ಮನಸ್ವಿನಿ ಯೋಜನೆ:-
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಬಡತನ ರೇಖೆಗಿಂತ ಕೆಳಗಿರುವ ವಿಧವೆ ಮತ್ತು ಅವಿವಾಹಿತ ಮಹಿಳೆಯರಿಗೆ ತಿಂಗಳಿಗೆ 500 ಮಾಶಾಸನ ನೀಡುವ ಯೋಜನೆ. ನಲವತ್ತು ವರ್ಷ ತುಂಬಿದ ಅವಿವಾಹಿತ ಮತ್ತು ವಿಚ್ಚೇಧಿತ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರು . ಈ ಯೋಜನೆಯಡಿಯಲ್ಲಿ ಒಟ್ಟು 12 ಸಾವಿರ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.