ಕೇಂದ್ರ ಮಂತ್ರಿಮಂಡಲ

 

* ರಾಷ್ಟ್ರಪತಿಗೆ ನೆರವು ಮತ್ತು ಸಲಹೆ ನೀಡುವ ಸಲುವಾಗಿ ಪ್ರಧಾನಮಂತ್ರಿಯನ್ನೊಳಗೊಂಡ ಮಂತ್ರಿಮಂಡಲ ಇರಬೇಕೆಂದು 74(1)ನೇ ವಿಧಿಯಲ್ಲಿ ಪ್ರಸ್ತಾಪಿಸಲಾಗಿದೆ.
* ಪ್ರತಿಯೊಬ್ಬ ಮಂತ್ರಿಯು ಕಡ್ಡಾಯವಾಗಿ ಸಂಸತ್ತಿನ ಸದಸ್ಯನಾಗಿರಬೇಕು.
* ಸಂಸತ್ತಿನ ಸದಸ್ಯನಲ್ಲದ ವ್ಯಕ್ತಿ ಮಂತ್ರಿಯಾಗಬಹುದು ಅಥವಾ ಪ್ರಧಾನಿಯಾಗಬಹುದು. ಆದರೆ 6 ತಿಂಗಳೊಳಗಾಗಿ ಸಂತ್ತಿನ ಯಾವುದಾದರೂ ಒಂದು ಸದನದ ಸದಸ್ಯತ್ವವನ್ನು ಪಡೆಯಬೇಕು. ಇಲ್ಲವಾದಲ್ಲಿ ಆ ವ್ಯಕ್ತಿಯು ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ.
* ಮಂತ್ರಿಮಂಡಲದ ಅಧಿಕಾರಾವದಿ 5 ವರ್ಷಗಳು
* ಮಂತ್ರಿಮಂಡಲದ ಅಧಿಕಾರ ಲೋಕಸಭೆಯ ವಿಶ್ವಾಸ ಹಾಗೂ ಅಧಿಕಾರಾವಧಿಯನ್ನು ಅವಲಂಬಿಸಿರುತ್ತದೆ.
* ಮಂತ್ರಿಮಂಡಲದ ಗಾತ್ರವು ಲೋಕಸಭೆಯ ಸದಸ್ಯರ ಒಟ್ಟು ಸಂಖ್ಯೆಯ ಶೇ.15ರಷ್ಟು ಮೀರುವಂತಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.

ಮಂತ್ರಿ ಮಂಡಲದಲ್ಲಿ 3 ವಿಧ


1. ಕ್ಯಾಬಿನೆಟ್ ಸಚಿವರು :- ಪ್ರಮುಖ ಖಾತೆಗಳನ್ನು ನಿರ್ವಹಿಸುವ ಸಚಿವರನ್ನು ಕ್ಯಾಬಿನೆಟ್ ಸಚಿವರೆಂದು ಕರೆಯಲಾಗುತ್ತದೆ. ಉದಾ: ಗೃಹ ರಕ್ಷಣೆ, ಹಣಕಾಸು, ವಿದೇಶಾಂಗ, ವಾಣಿಜ್ಯ ಮುಂತಾದವು.
2. ರಾಜ್ಯಸಚಿವರು :- ಕ್ಯಾಬಿನೆಟ್ ಸಚಿವರಿಗಿಂತ ಕೆಳಗಿನ ಸ್ಥಾನಮಾನವಾರುತ್ತದೆ. (ಸಚಿತ ಸಂಪುಟ ಸಭೆಗೆ ಹಾಜರಾಗುವಂತಿಲ್ಲ.) ಜೊತೆಗೆ ಕ್ಯಾಬಿನೆಟ್ ಸಚಿವರಿಗೆ ರಾಜ್ಯ ಸಚಿವರು ನೆರವು ನೀಡುತ್ತಾರೆ.
3. ಸಹಾಯಕ ಸಚಿವರು :- ಕ್ಯಾಬಿನೆಟ್ ಹಾಗೂ ರಾಜ್ಯ ಸಚಿವರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಾರೆ. ಮಂತ್ರಿಗಳು ವೈಯಕ್ತಿಕವಾಗಿ ರಾಷ್ಟ್ರಪತಿಗೆ ಹೊಣೆಯಾಗಿರುತ್ತಾರೆ.

ಅಧಿಕಾರ ಮತ್ತು ಕಾರ್ಯಗಳು


1. ಶಾಸನೀಯ ಅಧಿಕಾರ :- ಮಂತ್ರಿಮಂಡಲವು ಶಾಸನ ರೂಪಿಸಿ ಸಂಸತ್ತಿನಲ್ಲಿ ಮಂಡಿಸುವುದಕ್ಕೆ ಅಧಿಕಾರ ಹೊಂದಿದೆ.
2. ಕಾರ್ಯಾಂಗದ ಅಧಿಕಾರಗಳು :- ಶಾಸಕಾಂಗ ರೂಪಿಸಿದ ಶಾಸನಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ಕಾರ್ಯಾಂಗೀಯ ಅಧಿಕಾರ ಎಂದು ಕರೆಯಲಾಗುತ್ತದೆ. ಉದಾ: ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಹತ್ವದ ನಿರ್ಧಾರಗಳು.
3. ಹಣಕಾಸಿನ ಅಧಿಕಾರಗಳು :- ಮಂತ್ರಿಮಂಡಲವು ರಾಷ್ಟ್ರದ ಹಣಕಾಸು ನೀತಿಯನ್ನು ರೂಪಿಸಿ ನಿಯಂತ್ರಿಸುವುದಕ್ಕೆ ಅಧಿಕಾರ ಹೊಂದಿದೆ.
4. ವಿದೇಶಾಂಗ ನೀತಿಯ ಅಧಿಕಾರಗಳು :- ಮಂತ್ರಿಮಂಡಲವು ಭಾರತ ಇತರೆ ರಾಷ್ಟ್ರಗಳೊಂದಿಗೆ ಯಾವ ರೀತಿ ಸಂಬಂಧವನ್ನು ಹೊಂದಿರಬೇಕು ಜೊತೆಗೆ ವಿದೇಶಾಂಗ ನೀತಿಯ ರಚನೆಗೆ ಸಂಬಂಧಿಸಿದ ಅಧಿಕಾರವನ್ನು ನಿರ್ವಹಿಸುತ್ತದೆ.