ಮೋಡ ಮತ್ತು ವೃಷ್ಟಿ

 

ವಾಯುಗೋಳದಲ್ಲಿ ಉಷ್ನಾಂಶವು ಕಡಿಮೆಯಾದಾಗ, ಅದರಲ್ಲಿನ ಜಲಾಂಶವು ಘನೀಕರಣಗೊಂಡು ನಿರ್ಮಾಣವಾಗುವ ಸಣ್ಣ ಸಣ್ಣ ನೀರಿನಹನಿಗಳು ಅಥವಾ ಹಿಮಕಣಗಳ ರಾಶಿಯನ್ನು ‘ಮೋಡ’ ಗಳೆನ್ನುವರು.ಮೋಡಗಳ ಕುರಿತ ಅಧ್ಯಯನಕ್ಕೆ ನೆಫೋಲಜಿ ಎಂದು ಹೆಸರಾಗಿದೆ.

ಮೋಡಗಳ ವಿಧಗಳು


• ಪದರು ಮೋಡಗಳು: ಇವುಗಳು ವಾಯುಗೋಳ ಅತ್ಯಂತ ಕೆಳಮಟ್ಟದಲ್ಲಿರುತ್ತವೆ. ಭೂಮಿಯ ಮೇಲ್ಮೈನಿಂದ 2.ಕಿ.ಮೀ.ಗಳಷ್ಟು ಎತ್ತರದವರೆಗೆ ಇವುಗಳು ಕಂಡುಬರುತ್ತವೆ. ಪದರು ಮೋಡಗಳು ಉತ್ತಮ ಹವಾಮಾನಕ್ಕೆ ಸಹಕಾರಿಯಾಗಿದ್ದು ಅಲ್ಪ ಮಳೆಯನ್ನು ಸುರಿಸುತ್ತವೆ.
• ರಾಶಿ ಮೋಡಗಳು :ಇವುಗಳು ಮಳೆತರುವ ಮೋಡಗಳಾಗಿವೆ. .
• ಹಿಮಕಣ ಮೋಡಗಳು: ಇವುಗಳು ವಾಯುಮಂಡಲದಲ್ಲಿ ಅತಿ ಹೆಚ್ಚು ಎತ್ತರದಲ್ಲಿ ಅಂದರೆ 6 ಕಿ.ಮೀ.ಗಳಿಗಿಂತಲೂ ಎತ್ತರದಲ್ಲಿರುತ್ತವೆ.
• ರಾಶಿವೃಷ್ಟಿ ಮೋಡಗಳು : ಈ ಮೋಡಗಳು ಮಳೆತರುವ ಮೋಡಗಳಾಗಿದ್ದು ಕೆಳಮಟ್ಟದಲ್ಲಿರುತ್ತವೆ. ಈ ಮೋಡಗಳು ಪದರು ಅಥವಾ ರಾಶಿಮೋಡಗಳ ಆಕಾರದಲ್ಲಿರುತ್ತವೆ. ಇವು ಹೆಚ್ಚು ಮಳೆ ಮತ್ತು ಹಿಮಮಳೆಯನ್ನು ಸುರಿಸುತ್ತವೆ. ವೃಷ್ಟಿಪದರು ಮೋಡಗಳು
ದಪ್ಪವಾಗಿದ್ದು ಅಧಿಕ ಮಳೆತರುವ ಮೋಡಗಳಾಗಿವೆ.

ಮಳೆ


ವಾತಾವರಣದಲ್ಲಿರುವ ನೀರಾವಿಯು ತಂಪು ಪಡೆದುಕೊಂಡು ಮತ್ತೆ ದ್ರವರೂಪಕ್ಕೆ ಬಂದು ಭೂಮಿಯ ಮೇಲೆ ಬೀಳುವ ಪ್ರಕ್ರಿಯೆಯೇ ಮಳೆ. ಮೋಡಗಳಲ್ಲಿನ ನೀರು ಬೇರೆ ಬೇರೆ ಹನಿಗಳಾಗಿ ಭೂಮಿಗೆ ಉದುರುತ್ತವೆ. ಎತ್ತರದ ಮೋಡಗಳಿಂದ ಬೀಳುವ ಹನಿಗಳೆಲ್ಲಾ ನೆಲವನ್ನು ತಲುಪಲಾರವು. ಮೋಡ ಮತ್ತು ನೆಲಗಳ ಮಧ್ಯೆ ಶುಷ್ಕ ವಾತಾವರಣವಿದ್ದಲ್ಲಿ ಗಣನೀಯ ಪ್ರಮಾಣದ ಸಣ್ಣ ಹನಿಗಳು ಮತ್ತೆ ಆವಿಯಾಗಿ ಹೋಗುತ್ತವೆ. ಹೀಗೆ ಒಂದು ಹನಿಯೂ ನೆಲ ಮುಟ್ಟದೆ ಹೋದರೆ ಅಂತ ಮಳೆಯನ್ನು 'ವಿರ್ಗಾ' ಎಂದು ಕರೆಯುವರು. ಇಂತಹ ವಿದ್ಯಮಾನವು ಸಾಮಾನ್ಯವಾಗಿ ಬಿಸಿ ಮತ್ತು ಶುಷ್ಕ ಮರುಭೂಮಿಯ ಪ್ರದೇಶಗಳಲ್ಲಿ ಘಟಿಸುತ್ತದೆ.

1. ಭಾರತದ ಮೇಘಾಲಯ ರಾಜ್ಯದ ಮಾಸಿನ್ ರಾಂ ಒಂದು ವರ್ಷದಲ್ಲಿ 1140 ಸೆಂ.ಮೀ. ಗಳಷ್ಟು ಮಳೆಯನ್ನು ದಾಖಲಿಸಿದೆ. ಇದು ಪ್ರಪಂಚದ ಅತ್ಯಂತ ತೇವಯುತ ಸ್ಥಳ.
2. ಕರ್ನಾಟಕದ ಆಗುಂಬೆಯನ್ನು ‘ದಕ್ಷಿಣ ಭಾರತದ ಮಾಸಿನ್‍ರಾಂ’ ಎನ್ನುವರು.
3. ಭಾರತದ ರಾಜಸ್ತಾನದ ‘ರೂಯ್ಲಿ’ ಅತಿ ಕಡಿಮೆ ಮಳೆ ಪಡೆಯುವ ಸ್ಥಳ. ಇದು ವರ್ಷದಲ್ಲಿ ಕೇವಲ 8 ಸೆಂ.ಮೀ ಮಾತ್ರ ಮಳೆ ಪಡೆಯುವುದು.
4. ಚಿತ್ರದುರ್ಗ ಜಿಲ್ಲೆಯ ‘ನಾಯಕನಹಟ್ಟಿ’ಯು ಕರ್ನಾಟಕದ ಅತ್ಯಂತ ಒಣಪ್ರದೇಶವಾಗಿದೆ.
5. ಭೂಮಿಯ ಮೇಲೆ ಕಳೆದ 200 ವರ್ಷಗಳಿಂದ ಮಳೆ ಬಾರದಿರುವ ಪ್ರದೇಶವೆಂದರೆ ಚಿಲಿ ದೇಶದ ಅಟಕಾಮ ಮರುಭೂಮಿ.