುದು ಕೃಷಿಯ ಶ್ರೇಷ್ಠತೆಯನ್ನು ಸಾರುತ್ತದೆ. ಇಂದಿಗೂ ಶೇ.55 ರಷ್ಟು ಜನ ಕೃಷಿಯನ್ನೆ ಅವಲಂಬಿಸಿದ್ದಾರೆ ಆದರೆ ಹಲವಾರು ಕಾರಣಗಳಿಂದ ಇತ್ತಿಚಿನ ವರ್ಷಗಳಲ್ಲಿ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ, ಆರ್ಥಿಕ ನಷ್ಟವನ್ನು ಸಹಿಸಿಕೊಳ್ಳಲಾಗಿದೆ ಸಾಲದ ಹೊರೆಯಿಂದ ಹೊರ ಬರಲಾಗದೆ ಸಾವಿರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಸಾಮಾಜಿಕ ಪರಿಸರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಗಮನ ಸೆಳೆದಿರುವ ಸಮಸ್ಯೆಯೆಂದರೆ ರೈತರ ಆತ್ಮಹತ್ಯೆಯ ಪ್ರಕರಣಗಳು ರೈತರ ಆತ್ಮಹತ್ಯೆ ಪ್ರಕರಣಗಳು ಎಷ್ಟು ತೀವ್ರವಾಗಿವೆಂದರೆ 1997ರಿಂದ 2005ರ ಅವಧಿ ಸರಾಸರಿ 32 ನಿಮಿಷಕ್ಕೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ರೈತರ ಆತ್ಮ ಹತ್ಯೆ ಸಂಭವಿಸಿರುವುದು ಮಹಾರಾಷ್ಟ್ರದಲ್ಲಿ, ಆದರೆ ಮಹಾರಾಷ್ಟ್ರವನ್ನು ‘ರೈತರ ಸ್ಮಶಾನ ಭೂಮಿ’ ಎಂದು ಕರೆಯುತ್ತಾರೆ.
ಕರ್ನಾಟಕ ರಾಜ್ಯದಲ್ಲಿ 2010ರಲ್ಲಿ 140, 2011ರಲ್ಲಿ 170 2012ರಲ್ಲಿ 200 ಇತ್ತೀಚಿಗೆ ಅಂದರೆ 2015ರಲ್ಲಿ 300ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಹೀಗೆ ವರ್ಷದಿಂದ ವರ್ಷಕ್ಕೆ ಏರುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿದರೆ ಹಲವಾರು ಕಾರಣಗಳು ಎದ್ದು ಕಾಣುತ್ತವೆ.
ರೈತರ ಆತ್ಮಹತ್ಯೆಗೆ ಕಾರಣಗಳು:
ಜಾಗತೀಕರಣ ಉದಾರಿಕರಣ & ಖಾಸಗಿಕರಣದಿಂದ ಕೃಷಿ ವಲಯದ ಪ್ರಗತಿ ಇತ್ತೀಚಿನ ದಿನಗಳ ಬಹಳ ಇಳಿಮುಖವಾಗಿದೆ. ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟದ ಸ್ಥಿತಿಯು ಮುಂದುವರೆಯುತ್ತಿದ್ದಾರೆ.
ಸಾಲದ ಹೊರೆ:
ರೈತರು ಇಂದು ಸಹಕಾರಿ , ವಾಣಿಜ್ಯ ಬ್ಯಾಂಕುಗಳಿಂದ ಖಾಸಗಿ ಲೇವಾದೇವಿಯವರ ಸಂಘದಿಂದ ಗರಿಷ್ಟ ಬಡ್ಡಿದರದಲ್ಲಿ ಹಣ ಪಡೆದು ಅದನ್ನು ತೀರಿಸಲಾಗದೇ ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಬೆಲೆ ಕುಸಿತ:
ಕೃಷಿ ಆಮದಿನ ಮೇಲಿನ ನಿರ್ಬಂದ ರದ್ದಾಗಿದ್ದು ದೇಶಿಯ ರೈತರು ಸಬ್ಸಿಡಿ ಬೆಂಬಲಿತ ಅಂತರಾಷ್ಟ್ರೀಯ ಕೃಷಿಯ ಉತ್ಪನ್ನಗೊಳೊಂದಿಗೆ ಸ್ಪರ್ದಿಸಲಾಗದಿರುವುದು.
ಅತಿವೃಷ್ಠಿ & ಅನಾವೃಷ್ಠಿ:
ಪ್ರಕೃತಿಯ ಮುಂದೆ ರೈತರು ಕಂಗಾಲಾಗಿದ್ದರೆ ಸರಿಯಾದ ವೇಳೆಗೆ ಮಳೆಬಾರದೆ ಬೆಳೆದು ಬೆಳೆಗಳು ಕೈಗೆ ಸಿಗದೆ ನಾಶವಾಗುತ್ತಿದ್ದರೆ ಇನ್ನೊಂದು ಕಡೆ ಬಿರುಗಾಳಿ, ಚಂಡಮಾರುತ, ಪ್ರವಾಹ ಮುಂತಾದವುಗಳಿಂದ ರೈತ ಬೆಳೆದ ಬೆಳೆಗಳು ನೀರಿನ ಪಾಲಾಗುತ್ತಿವೆ. ಇದರಿಂದ ಜೀವನದಲ್ಲಿ ಬೇಸತ್ತು ಸಾವಿಗೆ ಶರಣಾಗುತ್ತಿದ್ದಾರೆ.
ದುಬಾರಿ ಪರಕರಗಳು:
ರಸಗೊಬ್ಬರ, ಕೀಟನಾಶಕ, ಕೃಷಿ ಸಂರಕ್ಷಣೆ, ವಿದ್ಯುತ್, ನೀರು ಕೃಷಿಗೆ ಅಗತ್ಯ ಸರಕಾರ ಇವುಗಳ ಮೇಲಿನ ಸಹಾಯಧನ ಕಚಿತಗೊಂಡಿರುವುದು.
ಅಸ್ಥಿರ ಮಾರುಕಟ್ಟೆ :
ರೈತರಲ್ಲಿನ ಅಜ್ಞಾನ, ಮದುವೆ ಜಾತ್ರೆಗಳಿಗಾಗಿ ಮಿತಿಮೀರಿದ ವೆಚ್ಚ ಇತ್ಯಾದಿಯಿಂದಾಗಿ ರೈತರು ಆಗಾಗ ಸಾವಿನ ಸುಳಿಗೆ ಸಿಲುಕುತ್ತಾರೆ & ಅದರಿಂದ ಹೊರಬರಲಾಗದೆ ಆತ್ಮಹತ್ಯೆಗೆ ಶರಣಾಗುತ್ತಾರೆ.ಇವುಗಳ ಜೊತೆಯಲ್ಲಿಯೇ ಬೇರೆ ಬೇರೆ ಕಾರಣಗಳಿಂದಲೂ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ.
ರೈತರ ಆತ್ಮಹತ್ಯೆ ತಡೆಗಟ್ಟಲು ಕ್ರಮಗಳು :
• ಭಾರತೀಯ ಕೃಷಿಕರು ಹೆಚ್ಚು ಪಾಲು ಮಳೆ ಆಧಾರಿತ ಬೇಸಾಯ ಮಾಡುವುದರಿಂದ ಒಣ & ಅರೆ ಒಣ ಪ್ರದೇಶಗಳಲ್ಲಿ ನೀರಿನ ತೇವಾಂಶ ರಕ್ಷಣೆ ಮಾಡಬೇಕು.
• ರೈತರ ಭೂಮಿಯಲ್ಲಿ ಯಾವುದಾದರೂ ದೋಷಗಳಿದ್ದರೆ ನುರಿತ ಕೃಷಿ ತಜ್ಞರಿಂದ ಪರೀಕ್ಷೆಗೊಳಪಡಿಸಿ ಸೂಕ್ತ ಸಲಹೆಗಳನ್ನು ಕೊಡುವಂತೆ ಮಾಡಬೇಕು.
• ರೈತರಿಗೆ ಕೃಷಿ ಸಾಲ, ಸಾಂಸ್ಥಿಕ ಸಾಲ ಇಂತಹ ಅನೇಕ ಸೌಲಭ್ಯಗಳನ್ನು ಒದಗಿಸಿ ಬಡ್ಡಿದರ ಕಡಿತಗೊಳಿಸಬೇಕು
• ರೈತರು ಬೆಳೆದ ಬೆಳೆಗಳ ಮೇಲೆ ಬೆಳೆ ವಿಮೆ ಮಾಡಿಸಬೇಕು
• ರಾಷ್ಟ್ರದಲ್ಲಿ ಡಾ. ಸ್ವಾಮಿನಾಥನ್ ನೇತೃತ್ವ ಸಮಿತಿಯ ಶಿಫಾರಸ್ಸುಗಳು ಜಾರಿಯಾಗುವಂತೆ ನೋಡಿಕೊಳ್ಳುವುದು.
• ಕೆಲಸವಿಲ್ಲದ ರೈತರಿಗೆ ಮಹಾತ್ಮಾ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಒದಗಿಸಬೇಕು
• ರೈತರು ಬೆಳೆದ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸುವುದರ ಜೊತೆಗೆ ರೈತರ ಎಲ್ಲ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿ ಸರ್ಕಾರವೇ ಮಾರುಕಟ್ಟೆಗೆ ಪ್ರವೇಶಿಸಿ ಖರೀದಿ ಮಾಡಬೇಕು.
• ಕೃಷಿ ಕೂಲಿಕಾರರಿಗೆ ಕೆಲಸದ ಭದ್ರತೆ ಕನಿಷ್ಠ ವೇತನ & ಸಾಮಾಜಿಕ ಭದ್ರತೆಯನ್ನು ರೂಪಿಸುವ ಶಾಸನಗಳನ್ನು ರೂಪಿಸಬೇಕು.
• ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ರೈತಗಲ್ಲಿನ ಅಜ್ಞಾನ & ದುಶ್ಚಟಗಳನ್ನು ತೊಲಗಿಸಲು ಕ್ರಮ ಕೈಗೊಳ್ಳಬೇಕು.
• ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಸಾವಯವ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ರೈತರನ್ನು ಪ್ರೇರಿಪಿಸಬೇಕು
ರೈತರ ಆತ್ಮಹತ್ಯೆಗೆ ಕಾರಣಗಳು, ಪರಿಹಾರಗಳು
“ಒಕ್ಕಲಿಗ ಒಕ್ಕದಿದ್ದರೆ ಜಗವೆಲ್ಲಾ ಬಿಕ್ಕುವುದು” ಇಲ್ಲಿ ಒಕ್ಕಲಿಗನೆಂದರೆ ರೈತರಾಗಿದ್ದು, ಆದರೆ ಈಗ ಇದೇ ಗಾದೆ ಮಾತು ಬದಲಾಗಿದ್ದು, ‘ಒಕ್ಕಲಿಗ ಬಿಕ್ಕುವಾಗ ಜಗವೆಲ್ಲಾ ಬಿಕ್ಕಿತೆ’ ಎಂಬ ಸಾಲು, ಸಾಲು - ಸಾಲು ರೈತ ಆತ್ಮಹತ್ಯೆಯಂತಹ ಘಟನೆಗಳು ಜರುಗುತ್ತಿರುವುದು ನೋಡಿದರೆ ಈ ಭಾವನೆ ಬರದೆ ಇರದು.
ಒಂದು ಕಾಲದಲ್ಲಿ ಲಾಲ್ಬಹದ್ದೂರ್ ಶಾಸ್ತ್ರೀಯವರು ‘ಜೈಜವಾನ್ ಜೈಕಿಸಾನ್’ ಎಂದು ರೈತರೇ ದೇಶದ ಬೆನ್ನೆಲುಬು ಎಂಬ ಸಂದೇಶ ಬಿತ್ತಿದ್ದರು. ಆದರೆ ಇಂತಹ ಸಂದೇಶದ ಕೊರತೆ ಕಾಣುತ್ತಿದೆಯೋ? ಎಂಬಂತ್ತೆ ಭಾಸವಾಗುತ್ತದೆ.
ರೈತರ ಆತ್ಮಹತ್ಯೆಗೆ ಪರಿಹಾರದ ಕುರಿತು ಮಾತನಾಡುವ ಮೊದಲು ಅದರ ಮೂಲ. ರೈತರ ಆತ್ಮಹತ್ಯೆಗೆ ಕಾರಣಗಳಾವುವು? ಅವು ಸಾಮಾಜಿಕವೇ? ಆರ್ಥಿಕವೇ? ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ? ಉತ್ಪಾದನೆಯ ಖರ್ಚು ಪಡೆಯುವ ಬೆಲೆಯ ವ್ಯತ್ಯಾಸವೇ? ಈ ಎಲ್ಲಾ ಮಗ್ಗಲುಗಳಿಂದ ವಿಚಾರಿಸಿದಾಗ ನಮಗೆ ಪರಿಹಾರದ ಹಾದಿ ಸುಲಭವಾಗುತ್ತದೆ.
ಗ್ರಾಮಜೀವನದ ಕೌಟುಂಬಿಕ ಸಂಕೀರ್ಣ ವ್ಯವಸ್ಥೆಯಲ್ಲಿ ಬದುಕುತ್ತಿರುವ ರೈತರ ಜೀವನವೆಂದರೆ ಕೇವಲ ಕೃಷಿ ಅಷ್ಟೇ ಎಂದು ಭಾವಿಸಿದಂತೆ ನಮ್ಮ ವ್ಯವಸ್ಥೆ, ಇದರಾಚೆಗೂ ಆತನಿಗೆ ಕೌಟುಂಬಿಕ ಒತ್ತಡ, ಮಕ್ಕಳ ಮದುವೆ, ಆರೋಗ್ಯ ಸಾಮಾಜಿಕ ಜವಾಬ್ಧಾರಿಗಳ ನಿಭಾಯಿಸುವಲ್ಲಿಯ ಒಂದು ವೈಪಲ್ಯದ ಭಾಗವು ಆತ್ಮಹತ್ಯೆಗೆ ಒಂದು ಕಾರಣವಾಗಬಹುದು.
ಇದೇ ತೆರನಾಗಿ ಕೃಷಿಕತೆಯೇ ಜೀವನದ ಉಸಿರಾಗಿಸಿಕೊಂಡಿರುವ ರೈತ ‘ಮಳೆ ಇಲ್ಲವೇ ಸಾವು’ ಎಂಬತಾಗಿದೆ. ಮಳೆಯೂ ಕೂಡ ರೈತನೊಂದಿಗೆ ಜೂಟಾಟ ಆಡುತ್ತದೆ. ಹಾಕಿದ ಬಂಡವಾಳದ ಅರ್ಧದಷ್ಟು ದೊರಕದಿದ್ದರೆ, ರೈತನಿಗಿರುವ ದಾರಿ ಅತ್ಮಹತ್ಯೆಯೊಂದೆ ಎಂದು ಆತ ಭಾವಿಸಿರುವತಿದೆ.
ಕೃಷ್ಟಪಟ್ಟು ಬೆಳೆದ ಬೆಳೆಗೆ ಲಾಭಸಹಿತ ಆದಾಯ ಬಂದರೆ ಒಬ್ಬ ರೈತನು ಸಾವಿನಂತಹ ಅಚಿತಿಮ ಯೋಚನೆ ಮಾಡಲಾರ, ಆದರೆ ಅದು ಈಗಿನ ವ್ಯವಸ್ಥೆಯಲ್ಲಿ ಸಾಧ್ಯವೇ? ಸಾಧ್ಯವೆಂದು ರೈತರಲ್ಲಿ ಭರವಸೆ ಮೂಡಿಸುವ ಕೆಲಸಗಳಾಗುತ್ತಿಲ್ಲ.
ರಾಜಕೀಯ ಇಚ್ಛಾಶಕ್ತಿಯ ಕೊರತೆ ರೈತರ ಜೀವನದ ಜೊತೆ ಜೂಟಾಟವಾಡುತ್ತಿದೆ ಎಂದು ಹಲವಾರು ರೈತ ಸಂಘಟನೆಗಳು ಆಲೋಚಿಸಿವೆ, ಉದಾಹರಣೆಗೆ ವಿವರಿಸುವುದಾದರೆ, ಪ್ರಜಾಪ್ರಭುತ್ವದ ದೇವಾಲಯದಂತಿರುವ ಶಾಸಕಾಂಗದ ಅಧಿವೇಶನದಲ್ಲಿಯೇ ರೈತರು ಬೆಳೆದ ಪ್ರತಿ ಟನ್ ಕಬ್ಬಿಗೆಎ 2,500/- ಕೊಡಿಸುತ್ತೇವೆ ಎಂದು ಭರವಸೆ ನೀಡಿದ ಸರ್ಕಾರಕ್ಕೆ ಇದು ಒಂದೇ ಭರವಸೆಗೆ ವರ್ಷವಾದರೂ ಸಾಧ್ಯವಾಗಿಲ್ಲವೆಂದಾದರೆ ಇಂತಹ ರಾಜಕೀಯ ಇಚ್ಛಾಶಕ್ತಿ ಕೊರತೆಯು ಕೂಡ ರೈತರ ಆತ್ಮಹತ್ಯೆಗೆ ಒಂದು ಕಾರಣವಾಗಿದೆ.
2011 ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸರಾಸರಿ 32 ನಿಮಿಷಕ್ಕೊಂದರಂತೆ, ಅಂದರೆ ಪ್ರತಿದಿನ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಅಪರಾಧ ಬ್ಯೂರೋದ 2014ನೇ ಸಾಲಿನ ವರದಿಯ ಪ್ರಕಾರ ದೇಶದಾದ್ಯಂತ 5650 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಮಹಾರಾಷ್ಟ್ರದಲ್ಲಿ 2568 ಜನ ರೈತರು ಹಾಗೂ ಕರ್ನಾಟಕಲ್ಲಿ 321 ಜನ ರೈತರು.
ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶ, ಕ್ರಮವಾಗಿ 3 ಸ್ಥಾನದಲ್ಲಿವೆ. ವರದಿಯ ಪ್ರಕಾರ ಒಟ್ಟಾರೆ ರೈತರ ಸಾವಿನ ಸಂಖ್ಯೆ ಕರ್ನಾಟಕದಲ್ಲಿ 5.1% ರಷ್ಟಿದೆ.
ರೈತರ ಆತ್ಮಹತ್ಯೆಗೆ ಕಾರಣಗಳು:
1. ತೀವ್ರ ಆರ್ಥಿಕ ಕುಸಿತ
2. ಭರವಸೆ / ಭವಿಷ್ಯವಿಲ್ಲದ ಸ್ಥಿತಿಗತಿಗಳು
3. ಮಾದಕ ದ್ರವ್ಯಗಳ ವ್ಯೆಸನ
4. ಸಮಾಜ ಮತ್ತು ಸಂಸಾರಗಳಿಂದ ತಿರಸ್ಕೃತ
5. ಪ್ರಚಾರ ಮಾಧ್ಯಮಗಳಿಂದ ಪ್ರಚೋದನೆ
6. ದುರ್ಬಲ ಮನಸ್ಸಿನವರು / ಆತ್ಮಸ್ಥೈರ್ಯ ಕಳೆದುಕೊಂಡವರು
7. ಜೀವನದಲ್ಲಿ ನಿರಾಶೆ/ ನಿರುತ್ಸಾಹದ ಜೀವನ
8. ಸಾಂಕ್ರಾಮಿಕ ರೋಗರುಜಿನಗಳು
ಆತ್ಮಹತ್ಯೆಗೆ ಮೂನ್ಸೂಚನೆಗಳು
1. ವ್ಯವಹಾರದ ಲೆಕ್ಕಪತ್ರಗಳನ್ನು ಮಾಡಲಾರಂಭಿಸುವುದು
2. ದಿಢೀರನೆ ವಿಲ್ ಬರೆಯಲು ಯೋಚಿಸುವುದು
3. ಸ್ನೇಹಿತರನ್ನು ಬಂಧು-ಭಾಂದವರನ್ನು ಬೇಟಿ ಮಾಡಲಾರಂಭಿಸುವುದು
4. ಹೆಂಡತಿ ಮಕ್ಕಳ ಬಗ್ಗೆ ವಿಶೇಷವಾಗಿ ಕಾಳಜಿ /ಪ್ರೀತಿಸುವುದು.
5. ವೈರಿಗಳೊಂದಿಗೆ ರಾಜೀಮಾಡಿ ಮಾತನಾಡಿಸುವುದು
6. ಏಕಾಂಗಿಯಾಗಿ ವಿಚಾರಿಸುತ್ತಾ ಕುಳಿತುಕೊಳ್ಳುವುದು
7. ಅತೀಯಾಗಿ ಸಿಟ್ಟಿಗೆ ಬರುವುದು / ಮೌನಿಯಾಗುವುದು
8. ದೈನಂದಿನ ನಡೆನುಡಿಗಳಲ್ಲಿ ಭಿನ್ನತೆ ಕಂಡುಬರುವುದು
ಅಲ್ಫಾವಧಿಯ ಪರಿಹಾರಗಳು
ಭಾರತೀಯ ರೈತರ ಹತ್ತಿರದ ಸಂಬಂಧಿಯೆಂದರೆ ಸಾಲ ಎಂಬ ವ್ಯೆಂಗೋಕ್ತಿ ಇದೆ. ತಾತ್ಕಾಲಿಕ ಪರಿಹಾರವಾಗಿ ಸಾಲ ಮರುಪಾವತಿಗಾಗಿ ಹೆಚ್ಚಿನ ಸಮಯ ಒದಗಿಸುವುದು ಹಾಗೂ ಬಡ್ಡಿ ಮನ್ನಾದಂತಹ ಧೈರ್ಯ ತುಂಬುವ ತಂತ್ರಗಳಿರಬೇಕು ಆದರೆ ಈ ಬಡ್ಡಿ ಮನ್ನಾ, ಸಾಲ ಮನ್ನಾಗಳೇ ಖಾಯಂ ಯೋಜನೆಗಳಾಗಬಾರದು.
ತುರ್ತಾಗಿ ಶಾಸಕರು ಮತ್ತು ಸಂಸದರ ನಿಧಿಯಿಂದ ರೈತರಿಗೆ ಧನಸಹಾಯ ಹಾಗೂ ಸಾಮಥ್ರ್ಯ ಅಭಿವೃದ್ಧಿಯಂತಹ ವಿವಿಧ ಚಟುವಟಿಕೆ ಹಮ್ಮಿಕೊಳ್ಳುವುದು, ಸಾಕಷ್ಟು ರೈತರು ತಮ್ಮ ಜೀವದ ಅಂದರೆ ಬದುಕುವ ಕೊನೆ ಆಸೆ ಕಳೆದುಕೊಳ್ಳುವುದು ಬೆಳೆ ನಷ್ಟವಾದಾಗ ಇಂತಹ ಸಂಧರ್ಭದಲ್ಲಿ ಬೆಳೆ ಪರಿಹಾರ, ಬೆಂಬಲ ಬೆಲೆ ಘೋಷಿಸಿ ಪ್ರತಿ ತಾಲ್ಲೂಕು, ಹೋಬಳಿಗಳಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಮಾಧ್ಯಮ ಸಂಘ-ಸಂಸ್ಥೆಗಳು, ರೈತ ಸಂಘಟನೆಗಳು ಸಹಾಯ ಪಡೆದು ಇಡೀ ಸರ್ಕಾರ, ಸಮಾಜ ಎಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂಬ ಭಾವನೆ ಮೂಡಿಸುವಂತಹ ಬೀದಿನಾಟಕ, ಜನಜಾಗುತಿ ಕಾರ್ಯಕ್ರಮ, ರೈತ ಸಂವಾದ ಏರ್ಪಡಿಸಿ ಆತ್ಮಸ್ಥೈರ್ಯ ತುಂಬಬೇಕು.
“ದೀರ್ಘಾವಧಿಯ ಪರಿಹಾರಗಳು”
ಇಂತಹ ಪರಿಹಾರಗಳು ರೈತರಿಗೆ ಆರಂಭದಲ್ಲಿ ಗೋಚರಿಸದಿದ್ದರೂ ಅದರ ಫಲ ಮುಂದೊಂದು ದಿನ ಆತ್ಮರಹಿತ ರಾಜ್ಯವಾಗಿಸಲು ಸಹಾಯಕವಾಗುತ್ತದೆ ಎಂಬ ತತ್ವದ ಮೇಲೆ.
ಕೃಷಿಗೆ ಅವಶ್ಯವಿರುವ ಕಾರ್ಪೋರೇಟ್ ಸಂಸ್ಥೆಗಳಲ್ಲಿರುವಂತಹ ‘ಸಮಗ್ರ ಕೃಷಿ ಸಾಲ ನೀತಿ ರೂಪಿಸಬೇಕು’ಈ ನೀತಿಯ ಮೂಲಕ ಸಾಲ ವ್ಯವಸ್ಥೆಯನ್ನು ಪುನರ್ ರಚಿಸಬೇಕು.
ಸಾಧ್ಯವಾದರೆ ರಾಜ್ಯದ ಆರ್ಥಿಕ ಸ್ಥಿತಿಗತಿ ಪರಿಗಣಿಸಿ ಅರ್ಹರಿರುವ ಅವಶ್ಯಕತೆಯಿರುವ ರೈತರಿಗೆ ಬಡ್ಡಿ ರಹಿತ ಸಾಲ ಒದಗಿಸುವಂತಹ ಯೋಜನೆಗಳನ್ನು ಜಾರಿಗೆ ತರಬೇಕು. ಕೃಷಿ ಬೆಲೆ ಆಯೋಗವನ್ನು ರಚಿಸಿ ಅದನ್ನು ಉತ್ಸವಮೂರ್ತಿಯನ್ನಾಗಿಸದೇ ನೈಜ ಅಧಿಕಾರ ಒದಗಿಸಿ ಬೆಲೆ ನಿರ್ಧರಿಸುವಂತಹ ಗುರುತರ ಜವಾಬ್ಧಾರಿ ಕೊಡಬೇಕು.
ಬಹುತೇಕ ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದರಿಂದ ‘ಉತ್ಪಾದನೆ ವೆಚ್ಚ ಹೆಚ್ಚಾಗಿ’ ಆತ್ಮಹತ್ಯೆ ದಾರಿ ಕಂಡುಕೊಂಡಿದ್ದು ಅದಕ್ಕಾಗಿ ಸಾಂಪ್ರದಾಯಿಕ ವಾಣಿಜ್ಯ ಬೆಳೆಗಳ ಸಮ್ಮೀಶ್ರ ಬೆಳೆ ಪದ್ದತಿಗೆ ರೈತರ ಮನವೊಲಿಸಬೇಕು. ಖಾಸಗಿ ಲೇವಾದೇವಿಗಾರರ ಶೋಷಣೆ ತಪ್ಪಿಸಲು ಈ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು. ವಾಣಿಜ್ಯ ಬೆಳೆಗಳ ವ್ಯಾಮೋಹದಿಂದ ಅತೀಯಾದ ನೀರಾವರಿ ಬೇಡುವ ಕಬ್ಬಿನಂಥ ಬೆಳೆಗಳಿಗೆ ಬೊರ್‍ವೆಲ್ ಆಶ್ರಯಿಸುವುದರಿಂದ ಬೋರ್‍ವೆಲ್ ಕೊರೆಯಿಸುವ ಸಾಲವೇ ನಮ್ಮ ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿದೆ.
ರೈತರ ವೈಯಕ್ತಿಕ ಬದುಕು ಚಟ, ಕೌಟುಂಬಿಕ ಖರ್ಚು ಕೂಡ ಆತ್ಮಹತ್ಯೆಗೆ ಕಾರಣಗಳೆಂದು ದೊಡ್ಡದಾಗಿ ಬಿಂಬಿಸುವ ಕಾರಣವಿಲ್ಲವಾಗಿದ್ದು ಅಂದ ಮಾತ್ರಕ್ಕೆ ಇದರಲ್ಲಿ ಸತ್ಯಾಂಶವಿಲ್ಲವೆಂದಲ್ಲ ಅದೇ ಬಹುತೇಕ ಆತ್ಮಹತ್ಯೆಗಳು ಇದರಾಚೆಯ ಕಾರಣಗಳಾಗಿರುತ್ತವೆ.
ಇಂತಹ ಸಂಕೀರ್ಣ ಕಾರಣಗಳಿಂದ ರೈತರ ಆತ್ಮಹತ್ಯೆ ನಡೆಯುತ್ತಿದೆ. ಇದಕ್ಕೆ ಒಂದೇ ಕಾರಣ, ಒಂದೇ ನೀತಿ, ಸರ್ಕಾರ, ಕೌಟುಂಬಿಕ ಜೀವನ ಎಂದು ಒಂದೇ ಕಾರಣ ಎನ್ನುವುದು ಸರಿಯಲ್ಲ.
ಪರಿಹಾರೋಪಾಯಗಳು
1. ಆರ್ಥಿಕ ಭದ್ರತೆ ಮತ್ತು ಸೌಲಭ್ಯಗಳನ್ನು ಒದಗಿಸುವುದು ರೈತರಿಗೆ ನೇರವಾಗಿ ಆಪತ್ಕಾಲಿನ ಸಂದರ್ಭದಲ್ಲಿ ವಿವಿಧ ಹಣಕಾಸಿನ ಸಂಸ್ಥೆಗಳ ಮೂಲಕ ಧಾರಳವಾಗಿ ನೆರವು ನೀಡುವುದು.
2. ಸಾಲ ಸೌಲಭ್ಯಗಳನ್ನು ಒದಗಿಸುವ ಎಲ್ಲಾ ಹಣಕಾಸು ಸಂಸ್ಥೆಗಳ ಮೇಲೆ ಸೂಕ್ತ ಕಾನೂನಿನ ಕ್ರಮಗಳನ್ನು ಕೈಗೊಳ್ಳುವುದು.
3. ಬೆಂಬಲ ಬೆಲೆಯನ್ನು ಘೋಷಿಸುವುದು.
4. ನೀರಾವರಿ, ವಿದ್ಯುತ್, ಬೀಜಗಳು, ರಸಗೊಬ್ಬರ ಮತ್ತು ಕೃಷಿ ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ಪೂರೈಸುವುದು.
5. ರೈತ ಸಂಪರ್ಕ ಕೇಂದ್ರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು.
6. ಮನ:ಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ಆಪ್ತ ಸಲಹಾ ತಜ್ಞರಿಂದ ಸೂಕ್ತ ಮಾಹಿತಿ ಮತ್ತು ತರಬೇತಿಯನ್ನು ಕೊಡಿಸುವುದು.
7. ಅಭಿಯಾನವನ್ನು ಹಮ್ಮಿಕೊಂಡು ರೈತರಲ್ಲಿ ಆತ್ಮಸ್ಥೈರ್ಯ, ವೈಕ್ತಿಕ ವಿಕಸನ, ವಿಪತ್ತು ನಿರ್ವಹಣೆ ಮಾಹಿತಿ ನೀಡುವುದು.
8. ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಆಪ್ತ ಸಲಹೆಗಳನ್ನು ಒಂದು ಪಠ್ಯ ವಿಷಯವನ್ನಾಗಿ ಮಾಡಿ ವಿದ್ಯಾರ್ಥಿಗಳಿಗೆ ಭೋದಿಸುವುದು.
9. ರೈತ ಸಂಘಗಳ ಪಾತ್ರವನ್ನು ಹೆಚ್ಚಿಸುವುದು ಮತ್ತು ಕ್ರಿಯಾಶೀಲಗೊಳಿಸುವುದು.
10. ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಶಿಸ್ತು ಬದ್ಧ ಮತ್ತು ಸೃಜನಾತ್ಮಹ ನಿರ್ವಹಣಾ ಕೌಶಲ್ಯಗಳನ್ನು ತಿಳಿಸಿಕೊಡುವುದು.
11. ಚುನಾಯಿತ ಸದಸ್ಯರುಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ರೈತವರ್ಗದವರೊಂದಿಗೆ ನಿಕಟವಾದ ನಿರಂತರ ಸಂಪರ್ಕ ಹೊಂದಿ ಅವರಿಗೆ ಮಾಹಿತಿ ಮತ್ತು ತರಬೇತಿ ನೀಡುವುದು.
12. ಸಾರ್ವಜನಿಕರು ಮತ್ತು ಮಾಧ್ಯಮಗಳು ರೈತರನ್ನು ಸ್ವಾವಲಂಬಿ, ಶಿಸ್ತುಬದ್ಧ, ದೈರ್ಯಶಾಲಿಯಾಗಿ ಆತ್ಮಸ್ಥೈರ್ಯದಿಂದ ಜೀವನ ಸಾಗಿಸುವಂತೆ ಚಿಂತನೆ, ಪ್ರಚೋದನೆ ಪ್ರಕರಣಗಳನ್ನು ವ್ಯಕ್ತಪಡಿಸುವುದು.
13. ಬಹುತೇಕ ಆತ್ಮಹತ್ಯೆಯ ಪ್ರಕರಣಗಳಿಗೆ ಕಾರಣವಾದ ಖಾಸಗಿ ಲೇವಾದೇವಿಗಾರರು ರೈತರಿಗೆ ಯಮ ಸ್ವರೂಪಿಯಾಗಿದ್ದಾರೆ, ಇವರ ಮೇಲೆ ಕಠಿಣ ಕ್ರಮಗಳನ್ನು ಜರುಗಿಸುವುದು.
14. ಸಾಲ ಮರುಪಾವತಿಗೆ ನಿರಂತರ ನಿರಂತರ ಒತ್ತಾಯ, ದೌರ್ಜನ್ಯ, ಬೆದರಿಕೆ, ಹಿಂಸೆ ನೀಡುವುದರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳುವುದು.
15. ಕೀಟನಾಶಕ, ನಕಲಿ ಬೀಜ, ಗೊಬ್ಬರಗಳಿಗೆ ಪರಿಹಾರವಾಗಿ ಸಾವಯವ ಕೃಷಿಗೆ ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಸರ್ಕಾರವು ಯಶಸ್ವಿಯಾಗಿದ್ದು, ಈ ಸಾವಯವ ಪದ್ದತಿಯನ್ನು ದೇಶಾದ್ಯಂತ ವಿಸ್ತರಿಸಬೇಕು.
16. ನೀರಾವರಿಯಂತ ಧೀರ್ಘಾವಧಿ, ಸುಧೀರ್ಘ ಅವಧಿಯ ಯೋಜನೆಯೊಂದಿಗೆ ಏಕ ನೀರಾವರಿ, ಹನಿ ನೀರಾವರಿಯಂತಹ ಯೋಜನೆಗಳೇ ರೈತರ ಆತ್ಮಹತ್ಯೆಗೆ ರಾಮಬಾಣ.
17. ಮಾರುಕಟ್ಟೆ ವ್ಯವಸ್ಥೆಯು ರೈತರನ್ನು ಶೋಷಿಸುವ ಕೇಂದ್ರಗಳಾಗಿವೆ ಎಂಬ ರೈತರ ಮನಸ್ಥಿತಿಯಲ್ಲಿ ಪರಿವರ್ತನೆ ತರಲು ಅಲ್ಲಿಯ ವಂಚನೆ, ತೂಕ ಅಳತೆಯ ಮೋಸ ತಡೆಗಟ್ಟಿ ‘ಆನ್‍ಲೈನ್’ ವ್ಯವಸ್ಥೆಯ ಮೂಲಕ ಮಾರುಕಟ್ಟೆಯನ್ನು ರೈತ ಸ್ನೇಹಿಯಾಗಿಸುವುದು.
18. ರೈತ ಗುಂಪು ಕೇಂದ್ರಗಳ ಸುತ್ತ ‘ಶೈತ್ಯಾಗಾರಗಳು’ ಪುಡ್‍ಪಾರ್ಕ್ ಉತ್ತಮ ಸಾರಿಗೆ ವ್ಯವಸ್ಥೆಯಂತಹ ತಂತ್ರಗಳ ಮೂಲಕ ಬೆಳೆದ ಬೆಳೆಗೆ ಯೋಗ್ಯ ಬೆಲೆ ಒದಗಿಸುವ ಕೆಲಸಗಳು ಆಗಬೇಕು.
ಈ ರೀತಿಯಾಗಿ ರೈತರ ಆತ್ಮಹತ್ಯೆ ಎಂಬುದು ನಾಗರಿಕ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ, ದೇಶಕ್ಕೆ ಅನ್ನದಾತನಾಗಿರುವ ರೈತರ ಸಾವು ಎಂದರೆ ಅದು ದೇಶದ ಸೋಲು, ಮಂಗಳ ಗ್ರಹಕ್ಕೆ ಚಂದ್ರನಲ್ಲಿಗೆ ಮಾನವನನ್ನು ಕಳುಹಿಸುವ ನಮ್ಮ ದೇಶದಲ್ಲಿ ರೈತರ ಆತ್ಮಹತ್ಯ ತಡೆಯುವ ಕೆಲಸ ಅಸಾಧ್ಯವಾದುದೇನಲ್ಲ. ಇಡೀ ವ್ಯವಸ್ಥೆಯು ಕಂಕಣಬದ್ಧರಾಗುವ ಮೂಲಕ ತಡೆಯಬಹುದು.
‘ರೈತರ ನಷ್ಟಕ್ಕೆ ಪ್ರಮುಖ ಕಾರಣಗಳು’
1. ಬೆಳೆಗಳಿಗೆ ಸರಿಯಾದ ನೀರಿನ ವ್ಯವಸ್ಥೆಯಿಲ್ಲಿದಿದ್ದರೆ ಬೆಳೆಯಲು ಸಾಧ್ಯವಿಲ್ಲ, ಮುಂಗಾರಿನ ಆಟ ತಪ್ಪಿಸಬೇಕು.
2. ನದಿಗಳ ಜೋಡಣೆ, ಕೆರೆಗಳ ನಿರ್ಮಾಣ ಕಾರ್ಯ ಮಾಡಬೇಕು. ಅಂತರ್ಜಲದ ಮಟ್ಟವು ಕೆಳಗಿಳಿದು ನೀರು ಲವಣಯುಕ್ತವಾಗಿ ನಿರುಪಯುಕ್ತವಾಗಿದೆ, ಜಲ ಮರು ಹಾಗೂ ನದಿ ಸಂಪರ್ಕ ವ್ಯವಸ್ಥೆ ಕೆರೆಗಳು ಹಾಗೂ ಮಳೆ ನೀರಿನ ನಿರ್ವಹಣೆ ಕಾರ್ಯಕ್ರಮ ರೂಡಿಸಿ ವ್ಯವಸ್ಥಿತವಾಗಿ ನಿರ್ವಹಿಸಬೇಕು.
3. ಸರ್ಕಾರವು ಗಂಗಾ ಕಲ್ಯಾಣ ಯೋಜನೆಯನ್ನು ಅರ್ಹ ಫಲಾಲುಭವಿಗಳಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮದಲ್ಲಿ ಬಾಗಿಯಾಗುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಬೇಕು.
4. ಕಿಸಾನ್ ಟಿ.ವಿ. ಇ-ಮಂಡಿ, ರೈತ ಸಂಪರ್ಕ ಕೇಂದ್ರ ಮಣ್ಣಿನ ಪರೀಕ್ಷೆ ವ್ಯವಸ್ಥೆಯ ಉಪಯೋಗ ಎಲ್ಲ ರೈತರಿಗೆ ಸಿಗುವಂತಾಗಬೇಕು.
5. ಸರ್ಕಾರವು ರೈತರಿಗಾಗಿ ಕೈಗೊಳ್ಳುವ ಕಾರ್ಯಕ್ರಮವು ಜೈ ಜವಾನ್ ಜೈ ಕಿಸಾನ್ ಎನ್ನುವ ಲಾಲ್ ಬಹದ್ದೂರ್ ಶಾಸ್ತ್ರೀಯವರ ಘೋಷಣೆಯಂತೆ ಕೇವಲ ಸಭೆ ಸಮಾರಂಭಗಳಿಗೆ ಮಾತ್ರ ಸೀಮಿತವಾಗಿರದು ಕಟ್ಟ ಕಡೆಯ ರೈತನಿಗೂ ತಲುಪುವಂತಾಗಬೇಕು.
6. ರೈತ ಸಹಾಯವಾಣಿಯಾದ ‘1902’ ಎಲ್ಲ ರೈತರಿಗೂ ಸಿಗುವಂತಾಗಬೇಕು ಹಾಗೂ ಗ್ರಾಮ ಮಟ್ಟದಲ್ಲಿ ಇದರ ಸದುಪಯೋಗದ ಬಗ್ಗೆ ತರಬೇತಿ ನೀಡಬೇಕು.
7. ಪತ್ರಿಕಾ ಪ್ರಚಾರ, ಬೀದಿ ನಾಟಕ, ಮನವಿ, ನಾಟಕ ಮುಂತಾದವುಗಳ ಮುಖಾಂತರ ಆತ್ಮಹತ್ಯೆಯಿಂದಾಗುವ ತೊಂದರೆಗಳನ್ನು ಜನರಿಗೆ ಮನದಟ್ಟಾಗುವಂತೆ ಆತ್ಮಹತ್ಯೆಯು ಸಕಾಲಕ್ಕೆ ಪರಿಹಾರವಲ್ಲ ಎಂದು ರೈತರ ಅರಿವಿಗೆ ಬರುವಂತೆ ಮಾಡಬೇಕು.
8. ಎನ್.ಜಿ.ಓ.ಗಳು, ಸ್ವಯಂ ಸೇವಾ ಸಂಘಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಮುಂತಾದವುಗಳು ಕೃಷಿಯನ್ನು ಪ್ರೋತ್ಸಾಹಿಸಿ, ರೈತರಲ್ಲಿ ಆತ್ಮಸ್ಥೈರ್ಯವನ್ನು ತುಂಬುವಂತಾಗಬೇಕು.
9. ರೈತ ಸಂಘಟನೆಗಳು, ರಾಜಕೀಯ ಪಕ್ಷಗಳು ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡದೆ ರೈತರ ಏಳಿಗೆಗಾಗಿ ಪ್ರಯತ್ನಿಸಬೇಕು.
10. ರೈತರಿಗೆ ಆತ್ಮಹತ್ಯೆಯ ನಂತರ ಪರಿಹಾರ ನೀಡುವುದರ ಬದಲು, ಅವನು ಬದುಕಿರುವಾಗಲೇ ಬಡ್ಡಿ ರಹಿತ ಸಾಲವನ್ನು ಧೀರ್ಘಾವಧಿಗೆ ಪರಿವರ್ತಿಸಬೇಕು.
11. ಕೆ.ಎಮ್.ಎಪ್. ತರಹ ರೈತರ ಬೆಳೆಗಳನ್ನು ಸಹಕಾರಿ ಸಂಘಗಳ ಮುಖಾಂತರ ವಿತರಿಸಿದರೆ, ರೈತರಿಗೆ ಕನಿಷ್ಟ ಬೆಲೆ ಸಿಕ್ಕಿ ದಲ್ಲಾಳಿಗಳ ನಿಯಂತ್ರಣವನ್ನು ತಪ್ಪಿಸಬಹುದು.
12. ರೈತರ ಯೋಜನೆಗಳನ್ನು ಎಸಿ ರೂಮ್‍ನಲ್ಲಿ ಕುಳಿತು ತಯಾರಿಸುವ ಬದಲು ರೈತರಲ್ಲಿಗೆ ಹೋಗಿ ಅವರ ಸಮಸ್ಯೆಗಳನ್ನು ಅರಿತು ಅದಕ್ಕೆ ಸೂಕ್ತ ಪರಿಹಾರವನ್ನು ಒದಗಿಸುವಂತಾಗಬೇಕು.
13. ಇತ್ತೀಚೆಗೆ ಮಾನ್ಯ ವೀರೇಂದ್ರ ಹೆಗ್ಗಡೆಯವರು ‘ಹೆಲ್ತ್‍ಕಾನ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ರೈತರ ಆತ್ಮಹತ್ಯೆಗೆ ಬೆಳೆನಾಶ ಮಾತ್ರವಲ್ಲ ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚವು ಕಾರಣ ಎಂದು ಹೇಳಿದ್ದಾರೆ.
14. ವಾಣಿಜ್ಯ ದೃಷ್ಠಿಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಒಂದೇ ಬೆಳೆಯನ್ನು ಬೆಳೆಯದೇ ಮಿಶ್ರ ಬೇಸಾಯ ಪದ್ದತಿಯನ್ನು ರೈತರು ಅನುಸರಿಸಬೇಕು. ರಾಸಾಯನಿಕ ಗೊಬ್ಬರದ ಬದಲು ಸಾವಯವ ಗೊಬ್ಬರವನ್ನು ಬಳಸಿ ಸಾವಯವ ಕೃಷಿಯನ್ನು ಮಾಡಬೇಕು.
15. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎನ್ನುವ ಸರ್ಕಾರ ದೋರಣೆಯನ್ನು ಸಡಿಲಿಸಿ ಮೊದಲು ರೈತನಿಗೆ ಕೃಷಿಗಾಗಿ ವಿದ್ಯುತ್‍ನ್ನು ನೀಡಬೇಕು.
16. ಬಾಕಿಯಿರುವ ವಿವಿಧ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.